ವಿಂಗಡಿಸದಸ್ಮರಣೀಯ ಜಾಗ

ಹೊಸ ವರ್ಷಾಚರಣೆಗೆ ಕಟ್ಟುನಿಟ್ಟಿನ ಕ್ರಮ; ರಾತ್ರಿ 1 ಗಂಟೆವರೆಗೆ ಮಾತ್ರ ಅವಕಾಶ

2024ರ ಹೊಸ ವರ್ಷಾಚರಣೆಗೆ ಬೆಂಗಳೂರು (Bengaluru) ಸಜ್ಜಾಗುತ್ತಿದೆ. ಈ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಬಿಬಿಎಂಪಿ ಮತ್ತು ಪೋಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ.

ಹೊಸ ವರ್ಷಾಚರಣೆಗೆ (New Year Celebration Guidelines) ಏನೆಲ್ಲಾ ಮಾಡಬಹುದು? ಯಾವುದಕ್ಕೆ ನಿರ್ಬಂಧ ಹೇರಲಾಗಿದೆ? ಎಲ್ಲಿ ವರ್ಷಾಚರಣೆಗೆ ಅವಕಾಶವಿದೆ? ಎಷ್ಟು ಹೊತ್ತು? ಎಲ್ಲದರ ಮಾಹಿತಿ ಇಲ್ಲಿದೆ.

ಹೊಸ ವರ್ಷ ಆಚರಣೆಗಾಗಿ ಸಹಸ್ರಾರು ಮಂದಿ ಸೇರುವ ಎಂ.ಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್,ಕೋರಮಂಗಲ, ವೈಟ್ ಫೀಲ್ಡ್ ಸೇರಿದಂತೆ ಹಲವೆಡೆ ಇರುವ ಪಬ್, ಕ್ಲಬ್, ಹೋಟೆಲ್ ಗಳು, ರೆಸ್ಟೋರೆಂಟ್ ಗಳಲ್ಲಿ ನಡೆಯುವ ಪಾರ್ಟಿಗಳಿಗೆ ಸಕಲ ಸಿದ್ಧತೆಗಳು ಆರಂಭಗೊಂಡಿದೆ.

ಈ ಎಲ್ಲಾ ಸ್ಥಳಗಳಲ್ಲಿ ಬಿಗಿ ಪೋಲೀಸ್ ಭದ್ರತೆ (Police Security) ಮಾಡಲಾಗಿದೆ. ಲೌಡ್ ಸ್ಪೀಕರ್ ಮತ್ತು ಪಟಾಕಿಗಳಿಗೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ.

ಅದೇ ರೀತಿಯಲ್ಲಿ ಇಡೀ ರಾತ್ರಿ ವಿದ್ಯುತ್ ಸ್ಥಗಿತವಾಗದಂತೆ ಕ್ರಮವಹಿಸಲು ಬೆಸ್ಕಾಂಗೆ ಸೂಚಿಸಲಾಗಿದೆ. ಹಾಗೂ ಕಾರ್ಟೂನ್‌ ಮಾಸ್ಕ್‌ಗಳನ್ನು ಹೊಸ ವರ್ಷಾಚರಣೆ ವೇಳೆ ನಿಷೇಧಿಸಲಾಗಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಬಿಎಂಟಿಸಿ ಬಸ್‌ಗಳ ಸಂಚಾರದ ವ್ಯವಸ್ಥೆ ಮಾಡಲಾಗಿದೆ. ರಾತ್ರಿ ಒಂದು ಗಂಟೆಯವರೆಗೆ ಮೆಟ್ರೊ ರೈಲು ಸಂಚಾರ ಕೂಡಾ ಇರಲಿದೆ.

ಡಿ.31 ರಾತ್ರಿ 10 ಗಂಟೆಯ ನಂತರ ಎಲ್ಲಾ ಮೇಲ್ಸೇತುವೆಗಳು ಬಂದ್ ಆಗಲಿದೆ. ರಾತ್ರಿ ಒಂದು ಗಂಟೆವರೆಗೂ ಮಾತ್ರ ಹೊಸ ವರ್ಷ ಆಚರಣೆಗೆ (2024 New Year Celebration) ಅವಕಾಶ ನೀಡಲಾಗಿದೆ. ಒಂದು ಗಂಟೆಗೆ ಹೋಟೆಲ್, ಬಾರ್ ಸೇರಿದಂತೆ ಎಲ್ಲಾ ಅಂಗಡಿಗಳನ್ನೂ ಬಂದ್ ಮಾಡಬೇಕು.

ನಗರದಲ್ಲಿ ಹೆಚ್ಚಿನ ಜನಸಂದಣಿ ಇರುವ ಸ್ಥಳಗಳು, ವಾಣಿಜ್ಯ ಪ್ರದೇಶಗಳು ಹಾಗೂ ಪ್ರಮುಖ ರಸ್ತೆಗಳಲ್ಲಿ ಸಿಸಿ ಕ್ಯಾಮೆರಾಗಳ ಅಳವಡಿಕೆಗೆ ಸೂಚನೆ ನೀಡಲಾಗಿದೆ. ಎಂ ಜಿ ರಸ್ತೆ, ಬ್ರಿಗೇಡ್‌ ರಸ್ತೆಯಲ್ಲಿ 200ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ.

ರಾತ್ರಿ 8 ಗಂಟೆಯ ನಂತರ ಎಂ ಜಿ ರಸ್ತೆ, ಬ್ರಿಗೇಡ್‌ ರಸ್ತೆಯಲ್ಲಿ ವಾಹನ ಸಂಚಾರ ಬಂದ್. ವರ್ಷಾಚರಣೆಗೆ ಬರುವವರೆಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.

ಡ್ರಗ್ಸ್ ಸೇವನೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಅನಧಿಕೃತವಾಗಿ ಮದ್ಯ ಶೇಖರಣೆ ಮಾಡುವುದು, ಬ್ಲಾಕ್ ನಲ್ಲಿ ಮದ್ಯ, ಡ್ರಗ್ಸ್ ಮಾರಾಟ ಮಾಡುವವರ ಮೇಲೆಯೂ ನಿಗಾ ಇರಿಸಲಾಗುವುದು. ಹೆಚ್ಚಿನ ಭದ್ರತೆಗಾಗಿ ಡ್ರೋಣ್ ಕ್ಯಾಮೆರ ಬಳಕೆ ಮಾಡಲಾಗುತ್ತಿದೆ.

ಮಹಿಳೆಯರ ಸುರಕ್ಷತೆಗಾಗಿ ಸೇಫ್ ಟೀಂ ಐಲ್ಯಾಂಡ್​ಗಳ ಸ್ಥಾಪಿಸಲಾಗುತ್ತಿದೆ. ಮಕ್ಕಳ ಕಾಣೆಯಾದರೆ ಕಳುವು ಬಗ್ಗೆ ಮಾಹಿತಿ ನೀಡಲು ಕಿಯೋಸ್ಕ್​ಗಳನ್ನು ತೆರೆಯಲಾಗಿದೆ.

ನಗರಾದ್ಯಂತ 10,000 ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದಾರೆ. ಹೋಂ ಗಾರ್ಡ್​ಗಳನ್ನು ಸಹ ನಿಯೋಜನೆ ಮಾಡಲಾಗಿದೆ.

ಮಾಲ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಸಾಧ್ಯತೆಗಳಿರುವುದರಿಂದ ಅಲ್ಲಿಯೂ ಪೋಲೀಸ್ ಭದ್ರತೆ ಇರಲಿದೆ. ವೀಲಿಂಗ್ ಹಾಗೂ ಡ್ರ್ಯಾಗ್ ರೇಸಿಂಗ್, ಡ್ರಂಕ್ ಅಂಡ್ ಡ್ರೈವ್ ಗೆ ಕಡಿವಾಣ ಹಾಕಲು 48 ಕಡೆಗಳಲ್ಲಿ ತಪಾಸಣೆಗೆ ಸಿದ್ಧತೆ ನಡೆಸಲಾಗಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button