ವಂಡರ್ ಬಾಕ್ಸ್ವಿಂಗಡಿಸದ

ಅಮೃತ್ ಭಾರತ್ ರೈಲಿಗೆ ಚಾಲನೆ, ಜನಸಾಮಾನ್ಯರಿಗಾಗಿ ಬರುತ್ತಿದೆ ಹೊಸ ಟ್ರೈನ್

ವಂದೇ ಭಾರತ್ ರೈಲು ಈಗಾಗಲೇ ಭಾರತದಲ್ಲಿ ಹೆಚ್ಚು ಜನರನ್ನು ತಲುಪುತ್ತಿದೆ. ಇದೀಗ ವಂದೇ ಭಾರತ್ ಬೆನ್ನಲ್ಲೇ ಅಮೃತ್ ಭಾರತ್ ಅತ್ಯಾಧುನಿಕ ರೈಲುಗಳು ಭಾರತದಲ್ಲಿ ಓಡಾಟ ಆರಂಭಿಸಲಿದೆ.

ವಂದೇ ಭಾರತ್‌ ರೈಲಿನಿಂದ ಸ್ಫೂರ್ತಿಗೊಂಡು ನಿರ್ಮಿಸಲಾಗಿರುವ ಅಮೃತ ಭಾರತ ರೈಲುಗಳು (Amrit Bharat trains) ಬಡವರು ಹಾಗೂ ಮಧ್ಯಮ ವರ್ಗದವರು ಉತ್ತಮ ರೈಲು ಸಂಚಾರದ ಅನುಭವ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಲಾಗುತ್ತಿದೆ.

ಅಮೃತ ಭಾರತ ರೈಲು ಕೂಡ ಸೂಪರ್‌ ಫಾಸ್ಟ್‌ (Super fast Train) ಆಗಿದ್ದು, ಇದು ಗಂಟೆಗೆ 130 ಕಿ.ಮೀ ವೇಗದಲ್ಲಿ ಸಂಚರಿಸಲಿದೆ. ಅಮೃತ ಭಾರತ ರೈಲುಗಳಲ್ಲಿ ಎಸಿ ಇರುವುದಿಲ್ಲ, ಹಾಗಾಗಿ ಇವುಗಳ ಟಿಕೆಟ್‌ ದರ ಕಡಿಮೆ ಇರಲಿದೆ. ಉತ್ತಮ ಗುಣಮಟ್ಟದ ಆಸನಗಳು, ಆಸನಗಳ ಬಳಿ ಚಾರ್ಜಿಂಗ್‌ ಪಾಯಿಂಟ್‌, ಸುಸಜ್ಜಿತ ಶೌಚಾಲಯ ಇರಲಿವೆ. ಸಿಸಿಟಿವಿ ಅಳವಡಿಕೆ, ಸೆನ್ಸಾರ್‌ ವಾಟರ್‌ ಟ್ಯಾಪ್‌, ಮೆಟ್ರೋದಂತಹ ಘೋಷಣೆ ವ್ಯವಸ್ಥೆ ಇರಲಿದೆ.ಒಟ್ಟು 22 ಕೋಚ್‌ಗಳು ಇರಲಿದ್ದು, 14 ಸ್ಲೀಪರ್‌ ಹಾಗೂ 8 ಸಾಮಾನ್ಯ ಕೋಚ್‌ಗಳು ಇರಲಿವೆ. ಆಸನ ಸಾಮರ್ಥ್ಯ 1,500.

ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಈ ಮೊದಲು ವಂದೇ ಸಾಧಾರಣ್ ಎಂದು ಹೆಸರಿಡಲಾಗಿತ್ತು. ಈ ರೈಲು, ವಂದೇ ಭಾರತ್ ಶೈಲಿಯಲ್ಲೇ ವಿನ್ಯಾಸಗೊಳಿಸಲಾದ ಲೋಕೋಮೋಟಿವ್‌ಗಳನ್ನು ಹೊಂದಿದೆ. ಆದಾಗ್ಯೂ, ವಂದೇ ಭಾರತ್ ರೈಲುಗಳಿಗಿಂತ ಭಿನ್ನವಾಗಿ, ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಇರಲಿದೆ.

ಹೊಸ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಕಿತ್ತಳೆ ಮತ್ತು ಬೂದು ಬಣ್ಣಗಳಲ್ಲಿ ಕಣ್ಮನ ಸೆಳೆಯುತ್ತಿದೆ. ಇದು ರೈಲಿನ “ಪುಶ್-ಪುಲ್” ಕಾರ್ಯಾಚರಣೆಯನ್ನು ಅನುಮತಿಸಲು ರೈಲಿನ ಪ್ರತಿ ತುದಿಯಲ್ಲಿ 6,000 ಎಚ್‌ಪಿಯೊಂದಿಗೆ WAP5 ಲೋಕೋಮೋಟಿವ್ ಎಂಜಿನ್ ಹೊಂದಿದೆ. ಪುಶ್-ಪುಲ್ ರೈಲಿನ ದೊಡ್ಡ ಪ್ರಯೋಜನವೆಂದರೆ ವೇಗವಾಗುತ್ತದೆ ಮತ್ತು ಪ್ರಯಾಣದ ಅವಧಿಯನ್ನು ಇದು ಕಿರಿದುಗೊಳಿಸುತ್ತದೆ.

ವಿಶೇಷವಾಗಿ ಅಮೃತ್ ಭಾರತ್ ರೈಲುಗಳು ಚೆನ್ನೈನಲ್ಲಿ ಉತ್ಪಾದನೆಯಾಗುತ್ತಿದೆ. ಮೊದಲ ಅಮೃತ್ ಭಾರತ್ ರೈಲು ಆಯೋಧ್ಯೆ ದರ್ಭಾಂಗ್ ಮಾರ್ಗದಲ್ಲಿ ಸಂಚರಿಸಿದರೆ, ಎರಡನೇ ಅಮೃತ್ ಭಾರತ್ ರೈಲು ಬೆಂಗಳೂರು-ಮಾಲ್ಡಾ ಮಾರ್ಗದಲ್ಲಿ ಸಂಚರಿಸಲಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button