Moreಕಾಡಿನ ಕತೆಗಳುತುಂಬಿದ ಮನೆವಿಂಗಡಿಸದ

ವಿಶ್ವ ಗುಬ್ಬಚ್ಚಿ ದಿನ; ದೇಶದಾದ್ಯಂತ ಗುಬ್ಬಚ್ಚಿ ಸಂರಕ್ಷಣೆಗಾಗಿ ಶ್ರಮಿಸುತ್ತಿರುವ ವ್ಯಕ್ತಿಗಳ ಸ್ಫೂರ್ತಿ ಕಥೆ

World Sparrow Day 2024; ಹಿಂದಿನ ಕಾಲದಲ್ಲಿ ಮನೆಯ ಮುಂದುಗಡೆ ಗುಬ್ಬಚ್ಚಿಯದ್ದೇ (Sparrows) ಕಲರವ. ನಮ್ಮದೇ ಮನೆಯ ಸದಸ್ಯ ಎನ್ನುವಷ್ಟು ಆಪ್ತ ಈ ಗುಬ್ಬಿ.

ಈಗಿನ ಪೀಳಿಗೆಗೆ ಇದರೊಂದಿಗಿನ ಒಡನಾಟದ ಅನುಭವವೇ ಇಲ್ಲ. ಕಳೆದ 20 ವರ್ಷಗಳಿಂದ ಗುಬ್ಬಿಗಳ ಸಂಖ್ಯೆಯು ಕ್ಷೀಣಿಸುತ್ತಿರುವುದು ಕಳವಳಕಾರಿ.

ಈ ಪುಟ್ಟ ಹಕ್ಕಿ ಜೀವವೈವಿಧ್ಯವನ್ನು ಸುಧಾರಿಸಲು ಮತ್ತು ಪರಿಸರ ವ್ಯವಸ್ಥೆಯಲ್ಲಿ ಸಸ್ಯಗಳ ಬೆಳವಣಿಗೆಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ.

ಇದು ಆರೋಗ್ಯಕರ ಮತ್ತು ಹಸಿರು ಪರಿಸರಕ್ಕೆ ಕಾರಣ ಕೂಡಾ ಆಗಿದೆ.

ಗುಬ್ಬಚ್ಚಿಗಳು ಬೀಜಗಳನ್ನು ಸೇವಿಸಿ ಅದನ್ನು ಹೊರಹಾಕುತ್ತವೆ. ಇದು ಸಸ್ಯ ಬೀಜಗಳ ಉತ್ತಮ ಹರಡುವಿಕೆಗೆ ಕಾರಣವಾಗುತ್ತದೆ.

ನಮ್ಮ ಸುತ್ತಲಿನ ಪರಿಸರವು ಅಭಿವೃದ್ಧಿ ಹೊಂದುತ್ತದೆ.ಆದರೆ ಇಂತಹ ಹಕ್ಕಿ ಈಗ ಅಳಿನಂಚಿನಲ್ಲಿದೆ.

ಇದು ಪರಿಸರ ವ್ಯವಸ್ಥೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಇವುಗಳ ಸಂರಕ್ಷಣೆಗಾಗಿ ಜಾಗೃತಿ ಕಾರ್ಯಕ್ರಮಗಳು ಮೂಡಿ ಬರಬೇಕಿದೆ.

ಈ ನಿಟ್ಟಿನಿಂದಲೇ, ಪ್ರತೀ ವರ್ಷ ಮಾರ್ಚ್ 20 ರಂದು “ವಿಶ್ವ ಗುಬ್ಬಚ್ಚಿ ದಿನ” (World Sparrow Day) ಆಚರಿಸಲಾಗುತ್ತದೆ.

ಮೊದಲ ವಿಶ್ವ ಗುಬ್ಬಚ್ಚಿ ದಿನವನ್ನು ಮಾರ್ಚ್ 20, 2010 ರಂದು ಆಚರಿಸಲಾಯಿತು.

ಭಾರತದಲ್ಲಿ, ದಿ ನೇಚರ್ ಫಾರೆವರ್ ಸೊಸೈಟಿಯು (The Nature Forever Society) ವಿಶ್ವ ಗುಬ್ಬಚ್ಚಿ ದಿನವನ್ನು ಆಚರಿಸುವ ಯೋಜನೆಯನ್ನು ರೂಪಿಸಿತು.

ನೇಚರ್ ಫಾರೆವರ್ ಸೊಸೈಟಿಯನ್ನು ಭಾರತೀಯ ಸಂರಕ್ಷಣಾವಾದಿ ಮೊಹಮ್ಮದ್ ದಿಲಾವರ್ ಸ್ಥಾಪಿಸಿದರು.

ಇವರು ನಾಸಿಕ್ ನಲ್ಲಿ (Nasik) ಅವುಗಳ ಸಂಖ್ಯೆ ಕ್ಷೀಣಿಸುತ್ತಿರುವುದನ್ನು ಕಂಡು ಈ ಉಪಕ್ರಮ ಜಾರಿಗೆ ತಂದರು.

ನಮ್ಮ ಭಾರತದಲ್ಲಿ ಗುಬ್ಬಚ್ಚಿಯ ಕುರಿತು ಮಾಹಿತಿ ತಿಳಿದ ಅನೇಕರು ಅವುಗಳ ಸಂರಕ್ಷಣೆಗಾಗಿ ಹಲವಾರು ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಅವರಲ್ಲಿ ಕೆಲವು ಮಂದಿಯ ಸಂಕ್ಷಿಪ್ತ ವಿವರ ಇಲ್ಲಿದೆ.

● ಬಿಎಚ್‌ಇಎಲ್‌ನ (BHEL) ನಿವೃತ್ತ ತಂತ್ರಜ್ಞ ಮತ್ತು ಬೆಂಗಳೂರಿನ ನಿವಾಸಿ 75 ವರ್ಷದ “ಎಡ್ವಿನ್ ಜೋಸೆಫ್” (Edwin Joseph) ಕಳೆದ 15 ವರ್ಷಗಳಿಂದ 250 ಕ್ಕೂ ಹೆಚ್ಚು ಗುಬ್ಬಚ್ಚಿಗಳಿಗೆ ನಿರಂತರವಾಗಿ ಆಹಾರ ನೀಡುತ್ತಿದ್ದಾರೆ.

●ಚೆನ್ನೈ (Chennai) ಪ್ರೊಫೆಸರ್ ಗಣೇಶನ್ ಡಿ ಕೂಡುಗಲ್ (Ganeshan D Kudugal) ಇವರು ಈ ಪಕ್ಷಿಗಳನ್ನು ಮತ್ತೆ ನಗರಕ್ಕೆ ಸ್ವಾಗತಿಸಲು, ಗಣೇಶನ್ ನಗರದಾದ್ಯಂತ ಕೈಯಲ್ಲಿ ಮಾಡಿದ ಸುರಕ್ಷಿತ ಗೂಡುಗಳನ್ನು (Nests) ರಚಿಸಿ ಅವುಗಳನ್ನು ನಗರದ ವಿವಿಧ ಭಾಗಗಳಲ್ಲಿ ಇಡುವ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.

● 58 ವರ್ಷದ ರಾಕೇಶ್ ಖತ್ರಿ (Rakesh Khatri) ಅವರು 2008 ರಲ್ಲಿ ತಮ್ಮ ಕೆಲಸವನ್ನು ತೊರೆದರು ಮತ್ತು ದೆಹಲಿಯಲ್ಲಿ ಕೃತಕ ಗೂಡುಗಳನ್ನು (Artificial Nests) ನಿರ್ಮಿಸುವ ಮೂಲಕ ಗುಬ್ಬಚ್ಚಿ ಸಂರಕ್ಷಣೆಗೆ ಕೆಲಸ ಮಾಡಲು ಪ್ರಾರಂಭಿಸಿದರು.

ಇಲ್ಲಿಯವರೆಗೆ, ಅವರು ಒಂದು ಲಕ್ಷಕ್ಕೂ ಹೆಚ್ಚು ಗೂಡುಗಳನ್ನು ನಿರ್ಮಿಸಿದ್ದಾರೆ ಮತ್ತು ಅವರು ನಗರದಾದ್ಯಂತ ಗುಬ್ಬಚ್ಚಿಗಳಿಗೆ ಆಹಾರಕ್ಕಾಗಿ ಪ್ರತಿ ತಿಂಗಳು 8-10 ಕೆಜಿ ಧಾನ್ಯಗಳನ್ನು ಖರೀದಿಸುತ್ತಾರೆ.

● ಉತ್ತರ ಪ್ರದೇಶದ ಬಿಜ್ನೋರ್‌ನ (Bijnor) ಸಿಯೋಹರಾದ ಶೇಖ್‌ ಕುಟುಂಬ ಸುಮಾರು 300 ವರ್ಷಗಳಿಂದ ತಮ್ಮ ವಿಸ್ತಾರವಾದ ಹವೇಲಿಯಲ್ಲಿ ಗುಬ್ಬಚ್ಚಿಗಳಿಗೆ ಆಶ್ರಯ ಮತ್ತು ರಕ್ಷಣೆ ನೀಡಿದ್ದಾರೆ.

ಆದ್ದರಿಂದ ಜನ ಈ ಹವೇಲಿಯನ್ನು “ಗುಬ್ಬಚ್ಚಿಗಳ ಹವೇಲಿ” (Haveli of sparrows) ಎಂದೇ ಕರೆಯುತ್ತಾರೆ.

● ದೆಹಲಿಯಲ್ಲಿದೆ (Delhi) “ಗುಬ್ಬಚ್ಚಿಗಳ ಗ್ರಾಮ” (Gauraiya gram). ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ಮತ್ತು ದೆಹಲಿ ಸರ್ಕಾರವು (Delhi Government) ಗುಬ್ಬಚ್ಚಿಗಳ ಸಂರಕ್ಷಣೆಗಾಗಿ ಪೂರ್ವ ದೆಹಲಿಯ ಗರ್ಹಿ ಮಾಂಡು ನಗರದ ಅರಣ್ಯದಲ್ಲಿ “ಗೌರಯ್ಯ ಗ್ರಾಮ” ಅನ್ನು ರಚಿಸಿದೆ.

ಇಲ್ಲಿ ಗುಬ್ಬಚ್ಚಿಗಳಿಗಾಗಿ ಕೃತಕ ಗೂಡುಗಳನ್ನು ನಿರ್ಮಿಸಲಾಗಿದೆ.

● ಚೆನ್ನೈನ ಗುಬ್ಬಚ್ಚಿ ರಾಣಿ (Sparrow Queen) ಎಂದೇ ಕರೆಯಲ್ಪಡುವ ಸಾಧನಾ ರಾಜ್‌ಕುಮಾರ್‌ (Sadhana Rajkumar) ಅವರು ಗುಬ್ಬಚ್ಚಿಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕೃತಕ ಗೂಡುಗಳನ್ನು ನಿರ್ಮಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಜನರಿಗೂ ಈ ನಿಟ್ಟಿನಲ್ಲಿ ಗಮನ ಹರಿಸುವಂತೆ ಜಾಗೃತಿ ಮೂಡಿಸುವ ಕಾರ್ಯವನ್ನೂ ಅವರು ಮಾಡುತ್ತಿದ್ದಾರೆ.

ಇವರಂತೆ ನೀವೂ ಸಹ ಗುಬ್ಬಚ್ಚಿಯ ಸಂರಕ್ಷಣೆಯಲ್ಲಿ ತೊಡಗಿಕೊಳ್ಳಿ. ಗುಬ್ಬಿ ಮತ್ತು ಮಾನವನ ಸಂಬಂಧ ಮತ್ತೆ ಚಿಗುರುವಂತಾಗಲಿ. ಹೊಸ ಪೀಳಿಗೆಗೆ ಈ ಮುದ್ದು ಮರಿಯ ಪರಿಚಯವಾಗಲಿ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button