ಮ್ಯಾಜಿಕ್ ತಾಣಗಳುವಂಡರ್ ಬಾಕ್ಸ್ವಿಂಗಡಿಸದ

ಕ್ರಿಸ್ ಮಸ್ ಮತ್ತು ಹೊಸ ವರ್ಷಕ್ಕಾಗಿ ಹೊಸ ಲೋಕವನ್ನೇ ಸೃಷ್ಟಿಸಿದ “ವಂಡರ್ ಲಾ”

ಭಾರತದ ಅತಿದೊಡ್ಡ ಅಮ್ಯೂಸ್‌ಮೆಂಟ್ ಪಾರ್ಕ್‌ (Amusement Park) “ವಂಡರ್ಲಾ” ಕ್ರಿಸ್ ಮಸ್ ರಜಾದಿನಗಳು ಮತ್ತು ಹೊಸ ವರ್ಷಾಚರಣೆಗಾಗಿ ವಿಶೇಷವಾಗಿ ಸಜ್ಜಾಗಿದೆ.

ಡಿಸೆಂಬರ್‌ 23,2023 ರಿಂದ ಜನವರಿ 1 2024ರವರೆಗೆ ಬೆಂಗಳೂರು ವಂಡರ್‌ಲಾ ದಲ್ಲಿ “ಮ್ಯಾಜಿಕಲ್ ವಂಡರ್‌ಲ್ಯಾಂಡ್” (Magical Wonderland) ಸೃಷ್ಟಿಯಾಗಿದೆ.

Photo Credit: Wonder La

ಈ ಹಬ್ಬದ ಸಡಗರದೊಂದಿಗೆ ಜನರು 61 ವಿಧದ ರೈಡ್ ಗಳು, ಲೈವ್ ಶೋಗಳು, ಫುಡ್ ಫೆಸ್ಟ್, ಇನ್ನೂ ಅನೇಕ ಬಗೆಯ ರೋಮಾಂಚಕ ಅನುಭವವನ್ನು ವಂಡರ್ಲಾದಲ್ಲಿ ರಿಯಾಯಿತಿ ದರದೊಂದಿಗೆ ಆನಂದಿಸಬಹುದು.

ವಂಡರ್ಲಾ (Wonder La) ದಲ್ಲಿ ನಿಮಗಾಗಿ ಏನೇನಿದೆ?

ಕ್ರಿಸ್ ಮಸ್ ಬ್ಯಾಂಡ್ (Christmas Band)

ವಂಡರ್ಲಾ ಮುದ ನೀಡುವ ಕ್ರಿಸ್ ಮಸ್ ಬ್ಯಾಂಡ್ ನೊಂದಿಗೆ ನಿಮ್ಮನ್ನು ರಂಜಿಸಲು ಸಿದ್ಧವಾಗಿದೆ. ಇಲ್ಲಿ ಸುಮಧುರ ಗೀತೆಗಳನ್ನು ನೀವು ಕೇಳಬಹುದು.

ಸಂತಾ ಸ್ಟ್ರೀಟ್: (Santa Street)

ವಂಡರ್ಲಾ ಸಂತಾ ಸ್ಟ್ರೀಟ್ ಎಂಬ ವರ್ಣಮಯ ಲೋಕವನ್ನು ಸೃಷ್ಟಿಸಿದೆ. ಇಲ್ಲಿ ನೀವು ಸಂತಾ ಕ್ಲಾಸ್ ನೊಂದಿಗೆ ಹೆಜ್ಜೆಯನ್ನು ಹಾಕಬಹುದು. 25 ಅಡಿ ಎತ್ತರದ ಕ್ರಿಸ್ಮಸ್ ವೃಕ್ಷವನ್ನೂ ಇಲ್ಲಿ ಕಾಣಬಹುದು.

Photo Credit: Wonder La

ಸಂಜೆ ವಿಶೇಷ ಪ್ರವೇಶ:

ಕ್ರಿಸ್ ಮಸ್ ರಜಾದಿನದ (Christmas Holiday) ಪ್ರಯುಕ್ತ, ವಂಡರ್ಲಾ ಸಾಮಾನ್ಯ ದಿನಕ್ಕಿಂತ ಹೆಚ್ಚು ಹೊತ್ತು ತೆರೆದಿರುತ್ತದೆ. ವಂಡರ್ಲಾ ರಾತ್ರಿ 8.30ರವರೆಗೂ ತೆರೆದಿದ್ದು, 7 ಗಂಟೆಯವರೆಗೂ ಗೇಮ್ ಗಳನ್ನು ಆಡಲು ಅವಕಾಶವಿದೆ.

ಆಕರ್ಷಕ ಪ್ರದರ್ಶನಗಳು:

ಕೆಲವು ಆಯ್ದ ದಿನಗಳಲ್ಲಿ ಡಿಜೆ ಸ್ನಾಸ್ಟಿ, ಡಿಜೆ ಶಾಮ್ಸ್‌, ಡಿಜೆ ಮಿಲನ್, ಡಿಜೆ ವಿನಯ್, ಡಿಜೆ ಕಮ್ರಾ ಮತ್ತು ಜುಂಬಾದೊಂದಿಗೆ ಡಿಜೆ ಶೋಗಳನ್ನು ಆನಂದಿಸಬಹುದು.

Photo Credit: Wonder La

ಮ್ಯೂಸಿಕಲ್ ಬಾಲ್ ಗರ್ಲ್, ಎಲ್‌ಇಡಿ ಜಗ್ಲಿಂಗ್ ಆಕ್ಟ್‌, ಮ್ಯಾಜಿಕ್ ಮತ್ತು ಇಲ್ಯೂಷನ್ ಆಕ್ಟ್‌ಗಳನ್ನು ಸಹ ಇಲ್ಲಿ ಸಂಭ್ರಮಿಸಬಹುದು. ಈ ಎಲ್ಲಾ ಪ್ರದರ್ಶನಗಳು ಸಂಜೆ 6 ರಿಂದ ರಾತ್ರಿ 8:30 ರವರೆಗೆ ನಡೆಯುತ್ತವೆ.

ಇಲ್ಲಿ ರಿಯಾಯಿತಿಯೂ ಇದೆ:

ನೀವು ಎಲ್ಲಾ ಆಟಗಳನ್ನು, ಪ್ರದರ್ಶನಗಳನ್ನು ಆನಂದಿಸಲು ಹೆಚ್ಚುವರಿ ರಿಯಾಯಿತಿ ಕೂಡಾ ಇದೆ. ವಿದ್ಯಾರ್ಥಿಗಳು ತಮ್ಮ ಐಡಿಯೊಂದಿಗೆ ಪಾರ್ಕ್ ಪ್ರವೇಶ ಟಿಕೆಟ್‌ಗಳ ಮೇಲೆ 20% ರಿಯಾಯಿತಿಯನ್ನು ಪಡೆಯಬಹುದು.

ಇದರೊಂದಿಗೆ, ತಮ್ಮ ಹುಟ್ಟುಹಬ್ಬವನ್ನು ಆಚರಿಸುವವರು ತಮ್ಮ ಹುಟ್ಟುಹಬ್ಬಕ್ಕಿಂತ 5 ದಿನಗಳ ಮುನ್ನ ಅಥವಾ ನಂತರ ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡುವ ಮೂಲಕ ವಂಡರ್‌ಲಾಗೆ `ಉಚಿತ ಪಾರ್ಕ್ ಪ್ರವೇಶ ಟಿಕೆಟ್’ ಅನ್ನು ಪಡೆಯಬಹುದು.

Photo Credit: Wonder La

ಬಸ್ ಪ್ರಯಾಣಿಸುವವರಿಗೂ ವಂಡರ್‌ಲಾ ಬಿಎಂಟಿಸಿ ಕೊಡುಗೆಯನ್ನು ನೀಡಲಿದ್ದು, ಸಂದರ್ಶಕರು ತಮ್ಮ ಬಿಎಂಟಿಸಿ ವೋಲ್ವೋ ಬಸ್ ಟಿಕೆಟ್ ಅನ್ನು ಕೌಂಟರ್‌ನಲ್ಲಿ ತೋರಿಸುವ ಮೂಲಕ ಪಾರ್ಕ್ ಪ್ರವೇಶ ಟಿಕೆಟ್‌ಗಳ ಮೇಲೆ 15% ರಿಯಾಯಿತಿಯನ್ನು ಪಡೆಯಬಹುದು.

ಈ ಎಲ್ಲಾ ಆನಂದವನ್ನು ಆಚರಿಸಲು ನೀವು ಆನ್ ಲೈನ್ https://bookings.wonderla.com/ ಮೂಲಕ ಮುಂಚಿತವಾಗಿ ಪ್ರವೇಶ ಟಿಕೆಟ್‌ಗಳನ್ನು ಪಡೆಯಬಹುದು.

ಎಲ್ಲಾ ಹಬ್ಬದ ಸಂಭ್ರಮ ಒಂದೆಡೆಯಲ್ಲೇ ಸಿಗುತ್ತಿರುವಾಗ ಇನ್ನೇಕೆ ತಡ ನಿಮ್ಮ ಕ್ರಿಸ್ ಮಸ್ ರಜಾ ದಿನ ಮತ್ತು ಹೊಸ ವರ್ಷವನ್ನು (New Year Celebration) ವಂಡರ್ಲಾ ದೊಂದಿಗೆ ಆಚರಿಸಿ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button