ಆಹಾರ ವಿಹಾರವಿಂಗಡಿಸದ

ವಂದೇ ಭಾರತ್ ರೈಲಲ್ಲ, ಇದು ರೈಲು ಮಾದರಿಯ ರೆಸ್ಟೋರೆಂಟ್

ನೀವು ಆಹಾರಪ್ರಿಯರು ಜೊತೆಯಲ್ಲಿ ರೈಲು ಪ್ರಿಯರೂ ಆಗಿದ್ದರೆ ಗುಜರಾತಿನ ಈ ವಂದೇ ಭಾರತ ರೈಲು ಮಾದರಿಯ ರೆಸ್ಟೋರೆಂಟ್ ಗೆ ಭೇಟಿ ನೀಡಲೇಬೇಕು.

ಈ ರೆಸ್ಟೋರೆಂಟ್ ​ವಂದೇ ಭಾರತ್​ ಟ್ರೇನ್​ನ ಅನುಭವ ನೀಡುವುದರ ಜೊತೆಗೆ ದೇಶ – ವಿದೇಶದ ಪ್ರಸಿದ್ಧ ಖಾದ್ಯಗಳನ್ನು ಉಣಬಡಿಸುತ್ತದೆ.

ರೆಸ್ಟೋರೆಂಟ್ ಗಳು (Vande Bharat train-inspired restaurant) ರುಚಿ ರುಚಿಯಾದ ಖಾದ್ಯಗಳ ಮೂಲಕ ಪ್ರಸಿದ್ಧಿ ಹೊಂದುವುದು ಸಹಜ. ಆದರೆ ಇತ್ತೀಚಿನ ದಿನಗಳಲ್ಲಿ ವಿಷಯಾಧಾರಿತ ಮಾದರಿಯ ರೆಸ್ಟೋರೆಂಟ್ ಗಳು ಅಲ್ಲಿಯ ರುಚಿಗಿಂತ ಹೆಚ್ಚಾಗಿ ತನ್ನ ವಿನ್ಯಾಸಗಳ ಮೂಲಕ ಆಹಾರಪ್ರಿಯರನ್ನು ಆಕರ್ಷಿಸುತ್ತಿದೆ.

ವಂದೇ ಭಾರತ್ ರೈಲು (Vande Bharat Train) ತನ್ನ ವಿಶೇಷ ಸೌಲಭ್ಯಗಳಿಂದ ಭಾರತದಲ್ಲಿ ಹೆಸರುವಾಸಿಯಾಗಿದೆ. ಇದೀಗ ಗುಜರಾತ್‌ನ ಸೂರತ್‌ನಲ್ಲಿ ಈ ರೈಲಿನ ಥೀಮ್ ಆಧಾರಿತ ವಿಶಿಷ್ಟ ರೆಸ್ಟೋರೆಂಟ್ ಬಾಗಿಲು ತೆರೆದಿದ್ದು. ಇದರ ವೀಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಇನ್‌ಸ್ಟಾಗ್ರಾಮ್ ಬಳಕೆದಾರ ಚಟೋರಾ ಅಂಕಿತ್ ಅವರು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಭಾರತೀಯ ರೈಲ್ವೆ ಇಲಾಖೆಯ ಪ್ರಚಲಿತ ರೈಲು ವಂದೇ ಭಾರತ್​ನಂತೆಯೇ ಈ ಹೋಟೆಲ್​ನ್ನು ವಿನ್ಯಾಸಗೊಳಿಸಲಾಗಿದೆ.ಈ ಹೋಟೆಲ್​ ರುಚಿ ರುಚಿಯಾದ ಆಹಾರ ಜೊತೆಗೆ ಈ ವಿಭಿನ್ನ ವಿನ್ಯಾಸದಿಂದಾಗಿ ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿದೆ.

ಹೋಟೆಲ್​ನ ಒಳಗಿನ ಬಣ್ಣಗಳು ಹಾಗೂ ಇಲ್ಲಿರುವ ಭಾರತಕ್ಕೆ ಸಂಬಂಧಿಸಿದ ವಿವಿಧ ಕಲಾತ್ಮಕ ಚಿತ್ರಣಗಳು ಮನಸೂರೆಗೊಳ್ಳುವಂತಿವೆ. ಮತ್ತು ಇಲ್ಲಿ ಬೇರೆ ಬೇರೆ ಪ್ರದೇಶಗಳ ಖಾದ್ಯಗಳು ಸಹ ಲಭ್ಯ ಇವೆ.

ಕರಾವಳಿಯ ಮಸಾಲೆ ಖಾದ್ಯಗಳಿಂದ ಹಿಡಿದು ದೇಶ ವಿದೇಶಗಳ ಆಹಾರ ವೈವಿಧ್ಯತೆಯನ್ನು ನೀವು ಒಂದೇ ಕಡೆ ಕುಳಿತು ಎಂಜಾಯ್​ ಮಾಡಬಹುದು. ‌

ಗುಜರಾತ್‌ನ ಸೂರತ್‌ನಲ್ಲಿರುವ (Surat) ಈ ರೆಸ್ಟೋರೆಂಟ್​ಗೆ ಭೇಟಿ ನೀಡಿದ ಅನೇಕರು ಇಲ್ಲಿನ ವಿನ್ಯಾಸ ಹಾಗೂ ಅಡುಗೆ ರುಚಿ ಎರಡನ್ನೂ ಭಾರೀ ಮೆಚ್ಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೀಕ್ಷಿಸಿದ ನೆಟ್ಟಿಗರೂ ಸಹ ಒಮ್ಮೆಯಾದರೂ ಈ ರೆಸ್ಟೋರೆಂಟ್​ಗೆ ಭೇಟಿ ನೀಡಬೇಕೆಂದು ಬಯಸುತ್ತಿದ್ದಾರೆ. ನೀವೂ ಗುಜರಾತಿಗೆ ಭೇಟಿ ನೀಡಿದಾಗ ಈ ರೆಸ್ಟೋರೆಂಟ್ ಗೆ ಒಮ್ಮೆ ಭೇಟಿ ನೀಡಿ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button