ಮ್ಯಾಜಿಕ್ ತಾಣಗಳುವಂಡರ್ ಬಾಕ್ಸ್ವಿಂಗಡಿಸದ

ಏರ್ ಇಂಡಿಯಾ ತೆಕ್ಕೆಗೆ ಸೇರಿದ ದೇಶದ ಮೊಟ್ಟ ಮೊದಲ ವೈಡ್ ಬಾಡಿ ವಿಮಾನ

ದೀರ್ಘ ಪ್ರಯಾಣಕ್ಕೆ ಸೂಕ್ತವಾಗುವ ಐಷಾರಾಮಿ ಸೌಕರ್ಯಗಳನ್ನು ಕಲ್ಪಿಸುವ ವೈಡ್ ಬಾಡಿ A350 ವಿಮಾನ (Wide body Air craft) ಟಾಟಾ ಮಾಲೀಕತ್ವದ ಏರ್ ಇಂಡಿಯಾ (Air India) ಸಂಸ್ಥೆಯ ತಕ್ಕೆ ಸೇರಿದೆ. ಇದು ಭಾರತ ಮೂಲಕ ಸಂಸ್ಥೆಯೊಂದು ಕಾರ್ಯಚರಣೆ ಮಾಡಲಿರುವ ಮೊಟ್ಟಮೊದಲ ವೈಡ್ ಬಾಡಿ ವಿಮಾನ.

Air India

ಇದು ನ್ಯಾರೊ ವಿಮಾನಕ್ಕಿಂತ ಎರಡು ಪಟ್ಟು ಅಗಲವಾಗಿರುತ್ತದೆ ಹಾಗೂ ಮಲಗಿಕೊಂಡು ಪ್ರಯಾಣ ಮಾಡಬಲ್ಲ ಸೀಟಿಂಗ್ ವ್ಯವಸ್ಥೆಯನ್ನೂ ನಿರ್ಮಿಸಲು ಪೂರಕವಾಗಿದೆ ಎಂಬುದೇ ಇದರ ವಿಶೇಷ.

ಟಾಟಾ ಏರ್‌ಲೈನ್ಸ್‌ (Tata Airlines) ಇಂತಹ 20 ವಿಮಾನಗಳನ್ನು ತಯಾರಿಸಲು ಆರ್ಡರ್ ನೀಡಿದೆ. ಆ ಪೈಕಿ ಮೊದಲ ವಿಮಾನ ಶನಿವಾರ ದೆಹಲಿಗೆ ಬಂದಿಳಿದಿದೆ.

Wide body Air craft

ನೀವು ಇದನ್ನು ಇಷ್ಟ ಪಡಬಹುದು;6 ದಶಕದ ನಂತರ ಬದಲಾದ ಏರ್ ಇಂಡಿಯಾ ಸಿಬ್ಬಂದಿಗಳ ಸಮವಸ್ತ್ರ

ದೆಹಲಿಗೆ ಬಂದಿಳಿದ ವೈಡ್-ಬಾಡಿ A350-900 ವಿಮಾನದ ಹಾರಾಟಕ್ಕೂ ಮುಂಚೆ ಎಲ್ಲಾ ಕಡ್ಡಾಯ ಪರೀಕ್ಷೆ, ತಪಾಸಣೆಯನ್ನು ಮಾಡಲಾಗಿದೆ. ಜೊತೆಗೆ ಕಸ್ಟಮ್ಸ್ ಕ್ಲಿಯರೆನ್ಸ್, ಸಲಕರಣೆಗಳ ವಿವಿಧ ತಪಾಸಣೆ, ಹಾಗೆಯೇ ರನ್ ವೇ ಪರೀಕ್ಷೆಗಳನ್ನು ಮಾಡಲಾಗುವುದು.

A350-900 ವಿಮಾನವು ಜನವರಿ 2024 ರಿಂದ ಭಾರತದಲ್ಲಿ ತನ್ನ ವಾಣಿಜ್ಯ ಪ್ರಯಾಣವನ್ನು ಪ್ರಾರಂಭಿಸುತ್ತದೆ. ಏರ್‌ಬಸ್ (Air bus)ಸೌಲಭ್ಯದಿಂದಾಗಿ ಫ್ರಾನ್ಸ್‌(France )ಮೂಲಕ ವಿಮಾನವು ದೆಹಲಿಗೆ(Delhi) ಆಗಮಿಸಿದೆ.

Indian tourism

ಏರ್ ಇಂಡಿಯಾಕ್ಕೆ ಸೇರ್ಪಡೆಗೊಂಡಿರುವ A350-900 ವಿಮಾನವು ಒಟ್ಟು 316 ಆಸನಗಳೊಂದಿಗೆ ಮೂರು-ವರ್ಗದ ಕ್ಯಾಬಿನ್ (Cabin ) ವಾಣಿಜ್ಯ ಹೊಂದಿದೆ. ಪೂರ್ಣ-ಫ್ಲಾಟ್ ಹಾಸಿಗೆಗಳೊಂದಿಗೆ 28 ಬಿಸಿನೆಸ್ ಕ್ಲಾಸ್ ಸೂಟ್‌ಗಳು, ಹೆಚ್ಚುವರಿ ಲೆಗ್‌ರೂಂ ಒಳಗೊಂಡಿರುವ 24 ಪ್ರೀಮಿಯಂ ಎಕಾನಮಿ ಸೀಟುಗಳು ಮತ್ತು 264 ಎಕಾನಮಿ ಕ್ಲಾಸ್ ಸೀಟುಗಳನ್ನು ಹೊಂದಿದೆ.

ಇತರೆ ವಿಮಾನಗಳಿಗೆ ಹೋಲಿಸಿದರೆ ಇದರಲ್ಲಿ ಹೆಚ್ಚು ಜನ ಪ್ರಯಾಣಿಸಬಹುದಾಗಿದ್ದು, ಇಂಧನ ವೆಚ್ಚವೂ ಇತರೆ ಸಾಂಪ್ರದಾಯಿಕ ವಿಮಾನಗಳಗಿಂತ ಶೇ.25ರಷ್ಟು ಕಡಿಮೆ. ಜೊತೆಗೆ ಹಲವು ಆಧುನಿಕ ಸೌಕರ್ಯ, ಹೆಚ್ಚಿನ ರಕ್ಷಣೆಯ ಸೌಲಭ್ಯಗಳನ್ನು ಅಂದಾಜು 2500 ಕೋಟಿ ರು. ವೆಚ್ಚದ ವಿಮಾನ ಹೊಂದಿದೆ.

Air bus

ಇದು ವಾಣಿಜ್ಯ ವಿಮಾನಯಾನ ಸಂಸ್ಥೆಗಳಿಂದ ಹೆಚ್ಚು ಬೇಡಿಕೆಯಿರುವ ವಿಮಾನಗಳಲ್ಲಿ ಒಂದಾಗಿದೆ.ಏರ್ ಇಂಡಿಯಾ 250 ಏರ್‌ಬಸ್ ವಿಮಾನಗಳು ಮತ್ತು 220 ಹೊಸ ಬೋಯಿಂಗ್ ವಿಮಾನಗಳನ್ನು ಸಿದ್ದಪಡಿಸುತ್ತಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button