ವಿಂಗಡಿಸದ

ಜನತಾ ಕರ್ಫ್ಯೂ ದಿನಗಳಲ್ಲಿ ನೋಡಬಹುದಾದ 7 ಬಾಲಿವುಡ್ ಟ್ರಾವೆಲ್ ಸಿನಿಮಾಗಳು

ಪ್ರವಾಸವೇ ಒಂದು ರೀತಿಯ ಸಾಹಸೀ ಕಥನ. ಪ್ರವಾಸಿಗರಾದ ನಾವು ಈ ಕಥನದ ಪಾತ್ರಧಾರಿಗಳು. ಪ್ರವಾಸಕ್ಕೆ ಹೊರಡುವುದರಿಂದ ಹಿಡಿದು, ಅಲ್ಲಿನ ಅನುಭವಗಳನ್ನ ಮನಕೆ ಸಿಂಪಡಿಸಿಕೊಳ್ಳುತ್ತಾ, ಸಾಕಷ್ಟು ಏಳುಬೀಳುಗಳನ್ನು ಕಾಣುತ್ತಾ, ಹೊಸ ಜನ, ಆಹಾರ, ಭಾಷೆ, ಸಂಪ್ರದಾಯಗಳ ಜೊತೆ ಬೆರೆಯುತ್ತ,ನಮ್ಮಯ ಊರಿಗೆ ಮರಳಿ ನಮ್ಮತನಕ್ಕೆ ವಾಪಸ್ಸಾಗುವವರೆಗೂ ಪ್ರವಾಸ ಎಂಬುದು ರೋಚಕ ಕಥನ. 

ಇನ್ನೂ ಈ ಪ್ರವಾಸ ಕಥನಗಳನ್ನ ಬೆಳ್ಳಿ ಪರದೆಯ ಮೇಲೆ ನೋಡಿ ಆಸ್ವಾದಿಸಬಹುದಾದರೆ? ಕೆಲವೊಮ್ಮೆ ಅವು ನಾವು ಕೈಗೊಳ್ಳುವ ಪ್ರವಾಸಕ್ಕೆ ಸ್ಫೂರ್ತಿಯಾಗಬಹುದು ಅಥವಾ ಸದ್ಯ ಕೊರೋನಾದ ಎರಡನೆಯ ಅಲೆ ಭುಗಿಲೆದ್ದುದರಿಂದ ಸುಮ್ಮನೆ ಮನೆ ಹಿಡಿದು ಚಲನಚಿತ್ರಗಳ ಮುಲಕ ತಾಣಗಳನ್ನ ಅದಕ್ಕಂಟಿಕೊಂಡ ಕಥೆಗಳನ್ನ, ಪಾತ್ರಧಾರಿಗಳನ್ನ ಒಂದು ಪ್ರವಾಸದಂತೆ ಅನುಭವಿಸಬಹುದು. ಅಂತಹ ಚಲನಚಿತ್ರಗಳ ಪಟ್ಟಿ ಇಂತಿದೆ.

ಆದಿತ್ಯ ಯಲಿಗಾರ

ಹಿಂದಿ ಪ್ರವಾಸಿ ಸಿನಿಮಾಗಳು

  1. ದಿಲ್ ಚಾಹತಾ ಹೈ(Dil Chahta Hai)
Best Hindi Travel Movies Dil Chahta Hai

ಮೂರು ಜನ ಸ್ನೇಹಿತರ ಮತ್ತವರ ಜೀವನದಲ್ಲಿ ಜರುಗುವ ಘಟಾನವಳಿಗಳ ಸುತ್ತ ಸುತ್ತುವ ಚಿತ್ರ ದಿಲ್ ಚಾಹತಾ ಹೈ. ಈ ಚಿತ್ರದ ಇದೇ ಹೆಸರಿನ ಹಾಡಿನಲ್ಲಿ ಬರುವ ಗೋವಾ(Goa) ಪ್ರವಾಸ ತುಂಬಾ ಖ್ಯಾತಿಯನ್ನ ಪಡೆದುಕೊಂಡಿದೆ. ಈ ಚಿತ್ರವನ್ನ ನೋಡಿ ಅದೆಷ್ಟೋ ಜನ ಗೋವಾ ಕಾಣಲು ಹೋಗಿದ್ದುಂಟು ಆದ ಕಾರಣ ಆಗ ಈ ಚಿತ್ರ ಗೋವಾದ ಪ್ರವಾಸೋದ್ಯಮಕ್ಕೇ ಒಂದು ರೀತಿಯ ಕೊಡುಗೆಯಾಗಿತ್ತು ಎಂದರೂ ತಪ್ಪಾಗಲಾರದು. ಈ ಚಿತ್ರದಲ್ಲಿ ಗೋವಾ ಬರೀ ತಾಣವಾಗಿರದೆ ಒಂದು ಪಾತ್ರವೇ ಆಗಿದೆ.

ಈ ಚಿತ್ರವನ್ನ ನೆಟ್‌ಫ್ಲಿಕ್ಸ್‌ ಮತ್ತು ಯೂಟ್ಯೂಬ್ ರೆಂಟ್ ಅಲ್ಲಿ ವೀಕ್ಷಿಸಬಹುದು

  1. ಜಬ್ ವಿ ಮೆಟ್(Jab we met)

ಗೀತ (ಕರೀನಾ ಕಪೂರ್) ಮತ್ತು ಆದಿತ್ಯ (ಶಾಹಿದ್ ಕಪೂರ್) ಇವರಿಬ್ಬರ ಸುಂದರ ಪ್ರಯಾಣ ಕಥನ ಜಬ್ ವಿ ಮೆಟ್ ಚಿತ್ರ.

Best Hindi Travel Movies Jab We Met

ಒಂದು ಸಿಲ್ಲಿ ಕಾರಣಕ್ಕೆ ತನ್ನ ರೈಲನ್ನು ತಪ್ಪಿಸಿಕೊಳ್ಳುವ ಗೀತ ಆದಿತ್ಯನಿಗೆ ಜೊತೆಯಾಗುತ್ತಾಳೆ. ವ್ಯಕ್ತಿತ್ವದಲ್ಲಿ ಇಬ್ಬರೂ ತದ್ವಿರುದ್ದರಾಗಿದ್ದರೂ ಪ್ರಯಾಣದಲ್ಲಿ ಒಬ್ಬರನ್ನೊಬ್ಬರು ಅರಿತು ಮುಂದೆ ಸಾಗುತ್ತಾರೆ. ಈ ಚಿತ್ರ ಮುಖ್ಯವಾಗಿ ಮುಂಬೈ, ಹಿಮಾಚಲ ಪ್ರದೇಶ, ಪಂಜಾಬ ರಾಜ್ಯದಲ್ಲಿ ಜರುಗಿದರು ಹಿಮಾಚಲ ಪ್ರದೇಶದ(Himachal Pradesh) ರೋಹ್ಟಾಂಗ್, ಮಧ್ಯಪ್ರದೇಶದ ಗ್ಯಾಲಿಯನ್ನಲ್ಲಿರುವ ರತಲಂ ಮತ್ತು ಪಂಜಾಬಿನ(Punjab) ಭಟಿಂಡಾಗಳಂತಹ ತಾಣಗಳನ್ನು ಪರಿಚಯಿಸುತ್ತದೆ. ಪ್ರಸ್ತುತ ಚಿತ್ರದಲ್ಲಿ ರೋಹ್ಟಾಂಗ್‌ನ ರಸ್ತೆ ಪ್ರಯಾಣ ಮತ್ತು ಮನಾಲಿಯ ವಿಭಿನ್ನ ಛಾಯೆಗಳನ್ನು ಅದ್ಭುತ ರೀತಿಯಲ್ಲಿ ನಿರ್ದೇಶಿಸಲಾಗಿದೆ.

ಈ ಚಿತ್ರವನ್ನು ನೆಟ್‌ಫ್ಲಿಕ್ಸ್‌ ಮತ್ತು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ವೀಕ್ಷಿಸಬಹುದು.

3. ಏ ಜವಾನಿ ಹೈ ದಿವಾನಿ(Yeh Jawaani Hai Deewani)

Best Hindi Travel Movies Yeh Jawaani Hai Deewani

ಎಲ್ಲಿಯೂ ನಿಲ್ಲದೆ ಸಮಸ್ತ ವಿಶ್ವವನ್ನು ತಿರುಗುವ ಕನಸು ಮತ್ತು ಸಂಭಂದಗಳ ನಡುವೆ ಸಿಲುಕಿರುವ ಬನ್ನಿ (ರಣಬೀರ್ ಕಪೂರ್) ಎಂಬ ಯುವಕನ ಕಥೆ ಏ ಜವಾನಿ ಹೈ ದಿವಾನಿ. ಈ ಚಿತ್ರದಲ್ಲಿ ಮಾನಾಲಿಯ ಹಿಮಪರ್ವತಗಳನ್ನ ಯೂರೋಪಿನ ಮನಮೋಹಕ ರಹದಾರಿಗಳನ್ನ ಮತ್ತು ರಾಜಸ್ತಾನದ(Rajasthan) ದೈತ್ಯ ಅರಮನೆಗಳನ್ನ  ಕಾಣಬಹುದು. ಪ್ರವಾಸಕ್ಕೆ ಸಂಬಂಧಿಸಿದ ಚಿತ್ರಗಳಲ್ಲಿ ಏ ಜವಾನಿ ಹೈ ದಿವಾನಿ ಮುಂಚೂಣಿಯಲ್ಲಿ ನಿಲ್ಲುತ್ತದೆ.

ಈ ಚಿತ್ರವನ್ನ ನೆಟ್‌ಫ್ಲಿಕ್ಸ್‌ ಮತ್ತು ಯೂಟ್ಯೂಬ್ ರೆಂಟ್ ಅಲ್ಲಿ ವೀಕ್ಷಿಸಬಹುದು

4. ಜಿಂದಗಿ ನಾ ಮಿಲೆಗಿ ದೊಬಾರಾ(Zindagi Na Milegi Dobara)

Best Hindi Travel Movies Zindagi Na Milegi Dobara

“ಜಿಂದಗಿ ನಾ ಮಿಲೆಗಿ ದೊಬಾರಾ “ಮೂವರು ಹಳೆ ಸ್ನೇಹಿತರು ಸೇರಿ ಬ್ಯಾಚುಲರ್ ಪಾರ್ಟಿಗೆಂದು ಸ್ಪೇನ್ ಮತ್ತೆ ಮುಂತಾದ ಕಡೆ ಪ್ರವಾಸಕ್ಕೆಂದು ಹೊರಡುತ್ತಾರೆ. ಆ ಒಂದು ಪ್ರವಾಸ ಮೂವರ ಜೀವನವನ್ನ, ಅವರ ಜೀವನದ ದೃಷ್ಟಿಕೋನಗಳನ್ನ ಬದಲಾಯಿಸುತ್ತದೆ. ಈ ಚಿತ್ರದಲ್ಲಿ ಸ್ಪೇನ್ ದೇಶವನ್ನ ಮತ್ತು ಮುಖ್ಯವಾಗಿ  ಅಲ್ಲಿಯ ವಿಶೇಷ ಆಚರಣೆಯಾದ ಟೊಮೆಟೊ ಫೆಸ್ಟಿವಲ್(La Tomatina) ಅನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಸ್ಪೇನ್ ದೇಶದ ವಿಭಿನ್ನ ಛಾಯೆಗಳನ್ನು ಈ ಚಿತ್ರದಲ್ಲಿ ಕಾಣಬಹುದು.

ಈ ಚಿತ್ರವನ್ನ ನೆಟ್‌ಫ್ಲಿಕ್ಸ್‌ ಅಲ್ಲಿ ವೀಕ್ಷಿಸಬಹುದು.

ನೀವು ಇದನ್ನು ಇಷ್ಟಪಡಬಹುದು: 9 ಚಂದದ ಟ್ರಾವೆಲ್ ಮಲಯಾಳಂ ಸಿನಿಮಾಗಳು

5. ತಮಾಷಾ(Tamasha)

ಕನಸು ಮತ್ತು ವಾಸ್ತವದ ಮಧ್ಯ ಸಿಲುಕಿರುವ ವೇದ್(ರಣಬೀರ್ ಕಪೂರ್) ಎಂಬ ಯುವಕನನ್ನ ಅವನ ಕನಸನ್ನ ಬೆನ್ನು ಹತ್ತುವಂತೆ

Best Hindi Travel Movies Tamasha

ಮಾಡುವ ತಾರ (ದೀಪಿಕಾ ಪಡುಕೋಣೆ) ಇವರಿಬ್ಬರ ಅಪ್ರತಿಮ ಕಥೆ ತಮಾಷಾ. ಇವರಿಬ್ಬರೂ ಅಪರಿಚಿತರಾಗಿ ಭೇಟಿಯಾಗುವುದು ಕೊರ್ಸಿಕಾ ಎಂಬ ಫ್ರೆಂಚ್(French) ದ್ವೀಪದಲ್ಲಿ. ಜಗತ್ತಿನ ಓರ್ವ ಸುಂದರವಾದ ದ್ವೀಪವಾದ ಕೊರ್ಸಿಕಾವನ್ನು ಈ ಚಿತ್ರದಲ್ಲಿ ಅತ್ಯಂತ ರಮ್ಯವಾಗಿ ದೃಶ್ಯಿಕರಿಸಿದ್ದಾರೆ.

ಈ ಚಿತ್ರವನ್ನ ನೆಟ್‌ಫ್ಲಿಕ್ಸ್‌ ಅಲ್ಲಿ ವೀಕ್ಷಿಸಬಹುದು.

6. ಪೀಕು(Piku)

Best Hindi Travel Movies Piku

ಮೂಲವ್ಯಾಧಿ ರೋಗದಿಂದ ಬಳಲುತ್ತಿದರುವ ಹಠಮಾರಿ ವೃದ್ಧ ತಂದೆ (ಅಮಿತಾಭ್ ಬಚ್ಚನ್) ಮತ್ತು ಪ್ರತಿಕ್ಷಣವೂ ಅವನ ಆರೈಕೆ ಮಾಡುವ ಮಗಳ (ದೀಪಿಕಾ ಪಡುಕೋಣೆ) ಸುತ್ತ ಸುತ್ತವ ಚಿತ್ರ ಪೀಕು. ಅಪ್ಪ ಮತ್ತು ಮಗಳು ಇಬ್ಬರೂ ಸೇರಿ ಚಾಲಕನ (ಇರ್ಫಾನ್ ಖಾನ್) ಜೊತೆ ಕೋಲ್ಕತಾ(Kolkata) ನಗರಕ್ಕೆ ಪ್ರಯಾಣ ಬೆಳೆಸುತ್ತಾರೆ. ಪಯಣದಲ್ಲಿ ನಡೆಯುವ ಕೆಲ ಘಟನೆಗಳು ಮತ್ತು ಸಂಭಾಷಣೆಗಳು ಚಿತ್ರವನ್ನ ಇನ್ನೂ ಗಟ್ಟಿಗೊಳಿಸುತ್ತವೆ. ಕಲ್ಕತ್ತಾ ನಗರದ ಸುಂದರ ತಾಣಗಳನ್ನ ಕಾಣಲು ಈ ಚಿತ್ರವನ್ನು ವೀಕ್ಷಿಸಬಹುದು.

ಈ ಚಿತ್ರವು ಯೂಟ್ಯೂಬ್ ರೆಂಟ್ ಅಲ್ಲಿ ಲಭ್ಯವಿದೆ.

7. ಹೈವೇ(Highway)

Best Hindi Travel Movies Highway

ಕುಟುಂಬದ ಜಂಜಾಟದಿಂದ ಪಾರಾಗಲು ಪ್ರಯತ್ನಿಸುವ ಹುಡುಗಿ ಅನಿರೀಕ್ಷಿತ ಘಟನೆಗಳಿಂದ ಓರ್ವ ಲಾರಿ ಡ್ರೈವರ್ ನ ಜೊತೆ ಮೊದಲು ಅಪಹರಣಗೊಂಡು ನಂತರ ಅವನೊಡನೆಯೆ ಸಖ್ಯವನ್ನ ಬೆಳೆಸಿ ಹೈವೇ ಪಯಣವನ್ನು  ಆರಂಭಿಸುತ್ತಾಳೆ. ಈ ಚಿತ್ರದಲ್ಲಿ  ಸ್ಟಾಕ್ಹೋಮ್ ಸಿಂಡ್ರೋಮ್ ಬಗ್ಗೆ ನೈಜವಾಗಿ ನಿದರ್ಶಿಸಿದ್ದಾರೆ. ಈ ಚಿತ್ರವು ಹರಿಯಾಣ,(Haryana) ದೆಹಲಿ, ಪಂಜಾಬ್, ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶದ ಸುಂದರವಾದ ಹೆದ್ದಾರಿಗಳನ್ನು ಪರಿಚಯಿಸುತ್ತದೆ.

ಈ ಚಿತ್ರವನ್ನು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಅಲ್ಲಿ  ಉಚಿತವಾಗಿ ವೀಕ್ಷಿಸಬಹುದು.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button