ಇವರ ದಾರಿಯೇ ಡಿಫರೆಂಟುಕಾರು ಟೂರುದೂರ ತೀರ ಯಾನಬೆರಗಿನ ಪಯಣಿಗರುವಿಂಗಡಿಸದಸೂಪರ್ ಗ್ಯಾಂಗು

ಮಕ್ಕಳನ್ನು 3 ತಿಂಗಳಲ್ಲಿ 13 ಸಾವಿರ ಕಿಮೀ ಸುತ್ತಾಡಿಸಿ ರೋಡ್ ಸ್ಕೂಲಿಂಗ್ ಕಾನ್ಸೆಪ್ಟ್ ಪರಿಚಯಿಸಿದ ಗಂಗಾಧರ್- ರಮ್ಯಾ ದಂಪತಿ

ಕೋವಿಡ್ ಬಂದ ಮೇಲೆ ಶೈಕ್ಷಣಿಕ ಪದ್ಧತಿಯೇ ಬದಲಾಗಿದೆ. ಇಂಥಾ ಹೊತ್ತಲ್ಲಿ ಒಂದು ಹೊಸ ರೀತಿಯ ಶಿಕ್ಷಣ ಪದ್ಧತಿಯನ್ನು ಪರಿಚಯಿಸಿದ್ದು ಕರ್ನಾಟಕ ಮೂಲದ ಹೈದರಾಬಾದ್ ನಿವಾಸಿಗಳಾದ ಗಂಗಾಧರ್-ರಮ್ಯಾ ದಂಪತಿ. ತಮ್ಮ ಮಕ್ಕಳನ್ನು ರೋಡ್ ಟ್ರಿಪ್ ಕರೆದುಕೊಂಡು ಹೋಗುವ ಮೂಲಕ ಅವರಿಗೆ ಜೀವನ ಪಾಠ ಹೇಳಿಕೊಟ್ಟಿದ್ದಾರೆ. ಕೋವಿಡ್ ರಗಳೆ ಮುಗಿದ ಮೇಲೆ ಇಂಥದ್ದೊಂದು ರೋಡ್ ಸ್ಕೂಲಿಂಗ್ ನೀವೂ ಆಚರಣೆಗೆ ತರಬಹುದು.

  • ವರ್ಷಾ ಪ್ರಭು, ಉಜಿರೆ

ನಾಲ್ಕು ಗೋಡೆಯ ನಡುವಿನ ಶಿಕ್ಷಣಕ್ಕಿಂತ ನಾಲ್ಕು ಜನರ ನಡುವೆ ಬೆರೆತು ಕಲಿಯುವ ಶಿಕ್ಷಣ ಯಾವತ್ತಿಗೂ ಅಮೂಲ್ಯ ಎನ್ನುವ ಮಾತನ್ನು ಹಿರಿಯರು ಹೇಳಿರುವುದನ್ನು ಕೇಳಿರುತ್ತೇವೆ. ಶಾಲೆ ಅಥವಾ ಕಾಲೇಜು ಎಂಬ ಕಟ್ಟಡದಲ್ಲಿ ಕುಳಿತು ನಾಲ್ಕಕ್ಷರ ಕಲಿತು ಕೆಲಸ ಹಿಡಿಯಬಹುದಷ್ಟೇ. ಆದರೆ ವಿದ್ಯೆಯ ಜೊತೆಜೊತೆಗೆ ಸುತ್ತಮುತ್ತಲಿನ ಜಗತ್ತಿನೊಂದಿಗೆ ಬೆರೆಯುವುದರೊಂದಿಗೆ ಯೋಚನೆಗಳು ಬಲವಾಗುತ್ತವೆ. ದುರದೃಷ್ಟವಶಾತ್ ಇಂದಿನ ಶಿಕ್ಷಣ ವ್ಯವಸ್ಥೆ ಇದಕ್ಕೆ ಸಹಕಾರಿಯಾಗಿಲ್ಲ!

Hyderabad Couple, Twin Daughters Travel Across 15 States In 90 days

ಆದರೆ ಈ ಮಾತನ್ನು ಸಾಕ್ಷಾತ್ಕರಿಸಿದ ಕುಟುಂಬವೊಂದು ಹೈದರಾಬಾದಿನಲ್ಲಿದೆ. ಬೇರೆ ರಾಜ್ಯದಲ್ಲಿ ನೆಲೆಸಿದ್ದರೂ, ಇವರು ಕನ್ನಡದವರೆಂಬುದು ನಮ್ಮ ಹೆಮ್ಮೆ. ಅಂದಹಾಗೆ ನಾಲ್ಕು ಜನರ ನಡುವೆ ಬೆರೆತು ಕಲಿಯುವ ಶಿಕ್ಷಣದ ಸ್ವರೂಪ ಹೇಗೆ? ಅದನ್ನು ಈ ಕುಟುಂಬ ಕಾರ್ಯರೂಪಕ್ಕೆ ತಂದಿದ್ದು ಹೇಗೆ? ಎನ್ನುವ ಕುತೂಹಲ ನಿಮ್ಮಷ್ಟೇ ನನಗೂ ಇದೆ. ಆ ಮೈನವಿರೇಳಿಸುವ ಕಥೆ ಹೀಗಿದೆ!

ರೋಡ್ ಸ್ಕೂಲಿಂಗ್(Road Schooling)

ರೋಡ್ ಸ್ಕೂಲಿಂಗ್ ಮತ್ತು ಹೋಮ್ ಸ್ಕೂಲಿಂಗ್ ಎನ್ನುವ ವಿಚಾರ ನಮಗೆ ಹೊಸತು. ಔಪಚಾರಿಕ ಶಿಕ್ಷಣ (ಫಾರ್ಮಲ್ ಎಜುಕೇಶನ್) ಅನ್ನು ಹೊರತುಪಡಿಸಿ, ಮನೆಯ ವಾತಾವರಣದಲ್ಲಿಯೇ ಶಿಕ್ಷಣ ಪಡೆಯುವುದನ್ನೇ “ಹೋಮ್ ಸ್ಕೂಲಿಂಗ್’ ಎನ್ನಲಾಗುತ್ತದೆ. ಪ್ರವಾಸ ಮಾಡುತ್ತಾ ಶಿಕ್ಷಣದ ಹೊಸ ಆಯಾಮಗಳನ್ನು ಕಂಡುಕೊಳ್ಳುವುದೇ “ರೋಡ್ ಸ್ಕೂಲಿಂಗ್’. ಈ ಕಾನ್ಸೆಪ್ಟ್‌ಗಳು “ಮನೆಯೇ ಮೊದಲ ಪಾಠಶಾಲೆ’ ಗಾದೆಯ ವಿಸ್ತೃತ ರೂಪ ಎನ್ನಬಹುದು.

Hyderabad Couple, Twin Daughters Travel Across 15 States In 90 days

ನಮ್ಮ ನಡುವೆ ಅಷ್ಟು ಪ್ರಚಲಿತವಿಲ್ಲದ ಈ ಕಾನ್ಸೆಪ್ಟ್ ಅನ್ನು ಗಂಗಾಧರ್- ರಮ್ಯಾ ದಂಪತಿಗಳು ಯಶಸ್ವಿಯಾಗಿ ಜಾರಿಗೊಳಿಸಿದ್ದಾರೆ. ಇವರು ಪ್ರಸ್ತುತ ಹೈದರಾಬಾದಿನಲ್ಲಿ ನೆಲೆಸಿದ್ದು, ಅನನ್ಯಾ, ಅಮೂಲ್ಯ ಎಂಬ ಮುದ್ದು ಮಕ್ಕಳು ಇವರಿಗಿದ್ದಾರೆ. 

ಈ ಮಕ್ಕಳಿಗಾಗಿಯೇ “ರೋಡ್ ಸ್ಕೂಲಿಂಗ್’ ನಡೆಸಿ, ಈ ದಂಪತಿ ಮಾದರಿಯಾಗಿದ್ದಾರೆ. ರಮ್ಯಾ ವೃತ್ತಿಯಲ್ಲಿ ಶಿಕ್ಷಕಿ. ಮೊದಲು ಶಿಪ್ ಮತ್ತು ಏರ್ ಕ್ರಾಫ್ಟ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ಗಂಗಾಧರ್ ಇದೀಗ ನಾರ್ತ್ ಈಸ್ಟ್ ಇಂಡಿಯಾ ಟ್ರಾವೆಲ್ ಸ್ಪೆಷಲಿಸ್ಟ್.

3 ತಿಂಗಳಲ್ಲಿ ನ್ಯಾನೋ ಕಾರಲ್ಲಿ 13,000 ಕಿಮೀ ಪಯಣ

“ಟ್ರಾವೆಲಿಂಗ್’ ಅನ್ನೇ ಉಸಿರಾಗಿಸಿಕೊಂಡ ಈ ದಂಪತಿ ತಕ್ಷಣವೇ ಕಾರ್ಯಪ್ರವೃತ್ತರಾಗಿ ’ರೋಡ್ ಸ್ಕೂಲಿಂಗ್’ ಮಾಡಿಯೇ ಬಿಟ್ಟರು! ಮಾರ್ಚ್ 2019ರಲ್ಲಿ ರೋಡ್ ಸ್ಕೂಲಿಂಗ್ ಆರಂಭಿಸಿದ ಇವರ ಪುಟ್ಟ ನ್ಯಾನೋ ಕಾರು ಚಲಿಸಿದ್ದು, 13,000 ಕಿಮೀ ದೂರ, 15 ರಾಜ್ಯಗಳು ಮತ್ತು 3 ಇಂಟರ್ ನ್ಯಾಷನಲ್ ಬಾರ್ಡರ್ಸ್! ಇದೆಲ್ಲಾ ಆಗಿದ್ದು ಕೇವಲ 3 ತಿಂಗಳ ಅವಧಿಯಲ್ಲಿ.

ಇವರನ್ನು ಈ ಕುರಿತು ಮಾತಿಗೆಳೆದಾಗ “ಹೋಮ್ ಸ್ಕೂಲಿಂಗ್’, ’ರೋಡ್ ಸ್ಕೂಲಿಂಗ್’ ಬಗ್ಗೆ ರಮ್ಯಾ ಹೇಳಿದ್ದಿಷ್ಟು.. 

Hyderabad Couple, Twin Daughters Travel Across 15 States In 90 days

ರಮ್ಯಾ ಮಾತುಗಳು

“ಹೋಮ್ ಸ್ಕೂಲಿಂಗ್’ ಫಾರ್ಮಲ್ ಶಿಕ್ಷಣಕ್ಕಿಂತ ತುಂಬಾ ಭಿನ್ನ. ಮಾಮೂಲಿ ಶಾಲಾ ಶಿಕ್ಷಣದಲ್ಲಿ ಒತ್ತಡ ಹೆಚ್ಚು. ದೇಶದಲ್ಲಿ ಜನಸಂಖ್ಯೆ ಹೆಚ್ಚಿರುವುದರಿಂದ ಮಾಮೂಲಿ ಶಾಲಾ ಶಿಕ್ಷಣದ ಹೊರತಾಗಿ ಹೊಸ ರೀತಿಯ ಶಿಕ್ಷಣವನ್ನು ಜಾರಿಗೆ ತರುವುದು ಸ್ವಲ್ಪ ಕಷ್ಟವೇ. ಇಂದಿನ ಶಾಲಾ ವ್ಯವಸ್ಥೆಗಳು ಮಕ್ಕಳ ಪರವಾಗಿರುವುದಕ್ಕಿಂತ, ಹೆತ್ತವರ ಪರವಾಗಿಯೇ ಇದೆ. ಎಲ್ಲರಿಗೂ ಶಿಕ್ಷಣ ಸಿಗಬೇಕು. ಕೇವಲ ಪರೀಕ್ಷೆಯ ದೃಷ್ಟಿಯಿಂದ ಶಿಕ್ಷಣ ಪಡೆಯುವುದು ಮಾತ್ರವಲ್ಲದೇ, ಜ್ಞಾನಕ್ಕಾಗಿ ಪಡೆಯಬೇಕು. ಅದು ನಮ್ಮ ಹಕ್ಕು ಕೂಡಾ.

ಫಾರ್ಮಲ್ ಎಜುಕೇಶನ್ ಯಾವಾಗಲೂ ಪರೀಕ್ಷೆಯನ್ನೇ ಕೇಂದ್ರೀಕರಿಸುತ್ತದೆ. ಎಕ್ಸಾಮಲ್ಲಿ ಚೆನ್ನಾಗಿ ಮಾಡ್ಬೇಕು, ಒಳ್ಳೆ ಮಾರ್ಕ್ಸ್ ಬರ್‍ಬೇಕು, ಕಾಂಪಿಟೇಶನ್ ಇರ್‍ಬೇಕು, ಗ್ರೇಡ್, ಮಾರ್ಕ್ಸ್, ಪ್ರೈಜ್ ಇವುಗಳ ನಡುವೆಯೇ ಮಕ್ಕಳು ಸಿಲುಕಿದ್ದಾರೆ. ನೈಸರ್ಗಿಕವಾಗಿ ನಮಗಿರಬೇಕಾದ ಗುಣಗಳನ್ನು, ಸ್ವಭಾವಗಳನ್ನು, ಜೀವನ ಕೌಶಲ್ಯಗಳನ್ನು ಔಪಚಾರಿಕ ಶಿಕ್ಷಣ ಕಲಿಸುವುದಿಲ್ಲ.

Hyderabad Couple, Twin Daughters Travel Across 15 States In 90 days

ಇಂದಿನ ಮಕ್ಕಳಿಗೆ ಮ್ಯಾಥ್ಸ್, ಸೈನ್ಸ್ ಗೊತ್ತೇ ಹೊರತು, ಮನೆಯ ಸ್ವಚ್ಛತೆ, ಅಡಿಗೆ ಮುಂತಾದ ಉಪಯೋಗವಾಗುವಂಥಹ ಶಿಕ್ಷಣ ಅವರಿಗಿಲ್ಲ. ಇದುವೇ ಹೋಮ್ ಸ್ಕೂಲಿಂಗ್, ರೋಡ್ ಸ್ಕೂಲಿಂಗ್ ಮತ್ತು ಔಪಚಾರಿಕ ಶಿಕ್ಷಣಕ್ಕಿರುವ ವ್ಯತ್ಯಾಸ.

ನೀವು ಇದನ್ನು ಇಷ್ಟಪಡಬಹುದು: ಒಂದು ವರ್ಷದ ಮಗು ಋತುವಿಗೆ ಹಂಪಿ ತೋರಿಸಿದ ಹಿಪ್ಪೀ ರಾಣಿ: ಮಕ್ಕಳ ಜೊತೆ ಟೂರ್ ಹೋಗುವುದು ಹೀಗೆ!

ರೋಡ್ ಸ್ಕೂಲಿಂಗ್ ಸುಲಭವಲ್ಲ

“ಹೋಮ್ ಸ್ಕೂಲಿಂಗ್’,(Home Schooling) ’ರೋಡ್ ಸ್ಕೂಲಿಂಗ್’ ಕೇಳಿದಷ್ಟು, ನೋಡಿದಷ್ಟು ಸುಲಭವಾಗಿಲ್ಲ. ಅದಕ್ಕೆ ಬಹಳಷ್ಟು ತಯಾರಿಯ ಅಗತ್ಯವಿದೆ. ಉತ್ತಮ ವಾಹನ, ಖರ್ಚು ವೆಚ್ಚ ಇದೆಲ್ಲಕ್ಕಿಂತ ಹೆಚ್ಚಾಗಿ “ಪ್ಲ್ಯಾನ್’ನ ಅಗತ್ಯವಿದೆ. ಇದೆಲ್ಲವನ್ನು ತಲೆಯಲ್ಲಿಟ್ಟುಕೊಂಡೇ ಅವರು ಆಯ್ದುಕೊಂಡಿದ್ದು ನ್ಯಾನೋ ಕಾರನ್ನು. 

90 ದಿನಗಳ ಅವಧಿಯಲ್ಲಿ ಅವರ ಕಾರು ಮತ್ತು ಅವರು ನೋಡಿದ ರಾಜ್ಯಗಳ ಪಟ್ಟಿ ಹೀಗಿದೆ; ತೆಲಂಗಾಣದಿಂದ ಹೊರಟ ಅವರು ಮತ್ತೆ ತೆಲಂಗಾಣ(Telangana) ತಲುಪುವ ಮೊದಲು ಸುತ್ತಿದ ರಾಜ್ಯಗಳೆಂದರೆ, ಆಂಧ್ರ ಪ್ರದೇಶ,(Andhra Pradesh) ಒಡಿಶಾ,(Odisha) ಪಶ್ಚಿಮ ಬಂಗಾಳ, ಸಿಕ್ಕಿಂ,(West Bengal) ನೇಪಾಳ ಬಾರ್ಡರ್, ಅಸ್ಸಾಂ, ಮೇಘಾಲಯ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಬಿಹಾರ, ಝಾರ್ಖಂಡ್, ಛತ್ತೀಸ್ ಘರ್, ತಮಿಳುನಾಡು ಮತ್ತು ಕರ್ನಾಟಕ.

Hyderabad Couple, Twin Daughters Travel Across 15 States In 90 days

ಈ ಅದ್ಭುತ ದಿನಗಳ ಬಗ್ಗೆ “ಸ್ವೀಟ್ & ಶಾರ್ಟ್’ ಆಗಿ ಹೇಳಬಹುದೇ ಎಂದು ಕೇಳಿದಾಗ ಅವರು ಹೇಳಿದ್ದಿಷ್ಟು- 

ಮಕ್ಕಳು ಹೊಸತನ್ನು ಕಲಿತರು ಎನ್ನುವುದಕ್ಕಿಂತ ಹೆಚ್ಚಾಗಿ, ನಾವು ಹೆಚ್ಚು ಕಲಿತೆವು. ನಮ್ಮೀ ಪುಟ್ಟ ಕುಟುಂಬದೊಡನೆ ಜಾಸ್ತಿ ಸಮಯ ಕಳೆದೆವು. ಜೊತೆಯಾಗಿ ನಾವು ಕಲಿತಿದ್ದೇ ದ ಬೆಸ್ಟ್ ಪಾರ್ಟ್ ಆಫ್ ದ ಜರ್ನಿ!

ಮರೆಯಲಾಗದ ಘಟನೆ

ನಾವು ಅರುಣಾಚಲ ಪ್ರದೇಶದಲ್ಲಿದ್ದಾಗ(Aruachal Pradesh) ನಡೆದ ಘಟನೆ ಇದು. ಅಲ್ಲಿಯ ಜನರಿಗೆ ನಾನ್ ವೆಜ್ ತಿಂದೇ ಅಭ್ಯಾಸ. ಅಲ್ಲಿ ಒಬ್ಬರ ಮನೆಗೆ ಊಟಕ್ಕೆ ಹೋಗಿದ್ದೆವು. ಆದರೆ ನಾವು ವೆಜಿಟೇರಿಯನ್ಸ್. ಆ ಮನೆಯೊಡತಿ ನಮಗಾಗಿ ದಾಲ್ ತಯಾರಿಸಿದ್ದರು. ಅವರು ಮೊದಲ ಬಾರಿ ವೆಜ್ ಅಡಿಗೆ ಮಾಡಿದ್ದರು ಅನ್ನಿಸುತ್ತೆ. ಆ ದಾಲ್ ಸ್ವಲ್ಪವೂ ರುಚಿಯಾಗಿರಲಿಲ್ಲ. ಆದರೆ ಅದರಲ್ಲಿ ಅವರ ಪ್ರೀತಿ ಮತ್ತು ಪ್ರಯತ್ನ ಇತ್ತು. ಅನನ್ಯಾ ಮತ್ತು ಅಮೂಲ್ಯ ಸ್ವಲ್ಪವೂ ಬೇಸರಿಸಿಕೊಳ್ಳದೆ ಅದನ್ನು ತಿಂದರು. ಅಲ್ಲದೇ ಊಟವಾದ ಮೇಲೆ ಅಡಿಗೆ ತುಂಬಾ ಚೆನ್ನಾಗಿತ್ತು ಎಂದರು.

Hyderabad Couple, Twin Daughters Travel Across 15 States In 90 days

ಇಂಥದ್ದೇ ಎಷ್ಟೋ ಘಟನೆಗಳು ಈ ಅವಧಿಯಲ್ಲಿ ನಡೆದಿವೆ. ನಾವು ದಾರಿ ಕಳೆದುಕೊಂಡಾಗ ಸಹಾಯ ಹಸ್ತ ಚಾಚಿದ ಅಪರಿಚಿತರು, ಯಾರದ್ದೋ ಮನೆಯ ಕಳೆದುಹೋದ ಕರುವನ್ನು ಗಂಗಾಧರ್ ಮತ್ತು ಅಮೂಲ್ಯ ಹುಡುಕಿಕೊಟ್ಟಿದ್ದು, ಈ ರೋಡ್ ಸ್ಕೂಲಿಂಗ್ ಕಲಿಕೆಯಿಂದ 10 ವರ್ಷದ ಅನನ್ಯಾ, ಅಮೂಲ್ಯ ಇಡೀ ಮನೆಯನ್ನು ಮ್ಯಾನೇಜ್ ಮಾಡಬಲ್ಲರು. ಇದೆಲ್ಲವನ್ನೂ ನಾವು ಮುಖಾಮುಖಿಯಾಗಿ ಹೇಳಿಕೊಟ್ಟಿಲ್ಲ. ಬದಲಾಗಿ ಅವರೇ ಕಲಿತುಕೊಂಡಿದ್ದು ಎನ್ನುತ್ತಾರೆ ಹೆಮ್ಮೆಯಿಂದ!

ಹೆತ್ತವರಿಗೆ ಕಿವಿಮಾತು

ಜೀವನದ ಹೊಸ ಮಜಲಗಳನ್ನು ಪರಿಚಯಿಸುವ ಈ ಹೋಮ್ ಸ್ಕೂಲಿಂಗ್ ಮತ್ತು ರೋಡ್ ಸ್ಕೂಲಿಂಗ್ ಅನ್ನು ನಾವೂ ಮಾಡಬಹುದೇ? ಎಂದು ಯೋಚಿಸುತ್ತಿರುವ ಹೆತ್ತವರಿಗೆ ಇವರು ಹೇಳುವ ಕಿವಿಮಾತಿದು;

ಇದನ್ನು ಜಾರಿಗೊಳಿಸುವ ತಾಳ್ಮೆ ನಿಮ್ಮಲ್ಲಿ ಇದೆ ಎಂದಾದರೆ ನೀವು ಖಂಡಿತ ಪ್ರಯತ್ನಿಸಬಹುದು. ಇದನ್ನು ಬಹಳ ಸುಲಭ ಅಂದುಕೊಳ್ಳುವುದು ತಪ್ಪು. ಒತ್ತಡ ಇಲ್ಲದ ಶಿಕ್ಷಣ ಎನ್ನುವುದು ನಿಜವೇ. ಆದರೆ ಸಮಾಜವನ್ನು ಎದುರಿಸುವ ಧೈರ್ಯ, ತಾಳ್ಮೆ ನಿಮಗಿರಬೇಕು. 

Hyderabad Couple, Twin Daughters Travel Across 15 States In 90 days

ಸಮಾಜ ನಿಮ್ಮನ್ನು ಪ್ರಶ್ನಿಸುತ್ತದೆ. ನಾವು ಸಮಾಜದ ಭಾಗವೇ ಆಗಿರುವುದರಿಂದ ಅವರಿಗೆ ಉತ್ತರ ನೀಡಲೇಬೇಕಾಗುತ್ತದೆ. ಹೆತ್ತವರು ಅವರ ಸಂಪೂರ್ಣ ಸಮಯವನ್ನು ಮೀಸಲಿಡಬೇಕಾಗುತ್ತದೆ. ನಿಮ್ಮ ಮಕ್ಕಳು ನಿಜವಾಗಿ ಏನನ್ನು ಬಯಸುತ್ತಾರೆ ಎನ್ನುವುದನ್ನು ತಿಳಿಯಬೇಕಾಗುತ್ತದೆ. ಸವಾಲುಗಳು ಹೆಚ್ಚಿರುವುದರಿಂದ ಇದನ್ನೆದುರಿಸುವ ಧೈರ್ಯ ಬೇಕೇ ಬೇಕು ಎನ್ನುತ್ತಾರೆ.

ನೋಡಿದಿರಲ್ಲಾ. ಶಿಕ್ಷಣ ನಿಂತ ನೀರಲ್ಲ. ಅದಕ್ಕೆ ಹಲವು ಆಯಾಮಗಳಿವೆ. ನಾಲ್ಕು ಗೋಡೆಗಳ ಮಧ್ಯೆ ಕುಳಿತು ಕಲಿಯುವ ಶಿಕ್ಷಣಕ್ಕೂ, ನಾಲ್ಕು ಜನರ ಜೊತೆ ಬೆರೆತು ಕಲಿಯುವ ಶಿಕ್ಷಣಕ್ಕೂ ವ್ಯತ್ಯಾಸ ಬಹಳಷ್ಟಿದೆ. ನೀವು ಹೋಮ್ ಸ್ಕೂಲಿಂಗ್ ಅಥವಾ ರೋಡ್ ಸ್ಕೂಲಿಂಗ್ ಕುರಿತಾಗಿ ಯೋಚನೆ ಮಾಡುತ್ತಿದ್ದರೆ, ತಡ ಬೇಡ.

Hyderabad Couple, Twin Daughters Travel Across 15 States In 90 days

ಗಂಗಾಧರ್ ಅವರ ಪ್ರವಾಸಗಳ ಬಗ್ಗೆ ನೀವು ಹೆಚ್ಚು ತಿಳಿಯಬೇಕು ಎಂದಾದರೆ ಅವರ ಇನ್ ಸ್ಟಾಗ್ರಾಂ ಹ್ಯಾಂಡಲ್ ಅನ್ನು ಫಾಲೋ ಮಾಡಿ; unwind_at_unexplored

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button