ಕಾರು ಟೂರುತುಂಬಿದ ಮನೆದೂರ ತೀರ ಯಾನಬೆರಗಿನ ಪಯಣಿಗರುವಿಂಗಡಿಸದಸಂಸ್ಕೃತಿ, ಪರಂಪರೆಸೂಪರ್ ಗ್ಯಾಂಗು

ಒಂದು ವರ್ಷದ ಮಗು ಋತುವಿಗೆ ಹಂಪಿ ತೋರಿಸಿದ ಹಿಪ್ಪೀ ರಾಣಿ: ಮಕ್ಕಳ ಜೊತೆ ಟೂರ್ ಹೋಗುವುದು ಹೀಗೆ!

ನಾವು ಪ್ರವಾಸ ಹೋದಾಗ ಅಲ್ಲಿನ ವಾತಾವರಣವನ್ನು ಆನಂದಿಸುತ್ತೇವೆ. ಆದರೆ ಪುಟ್ಟ ಮಕ್ಕಳನ್ನು ಕರೆದುಕೊಂಡು ಹೋದಾಗ ಕೆಲವೊಂದು ಸವಾಲುಗಳು ಎದುರಾಗುತ್ತದೆ. ಮಗುವಾದ ನಂತರ ಪ್ರವಾಸ ಕಷ್ಟ ಅನ್ನುವುದು ಬಹುತೇಕ ತಾಯಂದಿರ ಮಾತು. ಪುಟ್ಟ ಮಗುವನ್ನು ಪ್ರವಾಸ ಕರೆದುಕೊಂಡು ಹೋದಾಗ ಅಲ್ಲಿ ಊಟ, ವಸತಿ, ಸಾರಿಗೆ ಎಲ್ಲವೂ ಕಷ್ಟ ಅನ್ನುವುದು ಸಾಮಾನ್ಯ ಮಾತು. ಬಹುತೇಕ ತಾಯಂದಿರಿಗೆ ಪ್ರವಾಸ ಮಾಡಲು ಇಷ್ಟವಿದ್ದರೂ ಕೂಡಾ ಮಗು ಚಿಕ್ಕದು ಎನ್ನುವ ಕಾರಣಕ್ಕೆ ಪ್ರವಾಸ ಹೋಗಲು ಹಿಂದೇಟು ಹಾಕುತ್ತಾರೆ. ಆದರೆ ಮಗಳು 6 ತಿಂಗಳು ಇರುವಾಗಲೇ ಅವಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಲು ಆರಂಭಿಸಿದ ಹಿಪ್ಪಿ ರಾಣಿ ಅವರು ಎಲ್ಲ ತಾಯಂದಿರಿಗೂ ಮಾದರಿ.

ಹಿಪ್ಪಿ ರಾಣಿ ಎಂದೇ ಕರೆಯಲ್ಪಡುವ ಶ್ರುತಿ ಅವರು ತಮ್ಮ ಮಗಳು ಋತುವಿನ ಮೊದಲನೇ ವರ್ಷದ ಹುಟ್ಟು ಹಬ್ಬಕ್ಕೆ ಹಂಪಿಗೆ ಕರೆದುಕೊಂಡು ಹೋದ ಅನುಭವವನ್ನು ಹಂಚಿಕೊಂಡಿದ್ದಾರೆ.

– ನವ್ಯಶ್ರೀ ಶೆಟ್ಟಿ

ಋತುವನ್ನು ಹಂಪಿಗೆ ಕರೆದುಕೊಂಡು ಹೋಗುವುದು ಅಷ್ಟೇನೂ ಸಾಹಸ ನಿರ್ಧಾರ ಆಗಿರಲಿಲ್ಲ.ವರ್ಷ ತುಂಬುವುದರೊಳಗೆ ಪ್ರವಾಸ ಕರೆದುಕೊಂಡು ಹೋಗಲು ಆರಂಭಿಸಿದ್ದರಿಂದ ಹಂಪಿ ಪ್ರವಾಸ ಅಷ್ಟೊಂದು ಕಷ್ಟವಾಗಿ ಇರಲಿಲ್ಲ.ಪುಟ್ಟ ಮಕ್ಕಳು ತಮ್ಮ ಸುತ್ತ ಮುತ್ತಲಿನ ಪ್ರಪಂಚವನ್ನು ಬೆರಗು ಕಣ್ಣಿಂದ ನೋಡುತ್ತಾರೆ.ಹಾಗೆಯೇ ಋತು ಕೂಡ ಹಂಪಿ ಪ್ರವಾಸದ ವೇಳೆ ಸುತ್ತಲಿನ ವಾತಾವರಣದ ಕಡೆಗೆ ಆಕರ್ಷಿತಳಾಗಿದ್ದಳು.

ಹಿಪ್ಪಿ ರಾಣಿ(hippie rani) ತಮ್ಮ ಪತಿ ಹಾಗೂ ಮಗಳ ಜೊತೆಗೆ ಹಂಪಿ ಪ್ರವಾಸವನ್ನು ಬೆಂಗಳೂರಿನಿಂದ ಆರಂಭಿಸಿದ್ದರು. ಬೆಂಗಳೂರಿಂದ ಹೊಸಪೇಟೆ ತನಕ ರೈಲಿನಲ್ಲಿ ಪ್ರಯಾಣ. ರೈಲಿನಲ್ಲಿ ಪುಟ್ಟ ಮಗು ಮಲಗುವುದಕ್ಕೆ ಸ್ವಲ್ಪ ತೊಂದರೆಯಾಗಿತ್ತು.

ಹಂಪಿಯ ಸ್ಥಳಗಳನ್ನು ನಡೆದುಕೊಂಡು ಸಾಗುತ್ತಾ ನೋಡುವುದೇ ಚೆಂದ. ಆ ಕಾರಣದಿಂದ ಯಾವ ವಾಹನ ಬಳಸದೇ ಋತುವನ್ನು ಕೂಡ ತಮ್ಮ ಜೊತೆಯೇ ನಡೆದುಕೊಂಡು ಕರೆದುಕೊಂಡು ಹೋಗುತ್ತಿದ್ದರು ಹಿಪ್ಪೀ ರಾಣಿ. ವಿರೂಪಾಕ್ಷ ದೇವಾಲಯ ಸೇರಿದಂತೆ  ಯಾವುದಾದ್ರೂ ಸ್ಥಳದಲ್ಲಿ ನಿಂತರೆ ಮಗಳನ್ನು ಅವಳ ಪಾಡಿಗೆ ಬಿಡುತ್ತಿದ್ದರು ಶ್ರುತಿ. ಋತು, ಅಲ್ಲಿನ ಬಂಡೆಗಳ ಮೇಲೆ ಹತ್ತುತ್ತಾ, ಪುಟ್ಟ ಹೆಜ್ಜೆ ಹಾಕುತ್ತಾ, ತನ್ನಷ್ಟಕ್ಕೆ ಮುದ್ದು ಮುದ್ದಾಗಿ ಅಲ್ಲಿಗೆ ಬಂದಿದ್ದ ಇತರ ಪ್ರವಾಸಿಗರ ಜೊತೆ ಮಾತನಾಡುತ್ತಾ ಹಂಪಿಯನ್ನು ಸಂಭ್ರಮಿಸುತ್ತಿದ್ದಳು.

ಹಂಪಿಯ ಹೇಮಕೂಟ(hampi hemakoota) ಬೆಟ್ಟವನ್ನು ಋತು ಉತ್ಸಾದಿಂದ ಹತ್ತುತ್ತಿದ್ದಳು. ಅವಳು ಹಂಪಿಯ ವಾತಾವರಣಕ್ಕೆ ಖುಷಿಯಿಂದ ಒಗ್ಗಿಕೊಂಡಿದ್ದಳು.

ಪ್ರವಾಸಿ ಪ್ರಿಯರಿಗೆ ಮುದ ನೀಡುವ ಹಂಪಿಯ ಸುಂದರ ತಾಣಗಳನ್ನು ಬೆರಗು ಕಣ್ಣಿಂದ ನೋಡುತ್ತಿದ್ದ ಋತುವಿನ ಲವಲವಿಕೆ ನೋಡಿ ಖುಷಿಯಾಯ್ತು ಎನ್ನುತ್ತಾರೆ ಹಿಪ್ಪಿ ರಾಣಿ.

ಹಂಪಿಯ ಪ್ರವಾಸದಲ್ಲಿ ಋತುವಿನ ಊಟ, ನಿದ್ದೆ ಹಾಳಾಗದಂತೆ ನೋಡಿಕೊಳ್ಳಬೇಕಾಗಿತ್ತು. ಋತು ವರ್ಷದ ಮಗು ಆಗಿರುವುದರಿಂದ ಹೊರಗಡೆ ಊಟ ಅಷ್ಟು ಸೂಕ್ತವಲ್ಲ. ಮಗುವಿನ ಆರೋಗ್ಯಕ್ಕೆ ಉತ್ತಮವಾದ ಆಹಾರವನ್ನೇ ನೀಡಬೇಕಿತ್ತು. ಸ್ಥಳೀಯ ರೆಸ್ಟೋರೆಂಟ್ ಗಳಲ್ಲಿ ಸಿಗುತ್ತಿದ್ದ ರುಚಿ ರುಚಿ ಇಡ್ಲಿ, ಚಪಾತಿಗಳನ್ನು ಹಿಪ್ಪಿ ರಾಣಿಯವರ ಜೊತೆಗೆ ಋತು ಕೂಡಾ ತಿನ್ನುತ್ತಿದ್ದಳು

ಮಕ್ಕಳನ್ನು ಹೊರಗಡೆ ಕರೆದುಕೊಂಡು ಹೋಗುವಾಗ ಮಕ್ಕಳಿಗೆ ಆರೋಗ್ಯ ಪ್ರಿಯ ಅಡುಗೆ ಮಾಡಿಕೊಡಲು ವಿದ್ಯುತ್ ಕೆಟಲ್(electric kettle) ಬಳಸುವುದು ಉತ್ತಮ ಎನ್ನುವ ಸಲಹೆ ನೀಡುತ್ತಾರೆ ಶ್ರುತಿ.

ಮಕ್ಕಳನ್ನು ಹೊರಗಡೆ ಕರೆದುಕೊಂಡು ಹೋದಾಗ ಅವರ ಕ್ಷೇಮ ನೋಡಿಕೊಳ್ಳುವುದೇ ಸವಾಲು. ಅಂಥದ್ದರಲ್ಲಿ ಒಂದು ವರ್ಷದ ಪುಟ್ಟ ಮಗಳನ್ನು ಬೆಂಗಳೂರಿಂದ ಹಂಪಿ ಕರೆದುಕೊಂಡು ಹೋಗಿ ಅಲ್ಲಿನ ವಾತಾವರಣವನ್ನು ಆನಂದಿಸುವ ಹಾಗೆ ಮಾಡಿದ್ದಾರೆ ಹಿಪ್ಪಿ ರಾಣಿ.

ತಮ್ಮ ಮಗಳಿಗೆ ಇನ್ನೂ ಹೊಚ್ಚ ಹೊಸ ಸ್ಥಳ ತೋರಿಸಬೇಕು ಎನ್ನುವ ಆಸೆ ಹೊತ್ತಿದ್ದಾರೆ ಬೆರಗಿನ ಪ್ರಯಾಣಿಗರಾಗಿರುವ ಹಿಪ್ಪಿ ರಾಣಿ ಖ್ಯಾತಿಯ ಶ್ರುತಿ.

Related Articles

One Comment

Leave a Reply

Your email address will not be published. Required fields are marked *

Back to top button