ವಿಂಗಡಿಸದ

9 ಚಂದದ ಟ್ರಾವೆಲ್ ಮಲಯಾಳಂ ಸಿನಿಮಾಗಳು

ಕೋವಿಡ್ ಕಾಲದಲ್ಲಿ ಮನೆಯಲ್ಲಿರುವುದೇ ಸೇಫು. ಈ ಹೊತ್ತಲ್ಲಿ ಪ್ರವಾಸ ಯೋಚನೆಯೂ ಮಾಡಬಾರದು. ಆದರೆ ಮನಸ್ಸು ಕೇಳಬೇಕಲ್ಲ. ಹೀಗಾಗಿ ಮನೆಯಲ್ಲಿದ್ದೇ ಪ್ರವಾಸ ಹೋಗುವ ಐಡಿಯಾ ಇಲ್ಲಿದೆ. ಮಲಯಾಳಂನ ಬೆಸ್ಟ್ 9 ಟ್ರಾವೆಲ್ ಸಿನಿಮಾಗಳ ಪಟ್ಟಿ ಇಲ್ಲಿದೆ. ಈ ಸಿನಿಮಾ ನೋಡಿ ಪ್ರವಾಸ ಹೋಗಿ ಬಂದಷ್ಟೇ ಖುಷಿ ಪಡಿ.

  • ನವ್ಯಶ್ರೀ ಶೆಟ್ಟಿ

ಕೆಲವೊಂದು ಸಿನಿಮಾಗಳು ಪಯಣದ ಕಥೆಗಳನ್ನು ಹೇಳುತ್ತದೆ. ಅಂತಹ ಸಿನಿಮಾಗಳು ನಮಗೆ ಪಯಣದ ಆಸೆಗಳನ್ನು ಹುಟ್ಟಿಸುತ್ತದೆ. ಪ್ರವಾಸ  ಕುರಿತಾದ ನಾನಾ ಕಥಾ ಹಂದರವುಳ್ಳ ಸಿನಿಮಾಗಳ ಪ್ರಯೋಗ ಸಿನಿರಂಗದಲ್ಲಿ ನಡೆಯುತ್ತಲೇ ಇರುತ್ತದೆ.  ಹಾಲಿವುಡ್ ನಲ್ಲಿ ಇಂತಹ ಸಿನಿಮಾ ಜಾಸ್ತಿ. ಭಾರತದ ಮಟ್ಟಿಗೆ ಪ್ರಕೃತಿಯ ಸುಂದರ ತಾಣ ಅದ್ಭುತವಾಗಿ  ತೋರಿಸುತ್ತಿರುವ ಸಿನಿ ರಂಗದಲ್ಲಿ ಮಲಯಾಳಂ ಕೂಡ ಒಂದು. ಇತ್ತೀಚೆಗೆ ಮಲಯಾಳಂ ಸಿನಿರಂಗದಲ್ಲಿ ಪ್ರವಾಸ ಕುರಿತಾದ ಸಿನಿಮಾಗಳು ಕೊಂಚ ಜಾಸ್ತಿ ಬರುತ್ತಿದೆ. ಅಂತಹ ಕೆಲವು ಸಿನಿಮಾಗಳ ಮಾಹಿತಿ ಇಲ್ಲಿದೆ. ಈ ಸಿನಿಮಾ ನೋಡಿ ನಿಮ್ಮ ಪಯಣದ ಹಾದಿಗೆ ಸ್ಫೂರ್ತಿ ಆಗಬಹುದು. 

  1. ನೀಲಾಕಾಶಮ್ ಪಚ್ಚಕ್ಕಡಲ್ ಚುವನ್ನ ಭೂಮಿ(Neelakasham Pachakadal Chuvanna Bhoomi)

ಈ ಸಿನಿಮಾ ತೆರೆಕಂಡಿದ್ದು 2013ರಲ್ಲಿ. ಕೇರಳದಿಂದ ನಾಗಾಲ್ಯಾಂಡ್ ತನಕ ರೋಡ್ ಟ್ರಿಪ್ ಹೋಗುವ ಕಥೆಯುಳ್ಳ ವಿಭಿನ್ನ ಸಿನಿಮಾ. ಕಾಸಿ ಮತ್ತು ಸುನಿ ಅನ್ನುವ ಎರಡು ಪಯಣಿಗರ ನಡುವೆ ಸುತ್ತುವ ಸಿನಿಮಾವಿದು. 

Neelakasham Pachakadal Chuvanna Bhoomi Travel Movie Dulquer Salman

ಭಾರತದ ಏಳು ರಾಜ್ಯಗಳಲ್ಲಿ ಈ ಸಿನಿಮಾದ ಚಿತ್ರೀಕರಣವಾಗಿದೆ. ಕೇರಳ,ಕರ್ನಾಟಕ,ಆಂದ್ರಪ್ರದೇಶ. ಒರಿಸ್ಸಾ ,ಪಶ್ಚಿಮ ಬಂಗಾಳ, ನಾಗಾಲ್ಯಾಂಡ್ ಹಾಗೂ ಸಿಕ್ಕಿಂ ಸುಂದರ ತಾಣಗಳನ್ನು ಈ ಸಿನಿಮಾದಲ್ಲಿ ಸೆರೆ ಹಿಡಿಯಲಾಗಿದೆ. 

ನಿರ್ದೇಶಕ  :ಸಮೀರ್ ತಾಹೀರ್ (Sameer Thahir)

ಕಲಾವಿದರು: ದುಲ್ಕರ್ ಸಲ್ಮಾನ್ (Dulquer Salman), ಸರ್ಜಾ ಬಾಲ ಹಿಜಿಂ (Surja Bala Hijam) ಸುನ್ನಿ ವೆನೆ (Sunny Wayne)

  1. ಕಾರ್ಬನ್ (Carbon)

ಪಯಣದ ಕಥೆಯಿರುವ ಕಾರ್ಬನ್ ಸಿನಿಮಾ ರಿಲೀಸ್ ಆಗಿದ್ದು 2018ರಲ್ಲಿ. ಸಿಬಿ ಎನ್ನುವ ಪಯಣಿಗನ ಕುರಿತಾದ ಕಥೆ. ಕಾಡಿನಲ್ಲಿ ನಿಧಿ ಹುಡುಕುವ ಕುತೂಹಲಕಾರಿ ಕತೆಯಿರುವ ಸಿನಿಮಾ. ಫಹಾದ್ ಫಾಸಿಲ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಸಿನಿಮಾ. 

Carbon Travel inspiring Movie Fahad Fassil

ಪಾಲ(Pala) , ಏರುಮೇಲಿ (Erumeli), ಕೊಟ್ಟಾಯಂ(Kottayam) ಕೆಲವು ಪ್ರದೇಶಗಳಲ್ಲಿ, ಇಡುಕಿಯ ಅಮ್ಮಚಿ ಕೊಟ್ಟಾರಂ(Kottaram)ನ ಕಾಡುಗಳಲ್ಲಿ, ಚಿಮ್ಮೋನಿ ವೈಲ್ಡ್ ಲೈಫ್ ಸ್ಯಾಂಕ್ಚುರಿ(Chimmony Wildlife Sanctuary), ವೈನಾಡು ಪ್ರದೇಶದಲ್ಲಿ ಚಿತ್ರೀಕರಣ ಗೊಂಡಿತ್ತು. 

ನಿರ್ದೇಶಕ: ವೇಣು

ಕಲಾವಿದರು: ಫಹಾದ್ ಫಾಸಿಲ್ (Fahad Fassil), ಮಮ್ತಾ ಮೋಹನ್ ದಾಸ್(Mamta Mohandas)

  1. ರಾಣಿ ಪದ್ಮಿನಿ (Rani Padmini)

ಇಬ್ಬರು ಮಹಿಳಾ ಪಯಣಿಗರ ಕುರಿತಾದ ಕಥೆ ಹೊಂದಿರುವ ರಾಣಿ ಪದ್ಮಿನಿ ಸಿನಿಮಾ ರಿಲೀಸ್ ಆಗಿದ್ದು 2015ರಲ್ಲಿ. ರೀಮಾ ಕಲ್ಲಿಂಗಲ್, ಮಂಜು ವಾರಿಯರ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಸಿನಿಮಾ. ಸಮಾಜದ  ಜಂಜಾಟಗಳಿಂದ ದೂರವಾಗಿ, ಪಯಣದಲ್ಲಿ ಜೊತೆಯಾಗುವ ಇಬ್ಬರು ಹೆಣ್ಣು ಮಕ್ಕಳು, ಉತ್ತರ ಭಾರತ ಸುತ್ತುವ ಕಥೆಯೇ ರಾಣಿ ಪದ್ಮಿನಿ. 

ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ದೆಹಲಿ, ಕೇರಳದ ಸುಂದರ ತಾಣಗಳಲ್ಲಿ ರಾಣಿ ಪದ್ಮಿನಿ ಚಿತ್ರೀಕರಣಗೊಂಡಿತ್ತು. 

Rani Padmini Travel Movie Aashiq Abu

ನಿರ್ದೇಶನ: ಆಶಿಕ್ ಅಬು (Aashiq Abu)

ಕಲಾವಿದರು: ರೀಮಾ ಕಲ್ಲಿಂಗಲ್, ಮಂಜು ವಾರಿಯರ್

  1. ನಾರ್ತ್ 24 ಕಾಥಮ್ (North 24 Kaatham)

ಮೂವರು ಅಪರಿಚಿತರ ಸುತ್ತ ಸುತ್ತುವ ಕಥೆ.  ಈ ಸಿನಿಮಾ ಬಿಡುಗಡೆ ಆಗಿದ್ದು 2013ರಲ್ಲಿ. ಫಹಾದ್ ಫಾಸಿಲ್, ನೆಡುಮುಡಿ ವೇಣು,ಸ್ವಾತಿ ರೆಡ್ಡಿ ಮುಖ್ಯ ತಾರಂಗಣದಲ್ಲಿ ಮೂಡಿ ಬಂದ ಸಿನಿಮಾ. ಪ್ರವಾಸದಲ್ಲಿ ಆಗುವ ಸ್ವಾರಸ್ಯಕರ ಕಥೆಯನ್ನು ಈ ಸಿನಿಮಾ ಹೊಂದಿದೆ. 

North 24 kaatham Travel Movies

ನಿರ್ದೇಶನ: ಅನಿಲ್ ರಾಧಾಕೃಷ್ಣ ಮೆನನ್

ಕಲಾವಿದರು: ಫಹಾದ್ ಫಾಸಿಲ್ , ನೆಡುಮುಡಿ ವೇಣು,ಸ್ವಾತಿ ರೆಡ್ಡಿ

  1. ಅನಾರ್ಕಲಿ (Anarkali)

2015ರಲ್ಲಿ ಅನಾರ್ಕಲಿ ಸಿನಿಮಾ ತೆರೆಕಂಡಿತ್ತು. ಒಬ್ಬ ಮಾಜಿ ನೌಕಾ ಅಧಿಕಾರಿ, ತನ್ನ ಪ್ರೇಯಸಿಯನ್ನು ಹುಡುಕಿಕೊಂಡು ಹೋಗುವ ಪಯಣದ ಕಥೆ. ಈ ಸಿನಿಮಾದಲ್ಲಿ ಲಕ್ಷದ್ವೀಪದ ಸುಂದರ ತಾಣಗಳನ್ನು ಚಿತ್ರಿಸಲಾಗಿದೆ. ಕವರತ್ತಿ(Kavaratti),

Anarkali Travel Movies

ಬಂಗಾರಂ(Bangaram), ಲಕ್ಷದ್ವೀಪ ದ ಅಗತ್ತಿ (Agatti)ಯಲ್ಲಿ ಸಿನಿಮಾದ ಬಹು ಭಾಗ ಚಿತ್ರೀಕರಣಗೊಂಡಿವೆ.  

ನಿರ್ದೇಶನ: ಸಚಿ (Sachy)

ಕಲಾವಿದರು: ಪ್ರಥ್ವಿರಾಜ್ ಸುಕುಮಾರನ್ , ಬಿಜು ಮೆನನ್, ಕಬೀರ್ ಬೇಡಿ, ಪ್ರಿಯಲ್ ಗೊರ್, ಮಿಯಾ

ಸಂಗೀತ: ವಿದ್ಯಾ ಸಾಗರ್

  1. ಚಾರ್ಲಿ (Charlie)

ಒಬ್ಬಳು ಯುವತಿಯ ಪಯಣದ ಕುರಿತಾದ ಕಥೆ ಹೊಂದಿರುವ ಸಿನಿಮಾ. ಈ ಸಿನಿಮಾ ಬಿಡುಗಡೆಗೊಂಡಿದ್ದು 2015ರಲ್ಲಿ.  ಪಾರ್ವತಿ, ದುಲ್ಕರ್ ಸಲ್ಮಾನ್ ಮುಖ್ಯ ಭೂಮಿಕೆಯಲ್ಲಿ ಇರುವ ಸಿನಿಮಾ. ಟೆಸ್ಸಾ(Tessa) ಎನ್ನುವ ಹುಡುಗಿ ಈ ಕಥೆಯ ಮುಖ್ಯ ಬಿಂದು. ಪಯಣದ ಅಚ್ಚರಿಗಳು, ಅಲ್ಲಿ ಆಕಸ್ಮಿಕವಾಗಿ ಭೇಟಿಯಾಗುವ ಹುಮ್ಮಸ್ಸಿನ ಹುಡುಗ ಚಾರ್ಲಿ ಇವರಿಬ್ಬರ ನಡುವಿನ ಕಥೆಯುಳ್ಳ ಸಿನಿಮಾ. 

Charlie Travel inspiring movie

ಈ ಸಿನಿಮಾ ಬಹುತೇಕ ಕೊಚ್ಚಿ, ಮುನ್ನಾರ್, ಇಡುಕಿಯ ತಾಣಗಳಲ್ಲಿ ಚಿತ್ರೀಕರಣ ವಾಗಿತ್ತು. 

ನಿರ್ದೇಶಕ :ಮಾರ್ಟಿನ್ ಪರಕ್ಕಟ್(Martin Parakkat)

ಕಲಾವಿದರು: ದುಲ್ಕರ್ ಸಲ್ಮಾನ್, ಪಾರ್ವತಿ, ಅಪರ್ಣ ಗೋಪಿನಾಥ್ , ನೆಡುಮುಡಿ ವೇಣು, ಸಬಿನ್ ಸಾಹಿರ್ (soubin sahir)

ನೀವು ಇದನ್ನು ಇಷ್ಟಪಡಬಹುದು: ಟೆಕ್ಕಿಯಾಗಿದ್ದ ಹುಡುಗ ಈಗ ವೈಲ್ಡ್ ಲೈಫ್ ಫೋಟೋಗ್ರಾಫರ್: ಮೂಡಿಗೆರೆಯ ಸುನೀಲ್ ಸಚಿಯವರ ಕುತೂಹಲಕರ ಕತೆ

  1. ವೆಟ್ಟಿಲೇಕ್ಕುಲ್ಲ ವಾಜಿ (Veettilekkulla Vazhi)

ವೆಟ್ರಿಲೇಕ್ಕುಲ್ಲ ವಾಜಿ ತೆರೆಕಂಡಿದ್ದು 2011ರಲ್ಲಿ. ವೈದ್ಯರೊಬ್ಬರ ಪ್ರಯಾಣದ ಕಥೆ. ವೈದ್ಯ ಒಬ್ಬರು ತಾಯಿಗೆ ಕೊಟ್ಟ ಮಾತಿನಂತೆ  ಒಬ್ಬ ಸಣ್ಣ ಹುಡುಗನನ್ನು ಟೆರರಿಸ್ಟ್ ತಂದೆಗೆ ಒಪ್ಪಿಸುವ ಕಥೆ. ಈ ಸಿನಿಮಾ ಲಡಾಕ್, ಕಾಶ್ಮೀರ್, ಜೈಸಲ್ಮೇರ್, ಜೋಧಪುರ, ಬಿಕನೇರ್, ಅಜ್ಮೇರ್, ಪುಷ್ಕರಂಡ್, ದೆಹಲಿ ಹಾಗೂ ಕೇರಳದ ಸುಂದರ ತಾಣಗಳಲ್ಲಿ ಚಿತ್ರೀಕರಣಗೊಂಡಿತ್ತು. 

Veettilekkulla Vazhi Travel Movie Dr Biju

ನಿರ್ದೇಶಕ: ಡಾ. ಬಿಜು

ಕಲಾವಿದರು: ಪ್ರಥ್ವಿ ರಾಜ್ ಸುಕುಮಾರನ್, ಇಂದ್ರಜಿತ್ ಸುಕುಮಾರನ್, ಮಾಳವಿಕಾ, ಮಾಸ್ಟರ್ ಗೋವರ್ಧನ್, ಧನ್ಯ ಮೇರಿ, ವರ್ಗೀಸ್

  1. ಇಡುಕ್ಕಿ ಗೋಲ್ಡ್ (Idukki Gold)

ನಾಲ್ವರು ಸ್ನೇಹಿತರ ನಡುವೆ ನಡೆಯುವ ಪ್ರವಾಸದ ಕಥೆ. ಇಡುಕ್ಕಿ ಗೋಲ್ಡ್ 2011ರಲ್ಲಿ ತೆರೆಗೆ ಬಂದಿತ್ತು. ಹಲವು ವರ್ಷಗಳ ನಂತರ ಒಂದಾಗುವ ಸ್ನೇಹಿತರು, ಆ ಸಮಯದಲ್ಲಿ ಮರುಕಳಿಸುವ ಬಾಲ್ಯದ ನೆನಪುಗಳ ಕಥೆಯನ್ನು ಈ ಸಿನಿಮಾ ಹೊಂದಿದೆ. 

ಇಡುಕ್ಕಿ ಗೋಲ್ಡ್ ಸಿನಿಮಾ ಬಹುತೇಕ ಇಡುಕ್ಕಿಯ ತಾಣಗಳಲ್ಲಿ ಚಿತ್ರೀಕರಣಗೊಂಡಿದೆ. 

Idukki Gold Travel movie

ನಿರ್ದೇಶಕ :ಆಶಿಕ್ ಅಬು

ಕಲಾವಿದರು: ಮನಿಯಣಪಿಲ ರಾಜು, ಬಾಬು ಅಂತೋನಿ, ವಿಜಯ ರಾಘವನ್, ಪ್ರತಾಪ್ ಪೊತೆನ್, ರವೀಂದ್ರ ನ್,

  1. ಲಾರ್ಡ್  ಲಿವಿಂಗ್ ಸ್ಟೋನ್ 7000 ಕಂದಿ(Lord Livingstone 7000 Kandi )

ಈ ಸಿನಿಮಾ ಬಿಡುಗಡೆಗೊಂಡಿದ್ದು 2015ರಲ್ಲಿ. 6 ಜನ ಸಮಾನ ಮನಸ್ಕರ ತಂಡ “7000 ಕಂದಿ”ಅನ್ನುವ ಹಳ್ಳಿಯ ಬುಡಕಟ್ಟು ಜನರಿಗೆ ಸಹಾಯ ಮಾಡುವ ಕಥೆ. ಹುಮ್ಮಸ್ಸಿನ ಮನಸುಗಳು ಹಳ್ಳಿ ಜನರಿಗೆ ಸಹಾಯ ಮಾಡುವ ಕಥೆಯನ್ನು ಸಿನಿಮಾ ಹೊಂದಿದೆ. 

Lord Livingstone 7000 Kandi Travel movie

ವಯನಾಡು, ಇಡುಕ್ಕಿ, ಪುಣೆ, ಚೆನ್ನೈ ಭಾಗಗಳಲ್ಲಿ ಚಿತ್ರೀಕರಣವಾಗಿದೆ. 

ನಿರ್ದೇಶನ : ಅನಿಲ್ ರಾಧಾಕೃಷ್ಣನ್ ಮೆನನ್

ಕಲಾವಿದರು: ಕುಂಚಕೊ ಬೊಬನ್ (Kunchako Boban), ಭರತ್, ರೇಣು ಮ್ಯಾಥ್ಯೂಸ್,ನಿಡಮುಡಿ ವೇಣು ,ಸುನ್ನಿ ವ್ಯಾನೆ

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button