ದೂರ ತೀರ ಯಾನವಿಂಗಡಿಸದ

450 ರೂ ಹಣವಿದ್ದರೆ ಸಾಕು ಮಂಗಳೂರಿನಿಂದ ಲಕ್ಷದ್ವೀಪ ಹೋಗಬಹುದು

ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ(Union Tourism Department )ಅಡಿಯಲ್ಲಿ ರೂಪುಗೊಂಡ ಲಕ್ಷದೀಪ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರವು(The Lakshadweep Islands Tourism Development Authority) ಕೆಲವು ಪ್ರಯೋಗಗಳ ನಂತರ ಮಂಗಳೂರು-ಲಕ್ಷದ್ವೀಪ ಪ್ರವಾಸಿ ಲೈನರ್ ಸೇವೆಯನ್ನು(Liner Services )ಪ್ರಾರಂಭಿಸಲಿದೆ

160 ಪ್ರಯಾಣಿಕರನ್ನು ಹೈಸ್ಪೀಡ್ ನೌಕೆ ‘ಪರಾಲಿ’ (Parali)ಗುರುವಾರ ಲಕ್ಷದ್ವೀಪ-ಮಂಗಳೂರಿನ(Lakshadweep -Mangalore)ನಡುವೆ ಕೇವಲ ಏಳು ಗಂಟೆಗಳಲ್ಲಿ ತಲುಪಿಲಿದ್ದು, ಈ ಸೇವೆ ಆರಂಭವಾಗಿದೆ. ಈ ಮುನ್ನ ಲಕ್ಷದ್ವೀಪ-ಮಂಗಳೂರು ನಡುವೆ ಸಮುದ್ರ ಮಾರ್ಗದಲ್ಲಿ 13 ಗಂಟೆಗಳ ಕಾಲ ಪ್ರಯಾಣಿಸಬೇಕಿತ್ತು. ಆದರೆ ಹೊಸ ಫೆರ್ರಿಯು(Ferry) ಬರೋಬ್ಬರಿ 5 ಗಂಟೆಗಳ ಪ್ರಯಾಣವನ್ನು ಕಡಿಮೆ ಮಾಡಿದೆ. ಪ್ರತಿ ಪ್ರಯಾಣಿಕರಿಗೆ (Passengers)450 ರೂ. ಪ್ರಯಾಣ ದರ(Tickets )ಇತ್ತು ಎಂದು ಪ್ರಯಾಣಿಕರು ತಿಳಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು (Prime Minister Narendra Modi)ಲಕ್ಷದ್ವೀಪ ದ್ವೀಪಕ್ಕೆ ಭೇಟಿ (Lakshadweep Visit)ನೀಡಿದ ನಂತರ ಕೊಚ್ಚಿ(Kochi) ಮತ್ತು ಮಂಗಳೂರಿನ ನಡುವೆ ಸಮುದ್ರ ಮಾರ್ಗದಲ್ಲಿ ಇನ್ನಷ್ಟು ಸೌಲಭ್ಯಗಳನ್ನು ಆರಂಭಿಸಲು ಲಕ್ಷದ್ವೀಪ ಆಡಳಿತ ಕೆಲಸ ಆರಂಭಿಸಿದೆ.

ಕೋವಿಡ್ ಸಂಕಷ್ಟಕ್ಕಿಂತ(COVID) ಮೊದಲು ಮಂಗಳೂರು-ಲಕ್ಷದ್ವೀಪದ ನಡುವೆ ಪ್ರಯಾಣಿಕರ ಹಡಗು ಸಂಚಾರ ನಡೆಸುತ್ತಿತ್ತು. ಆದರೆ ಕೆಲ ವರ್ಷಗಳಿಂದ ಇದು ಕಾರಣಾಂತರದಿಂದ ಸ್ಥಗಿತಗೊಂಡಿತ್ತು. ಹೀಗಾಗಿ ಲಕ್ಷದ್ವೀಪಕ್ಕೆ ಹೋಗಬೇಕಾದರೆ, ಕೇರಳದ ಕೊಚ್ಚಿಗೆ ಹೋಗಿ ಅಲ್ಲಿಂದ ಲಕ್ಷದ್ವೀಪಕ್ಕೆ ತೆರಳಬೇಕಾಗಿತ್ತು. ಸದ್ಯ ಪ್ರವಾಸಿ ಹಡಗು ಸಂಚಾರ ಆರಂಭ ಆಗಿದ್ದು, ಮೊದಲ ಹೈಸ್ಪೀಡ್ ಹಡಗು(High speed Cruise ship)ಪರಾಲಿ(Parali)ಲಕ್ಷದ್ವೀಪದಿಂದ ಮಂಗಳೂರಿಗೆ ಆಗಮಿಸಿದೆ. ಹಡಗಿನಲ್ಲಿ ಬಂದ ಪ್ರವಾಸಿಗರು ಸಂತಸ ವ್ಯಕ್ತಪಡಿಸಿದ್ದಾರೆ.

ಹೊಸ ನೌಕೆಯು ಹೆಚ್ಚಿನ ವೇಗದ ಸಂಪರ್ಕವನ್ನು ಮಾತ್ರವಲ್ಲದೆ ಸರಕು ವಾಹಕಗಳಿಂದ ಪ್ರಯಾಣಿಕರನ್ನು ಸಾಗಿಸಲು ಮಾರ್ಪಡಿಸಲಾದ ಹಿಂದಿನ ಹಡಗುಗಳಿಗಿಂತ ಹೆಚ್ಚು ಸುಗಮವಾಗಿದೆ.

ನೀವು ಇದನ್ನು ಇಷ್ಟ ಪಡಬಹುದು: ಮೋದಿ ಭೇಟಿ ನಂತರ ಲಕ್ಷದ್ವೀಪ ಪ್ರವಾಸೋದ್ಯಮದಲ್ಲಿ ಹೆಚ್ಚಳ

ನೀವು ಈ ಹೈ ಸ್ಪೀಡ್ ಪರಾಲಿ ನೌಕೆಯಲ್ಲಿ ಸಂಚರಿಸಲು 450 ರೂಪಾಯಿ ಹಣ ಇದ್ದರೆ ಸಾಕು.

ಲಕ್ಷದ್ವೀಪ ಬಗ್ಗೆ(Lakshadweep)

ಲಕ್ಷದ್ವೀಪವು 36 ದ್ವೀಪಗಳಿಗೆ(Island )ನೆಲೆಯಾಗಿದ್ದು, 32 ಚದರ ಕಿಲೋಮೀಟರ್ ಭೂಮಿಯಲ್ಲಿ ಹರಡಿದೆ. ಇದು ಸಮುದ್ರ ಜೀವಿಗಳಿಂದ ಸಮೃದ್ಧವಾಗಿರುವ 4200 ಚದರ ಕಿಲೋಮೀಟರ್ ನಷ್ಟು ಆವೃತವಾಗಿದೆ. ಈ ಸ್ಥಳವು ವಿಹಾರ ಮಾಡುವವರಿಗೆ, ಪ್ರಕೃತಿ ಪ್ರಿಯರಿಗೆ ಮತ್ತು ಸಾಹಸ ಪ್ರಿಯರಿಗೆ ಶುದ್ಧ ಸ್ವರ್ಗವಾಗಿದೆ.

ಅರೇಬಿಯನ್ ಸಮುದ್ರದಲ್ಲಿನ(Arabian Sea)ಉಷ್ಣವಲಯದ ಸ್ವರ್ಗ ಈ ಜಾಗ. ಲಕ್ಷದ್ವೀಪವು ಪ್ರಾಚೀನ ಹವಳದ ಬಂಡೆಗಳು, ಏಕಾಂತ ಕಡಲತೀರಗಳು ಮತ್ತು ಆಕಾಶ ನೀಲಿ ಕೆರೆಗಳನ್ನು ಹೊಂದಿದೆ. ಲಕ್ಷದ್ವೀಪದಲ್ಲಿ ಜಲ ಕ್ರೀಡೆಗಳು(Water Activity )ಮತ್ತು ಕಡಲತೀರದ ಚಟುವಟಿಕೆಗಳಿಗೆ ಸೂಕ್ತವಾದ ಹವಾಮಾನದ ಆರಂಭವನ್ನು ಏಪ್ರಿಲ್ (April)ಸೂಚಿಸುತ್ತದೆ, ಇದು ಸಾಹಸ ಉತ್ಸಾಹಿಗಳಿಗೆ ಬೇಡಿಕೆಯ ತಾಣವಾಗಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button