ವಿಂಗಡಿಸದ

ಉತ್ತರ ಕನ್ನಡ ಘಟ್ಟದ ಮೇಲಿನ ಸುಂದರವಾದ ಊರು ಶಿರಸಿ

ಕರ್ನಾಟಕವನ್ನು ಸಾಂಸೃತಿಕ ರಾಯಭಾರಿ ಎಂದು ಕರೆಯಲಾಗುತ್ತದೆ.ಹಾಗೆಯೇ ಕರ್ನಾಟಕವನ್ನು ಒಂದು ರಾಜ್ಯ ಹಲವು ಜಗತ್ತು ಎಂದೂ ಹೇಳಲಾಗುತ್ತದೆ.ಈ ನಾಡಿನ ಪ್ರತಿಯೊಂದು ಜಿಲ್ಲೆಯು ತನ್ನದೆಯಾದ ಪರಂಪರೆಯನ್ನು ಹೊಂದಿದೆ. ಅದೇ ರೀತಿ ಉತ್ತರಕನ್ನಡದ ಶಿರಸಿ ಕೂಡ ಒಂದು ಶ್ರೀಮಂತ ಸಂಸ್ಕೃತಿಯ ಊರಾಗಿದೆ.ದಕ್ಷಿಣ ಭಾರತದಲ್ಲೇ ಅತ್ಯಂತ ಪ್ರಸಿದ್ಧ ಜಾತ್ರೆ ಎಂದು ಹೆಸರುವಾಸಿಯಾಗಿದೆ.

ಕೆ. ಎಂ ಪವಿತ್ರಾ


ಹಾನಗಲ್ಲು ಅಂದು ವಿರಾಟನಗರವಾಗಿತ್ತು. ಧರ್ಮರಾಯನು ದೇವಿಯನ್ನು ಪೂಜಿಸುತಿದ್ದ ಎಂದು ಮಹಾಭಾರತದಲ್ಲಿ ಅಭಿಪ್ರಾಯ ಪಡಲಾಗಿದೆ. ಚಾಲುಕ್ಯರ ಕಾಲದ ಶಾಸನದಲ್ಲಿ ಕೂಡ ಇದರ ಉಲ್ಲೇಖವಿದೆ,ಹಾನಗಲ್ಲಿನಲ್ಲಿ ಜಾತ್ರೆ ಮುಗಿದ ನಂತರ ಆಭರಣಗಳ ಸಮೇತವಾಗಿ ದೇವಿಯನ್ನು ಒಂದು ಪೆಟ್ಟಿಗೆಯಲ್ಲಿ ಹಾಕಿ ಇಟ್ಟಿದರಂತೆ.ಅದನ್ನು ಕೆಲವು ಕಳ್ಳರು ಅಪಹರಿಸಿ ಉತ್ತರ ಕನ್ನಡದ ಶಿರಸಿ ತಂದರು. ಆಭರಣಗಳನ್ನು ಹಂಚಿಕೊಂಡ ನಂತರ ಆ ವಿಗ್ರಹವನ್ನು ಪೆಟ್ಟಿಗೆಯಲ್ಲಿಟ್ಟು ಕೆರೆಗೆ ಎಸೆದರು. ಆ ಕೆರೆಯು ಶಿರಸಿಯ ದೇವಿಕೆರೆ ಎಂದು ಹೆಸರುವಾಸಿಯುಗಿದೆ

Shri Marikamba Devi Temple


ಪ್ರತಿ ವರ್ಷ ಚಂದ್ರಗುತ್ತಿಯ ಜಾತ್ರೆಗೆ ಹೋಗುತ್ತಿದ್ದ ಭಕ್ತನೊಬ್ಬ ಒಂದು ವರ್ಷ ಅವನನ್ನು ಜನರು ಜಾತ್ರೆಗೆ ಹೋಗದಂತೆ ತಡೆದು ಪೀಡಿಸಿದರು. ಅದರಿಂದ ಬೇಸರಗೊಂಡು ಅವನು ಮುಂದಿನ ವರ್ಷ ಜಾತ್ರೆಗೆ ಹೋಗದೆ ಸಿರ್ಸಿಯಲ್ಲಿಯೇ ದೇವಿಯನ್ನು ಆರಾಧನೆ ಮಾಡಿದನು. ಒಂದು ದಿನ ರಾತ್ರಿಅವನ ಕನಸಿನಲ್ಲಿ ದೇವಿ ಪ್ರತ್ಯಕ್ಷವಾಗಿ “ನಾನು ಮಾರಮ್ಮ. ನಾನು ನಿಮ್ಮ ಊರಿನ ಕೆರೆಯಲ್ಲಿದ್ದೇನೆ. ನನ್ನನ್ನು ಮೇಲೆತ್ತು” ಎಂದು ಹೇಳುತ್ತಾಳೆ.ಅದನ್ನು ಆ ಊರಿನ ಪ್ರಮುಖರಿಗೆ ತಿಳಿಸಿದನು. ಅದರಂತೆ ಊರವರು ಕೆರೆಯ ಸುತ್ತ ಸೇರಲಾಗಿ ಭಕ್ತನು ಮೂರು ಸುತ್ತು ಕೆರೆಯನ್ನು ಸುತ್ತಿ ದೇವಿಯನ್ನು ಪ್ರಾರ್ಥಿಸಿದನು. ಕೆರೆಯ ಮೇಲೆ ತೇಲುತ್ತಿರುವ ಪೆಟ್ಟಿಗೆಯು ಕಂಡುಬಂದಿತು. ಅದರಲ್ಲಿನ ವಿಗ್ರಹದ ಭಾಗಗಳನ್ನು ಒಟ್ಟು ಸೇರಿಸಲಾಗಿ ದೇವಿಯ ವಿಗ್ರಹವು ಮೂಡಿಬಂದಿತು.

ನೀವು ಇದನ್ನು ಓದಬಹುದು : ಗದಗ ಜಿಲ್ಲೆಯಲ್ಲಿ ಭೇಟಿ ನೀಡಬಹುದಾದ ಚಂದದ ತಾಣಗಳು

Shri Marikamba Devi Temple


ಮತ್ತೊಂದು ಪುರಾಣದ ಪ್ರಕಾರ ಅನ್ಯಜಾತಿಯ ಯುವಕನೊಬ್ಬ (ಮಹಿಷಾಸುರ) ವೇದಾಭ್ಯಾಸ ಮಾಡುವ ಆಸೆಯಿಂದ ಸುಳ್ಳು ಹೇಳಿ ಮದುವೆಯಾಗಿ ನಂತರ ಮಾಂಸ ತಿನ್ನುವಾಗ ಸಿಕ್ಕಿಬಿದ್ದು, ಪತ್ನಿಯ ಕೈಯಿಂದಲೇ ಕೊಲೆಯಾದ ಕಥೆಯೂ ಇದೆ. ಹೀಗಾಗಿ ಜಾತ್ರೆ ಪ್ರಾರಂಭ ಆಗುವ ಮೊದಲು ದೇವಿ ಮಾರಿಕಾಂಬೆಗೆ ರಕ್ತದ ತಿಲಕವನ್ನು ಇಡಲಾಗುತ್ತದೆ. ಆದರೆ ಮೊದಲು ಮಾರಿ ಕೋಣವನ್ನು ಬಲಿ ನೀಡಲಾಗುತ್ತಿತ್ತಂತೆ . ನಂತರ ಗಾಂಧೀಜಿ ಒಮ್ಮೆ ಶಿರಸಿಗೆ ಭೇಟಿ ನೀಡಿದಾಗ ದೇವಾಲಯಯದಲ್ಲಿ ಪ್ರಾಣಿ ವಧೆ ಮಾಡುವುದರಿಂದ ಒಳ ಪ್ರವೇಶಿಸಲು ನಿರಾಕರಿಸಿದರು. ಅಂದಿನಿಂದ ಕೋಣದ ಬಲಿಯನ್ನು ನಿಲ್ಲಿಸಲಾಗಿದೆ. ಅದರ ಬದಲು ಕೇವಲ ರಕ್ತದ ತಿಲಕವನ್ನು ಇಡಲಾಗುತ್ತದೆ.

Shri Marikamba Devi Temple


ಮಾರಿಕಾಂಬಾ ಜಾತ್ರೆಯು ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುತ್ತದೆ.ಇಲ್ಲಿನ ಪ್ರಮುಖ ವಿಶೇಷವೆಂದರೆ ಜಾತ್ರೆ ನಡೆಯುವ ವರ್ಷ ಹೋಳಿಯನ್ನು ಆಚರಿಸಲಾಗುವುದಿಲ್ಲ . ಜಾತ್ರೆ ನಡೆಯದ ವರ್ಷದಂದು ಹೋಳಿಯನ್ನು ಸಂಪ್ರದಾಯಕ ಕಲೆಯಾದ ಬೇಡರ ವೇಷದ ಮೂಲಕ ಆಚರಿಸಲಾಗುತ್ತದೆ. ಈ ಎರಡು ವಿಶೇಷಗಳು ಪರ್ಯಾಯವಾಗಿ ನಡೆಯುತ್ತದೆ..


ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.


Related Articles

Leave a Reply

Your email address will not be published. Required fields are marked *

Back to top button