ವಿಂಗಡಿಸದಸಂಸ್ಕೃತಿ, ಪರಂಪರೆ

ಹೋಳಿ ಹಬ್ಬವನ್ನು ನಮ್ಮ ದೇಶದ ಎಲ್ಲೆಲ್ಲಿ ಹೇಗೆ ಆಚರಿಸಲಾಗುತ್ತದೆ.?

ಬಣ್ಣಗಳ ಹಬ್ಬ ಹೋಳಿ (Holi) ಅಂದರೆ ಸಾಕು ಎಲ್ಲಿಲ್ಲದ ಸಡಗರ, ಸಂಭ್ರಮ. ಒಬ್ಬರ ಮೇಲೊಬ್ಬರು ಬಣ್ಣಗಳನ್ನು ಎರಚಿ ಈ ಹಬ್ಬವನ್ನು ಸಂಭ್ರಮಿಸುತ್ತಾರೆ. ಬಣ್ಣಗಳೊಂದಿಗೆ ಸಂಬಂಧಗಳನ್ನು ಬೆಸೆಯುವ ಹಬ್ಬ.. ಒಂದೊಂದು ರಾಜ್ಯದಲ್ಲಿ ಒಂದೊಂದು ಹೆಸರಿನಲ್ಲಿ ಹೋಳಿ ಹಬ್ಬವನ್ನು ಆಚರಿಸುತ್ತಾರೆ.

ಬಿಹಾರ (Bihar)


ಬಿಹಾರದ ಹೋಳಿ ಆಚರಣೆಗಳು ಹಲವಾರು ದಿನಗಳವರೆಗೆ ಇರುತ್ತದೆ. ಹೋಳಿ ಆಚರಣೆ ಸಂದರ್ಭದಲ್ಲಿ ಜನರು ‘ಫಾಗುವಾ’ (paguva) ಸಾಂಪ್ರದಾಯಿಕ ಜಾನಪದ ಹಾಡುಗಳನ್ನು ಹಾಡುತ್ತಾರೆ. ‘ಹೋಲಿಕಾ ದಹನ್ ’(Holika Dahan)ಹೋಳಿ ಆಚರಣೆಯ ಮಹತ್ವದ ಭಾಗವಾಗಿದೆ.

Holika Dahan Holi 2024

ಉತ್ತರ ಪ್ರದೇಶ(Uttar Pradesh)


ಹೋಳಿ ಹಬ್ಬದ ಸಂದರ್ಭದಲ್ಲಿ ಮಥುರಾ(Mathura )ಮತ್ತು ವೃಂದಾವನದಲ್ಲಿ(Vrindavan )ನಾನಾರೀತಿಯ ಜಾನಪದ ಹಾಡು ಹಾಗೂ ನೃತ್ಯಗಳನ್ನು ಏರ್ಪಡಿಸಲಾಗುತ್ತದೆ. ಅಲ್ಲದೇ ಹೋಲಿಕಾ ಪ್ರತಿಕೃತಿ ದಹಿಸಲಾಗುತ್ತದೆ.. ಈ ದಿನವನ್ನು ‘ಪುನೋ’ ಎಂದೂ ಕರೆಯುತ್ತಾರೆ.

ಇಲ್ಲಿನ ಜನರು ಹೋಳಿ ಹಬ್ಬದ ದಿನ ‘ಗುಲಾಲ್’ ಎಂಬ ಮೆರವಣಿಗೆಯಲ್ಲಿ ಪಾಲ್ಗೊಂಡು ಪರಸ್ಪರ ಬಣ್ಣಗಳನ್ನು ಎರಚಿ ಸಂಭ್ರಮಿಸುತ್ತಾರೆ. ಲತ್ಮಾರ್ ಹೋಳಿ ಈ ಹಬ್ಬಕ್ಕೆ ಇರುವ ಇನ್ನೊಂದು ಹೆಸರು.

Vrindavan Holi 2024

ಪಶ್ಚಿಮ ಬಂಗಾಳ (West Bengal)


ಬಂಗಾಳದಲ್ಲಿ ಹೋಳಿಯನ್ನು ‘ಡೋಲ್ ಜಾತ್ರೆ’ (Dol Jatra) ಅಥವಾ ‘ಡೋಲ್ ಪೂರ್ಣಿಮಾ’ (Dol Utsav)ಎಂದು ಕರೆಯಲಾಗುತ್ತದೆ. ಹೋಳಿಯಂದು ಇಲ್ಲಿನ ಜನರು ಹಳದಿ ಬಟ್ಟೆಗಳನ್ನು ಧರಿಸಿ ಜಾತ್ರೆಗೆ ಹಾಜರಾಗುತ್ತಾರೆ.

Dol Utsav West Bengal Holi 2024

ಒಡಿಶಾ (Odissa)


ಒಡಿಶಾದ ಜನರು ಜಗನ್ನಾಥ ದೇವರನ್ನು ಪೂಜಿಸುವ ಮೂಲಕ ಹೋಳಿ ಆಚರಿಸುತ್ತಾರೆ . ದಂಡಿ ಖೇಲಾ (Dola Purnima) ಮುಂತಾದ ಆಟಗಳನ್ನು ಆಡುತ್ತಾರೆ. ರಾತ್ರಿಯ ವೇಳೆ ಜಗನ್ನಾಥನ ವಿಗ್ರಹವನ್ನು ಇರಿಸಲು ವಿಶೇಷ ಡೇರೆಗಳು, ಜೂಲನ್ ಮಂಟಪಗಳನ್ನು ಸ್ಥಾಪಿಸುತ್ತಾರೆ.

Odisha Dola Purnima Holi 2024

ಈಶಾನ್ಯ ಭಾರತ (North East State)

ಹೋಳಿ ಹಬ್ಬದ ಸಂದರ್ಭದಲ್ಲಿ ಇಲ್ಲಿ ʼಯೋಸಾಂಗ್ʼ (Yaoshang Festival) ಎಂಬ ಮತ್ತೊಂದು ಹಳೆಯ ಹಬ್ಬವನ್ನು ಆಚರಿಸಲಾಗುತ್ತದೆ. ಮಣ್ಣಿನ ಮತ್ತು ಮಣ್ಣಿನ ಹುಲ್ಲಿನ ಗುಡಿಸಲು ಮಾಡಿ ಸಂಜೆ ಸುಡಲಾಗುತ್ತದೆ. ದೇವಾಲಯಗಳಲ್ಲಿ ನೃತ್ಯಗಳು, ಭಕ್ತಿಗೀತೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಭಕ್ತರು ಬಿಳಿ ಉಡುಪುಗಳು ಮತ್ತು ಹಳದಿ ಪೇಟಗಳನ್ನು ಧರಿಸಿ ದೇವಸ್ಥಾನದ ಮುಂದೆ ಬಣ್ಣಗಳನ್ನು ಆಡುತ್ತಾರೆ. ಕೊನೆಯ ದಿನ ಇಂಫಾಲದ ಬಳಿಯ ಕೃಷ್ಣ ದೇವಸ್ಥಾನದಲ್ಲಿ ಮೆರವಣಿಗೆ ಇರುತ್ತದೆ.

Manipur Yaoshang Festival Holi 2024

ಹಿಮಾಚಲ ಪ್ರದೇಶ (Himachal Pradesh)

ಹಿಮಾಚಲ ಪ್ರದೇಶದಲ್ಲಿ ಯಮುನಾ ನದಿಯ(Yamuna River) ದಡದಲ್ಲಿರುವ ಸಿರ್ಮೌರ್ ಜಿಲ್ಲೆಯ ಪಾಂಟಾ-ಸಾಹಿಬ್‌ನಲ್ಲಿ ಸಾವಿರಾರು ಜನರು ಸೇರುತ್ತಾರೆ. ಕುಲುವಿನಲ್ಲಿ ಆಕರ್ಷಕ ಐಸ್ ಹೋಳಿ ಆಡಲಾಗುತ್ತದೆ. ಜನರು ಬಣ್ಣ ಮತ್ತು ಹಿಮವನ್ನು ಬೆರೆಸುವ ಮೂಲಕ ವರ್ಣರಂಜಿತ ಸ್ನೋಬಾಲ್‌ಗಳನ್ನು ಮಾಡಿ ಒಬ್ಬರಮೇಲೋಬ್ಬರು ಎಸೆಯುತ್ತಾರೆ.

Himachal Pradesh Holi 2024

ಪಂಜಾಬ್ (Punjab)


ಹೋಲಾ ಮೊಹಲ್ಲಾ (Hola Mohalla)ಪಂಜಾಬ್‌ನ ಸಿಖ್ ಸಮುದಾಯದಲ್ಲಿ ವಾರ್ಷಿಕ ಹಬ್ಬವಾಗಿದೆ. ಇದನ್ನು ಗುರು ಗೋಬಿಂದ್ ಸಿಂಗ್ ಪ್ರಾರಂಭಿಸಿದರು. ಇದು ಪಂಜಾಬ್‌ನ ಅನಂತಪುರ ಸಾಹಿಬ್‌ನಲ್ಲಿ ಹೋಳಿ ಹಬ್ಬದ ಎರಡನೇ ದಿನದಂದು ಪ್ರಾರಂಭವಾಗುತ್ತದೆ. ಇದು ಮೂರು ದಿನಗಳ ಹಬ್ಬವಾಗಿದ್ದು, ಎರಡು ಓಡುವ ಕುದುರೆಗಳ ಮೇಲೆ ನಿಲ್ಲುವುದು, ಬೇರ್‌ಬ್ಯಾಕ್ ಕುದುರೆ ಸವಾರಿ, ಅಣಕು ಕಾದಾಟಗಳು ಮತ್ತು ಟೆಂಟ್ ಪೆಗ್ಗಿಂಗ್ ಅನ್ನು ಇದು ಒಳಗೊಂಡಿದೆ. ಶ್ರೀ ಗುರು ಗ್ರಂಥ ಸಾಹಿಬ್ ಅವರ ಉಪಸ್ಥಿತಿಯಲ್ಲಿ ಕೀರ್ತನೆ ಮತ್ತು ಧಾರ್ಮಿಕ ಉಪನ್ಯಾಸಗಳನ್ನು ಸಹ ದರ್ಬಾರ್‌ಗಳಲ್ಲಿ ಏರ್ಪಡಿಸಲಾಗುತ್ತದೆ. ಕೊನೆಯ ದಿನ ತಖ್ತ್ ಕೇಶ್ಗಢ ಸಾಹಿಬ್‌ನಿಂದ ಪಂಜ್ ಪ್ಯಾರಸ್ ನೇತೃತ್ವದಲ್ಲಿ ಮೆರವಣಿಗೆ ನಡೆಯುತ್ತದೆ.

Punjab Hola Mohalla 2024

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button