ಕಾಡಿನ ಕತೆಗಳುವಂಡರ್ ಬಾಕ್ಸ್ವಿಂಗಡಿಸದವಿಸ್ಮಯ ವಿಶ್ವ

ವಿಶ್ವ ಅರಣ್ಯ ದಿನವನ್ನು ಯಾವ ಕಾರಣಕ್ಕಾಗಿ ಆಚರಿಸಲಾಗುತ್ತದೆ..? ಈ ವರ್ಷದ ಥೀಂ ಏನು..?

ಪ್ರತೀ ವರ್ಷ ಮಾರ್ಚ್(March )21 ರಂದು ವಿಶ್ವ ಅರಣ್ಯ ದಿನವನ್ನು(World Forest Day)ಆಚರಿಸಲಾಗುತ್ತದೆ. ದೈನಂದಿನ ಜೀವನದಲ್ಲಿ ಅರಣ್ಯ ಸಂಪನ್ಮೂಲದ ಪಾತ್ರ ಮತ್ತು ಅದರ ವಿನಾಶದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವುಮೂಡಿಸುವ ಸಲುವಾಗಿ ವಿಶ್ವದೆಲ್ಲೆಡೆ ಅರಣ್ಯ ದಿನವನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷ ಒಂದೊಂದು ಥೀಂ ನಲ್ಲಿ ಈ ದಿನವನ್ನ ಆಚರಿಸಲಾಗಿತ್ತದೆ .

Forest

1971ರ ನವೆಂಬರ್‌ನಲ್ಲಿ(November )ಆಹಾರ ಮತ್ತು ಕೃಷಿ ಸಂಘಟನೆಯ 16ನೇ ಸಮ್ಮೇಳನದಲ್ಲಿ ವಿಶ್ವ ಅರಣ್ಯ ದಿನ ಆಚರಿಸುವ ನಿರ್ಣಯ ಅಂಗೀಕರಿಸಲಾಗಿತ್ತು. ವಿಶ್ವಸಂಸ್ಥೆ ಸಾಮಾನ್ಯ (UN)ಅಧಿವೇಶನದಲ್ಲಿ ವಿಸ್ತೃತವಾಗಿ ನಡೆದ ಚರ್ಚೆಯಲ್ಲಿ ವಿಶ್ವ ಅರಣ್ಯ ದಿನವನ್ನು ಆಚರಿಸುವ ನಿರ್ಧಾರವನ್ನು ಕೈಗೊಳ್ಳಲಾಯಿತು. ಆದರೆ 2012ರಲ್ಲಿ ಅಂತಾರಾಷ್ಟ್ರೀಯ ಅರಣ್ಯ ಸಂಶೋಧನಾ ಕೇಂದ್ರ ಆರು ದಿನಗಳ ಅರಣ್ಯ ದಿನಗಳ ಕಾರ‍್ಯಕ್ರಮಗಳನ್ನು ನಡೆಸಿತು. ಈ ಮಾರ್ಚ್‌ 21ರಂದು ವಿಶ್ವ ಅರಣ್ಯ ದಿನ ಆಚರಿಸಲು ವಿಶ್ವಸಂಸ್ಥೆಯೂ ಅನುಮತಿ ನೀಡಿತು.

ಅಂದಿನಿಂದ ಪ್ರತಿ ವರ್ಷವು ವಿಶ್ವ ಅರಣ್ಯ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.ಅಂತರಾಷ್ಟ್ರೀಯ ಅರಣ್ಯ ದಿನ 2024 ನ್ನು ಒಂದು ವಿಭಿನ್ನ ಕಲ್ಪನೆಯೊಂದಿಗೆ ಆಚರಿಸಲಾಗುತ್ತದೆ. ಪ್ರಕೃತಿಯು ಜನರ ಜೀವನದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಪ್ರಕೃತಿಯ ಭಾಗವಾಗಿ, ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಮತ್ತು ಹವಾಮಾನ ಬಿಕ್ಕಟ್ಟುಗಳನ್ನು ನಿರ್ವಹಿಸಲು ಕಾಡುಗಳು ಅತ್ಯಗತ್ಯ.

International day

ಆದ್ದರಿಂದ ಅದೇ ಕಲ್ಪನೆಯೊಂದಿಗೆ ಈ ಬಾರಿಯ ಅರಣ್ಯ ದಿನವನ್ನು ಆಚರಿಸಲಾಗುತ್ತಿದೆ.1.5 ಬಿಲಿಯನ್‌ಗೂ ಅಧಿಕ ಜನರು ತಮ್ಮ ಜೀವನೋಪಾಯಕ್ಕಾಗಿ ಅರಣ್ಯವನ್ನು ನೇರವಾಗಿ ಅವಲಂಬಿಸಿದ್ದಾರೆ ಎಂದು ಅಂದಾಜಿಸಲಾಗಿದೆ. ಅರಣ್ಯದ ಪ್ರಮಾಣ ಕುಗ್ಗುತ್ತಿದ್ದಂತೆ, ಈ ಸಮುದಾಯಗಳ ಸಂಸ್ಕೃತಿ, ಸಂಪ್ರದಾಯ ಮತ್ತು ಉಳಿವಿಗೂ ಅಪಾಯವಿದೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು.

ಭೂಮಿಯಲ್ಲಿ ಜೀವಗಳನ್ನು ಉಳಿಸಿಕೊಳ್ಳುವಲ್ಲಿ ಕಾಡುಗಳು ವಹಿಸುವ ಅಭೂತಪೂರ್ವ ಪಾತ್ರದ ಬಗ್ಗೆ ಜಾಗೃತಿಯನ್ನು ಹೆಚ್ಚಿಸುವ ಉದ್ದೇಶದಿಂದ ವಿಶ್ವವು ಪ್ರತಿ ವರ್ಷ ಮಾರ್ಚ್ 21 ರಂದು ಅಂತರಾಷ್ಟ್ರೀಯ ಅರಣ್ಯ ದಿನವನ್ನು ಆಚರಿಸುತ್ತದೆ.

ಕಾಡುಗಳು ಪ್ರಾಣಿಗಳು ಮತ್ತು ಮನುಷ್ಯರಿಗೆ ಆಹಾರ, ನೀರು ಮತ್ತು ಆಶ್ರಯವನ್ನು ಒದಗಿಸುತ್ತವೆ. ಅರಣ್ಯಗಳು ಪ್ರವಾಹಗಳು ಮತ್ತು ಹವಾಮಾನ ಬದಲಾವಣೆಯಂತಹ ಜೀವಕ್ಕೆ ಬೆದರಿಕೆಯಿರುವ ಘಟನೆಗಳ ಪರಿಣಾಮವನ್ನು ಕಡಿಮೆ ಮಾಡುತ್ತಾರೆ.

ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) ಹೊರತಂದಿರುವ ಇತ್ತೀಚಿನ ಜಾಗತಿಕ ಅರಣ್ಯ ಸಂಪನ್ಮೂಲಗಳ ಮೌಲ್ಯಮಾಪನ (ಎಫ್‌ಆರ್‌ಎ) ಪ್ರಕಾರ ಕಳೆದ ದಶಕದಲ್ಲಿ ಅರಣ್ಯ ಪ್ರದೇಶದಲ್ಲಿ ಗಳಿಸಿದ ಟಾಪ್ 10 ದೇಶಗಳಲ್ಲಿ ಭಾರತ(India )ಮೂರನೇ ಸ್ಥಾನದಲ್ಲಿದೆ.

ದೇಶದ ಒಟ್ಟು ಅರಣ್ಯ ಮತ್ತು ವೃಕ್ಷಗಳ ವ್ಯಾಪ್ತಿಯು 80.9 ದಶಲಕ್ಷ ಹೆಕ್ಟೇರ್ ನಷ್ಟಿದೆ., ಇದು ದೇಶದ ಭೌಗೋಳಿಕ ಪ್ರದೇಶದ ಶೇ. 24.62ರಷ್ಟು ಎನ್ನುತ್ತವೆ ಅಂಕಿ ಅಂಶಗಳು. 2019ರಲ್ಲಿ ನಡೆಸಿದ ಸಮೀಕ್ಷೆಯಂತೆ ದೇಶದ ಒಟ್ಟು ಅರಣ್ಯ ಮತ್ತು ಮರಗಳ ವ್ಯಾಪ್ತಿಯಲ್ಲಿ 2,261 ಚದರ ಕಿ.ಮೀ ಹೆಚ್ಚಳವಾಗಿದೆ.

ಈ ಪೈಕಿ 1,540 ಚ.ಕಿ.ಮೀ ಅರಣ್ಯ ಪ್ರದೇಶ ಹೆಚ್ಚಳವಾಗಿದ್ದರೆ, ವೃಕ್ಷಗಳ ವ್ಯಾಪ್ತಿಯು 721 ಚ.ಕಿ.ಮೀ. ಹೆಚ್ಚಾಗಿದೆ.ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) ಹೊರತಂದಿರುವ ಇತ್ತೀಚಿನ ಜಾಗತಿಕ ಅರಣ್ಯ ಸಂಪನ್ಮೂಲಗಳ ಮೌಲ್ಯಮಾಪನ (ಎಫ್‌ಆರ್‌ಎ) ಪ್ರಕಾರ ಕಳೆದ ದಶಕದಲ್ಲಿ ಅರಣ್ಯ ಪ್ರದೇಶದಲ್ಲಿ ಗಳಿಸಿದ ಟಾಪ್ 10 ದೇಶಗಳಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ.

world Forest day

ಪಶ್ಚಿಮ ಘಟ್ಟಗಳ ಪ್ರಮುಖ ಸರಣಿಯನ್ನೇ ಹೊಂದಿರುವ ಕರ್ನಾಟಕದ(Karnataka )ಅರಣ್ಯ ಹದಿನೈದಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಹಬ್ಬಿದೆ. ವನ್ಯಜೀವಿಗಳು, ಪ್ರಮುಖ ಮರಗಳ ನೆಲೆಯೂ ಕರ್ನಾಟಕವೇ. ಒಂದು ಕಾಲಕ್ಕೆ ಕರ್ನಾಟಕದ ಅರಣ್ಯದ ಪ್ರಮಾಣ ಶೇ. 40 ರಷ್ಟಿತ್ತು. ಈಗ ಆ ಪ್ರಮಾಣ ಅರ್ಧದಷ್ಟು ಕುಸಿದು ಹೋಗಿದೆ.

ಅಂದರೆ ಶೇ. 25 ರ ಆಸುಪಾಸಿನಲ್ಲಿ ಕರ್ನಾಟಕದ ಅರಣ್ಯವಿದೆ. ಪಶ್ಚಿಮ ಘಟ್ಟಗಳ(Western Ghats)ಪ್ರಮುಖ ಸರಣಿಯನ್ನೇ ಬೆನ್ನಿಗೆ ಇಟ್ಟುಕೊಂಡಿರುವ ಕರ್ನಾಟಕದ ಅರಣ್ಯ ಹದಿನೈದಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಹಬ್ಬಿದೆ. ವನ್ಯಜೀವಿಗಳು, ಪ್ರಮುಖ ಮರಗಳ ನೆಲೆಯೂ ಕರ್ನಾಟಕವೇ. ಒಂದು ಕಾಲಕ್ಕೆ ಕರ್ನಾಟಕದ ಅರಣ್ಯದ ಪ್ರಮಾಣ ಶೇ. 40 ರಷ್ಟಿತ್ತು. ಈಗ ಆ ಪ್ರಮಾಣ ಅರ್ಧದಷ್ಟು ಕುಸಿದು ಹೋಗಿದೆ. ಅಂದರೆ ಶೇ. 25 ರ ಆಸುಪಾಸಿನಲ್ಲಿ ಕರ್ನಾಟಕದ ಅರಣ್ಯವಿದೆ.

nature

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button