ಬೆಂಗಳೂರಿನಲ್ಲಿ ತಯಾರಾದ 123 ಅಡಿ ಉದ್ದದ ದೋಸೆಗೆ ವಿಶ್ವ ಮಾನ್ಯತೆ
MTR Foods ಸಂಸ್ಥೆ ತನ್ನ 100 ವರ್ಷದ ಸಂಭ್ರಮಾಚರಣೆಯ ನೆನಪಿಗಾಗಿ ಬೆಂಗಳೂರಿನಲ್ಲಿ 123.03 ಅಡಿ (123.03 feet) ಉದ್ದದ ದೋಸೆಯನ್ನು (Longest Dosa) ತಯಾರಿಸಿದ್ದು, ಈ ಮಾಮುತ್ ದೋಸೆಯ (Mammoth dosa) ವಿಡಿಯೋದ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಇದು “ವಿಶ್ವದ ಅತಿ ಉದ್ದದ ದೋಸೆ” (World’s Longest Dosa) ಎಂಬ ಹೆಗ್ಗಳಿಕೆ ಪಡೆದಿರುವ ಈ ದೋಸೆ ವಿಶ್ವ ದಾಖಲೆ (World record) ಸೃಷ್ಟಿಸಿದೆ.
ಬಾಣಸಿಗ ರೆಗಿ ಮ್ಯಾಥ್ಯೂ (Chef Regi Mathew) ಈ ದೋಸೆಯ ತಯಾರಿಕೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ (Social media) ಪೋಸ್ಟ್ ಮಾಡಿದ್ದಾರೆ.
ಈ ಪಾಕ ಪದ್ಧತಿಗೆ ಸಿದ್ಧತೆ ನಡೆಸುತ್ತಿರುವ ದೊಡ್ಡ ಒಲೆಯ ಸುತ್ತಲೂ ಹಲವಾರು ಬಾಣಸಿಗರು ಇರುವಂತಹ ದೃಶ್ಯದಿಂದ ಆರಂಭವಾಗುವ ಈ ವಿಡಿಯೋ ನಂತರ 123 ಅಡಿ ಉದ್ದದ ದೋಸೆಯನ್ನು ತಯಾರಿಸುವ ದೃಶ್ಯದ ಅದ್ಭುತ ನೋಟವನ್ನು ನೀಡುತ್ತದೆ.
ಅಂತಿಮವಾಗಿ, ವಿಡಿಯೋ ಚೆಫ್ ಮ್ಯಾಥ್ಯೂಗೆ ವ್ಯಕ್ತಿಯೊಬ್ಬರು ಗಿನ್ನೆಸ್ ವಿಶ್ವ ದಾಖಲೆಯ (Guinness World Record) ಪ್ರಮಾಣಪತ್ರವನ್ನು ಹಸ್ತಾಂತರಿಸುತ್ತಿರುವ ದೃಶ್ಯದೊಂದಿಗೆ ಕೊನೆಗೊಳ್ಳುತ್ತದೆ.
ಪೋಸ್ಟ್ ನಲ್ಲಿ ಅಡಿಬರಹ ಹೀಗಿದೆ, “ ಎಂಟಿಆರ್‌ನಲ್ಲಿ ಐತಿಹಾಸಿಕ ಮೈಲಿಗಲ್ಲನ್ನು ಘೋಷಿಸುವುದಕ್ಕೆ ನಾನು ರೋಮಾಂಚನಗೊಂಡಿದ್ದೇನೆ! 100 ನೇ ವರ್ಷದ (100 Years Anniversary) ವಾರ್ಷಿಕೋತ್ಸವವನ್ನು 123.03 ಅಡಿಗಳಷ್ಟು ಉದ್ದವಾದ ದೋಸೆಗೆ ಗಿನ್ನೆಸ್ ವಿಶ್ವ ದಾಖಲೆಯ ಶೀರ್ಷಿಕೆಯೊಂದಿಗೆ ಹೆಮ್ಮೆಯಿಂದ ಆಚರಿಸುತ್ತಿದ್ದೇವೆ. ಈ ಸಾಧನೆಯು ಮಾರ್ಚ್ 15, 2024 ರಂದು ಬೆಂಗಳೂರಿನ ಎಂಟಿಆರ್ ಫ್ಯಾಕ್ಟರಿಯಲ್ಲಿ ನಡೆಯಿತು.” ಎಂದು.
ಈ ಪೋಸ್ಟ್ ಅನ್ನು ಎರಡು ದಿನಗಳ ಹಿಂದೆ ಹಂಚಿಕೊಂಡಿದ್ದು, ಇದು 24,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಪೋಸ್ಟ್ ಸುಮಾರು 1,000 ಇಷ್ಟಗಳು ಮತ್ತು ಹಲವಾರು ಕಾಮೆಂಟ್‌ಗಳನ್ನು ಪಡೆದುಕೊಂಡಿದೆ.
ಬಾಣಸಿಗ ರಾಗಿ ಮ್ಯಾಥ್ಯೂಸ್ ನೇತೃತ್ವದಲ್ಲಿ ಒಟ್ಟು 75 ಬಾಣಸಿಗರು ಇಡೀ ತಿಂಗಳ ಯೋಜನೆಗಳು ಮತ್ತು ಕಠಿಣ ಪರಿಶ್ರಮದಿಂದ ಈ ದಾಖಲೆಯ ದೋಸೆಯನ್ನು ಸಿದ್ಧಪಡಿಸಿದ್ದಾರೆ.
ವರದಿಗಳ ಪ್ರಕಾರ, ಈ ತಂಡವು ಬ್ರಾಂಡ್‌ನ ಕೆಂಪು ಅಕ್ಕಿ ದೋಸೆ ಹಿಟ್ಟನ್ನು ಬಳಸಿದೆ ಎಂದು ತಿಳಿದು ಬಂದಿದೆ. ಇದಕ್ಕೂ ಮುನ್ನ ಈ ದಾಖಲೆಯನ್ನು ರೇಡಿಯೋ ಮಿರ್ಚಿ 98.3 ಎಫ್‌ಎಂ ಮತ್ತು ನ್ಯಾಚುರಲ್ ರಿಫೈನ್ಡ್ ಸನ್‌ಫ್ಲವರ್ ಆಯಿಲ್ ಹೊಂದಿತ್ತು. ಅವರು 54 ಅಡಿ 8.69 ಇಂಚು ಅಳತೆಯ ದೋಸೆಯನ್ನು ತಯಾರಿಸಿದ್ದರು.
ಈ ವಿಶ್ವ ದಾಖಲೆಯನ್ನು ನವೆಂಬರ್ 16, 2014 ರಂದು ಸ್ಥಾಪಿಸಲಾಯಿತು.ಭಾರತೀಯರು ಅದರಲ್ಲೂ ದಕ್ಷಿಣ ಭಾರತದಲ್ಲಿ (South India) ದೋಸೆ ಪ್ರಸಿದ್ಧ. ದೇಶದಾದ್ಯಂತ ವೈವಿಧ್ಯಮಯ ದೋಸೆಯನ್ನು (Variety Dosas) ನಾವು ಕಾಣಬಹುದು.
ಅದರಲ್ಲೂ ನಮ್ಮ ಬೆಂಗಳೂರು ವಿಧ ವಿಧ ದೋಸೆ ತಯಾರಿಸುವಲ್ಲಿ ಇನ್ನೂ ಫೇಮಸ್. ಬೆಂಗಳೂರಿನ ವೈವಿಧ್ಯಮಯ ದೋಸೆ ತಿನ್ನಲೆಂದೇ ದೇಶ-ವಿದೇಶಗಳಿಂದ ಜನ ಬರುತ್ತಾರೆ. ಕರ್ನಾಟಕದಲ್ಲಂತೂ ಎಲ್ಲರ ಮನೆಯ ಪ್ರಸಿದ್ಧ ಬೆಳಗಿನ ತಿಂಡಿ ದೋಸೆ.
ದೋಸೆ ಇಲ್ಲದ ಹೋಟೇಲ್ ಹುಡುಕುವುದು ತುಸು ಕಷ್ಟವೇ. ಆದರೆ MTR ಬಾಣಸಿಗರ ತಂಡವು ದೋಸೆಯ ಮೇಲಿನ ತಮ್ಮ ಪ್ರೀತಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ದು ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.
ಒಟ್ಟಿನಲ್ಲಿ, MTR ಫುಡ್ಸ್ 100 ನೇ ವಾರ್ಷಿಕೋತ್ಸವವನ್ನು ವಿಶಿಷ್ಟವಾಗಿ ಆಚರಿಸಿದ್ದು, ಲೋರ್ಮನ್ ಕಿಚನ್ ಸಲಕರಣೆಗಳ ಜೊತೆಗೆ 123 ಅಡಿ ಉದ್ದದ ದೋಸೆಯನ್ನು ತಯಾರಿಸಿ ಗಿನ್ನೆಸ್ ದಾಖಲೆಯಿಂದ ವಿಶ್ವದ ಅತಿ ಉದ್ದದ ದೋಸೆ ಎಂಬ ಬಿರುದನ್ನು ಪಡೆದುಕೊಂಡಿರುವುದು ದೋಸೆಪ್ರಿಯರೆಲ್ಲರಿಗೂ ಸಂತಸ ತಂದಿದೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.