ಯುನೆಸ್ಕೋ ಪಟ್ಟಿಗೆ ನಾಮನಿರ್ದೇಶನಗೊಂಡಿವೆ ಭಾರತದ “ಮರಾಠ ಮಿಲಿಟರಿ ಭೂದೃಶ್ಯಗಳು”
ಮರಾಠರ ಕಾಲದಲ್ಲಿ ನಿರ್ಮಿಸಲಾದ “ಮರಾಠ ಮಿಲಿಟರಿ ಭೂದೃಶ್ಯ” ( ‘Maratha Military Landscapes’)ಗಳನ್ನು 2024-25 ನೇ ಸಾಲಿನ ಯುನೆಸ್ಕೋ (UNESCO) ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ (World Heritage Sites) ಸೇರಿಸುವಂತೆ ಭಾರತ ನಾಮನಿರ್ದೇಶನ ಮಾಡಿದೆ ಎಂದು ಸಂಸ್ಕೃತಿ ಸಚಿವಾಲಯ ತಿಳಿಸಿದೆ.
ಈ ನಾಮನಿರ್ದೇಶನದಲ್ಲಿ ಮಹಾರಾಷ್ಟ್ರದ (Maharashtra Forts) ಬಲಿಷ್ಠ ಕೋಟೆಗಳಾದ ಸಾಲ್ಹೇರ್ ಕೋಟೆ, ಶಿವನೇರಿ ಕೋಟೆ, ಲೋಹ್‌ಗಡ್, ಖಂಡೇರಿ ಕೋಟೆ, ರಾಯಗಡ, ರಾಜ್‌ಗಡ್, ಪ್ರತಾಪಗಡ, ಸುವರ್ಣದುರ್ಗ, ಪನ್ಹಾಲಾ ಕೋಟೆ, ವಿಜಯ್ ದುರ್ಗ, ಸಿಂಧುದುರ್ಗ ಮತ್ತು ತಮಿಳುನಾಡಿನ ಗಿಂಗಿ ಕೋಟೆಗಳು ಸೇರಿವೆ.
ವೈವಿಧ್ಯಮಯ ಭೌಗೋಳಿಕ ಮತ್ತು ಭೌತಶಾಸ್ತ್ರದ ಗುಣಲಕ್ಷಣವುಳ್ಳ ಪ್ರದೇಶಗಳಲ್ಲಿ ವಿತರಿಸಲಾದ ಈ ಘಟಕಗಳು ಮರಾಠರ ಆಳ್ವಿಕೆಯ ಯುದ್ಧತಂತ್ರದ ಮಿಲಿಟರಿ ಶಕ್ತಿಯನ್ನು ಪ್ರದರ್ಶಿಸುವ ಕೋಟೆಗಳಾಗಿವೆ.
17 ರಿಂದ 19ನೇ ಶತಮಾನದ ನಡುವೆ ನಿರ್ಮಿಸಲಾಗಿರುವ ಭಾರತದ ಮರಾಠ ಮಿಲಿಟರಿ ಭೂದೃಶ್ಯಗಳು ಮರಾಠ ಆಡಳಿತಗಾರರು ರೂಪಿಸಿದ ಅಸಾಧಾರಣ ಕೋಟೆ ಮತ್ತು ಬಲಿಷ್ಠ ಮಿಲಿಟರಿ ವ್ಯವಸ್ಥೆಯನ್ನು ಪ್ರತಿನಿಧಿಸುತ್ತವೆ.
ಈ ಅಸಾಧಾರಣ ಕೋಟೆಗಳ ಜಾಲವು ಕ್ರಮಾನುಗತ, ಮಾಪನ ಮತ್ತು ಟೈಪೋಲಾಜಿಕಲ್ ಗುಣಲಕ್ಷಣಗಳಲ್ಲಿ ವಿಭಿನ್ನ ವೈಶಿಷ್ಟ್ಯತೆಯನ್ನು ಹೊಂದಿವೆ.
ಇದು ಸಹ್ಯಾದ್ರಿ ಪರ್ವತ ಶ್ರೇಣಿಗಳು, ಕೊಂಕಣ ಕರಾವಳಿ, ಡೆಕ್ಕನ್ ಪ್ರಸ್ಥಭೂಮಿ, ಮತ್ತು ಭಾರತೀಯ ಪರ್ಯಾಯ ದ್ವೀಪದಲ್ಲಿನ ಪೂರ್ವ ಘಟ್ಟಗಳಲ್ಲಿನ ಭೂದೃಶ್ಯ, ಭೌತಶಾಸ್ತ್ರದ ಗುಣಲಕ್ಷಣಗಳ ಸಂಯೋಜನೆಯ ಫಲಿತಾಂಶವಾಗಿದೆ.
ಮಹಾರಾಷ್ಟ್ರ 390ಕ್ಕೂ ಅಧಿಕ ಕೋಟೆಗಳನ್ನು ಹೊಂದಿದೆ. ಅವುಗಳಲ್ಲಿ ಕೇವಲ 12 ಕೋಟೆಗಳನ್ನು ಮಾತ್ರ “ಮರಾಠ ಮಿಲಿಟರಿ ಭೂದೃಶ್ಯ”ಗಳ ಅಡಿಯಲ್ಲಿ ಯುನೆಸ್ಕೋ ಪಟ್ಟಿಯಲ್ಲಿ ನಾಮನಿರ್ದೇಶನ ಮಾಡಲಾಗಿದೆ.
12 ಕೋಟೆಗಳಲ್ಲಿ ಶಿವನೇರಿ ಕೋಟೆ, ಲೋಹ್‌ಗಡ್, ರಾಯಗಡ್, ಸುವರ್ಣದುರ್ಗ, ಪನ್ಹಾಲಾ ಕೋಟೆ, ವಿಜಯದುರ್ಗ, ಸಿಂಧುದುರ್ಗ ಮತ್ತು ಜಿಂಗೀ ಕೋಟೆ ಒಟ್ಟು 8 ಕೋಟೆಗಳನ್ನು ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾದಿಂದ ರಕ್ಷಿಸುತ್ತಿದೆ.
ಸಲ್ಹೇರ್ ಕೋಟೆ, ರಾಜ್‌ಗಡ್, ಖಂಡೇರಿ ಕೋಟೆ ಮತ್ತು ಪ್ರತಾಪಗಢಗಳನ್ನು ಮಹಾರಾಷ್ಟ್ರ ಸರ್ಕಾರದ ಪುರಾತತ್ವ ಮತ್ತು ವಸ್ತುಸಂಗ್ರಹಾಲಯಗಳ ನಿರ್ದೇಶನಾಲಯವು ರಕ್ಷಿಸುತ್ತದೆ.
ಭಾರತದ “ಮರಾಠ ಮಿಲಿಟರಿ ಭೂದೃಶ್ಯ”ಗಳ ಅಡಿಯಲ್ಲಿ ಬರುವ ಕೋಟೆಗಳಲ್ಲಿ ಸಲ್ಹೇರ್ ಕೋಟೆ, ಶಿವನೇರಿ ಕೋಟೆ, ಲೋಹ್ಗಡ್, ರಾಯಗಡ, ರಾಜ್ಗಡ್ ಮತ್ತು ಗಿಂಗಿ ಕೋಟೆಗಳು – ಬೆಟ್ಟದ ಕೋಟೆಗಳಾಗಿವೆ.
ಪ್ರತಾಪಗಢ ಬೆಟ್ಟ-ಅರಣ್ಯ ಕೋಟೆಯಾಗಿದೆ. ಪನ್ಹಾಲಾ ಬೆಟ್ಟ-ಪ್ರಸ್ಥಭೂಮಿ ಕೋಟೆ, ವಿಜಯದುರ್ಗ ಕರಾವಳಿ ಕೋಟೆಯಾದರೆ ಖಂಡೇರಿ ಕೋಟೆ, ಸುವರ್ಣದುರ್ಗ ಮತ್ತು ಸಿಂಧುದುರ್ಗ ದ್ವೀಪದ ಕೋಟೆಗಳಾಗಿವೆ ಎಂದು ಸಚಿವಾಲಯ ತಿಳಿಸಿದೆ.
ಯುನೆಸ್ಕೋ ಪಟ್ಟಿಯಲ್ಲಿ ಈಗಾಗಲೇ ಆರು ತಾಣಗಳಿದ್ದು, ಅತಿ ಹೆಚ್ಚು ವಿಶ್ವ ಪಾರಂಪರಿಕ ತಾಣಗಳನ್ನು ಹೊಂದಿರುವ ರಾಜ್ಯವಾಗಿದೆ
ಈಗ ‘ಮರಾಠಾ ಮಿಲಿಟರಿ ಲ್ಯಾಂಡ್‌ಸ್ಕೇಪ್ಸ್’ ನಾಮನಿರ್ದೇಶನವು ಸಾಂಸ್ಕೃತಿಕ ಆಸ್ತಿಯ ವಿಭಾಗದಲ್ಲಿ ಆಗಿದೆ ಎಂದು ಸಚಿವಾಲಯ ತಿಳಿಸಿದೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.