Moreವಿಂಗಡಿಸದ

ಭಾರತದ ಮೊದಲ ಸಮುದ್ರದೊಳಗಿನ ಸುರಂಗ ಮಾರ್ಗ ಸಾರ್ವಜನಿಕರಿಗೆ ತೆರೆಯಲ್ಪಟ್ಟಿದೆ;

2018 ರಿಂದ ನಿರ್ಮಾಣ ಹಂತದಲ್ಲಿದ್ದ, ಮುಂಬೈ ಕರಾವಳಿ ರಸ್ತೆ (Mumbai coastal road) ಈಗ ಪ್ರಯಾಣಿಕರಿಗೆ ಮುಕ್ತವಾಗಿದೆ.

ಈ ಯೋಜನೆಯು ಭಾರತದ ಮೊದಲ ಸಮುದ್ರದೊಳಗಿನ ಸುರಂಗವನ್ನು (First Undersea Tunnel) ಒಳಗೊಂಡಿದೆ ಮತ್ತು ಇದು ಟೋಲ್-ಫ್ರೀ (Toll Free) ಆಗಿದೆ.

ಮಾ.11 ಸೋಮವಾರದಂದು ಮುಂಬೈ ಕರಾವಳಿ ರಸ್ತೆಯನ್ನು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಉಪ ಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್ ಅವರ ಉಪಸ್ಥಿತಿಯಲ್ಲಿ ಉದ್ಘಾಟಿಸಿದರು.

ಮುಂಬೈ ಕರಾವಳಿ ರಸ್ತೆ ಯೋಜನೆ (MCRP) ಅಧಿಕೃತವಾಗಿ ಧರ್ಮವೀರ್ ಸ್ವರಾಜ್ಯ ರಕ್ಷಕ ಛತ್ರಪತಿ ಸಂಭಾಜಿ ಮಹಾರಾಜ್ ಕರಾವಳಿ ರಸ್ತೆ ಎಂದು ನಾಮಕರಣ ಮಾಡಲಾಗಿದೆ. ಛತ್ರಪತಿ ಸಂಭಾಜಿ ಮಹಾರಾಜ್ ಅವರ ಪುಣ್ಯತಿಥಿ ದಿನದಂದು ಮಾ.11 ರಂದು ಈ ರಸ್ತೆಯನ್ನು ಉದ್ಘಾಟಿಸಲಾಗಿದೆ.

ಕರಾವಳಿ ರಸ್ತೆಯ ಪಕ್ಕದಲ್ಲಿರುವ ವರ್ಲಿಯಲ್ಲಿ (Worli) ಛತ್ರಪತಿ ಸಂಭಾಜಿ ಮಹಾರಾಜರ ಪ್ರತಿಮೆಯನ್ನು ಸಹ ಸ್ಥಾಪಿಸಲಾಗುವುದು.

ಸೋಮವಾರದಂದು ಉದ್ಘಾಟನೆಗೊಂಡ ಈ ಸುರಂಗ ಮಾರ್ಗದ ಮೊದಲ ಹಂತವಾದ 10.5 ಕಿಮೀ ಉದ್ದದ ಮಾರ್ಗವನ್ನು ಸಂಚಾರಕ್ಕೆ ತೆರೆಯಲಾಗಿದೆ.

ವಾಹನ ಸವಾರರು ವೋರ್ಲಿ ಸೀಫೇಸ್, ಹಾಜಿ ಅಲಿ ಇಂಟರ್‌ಚೇಂಜ್ ಮತ್ತು ಅಮರ್ಸನ್ ಇಂಟರ್‌ಚೇಂಜ್ ಪಾಯಿಂಟ್‌ಗಳಿಂದ ಕರಾವಳಿ ರಸ್ತೆಯನ್ನು ಪ್ರವೇಶಿಸಬಹುದು.

ಮೆರೈನ್ ಲೈನ್‌ನಲ್ಲಿ ನಿರ್ಗಮಿಸಬಹುದಾಗಿದೆ. ₹ 12,721 ಕೋಟಿ ವೆಚ್ಚದ ಈ ರಸ್ತೆಯ ಕಾಮಗಾರಿ 2018ರಲ್ಲಿ ಆರಂಭಗೊಂಡಿತು. 53-ಕಿಮೀ ಉದ್ದದ ಈ ಕರಾವಳಿ ರಸ್ತೆ ಯೋಜನೆಯು ಬಾಂದ್ರಾ-ವರ್ಲಿ ಸಮುದ್ರಕ್ಕೆ ಸಂಪರ್ಕ ಕಲ್ಪಿಸುತ್ತದೆ ಮತ್ತು ದಹಿಸರ್‌ಗೆ ವಿಸ್ತರಿಸುತ್ತದೆ.

ಮುಂಬೈ ಕರಾವಳಿ ರಸ್ತೆ ಮಾಲಿನ್ಯವನ್ನು ಕಡಿಮೆ ಮಾಡುವುದರ ಜೊತೆಗೆ ಇಂಧನ ಮತ್ತು ಸಮಯವನ್ನು ಉಳಿಸಲು ಸಹಾಯ ಮಾಡುತ್ತದೆ ಎಂದು ಶಿಂಧೆ ತಿಳಿಸಿದ್ದಾರೆ.

ಕರಾವಳಿ ರಸ್ತೆ (Coastal Road) ಯೋಜನೆಯ ಭಾಗವಾಗಿ 175 ಎಕರೆ ಹಸಿರು ಜಾಗವನ್ನು, ಜೊತೆಗೆ 120 ಎಕರೆ ರೇಸ್‌ಕೋರ್ಸ್ ಭೂಮಿಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಮುಂಬೈ (Mumbai) ಕರಾವಳಿ ರಸ್ತೆಯ ಉದ್ದಕ್ಕೂ 320 ಎಕರೆ ಪ್ರದೇಶದಲ್ಲಿ ‘ವಿಶ್ವ ದರ್ಜೆಯ’ ಸೆಂಟ್ರಲ್ ಪಾರ್ಕ್ ಅನ್ನು ನಿರ್ಮಿಸಲಾಗುವುದು ಎಂದು ಶಿಂಧೆ ತಿಳಿಸಿದ್ದಾರೆ.

ಈ ಸುರಂಗ ಮಾರ್ಗವು ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ. ವಿಶೇಷವಾಗಿ ಬೆಳಿಗ್ಗೆ ಮತ್ತು ಸಂಜೆ ಹೆಚ್ಚಿನ ದಟ್ಟಣೆ ಕಡಿಮೆ ಮಾಡಲು ಇದು ಸಹಕಾರಿಯಾಗಲಿದೆ.

ಈ ಸುರಂಗ ಮಾರ್ಗದ (Tunnel Route) ನಿರ್ಮಾಣಕ್ಕಾಗಿ ಆಧುನಿಕ ತಂತ್ರಜ್ಞಾನವನ್ನು ಬಳಸಲಾಗುತ್ತಿದ್ದು, ಇಲ್ಲಿ ಅಗ್ನಿಯ ಅವಘಡ ಸಂಭವಿಸಿದರೆ ಯಾವುದೇ ರೀತಿಯ ಹೊಗೆ ಪೂರೈಕೆ ಆಗಿ ಪ್ರಯಾಣಿಕರಿಗೆ ಉಸಿರುಗಟ್ಟುವ ಪರಿಸ್ಥಿತಿ ಉಂಟಾಗುವುದಿಲ್ಲ.

ಈ ಯೋಜನೆಯು ಕೇವಲ ಎಂಜಿನಿಯರಿಂಗ್ ಅದ್ಭುತವಲ್ಲ ಆದರೆ ಸುಸ್ಥಿರ ಮತ್ತು ಸಮಗ್ರ ನಗರಾಭಿವೃದ್ಧಿಗೆ ನಗರದ ಬದ್ಧತೆಗೆ ಸಾಕ್ಷಿಯಾಗಿದೆ.

ಈ ಅಭಿವೃದ್ಧಿಯು ನೆರೆಯ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರವನ್ನು ಉತ್ತೇಜಿಸುವ, ಹೂಡಿಕೆದಾರರು ಮತ್ತು ಮನೆ ಖರೀದಿದಾರರನ್ನು ಆಕರ್ಷಿಸುವ ನಿರೀಕ್ಷೆ ಇದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button