ಇವರ ದಾರಿಯೇ ಡಿಫರೆಂಟುಮ್ಯಾಜಿಕ್ ತಾಣಗಳುವಂಡರ್ ಬಾಕ್ಸ್ವಿಂಗಡಿಸದಸಂಸ್ಕೃತಿ, ಪರಂಪರೆಸ್ಫೂರ್ತಿ ಗಾಥೆಸ್ಮರಣೀಯ ಜಾಗ

ಜಮ್ಮು ಕಾಶ್ಮೀರದಲ್ಲಿ ಹಾರಿದ 100 ಅಡಿಯ ಭಾರತದ ಅತಿ ಎತ್ತರದ ತ್ರಿವರ್ಣ ಧ್ವಜ

ಭಾರತ 75ನೇ ಸ್ವಾತಂತ್ರ್ಯ ದಿನಾಚರಣೆಗೆ ಸಜ್ಜಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದಾರೆ ಭಾರತೀಯರು. ಇದರ ಬೆನ್ನಲ್ಲೇ ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ 100 ಅಡಿ ಎತ್ತರವಿರುವ ಭಾರತದ ಅತ್ಯಂತ ಎತ್ತರದ ತ್ರಿವರ್ಣ ಧ್ವಜವನ್ನು ಹಾರಿಸಲಾಗಿದೆ. ಗುಲ್ಮಾರ್ಗ್ ನಲ್ಲಿ ತ್ರಿವರ್ಣ ಧ್ವಜ ಹಾರಿಸಿ ಭಾರತಕ್ಕೆ ಸಮರ್ಪಿಸಿದ್ದಾರೆ ನಮ್ಮ ವೀರ ಯೋಧರು.

  • ನವ್ಯಶ್ರೀ ಶೆಟ್ಟಿ

ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಭಾರತವು ಹಲವು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗುತ್ತಿದೆ. ಅಮೃತ ಮಹೋತ್ಸವದ ಖುಷಿಯಲ್ಲಿ ವಿಭಿನ್ನ ರೀತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಸಜ್ಜಾಗಿರುವ ಭಾರತೀಯ ದೇಶಪ್ರೇಮವನ್ನು ಮರೆತಿಲ್ಲ. ದೇಶ ಕಾಯುವ ವೀರ ಯೋಧರ ಕಾರ್ಯ ಇದೀಗ ಇಡೀ ಭಾರತೀಯರೇ ಹೆಮ್ಮೆಯಿಂದ ಖುಷಿ ಪಡುವಂತಾಗಿದೆ.

ಯೋಧರ ದೇಶ ಪ್ರೇಮ

ನಮ್ಮ ದೇಶದ ರಕ್ಷಣೆಯನ್ನು ಮಾಡುವ ವೀರಯೋಧರು ತಮ್ಮದೇ ಶೈಲಿಯಲ್ಲಿ ತಮ್ಮ ದೇಶಕ್ಕೆ ತಮ್ಮ ದೇಶಪ್ರೇಮವನ್ನು ಸಮರ್ಪಿಸಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಅತಿ ಎತ್ತರದ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ತಮ್ಮ ದೇಶಪ್ರೇಮವನ್ನು ಭಾರತಾಂಬೆಗೆ ಸಮರ್ಪಿಸಿದ್ದಾರೆ ವೀರಯೋಧರು.

ಜಮ್ಮ ಕಾಶ್ಮೀರ ಹಲವು ಕಾರಣಗಳಿಂದ ಸುದ್ದಿಯಲ್ಲಿ ರುವ ಪ್ರದೇಶ. ಕಿಡಿಗೇಡಿಗಳ ಕೋಮು ಗಲಭೆಗೆ ಸುದ್ದಿಯಾಗಿದ್ದ ಜಾಗ. ನಮ್ಮ ವೀರ ಯೋಧರ ಪರಾ ಕ್ರಮಗಳಿಗೆ ಕೂಡ ಜಮ್ಮು ಕಾಶ್ಮೀರ ಸಾಕ್ಷಿಯಾಗಿತ್ತು. ಇದೀಗ ಜಮ್ಮು ಕಾಶ್ಮೀರ ವೀರ ಯೋಧರ ದೇಶ ಪ್ರೇಮದ ಕಾರ್ಯದಿಂದ ಮತ್ತೆ ಸುದ್ದಿಯಾಗಿದೆ. ಜಮ್ಮು ಕಾಶ್ಮೀರದ ಗುಲ್ಮಾರ್ಗ್ ನಲ್ಲಿ 100 ಅಡಿ ಎತ್ತರದಲ್ಲಿ ಭಾರತದ ತ್ರಿವರ್ಣ ಧ್ವಜ ಅನಾವರಣಗೊಂಡಿದೆ.

ಸೇನೆಯ ಉನ್ನತ ಅಧಿಕಾರಿಗಳು ಭಾಗವಹಿಸಿದ್ದ ಸರಳ ಕಾರ್ಯಕ್ರಮದಲ್ಲಿ ,ಯೋಧರು  ಭಾರತದ ಅತಿ ಎತ್ತರದ ತ್ರಿವರ್ಣ ಧ್ವಜವನ್ನು ದೇಶಕ್ಕೆ ಸಮರ್ಪಿಸಿದ್ದಾರೆ.

ಗುಲ್ಮಾರ್ಗ್ ನಲ್ಲಿ ಹಾರಿದ ಅತಿ ಎತ್ತರದ ರಾಷ್ಟ್ರ ಧ್ವಜ

ಸ್ವಾತಂತ್ರ್ಯದ 75ನೇ ವರ್ಷದ ಸಂಭ್ರಮದ ಸವಿ ನೆನಪಿಗಾಗಿ 100 ಅಡಿ ಎತ್ತರದಲ್ಲಿ ರಾಷ್ಟ್ರ  ಹಾರಾಡಿದೆ. ಅತಿ ಎತ್ತರದ ತ್ರಿವರ್ಣ ಧ್ವಜವನ್ನು ಭಾರತಕ್ಕೆ ಸಮರ್ಪಿಸಿದ ಭಾರತೀಯ ಸೇನೆ ದೇಶಪ್ರೇಮದ ದೃಷ್ಟಿಯಿಂದಲೇ ಈ ಕಾರ್ಯಕ್ಕೆ ಮುಂದಾಗಿದ್ದು. ಅತಿ ಎತ್ತರದ ತ್ರಿವರ್ಣ ಧ್ವಜವು ಗುಲ್ಮಾರ್ಗ್ ನಲ್ಲಿ ಹಾರಿಸುವುದರ ಮೂಲಕ ಕಾಶ್ಮೀರಲ್ಲಿ ಶಾಂತಿ ಮತ್ತು ದೇಶಭಕ್ತಿಯನ್ನು ಹೆಚ್ಚಿಸಬಹುದು. ದೇಶಪ್ರೇಮದ ಹೊಸ ಯುಗಕ್ಕೆ  ಈ ಕಾರ್ಯ  ಮುನ್ನುಡಿಯಾಗಬಹುದು ಎನ್ನುವುದು ಯೋಧರ ಆಸೆ.

ನೀವುಇದನ್ನುಇಷ್ಟಪಡಬಹುದು: ಲಡಾಕ್ ನಲ್ಲಿ ನಿರ್ಮಾಣವಾದ ವಿಶ್ವದ ಅತಿ ಎತ್ತರದ ರಸ್ತೆ

Gulmarg J&K 100m Tall Tricolor Flag  75th Independence Day Indian Army

 ಅತಿ ಎತ್ತರದ ತ್ರಿವರ್ಣ ಧ್ವಜ ಹಾರಿಸುವ ಯೋಜನೆ ಆರಂಭವಾಗಿದ್ದು ಫೆಬ್ರವರಿ 7,2021 ರಂದು. ಧ್ವಜ ದೇಶಕ್ಕೆ ಸಮರ್ಪಣೆಗೊಂಡಿದ್ದು ಅಗಸ್ಟ್ 10ರಂದು. ಗುಲ್ಮಾರ್ಗ್ 1960 ರಲ್ಲಿ ಪಾಕಿಸ್ತಾನದ ಸೈನಿಕರು ನುಸುಳಿದ್ದ ಗಡಿ ನಿಯಂತ್ರಣ ರೇಖೆಗಳಲ್ಲಿ ಒಂದಾಗಿತ್ತು. ಇದೇ ಜಾಗದಲ್ಲಿ ಭಾರತದ ಯೋಧರು ಅತಿ ಎತ್ತರದ ತ್ರಿವರ್ಣ ಧ್ವಜವನ್ನು ಹಾರಿಸುವುದು ವಿಶೇಷ.

ಪ್ರಾಣ ತ್ಯಾಗ ಮಾಡಿದ ಕಾಶ್ಮೀರಿಗರಿಗೆ ಅರ್ಪಣೆ

ಗುಲ್ಮಾರ್ಗ್ ಒಂದು ಸುಂದರ ತಾಣ . ಈ ಕಾರಣದಿದಲೇ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಕೂಡ ಹೌದು. ಇಂತಹ ಚೆಂದದ ತಾಣದಲ್ಲಿ ಅನಾವರಣಗೊಂಡಿರುವ ಅತಿ ಎತ್ತರದ ತ್ರಿವರ್ಣ ಧ್ವಜ  ಮುಂದಿನ ದಿನಮಾನಗಳಲ್ಲಿ ಇನ್ನೂ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವುದರಲ್ಲಿ ಸಂಶಯವಿಲ್ಲ

ಭಾರತದ ಏಕತೆ ಸಮಗ್ರತೆಯನ್ನು  ಕಾಪಾಡುವ ಸಮಯದಲ್ಲಿ ಅಹಿತಕರ ಘಟನೆಗಳಿಗೆ ಬಲಿಯಾಗಿ  ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಅಸಂಖ್ಯಾತ ಕಾಶ್ಮೀರಿಗಳಿಗೆ ಧ್ವಜವನ್ನ ಸಮರ್ಪಿಸಿದ್ದಾರೆ ಯೋಧರು. ಕಾಶ್ಮೀರದಂತಹ ಅತೀ ಸೂಕ್ಷ್ಮ ಪ್ರದೇಶದಲ್ಲಿ ಭಾರತದ ಅತಿ ಎತ್ತರದ ತ್ರಿವರ್ಣ ಧ್ವಜದ ಹಾರಾಟ ನಿಜಕ್ಕೂ ಭಾರತೀಯರಿಗೆ ಹೆಮ್ಮೆಯ ಸಂಗತಿ.

Gulmarg J&K 100m Tall Tricolor Flag  75th Independence Day Indian Army

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button