ದೂರ ತೀರ ಯಾನವಿಂಗಡಿಸದ

ಭಾರತ ಸೇರಿದಂತೆ 33 ದೇಶಗಳ ನಾಗರಿಕರಿಗೆ ವೀಸಾ-ಮುಕ್ತ ಪ್ರವೇಶ ಘೋಷಿಸಿದ “ಇರಾನ್”

ಪ್ರವಾಸೋದ್ಯಮ ಉತ್ತೇಜಿಸುವ ನಿಟ್ಟಿನಿಂದ ಭಾರತ, ರಷ್ಯಾ, ಸೌದಿ ಅರೇಬಿಯಾ, ಕತಾರ್, ಜಪಾನ್ ಮತ್ತು ಯುಎಇ ಸೇರಿದಂತೆ 33 ದೇಶಗಳಿಗೆ ಇರಾನ್ ವೀಸಾ-ಮುಕ್ತ ಪ್ರವೇಶ ಘೋಷಿಸಿದೆ.

ಉಜ್ವಲಾ ವಿ ಯು

ಇರಾನ್‌ನ ಅಧಿಕೃತ ಸುದ್ದಿ ಸಂಸ್ಥೆ (IRNA) ಯಲ್ಲಿನ ವರದಿಯ ಪ್ರಕಾರ, ಈ ಉಪಕ್ರಮವು ಇರಾನ್‌ಗೆ ಪ್ರವಾಸಿಗರ ಹರಿವನ್ನು ಹೆಚ್ಚಿಸಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.

ಪ್ರವಾಸೋದ್ಯಮ ಮತ್ತು ವ್ಯಾಪಾರವನ್ನು ಉತ್ತೇಜಿಸಲು ಬಯಸುವ ಮಲೇಷ್ಯಾ ಮತ್ತು ಶ್ರೀಲಂಕಾ, ಥೈಲ್ಯಾಂಡ್‌ದಂತಹ ದೇಶಗಳು ಇತ್ತೀಚಿಗೆ ವೀಸಾ ಮನ್ನಾ ಮಾಡುವ ನಿರ್ಧಾರ ಕೈಗೊಂಡಿದ್ದವು. ಅಂತೆಯೇ ಈಗ ಇರಾನ್ (Iran) ಕೂಡಾ ಇದೇ ಉದ್ದೇಶದಿಂದ ವೀಸಾ ಮನ್ನಾ (Visa Exemption) ಮಾಡುವ ನಿರ್ಧಾರ ಕೈಗೊಂಡಿದೆ.

ಇರಾನ್‌ನ ಪ್ರವಾಸೋದ್ಯಮ ಸಚಿವ ಎಜ್ಜತೊಲ್ಲಾಹ್ ಜರ್ಘಮಿ ಬುಧವಾರ IRNA ಸುದ್ದಿವಾಹಿನಿಗೆ “ಇರಾನ್ ಸರ್ಕಾರದ ಈ ನಿರ್ಧಾರವು ಹೆಚ್ಚಿನ ಸಂದರ್ಶಕರನ್ನು ಕರೆತರುವ ಮತ್ತು ಪಾಶ್ಚಿಮಾತ್ಯ ಚಾನೆಲ್‌ಗಳಲ್ಲಿ ಗೋಚರಿಸುವ “ಇರಾನೋಫೋಬಿಯಾ” ವಿರುದ್ಧ ಹೋರಾಡುವ ಗುರಿಯನ್ನು ಹೊಂದಿದೆ” ಎಂದು ಹೇಳಿದರು.

ಭಾರತ ಮತ್ತು ಇರಾನ್ ಅನೇಕ ಕ್ಷೇತ್ರಗಳಲ್ಲಿ ಉತ್ತಮ ಸಂಬಂಧವನ್ನು ಹೊಂದಿವೆ ಮತ್ತು ಚಬಹಾರ್ ಬಂದರು ಯೋಜನೆಯಲ್ಲಿ ಭಾರತವು ಸಹ ಪ್ರಮುಖ ಪಾಲುದಾರನಾಗಿದೆ. ಈಗ ವೀಸಾ ಮನ್ನಾ ನಿರ್ಧಾರವು ಉಭಯ ರಾಷ್ಟ್ರಗಳ ವ್ಯಾವಹಾರಿಕ ಸಂಪರ್ಕವನ್ನು ಇನ್ನಷ್ಟು ಹೆಚ್ಚಿಸಲಿದೆ.

IRNA ಪ್ರಕಾರ, ಇರಾನ್ ಈಗಾಗಲೇ ಟರ್ಕಿ, ರಿಪಬ್ಲಿಕ್ ಆಫ್ ಅಜರ್‌ಬೈಜಾನ್, ಓಮನ್, ಚೀನಾ, ಅರ್ಮೇನಿಯಾ, ಲೆಬನಾನ್ ಮತ್ತು ಸಿರಿಯಾದೊಂದಿಗೆ ವೀಸಾ-ವಿನಾಯತಿ ಒಪ್ಪಂದಗಳನ್ನು ಹೊಂದಿದೆ. ಜನವರಿ 2024 ರಂದು, ಅಧಿಕೃತವಾಗಿ ಬ್ರಿಕ್ಸ್ (BRICS)ನ ಸದಸ್ಯನಾಗಲು ಸಿದ್ಧವಾಗಿರುವ ಇರಾನ್ ನ ವೀಸಾ ವಿನಾಯಿತಿ ನೀಡುವ ಉಪಕ್ರಮವು ಆ ದೇಶಗಳ ಸಂಬಂಧಗಳನ್ನು ನವೀಕರಿಸಲು ಇದು ಸಹಕಾರಿಯಾಗಲಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button