ಇವರ ದಾರಿಯೇ ಡಿಫರೆಂಟುವಂಡರ್ ಬಾಕ್ಸ್ವಿಂಗಡಿಸದಸ್ಫೂರ್ತಿ ಗಾಥೆ

ಎಸ್.ಎಸ್.ಎಲ್.ಸಿ ಫೇಲ್ ಆದವರಿಗೆ ಕೊಡೈಕೆನಾಲ್ ಹೋಂ ಸ್ಟೇ ನಲ್ಲಿ ಉಚಿತ ವಾಸ್ತವ್ಯ . ಈ ಆಫರ್ ಜುಲೈ ಕೊನೆ ತನಕ ಮಾತ್ರ .

ಕೊಡೈಕೆನಾಲ್ ನಲ್ಲಿರುವ ಹ್ಯಾಮಕ್ ಹೋಂಸ್ಟೇ ವಿಭಿನ್ನವಾಗಿ ನಿಲ್ಲುತ್ತದೆ. ಕಾರಣ ಇದು ಎಸ್.ಎಸ್. ಎಲ್.ಸಿ ಫೇಲ್ ಆದ ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ಉಚಿತ ವಾಸ್ತವ್ಯವನ್ನು ಕಲ್ಪಿಸಿದೆ. ಈ ಕುರಿತಾದ ಹೆಚ್ಚಿನ ಮಾಹಿತಿ ಇಲ್ಲಿದೆ.

  • ನವ್ಯಶ್ರೀ ಶೆಟ್ಟಿ

ಗೆಲುವನ್ನು ಸಂಭ್ರಮಿಸುವ ನಾವು ಸೋಲನ್ನು ಒಪ್ಪಿಕೊಳ್ಳುವುದಕ್ಕೆ ತಯಾರಿರುವುದಿಲ್ಲ.ಇದರ ಜೊತೆಗೆ ಸೋತಾಗ ನಮ್ಮನ್ನು ಪ್ರೋತ್ಸಾಹ ಮಾಡುವುದಕ್ಕಿಂತ ಮೂದಲಿಸುವವರ ಸಂಖ್ಯೆಯೇ ಹೆಚ್ಚು. ಅದು ಶೈಕ್ಷಣಿಕ ವಿಷಯದಲ್ಲಿ ಕೂಡ ಹೊರತಲ್ಲ.

ಎಸ್.ಎಸ್.ಎಲ್.ಸಿ, ಪಿಯುಸಿ ಅನುತ್ತೀರ್ಣ ಆದರೆ ಅವರ ಬದುಕೇ ಮುಗಿದು ಹೋಯಿತು ಎನ್ನುವಂತೆ ವರ್ತಿಸುತ್ತಾರೆ ಹಲವರು . ಆದರೆ ಈ ಮಧ್ಯೆ ಕೇರಳದ ಹೋಂ ಸ್ಟೇ ಎಸ್.ಎಸ್.ಎಲ್.ಸಿ ಫೇಲ್ ಆಗಿರುವ ಮಕ್ಕಳಿಗೆ ತಮ್ಮ ಹೋಂ ಸ್ಟೇ ಅಲ್ಲಿ ವಾಸ್ತವ್ಯ ಕಲ್ಪಿಸಿದೆ.

Kodaikanal Hammock Homestay Kerala SSLC Examination

ಜುಲೈ ಅಂತ್ಯದವರೆಗೆ ಅವಕಾಶ

ಕೇರಳದ ಕೊಡೈಕೆನಾಲ್ (kodaikanal) ಹ್ಯಾಮಕ್ (Hammock) ಹೋಂಸ್ಟೇ ಮಾದರಿ ಕೆಲಸವೊಂದಕ್ಕೆ ಕೈ ಹಾಕಿದೆ. ವಿದ್ಯಾರ್ಥಿಗಳ ಯಶಸ್ಸು ವೈಫಲ್ಯಗಳಲ್ಲಿ ನಾವು ಜೊತೆಗಿರಬೇಕು. ವಿದ್ಯಾರ್ಥಿಗಳು ಗೆಲುವು ಸಂಭ್ರಮಿಸುವ ಜೊತೆಗೆ ಸೋತಾಗ ಹತಾಶರಾಗಬಾರದು ಎನ್ನುವ ಕಾರಣಕ್ಕೆ ಈ ಹೋಂಸ್ಟೇ ವಿಭಿನ್ನ ಯೋಜನೆಯನ್ನು ಹಾಕಿಕೊಂಡಿದೆ.

ನೀವುಇದನ್ನುಇಷ್ಟಪಡಬಹುದು: ವಿದೇಶಗಳಿಗೆ ವಿದ್ಯಾಭ್ಯಾಸಕ್ಕೆ ಹೊರಟಿರುವ ವಿದ್ಯಾರ್ಥಿಗಳಿಗೆ ಅಲ್ಲಿನ ದೇಶಗಳು ವಿಧಿಸಿರುವ ನಿಯಮಗಳು ಇಲ್ಲಿದೆ.

Kodaikanal Hammock Homestay Kerala SSLC Examination

ಹತ್ತನೇ ತರಗತಿ ಫೇಲ್ ಆಗಿರುವ ವಿದ್ಯಾರ್ಥಿಗಳಿಗೆ ಮನೋ ಸ್ಥೈರ್ಯ ತುಂಬುವ ಉದ್ದೇಶದಿಂದ CONDE NAST TRAVELLER ಕಡೆಯಿಂದ ಉಚಿತ ವಾಸ್ತವ್ಯವನ್ನು ಇಲ್ಲಿ ಕಲ್ಪಿಸಲಾಗಿದೆ. ಜೊತೆಗೆ ಇಲ್ಲಿ ವಾಸ್ತವ್ಯ ಹೂಡುವ ವಿದ್ಯಾರ್ಥಿಗಳಿಗೆ ಹೋಂ ಸ್ಟೇ ಕಡೆಯಿಂದ ಉಚಿತ ಊಟ ಸೌಲಭ್ಯ ಸಿಗಲಿದೆ. ಈ ಹೋಂಸ್ಟೇಯಲ್ಲಿ ಜುಲೈ ತಿಂಗಳ 19 ರಿಂದ ಈ ವಿಶೇಷ ಆಫರ್ ಆರಂಭವಾಗಿದ್ದು ,ಈ ತಿಂಗಳ ಅಂತ್ಯದ ತನಕ ಈ ಯೋಜನೆ ಕಾರ್ಯರೂಪದಲ್ಲಿದೆ. ಈ ಮೂಲಕ ಈ ಹೋಂ ಸ್ಟೇ ಇತರರಿಗೆ ಮಾದರಿಯಾಗಿದೆ.

ಚೆಂದದ ಹೋಂ ಸ್ಟೇ

ಹುಲ್ಲು ಹಾಸುಗಳ ನಡುವೆ ,ಹಸಿರು ಆವೃತವಾಗಿರುವ ಈ ಹೋಂ ಸ್ಟೇ ನೋಡಲು ಬಹು ಸುಂದರ. ಕೊಡೈಕೆನಾಲ್ ಸಮುದ್ರದಿಂದ ಸುಮಾರು 2 ಕಿಮೀ ದೂರದಲ್ಲಿದೆ ಹ್ಯಾಮಕ್ ಹೋಂ ಸ್ಟೇ. ಕೇರಳದ ಚೆಟ್ಟಿಯಾರ್ ಉದ್ಯಾನವನದ ಸಮೀಪದಲ್ಲಿದೆ ಈ ಚೆಂದದ ವಿಶ್ರಾಂತ ತಾಣ. ಇಲ್ಲಿ ವಿದ್ಯಾರ್ಥಿಗಳು ಪಕ್ಷಿ ವೀಕ್ಷಣೆ ಮಾಡಬಹುದು. ಮನಸಿನ ತಳಮಳ . ಪ್ರಶಾಂತ ವಾತಾವರಣದ ನಡುವೆ ಇಲ್ಲಿ ಬರುವವರ ಮನಸ್ಸಿಗೆ ಮುದ ನೀಡುತ್ತದೆ ಈ ಸುಂದರ ಹೋಂ ಸ್ಟೇ .

Kodaikanal Hammock Homestay Kerala SSLC Examination

ಪರೀಕ್ಷೆಗಳಲ್ಲಿ ಫೇಲ್ ಆದ ಕಾರಣಕ್ಕೆ ವಿದ್ಯಾರ್ಥಿಗಳನ್ನು ಕೆಲವೊಮ್ಮೆ ತುಚ್ಛವಾಗಿ ನೋಡಲಾಗುತ್ತದೆ. ಅಪಹಾಸ್ಯ ಮಾಡಲಾಗುತ್ತದೆ. ವಿದ್ಯಾರ್ಥಿಗಳು ಇಲ್ಲಿಗೆ ಬಂದು ಕಾಲ ಕಳೆಯುವುದರಿಂದ ಮಾನಸಿಕ ಒತ್ತಡಗಳನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಹೋಂ ಸ್ಟೇ ಮುಖ್ಯಸ್ಥ ಸುದೀಶ್.

ವಿದ್ಯಾರ್ಥಿಗಳು ಮಾಡಬೇಕಿರುವುದು ಇಷ್ಟು.

ಅನುತ್ತಿರ್ಣವಾದ ವಿದ್ಯಾರ್ಥಿಗಳು ಇಲ್ಲಿಗೆ ತಮ್ಮ ಹೆತ್ತವರನ್ನು ಕೂಡ ಕರೆದುಕೊಂಡು ಬರಬಹುದು. ಈ ಆಫರ್ ಜುಲೈ ತಿಂಗಳ ಅಂತ್ಯದ ತನಕ ಮಾತ್ರ. ವಿದ್ಯಾರ್ಥಿಗಳು ತಮ್ಮ 10 ನೆಯ ತರಗತಿಯ ಪ್ರಮಾಣ ಪತ್ರ ನೀಡಿ ಇಲ್ಲಿ ವಾಸ್ತವ್ಯ ಹೂಡಬಹುದು.

Kodaikanal Hammock Homestay Kerala SSLC Examination

ಫೇಲ್ ಆಗಿರುವ ವಿದ್ಯಾರ್ಥಿಗಳ ಧೈರ್ಯವನ್ನು ಕುಗ್ಗಿಸುವರ ನಡುವೆ ವಿದ್ಯಾರ್ಥಿಗಳ ಧೈರ್ಯ ತುಂಬುವ ಹ್ಯಾಮಕ್ ಹೋಂ ಸ್ಟೇ ಕಾರ್ಯ ನಿಜಕ್ಕೂ ಶ್ಲಾಘನೀಯ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button