Moreಮ್ಯಾಜಿಕ್ ತಾಣಗಳುವಿಂಗಡಿಸದಸ್ಮರಣೀಯ ಜಾಗ

ಮಹಾರಾಷ್ಟ್ರದಲ್ಲಿ ಸ್ಥಳಗಳ ಮಾಹಿತಿ ನೀಡುವ AI-ಚಾಲಿತ WhatsApp ಚಾಟ್‌ಬಾಟ್ ಆರಂಭ

ಮಹಾರಾಷ್ಟ್ರದ ಪ್ರವಾಸೋದ್ಯಮ ಸಚಿವರಾದ ಗಿರೀಶ್ ಮಹಾಜನ್ ಅವರು AI-ಚಾಲಿತ (AI-Powered) WhatsApp ಚಾಟ್‌ಬಾಟ್ (ಸಂಖ್ಯೆ: +91 9403878864) ಅನ್ನು ಆರಂಭಿಸಿದ್ದಾರೆ.

ಇದು ಪ್ರಯಾಣಿಕರಿಗೆ WhatsApp ಮೂಲಕ ಮಹಾರಾಷ್ಟ್ರದ (Maharashtra) ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಅದ್ಭುತ ನೈಸರ್ಗಿಕ ಭೂದೃಶ್ಯಗಳು, ಮತ್ತು ವೈವಿಧ್ಯಮಯ ಆಕರ್ಷಣೆಗಳನ್ನು ಅನ್ವೇಷಿಸಲು ಮಾಹಿತಿಯನ್ನು ಒದಗಿಸುವ ಮೂಲಕ ಸಹಕಾರಿಯಾಗಲಿದೆ.

ವೈವಿಧ್ಯಮಯ ಭೂದೃಶ್ಯ, ರೋಮಾಂಚಕ ನಗರಗಳು ಮತ್ತು ಶ್ರೀಮಂತ ಪರಂಪರೆಯಿಂದಾಗಿ ಮಹಾರಾಷ್ಟ್ರವು ಪ್ರವಾಸಿಗರು ಅತಿ ಹೆಚ್ಚು ಭೇಟಿ ನೀಡುವ ರಾಜ್ಯವಾಗಿದೆ.

ಮಹಾರಾಷ್ಟ್ರದ ಪ್ರವಾಸೋದ್ಯಮ (Maharashtra Tourism) ಇಲಾಖೆಯು ರಾಜ್ಯದ ವ್ಯಾಪಾರ ವಹಿವಾಟುಗಳನ್ನು ಉತ್ತೇಜಿಸುವ ನಿಟ್ಟಿನಿಂದ ದೇಶೀಯ ಮತ್ತು ವಿದೇಶೀಯ ಪ್ರವಾಸಿಗರನ್ನು ಆಕರ್ಷಿಸಲು ತನ್ನ ವಿಶಿಷ್ಟವಾದ ಸಾಂಸ್ಕೃತಿಕ, ಐತಿಹಾಸಿಕ ಮತ್ತು ನೈಸರ್ಗಿಕ ತಾಣಗಳನ್ನು ಬಳಸಿಕೊಳ್ಳುವ ಉದ್ದೇಶವನ್ನು ಹೊಂದಿದೆ.

ಇಂಗ್ಲಿಷ್ ಮತ್ತು ಮರಾಠಿ ಎರಡೂ ಭಾಷೆಗಳಲ್ಲಿ ಲಭ್ಯವಿರುವ ಈ ಚಾಟ್‌ಬಾಟ್ (Chatbot), ಮಹಾರಾಷ್ಟ್ರದ ಗಮ್ಯಸ್ಥಾನಗಳು, ಚಟುವಟಿಕೆಗಳು, ವಸತಿಗಳು ಇತ್ಯಾದಿ ಮಾಹಿತಿಯನ್ನು ಒದಗಿಸುವ ಮೂಲಕ ಪ್ರವಾಸ-ಯೋಜನೆ ಪ್ರಕ್ರಿಯೆಯನ್ನು ಸರಳಗೊಳಿಸಲಿದೆ.

ಇದಲ್ಲದೇ, ಮಹಾರಾಷ್ಟ್ರದ ಪ್ರವಾಸೋದ್ಯಮ ಸಚಿವರಾದ ಮಹಾಜನ್ ಅವರು ಚಾಟ್ ಬಾಟ್ ಉದ್ಘಾಟನಾ ಸಮಯದಲ್ಲಿ, ತಡೆರಹಿತ ಸಂಪರ್ಕದ ಪ್ರಾಮುಖ್ಯತೆ ಮತ್ತು ಸಂದರ್ಶಕರ ಅನುಭವಗಳನ್ನು ಹೆಚ್ಚಿಸುವಲ್ಲಿ ಡಿಜಿಟಲ್ ಉಪಕರಣಗಳ ಪಾತ್ರವನ್ನು ಒತ್ತಿ ಹೇಳಿದರು.

ಶ್ರೀಮಂತ ಪರಂಪರೆಯ ಸಂರಕ್ಷಿಸುವ ಮತ್ತು ಸ್ಥಳೀಯ ಸಮುದಾಯಗಳನ್ನು ಬೆಂಬಲಿಸುವ ಅಗತ್ಯತೆಯ ಕುರಿತು ಸಹ ಅವರು ಮಾತನಾಡಿದರು.

ಮಹಾರಾಷ್ಟ್ರದಲ್ಲಿ ಮಹಿಳಾ ಉದ್ಯಮಿಗಳನ್ನು ಬೆಂಬಲಿಸಲು AAI ನೀತಿಗಾಗಿ (ಲಿಂಗ-ಅಂತರ್ಗತ ಪ್ರವಾಸೋದ್ಯಮ ಯೋಜನೆ) ಅಪ್ಲಿಕೇಶನ್ ಅನ್ನು ಸಹ ಪ್ರಾರಂಭಿಸಲಾಗಿದೆ.

ಈ ಉಪಕ್ರಮವು ಉದ್ಯಮಶೀಲತೆ ಮತ್ತು ಆರ್ಥಿಕ ಸಬಲೀಕರಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ, ಪ್ರತಿ ಜಿಲ್ಲೆಯಲ್ಲಿಯೂ ಹತ್ತು ಮಹಿಳಾ ಒಡೆತನದ ವ್ಯವಹಾರಗಳನ್ನು ನೋಂದಾಯಿಸುವ ಗುರಿಯನ್ನು ಹೊಂದಿದೆ.

ಪ್ರಸ್ತಾವಿತ ಪ್ರವಾಸೋದ್ಯಮ ನೀತಿಯ ಭಾಗವಾಗಿ, ಅನ್ವೇಸದ ಗುಪ್ತ ತಾಣಗಳನ್ನು ಮರುಬ್ರಾಂಡ್ ಮಾಡುವುದು, ಸ್ಥಳೀಯ ಹಬ್ಬಗಳನ್ನು ಉತ್ತೇಜಿಸುವುದು, ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸುವ ಮತ್ತು ವೆಚ್ಚವನ್ನು ಹೆಚ್ಚಿಸುವ ನೀತಿಗಳನ್ನು ಸುವ್ಯವಸ್ಥಿತಗೊಳಿಸುವಂತಹ ಕಾರ್ಯತಂತ್ರದ ಉಪಕ್ರಮಗಳನ್ನು ಸಹ ಅವರು ಈ ಸಂದರ್ಭದಲ್ಲಿ ವಿವರಿಸಿದರು.

ಇದು ಮಾತ್ರವಲ್ಲದೆ, ಮಹಾರಾಷ್ಟ್ರ ಪ್ರವಾಸೋದ್ಯಮ ಮಂಡಳಿಯು ಉದ್ದೇಶಿತ ಉಪಕ್ರಮಗಳು ಮತ್ತು ಪ್ರಚಾರ ಅಭಿಯಾನಗಳ ಮೂಲಕ ಉದ್ಯಮಿಗಳು ಮತ್ತು ಹೂಡಿಕೆದಾರರನ್ನು ಆಕರ್ಷಿಸುವ ಗುರಿಯನ್ನು ಸಹ ಹೊಂದಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button