Moreವಿಂಗಡಿಸದ

ಪೀಕ್ ಅವರ್ ಗಳಲ್ಲಿ 3 ನಿಮಿಷಕ್ಕೊಮ್ಮೆ ಮೆಟ್ರೋ ಸಂಚಾರ..ಯಾವಾಗ ..?ಯಾವ ಮಾರ್ಗದಲ್ಲಿ ಗೊತ್ತಾ ಈ ಲೇಖನ ಓದಿ

ಬೆಂಗಳೂರು(Bengaluru )ಜನರ ಸಂಚಾರ ಜೀವನಾಡಿ ಮೆಟ್ರೋ(Metro)ತನ್ನ ಪ್ರಯಾಣಿಕರಿಗೆ ಶುಭ ಸುದ್ದಿ ನೀಡಿದೆ.

ಫೆಬ್ರವರಿ 26 ರಿಂದ ಹೆಚ್ಚು ದಟ್ಟಣೆ ಇರುವ ಸಂದರ್ಭದಲ್ಲಿ ಪ್ರತಿ ಮೂರು ನಿಮಿಷಕ್ಕೆ ಮೆಟ್ರೋ ಸೇವೆ ನೀಡುವುದಕ್ಕೆ ಮುಂದಾಗಿದೆ.

ನಮ್ಮ ಮೆಟ್ರೋ ಮಹಾನಗರಿಯಲ್ಲಿ ಬದುಕುತ್ತಿರುವ ಅದೆಷ್ಟೋ ಮಂದಿಯ ಮಂದಿಗೆ ನಿತ್ಯದ ಸಂಚಾರಿ ಸಾರಥಿ.

ಆದರೆ ಬೆಳಿಗ್ಗೆ ,ಸಂಜೆ ಜೊತೆಗೆ ಕೆಲವೊಂದು ಪೀಕ್ ಅವರ್ ಗಳಲ್ಲಿ ವಿಪರೀತ ಜನ ದಟ್ಟಣೆಯಿಂದ ಕೆಲವರು ಕಿರಿ ಕಿರಿ ಅನುಭವಿಸುತ್ತಾರೆ.

Namma Metro

ಇನ್ನು ಕೆಲವೊಮ್ಮೆ ಮೆಟ್ರೋಗಾಗಿ ನಿಮಿಷ ಕಾಯುವ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಆದರೆ ಇನ್ಮುಂದೆ ಅಂತಹ ಪರಿಸ್ತಿಯನ್ನು ನೀವು ಎದುರಿಸಬೇಕು ಅಂತಿಲ್ಲ.

ಹೆಚ್ಚು ಜನ ದಟ್ಟನೆ ಇರುವ ಪೀಕ್ ಆವರ್ಗಳಲ್ಲಿ(Peack Hour) ಪ್ರತಿ ಮೂರು ನಿಮಿಷಕ್ಕೆ ಮೆಟ್ರೋ ಸೇವೆ ಒದಗಿಸಲಾಗುತ್ತಿದೆ.

ಸೋಮವಾರದಿಂದ ಬೆಳಿಗ್ಗೆ 8.45 ರಿಂದ 10.20ರವರೆಗೆ ಮೆಜೆಸ್ಟಿಕ್(Majestic) ಮತ್ತು ಗರುಡಾಚಾರ್ ಪಾಳ್ಯ ಮೆಟ್ರೋ(Garudachar Palya)ನಿಲ್ದಾಣಗಳ ನಡುವೆ ಹೆಚ್ಚುವರಿ ಮೆಟ್ರೋ ಸೇವೆಯನ್ನು ಆರಂಭಿಸಲಿದೆ.

ಫೆ.26 ರಿಂದ ನೇರಳೆ ಮಾರ್ಗದಲ್ಲಿ(Purple Line) ಮಾತ್ರ ಜನದಟ್ಟಣೆ ಸಮಯದಲ್ಲಿ ಪ್ರತಿ ಮೂರು ನಿಮಿಷಕ್ಕೊಂದು ರೈಲು ಸಂಚಾರ ಇರಲಿದೆ.

BMRCL

ಫೆ. 26 ರಿಂದ ಬೆಳಗಿನ ದಟ್ಟಣೆಯ ಸಮಯದಲ್ಲಿ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮತ್ತು ಗರುಡಾಚಾರ್ಪಾಳ್ಯ ಮೆಟ್ರೋ ನಿಲ್ದಾಣಗಳ ನಡುವೆ ಹೆಚ್ಚುವರಿ ಮೆಟ್ರೋ ರೈಲು ಸೇವೆಗಳನ್ನು ಒದಗಿಸಲಾಗುತ್ತಿದೆ.

ಇದು ಟ್ರಿನಿಟಿ(Trinity), ಇಂದಿರಾನಗರ(Indiranagar), ಬೆನ್ನಿಗಾನಹಳ್ಳಿ(Benniganahalli) ಮತ್ತು ಕೆಆರ್ ಪುರ (K.R.Pura)ಮೆಟ್ರೋ ನಿಲ್ದಾಣಗಳ ಕಡೆಗೆ ಹೋಗುವ ಪ್ರಯಾಣಿಕರ ಅವಶ್ಯಕತೆಗಳನ್ನು ಪೂರೈಸಲು ಸಹಾಯವಾಗಲಿದೆ.

ಬೆಳಗ್ಗೆ 8.45 ರಿಂದ 10.20 ಗಂಟೆಯವರೆಗೆ, ಪ್ರತಿ ಮೂರು ನಿಮಿಷಕ್ಕೆ ಮೆಟ್ರೋ ರೈಲು ಸೇವೆಗಳು ವಾರದ ಎಲ್ಲಾ ದಿನಗಳಲ್ಲಿ ಲಭ್ಯವಿರುತ್ತವೆ.

ಆದರೆ ದಟ್ಟಣೆ ಇಲ್ಲದೇ ಇರುವ ದಿನವಾದ ಶನಿವಾರ(Saturday), ಭಾನುವಾರ(Sunday )ಮತ್ತು ಸಾಮಾನ್ಯ ರಜಾದಿನಗಳನ್ನು ಹೊರತುಪಡಿಸಲಾಗಿದೆ.

Bangalore

ಇದಲ್ಲದೆ, ಭಾರತೀಯ ರೈಲ್ವೆ / ಇಂಟರ್‌ಸಿಟಿ ಬಸ್‌ಗಳ ಮೂಲಕ ಬೆಂಗಳೂರು ನಗರಕ್ಕೆ ಮುಂಜಾನೆ ಆಗಮಿಸುವ ಪ್ರಯಾಣಿಕರ ಅನುಕೂಲಕ್ಕಾಗಿ, ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ-ಮೆಜೆಸ್ಟಿಕ್‌ನಿಂದ ಎಲ್ಲಾ ದಿಕ್ಕುಗಳಿಗೆ ಮೊದಲ ರೈಲು ಭಾನುವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳಲ್ಲಿ ಬೆಳಗ್ಗೆ 5.00 ಗಂಟೆಗೆ ಪ್ರಾರಂಭವಾಗಲಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button