Moreಮ್ಯಾಜಿಕ್ ತಾಣಗಳುವಂಡರ್ ಬಾಕ್ಸ್ವಿಂಗಡಿಸದ

ಐಫೆಲ್ ಟವರ್‌ಗಿಂತ ಎತ್ತರವಿದೆ ಜಮ್ಮು-ಕಾಶ್ಮೀರದಲ್ಲಿ ನಿರ್ಮಾಣಗೊಂಡ ಚಿನಾಬ್ ರೈಲ್ವೇ ಸೇತುವೆ:

ಫೆಬ್ರವರಿ 20, 2024 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶ್ವದ ಅತಿ ಎತ್ತರದ ಏಕೈಕ ಕಮಾನು ರೈಲ್ವೆ ಸೇತುವೆಯಾದ ಚೆನಾಬ್ ಸೇತುವೆಯನ್ನು (Chenab Bridge) ಪ್ರಧಾನಿ (Prime Minister) ನರೇಂದ್ರ ಮೋದಿಯವರು (Narendra Modi) ಉದ್ಘಾಟಿಸಿದರು.

ಈ ಚೆನಾಬ್ ಸೇತುವೆ ಪ್ಯಾರಿಸ್ ನ ಐಫೆಲ್ ಟವರ್‌ಗಿಂತ (Eiffel Tower in Paris) ಎತ್ತರವಿದೆ. ಇತ್ತೀಚಿನ ದಿನಗಳಲ್ಲಿ ಭಾರತದ ಅತ್ಯಂತ ಮಹತ್ವದ ಎಂಜಿನಿಯರಿಂಗ್ ಪ್ರಯತ್ನಗಳಲ್ಲಿ ಒಂದಾಗಿದೆ ಎಂದು ಪ್ರಶಂಸಿಸಲ್ಪಡುತ್ತಿದೆ.

ಈ ಸೇತುವೆಗೆ 2003 ರಲ್ಲಿ ಅನುಮೋದನೆ ನೀಡಲಾಯಿತು. 2008 ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಆದರೆ ಈ ಸೇತುವೆಯ ನಿರ್ಮಾಣ ಹಂತದಲ್ಲಿ ಅದರ ಸುರಕ್ಷತೆ ಮತ್ತು ಸ್ಥಿರತೆಯ ಕುರಿತು ಕಳವಳ ವ್ಯಕ್ತಪಡಿಸಲಾಯಿತು.

ಈಗ ಇವೆಲ್ಲವನ್ನೂ ಮೀರಿ, ವಿಶ್ವದ ಅತಿ ಎತ್ತರದ ಏಕ ಕಮಾನು ಸೇತುವೆ (World’s Highest Arch Railway Bridge) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತದ ಎಂಜಿನಿಯರಿಂಗ್ ಗಳ ಪ್ರತಿಭೆಗೆ ಸಾಕ್ಷಿಯಾಗಿ ನಿಂತಿದೆ.

ರಿಯಾಸಿ ಜಿಲ್ಲೆಯ ಬಕ್ಕಲ್ ಮತ್ತು ಕೌರಿ ನಡುವೆ ಇರುವ ಈ ಸೇತುವೆಯು ಕತ್ರಾದಿಂದ ಬನಿಹಾಲ್‌ಗೆ ಸಂಪರ್ಕವನ್ನು ಒದಗಿಸುತ್ತದೆ. ನದಿ ಮಟ್ಟದಿಂದ 1,178 ಅಡಿ ಎತ್ತರದಲ್ಲಿರುವ ಈ ಸೇತುವೆಯು ಪ್ಯಾರಿಸ್‌ನಲ್ಲಿರುವ ಐಫೆಲ್ ಟವರ್ ಅನ್ನು 35 ಮೀಟರ್‌ಗಳಷ್ಟು ಮೀರಿಸುತ್ತದೆ.

ರೂ 35,000 ಕೋಟಿಯ ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ರೈಲ್ವೇ ಲಿಂಕ್ (USBRL) ಯೋಜನೆಯ ಭಾಗವಾಗಿ , ಚೆನಾಬ್ ಸೇತುವೆಯು ಕೇವಲ ರೂ 14,000 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿತು.

ಇದು ಕಾಶ್ಮೀರ ಮತ್ತು ಇತರ ರಾಜ್ಯಗಳ ನಡುವೆ ಸಂಪರ್ಕವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಏಕ್ ಭಾರತ್ ಶ್ರೇಷ್ಠ ಭಾರತ್ ಉಪಕ್ರಮದ ಪ್ರಮುಖ ಅಂಶವಾಗಿದೆ.

ಸೇತುವೆಯ ನಿರ್ಮಾಣಕ್ಕೂ ಮೊದಲು ಹೆಚ್ಚಿನ-ವೇಗದ ಗಾಳಿ, ತೀವ್ರ ತಾಪಮಾನ, ಭೂಕಂಪದ ಸ್ಥಿತಿಸ್ಥಾಪಕತ್ವ ಮತ್ತು ಜಲವಿಜ್ಞಾನದ ಪರಿಣಾಮಗಳಲ್ಲಿನ ಸ್ಥಿರತೆಯ ಪರೀಕ್ಷೆಗಳನ್ನು ನಡೆಸಲಾಗಿದೆ.

ಈ ಸೇತುವೆಯು 120 ವರ್ಷಗಳ ನಿರೀಕ್ಷಿತ ಜೀವಿತಾವಧಿಯನ್ನು ಹೊಂದಿದ್ದು, ಇದು ಗಂಟೆಗೆ 260 ಕಿಮೀ ಗಾಳಿಯನ್ನು ತಡೆದುಕೊಳ್ಳುವ ಶಕ್ತಿಯನ್ನು ಹೊಂದಿದೆ. ಸೇತುವೆಯ ನಿರ್ಮಾಣಕ್ಕೆ ಮೂರು ವರ್ಷಗಳು ಬೇಕಾಯಿತು.

ಈಗ ಈ ಸೇತುವೆ ಅಲ್ಲಿನ ನಾಗರಿಕರು ಮತ್ತು ಸಶಸ್ತ್ರ ಪಡೆಗಳಿಗೆ ಪ್ರಮುಖ ಮೂಲಸೌಕರ್ಯವನ್ನು ಒದಗಿಸುತ್ತದೆ.

ಜಮ್ಮು ಕಾಶ್ಮೀರದ (Jammu and Kashmir) ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಿಂದ ನಿರ್ಮಾಣಗೊಂಡ ಈ ರೈಲು ಸೇತುವೆಯು ಒಮ್ಮೆ ಸಂಪೂರ್ಣವಾಗಿ ಕಾರ್ಯಾರಂಭಿಸಿದರೆ, ವಂದೇ ಭಾರತ್ ಮೆಟ್ರೋ ರೈಲು ಸೇರಿದಂತೆ ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ ಯೋಜನೆಯು ಈ ಪ್ರದೇಶಕ್ಕೆ ಸಂಪರ್ಕ ಮತ್ತು ಆರ್ಥಿಕ ಅವಕಾಶಗಳನ್ನು ಮತ್ತಷ್ಟು ಹೆಚ್ಚಿಸಲಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button