ವಿಂಗಡಿಸದ

ವಿಮಾನವಿಲ್ಲದೇ ನೀವು ಜಗತ್ತು ಸುತ್ತಬಹುದು. ಹೇಗೆ ಗೊತ್ತಾ..? ಈ ಸ್ಟೋರಿ ಓದಿ.

ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಪ್ರಯಾಣಿಸಬೇಕು ಎಂದಾಗ ನಮಗೆ ತಟ್ಟನೆ ಯಾವ ಪ್ರಯಾಣ ನೆನಪಾಗುತ್ತೆ ನೀವೇ ಹೇಳಿ..? ಹೌದು, ನೀವೆಲ್ಲ ಮನಸಿನಲ್ಲಿ ಊಹಿಸಿಕೊಳ್ಳುತ್ತಿರೋ ವಿಮಾನ ಪ್ರಯಾಣವೇ ನಮಗೆ ಮೊದಲು ನೆನಪಿಗೆ ಬರೋದು. ಆದರೆ ವಿಮಾನವಿಲ್ಲದೆ ನೀವು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಪ್ರಯಾಣವನ್ನು ಬೆಳೆಸಬಹುದು. ಅಂತಹದ್ದೊಂದು ಸಾಧನೆ ಮಾಡಿ ಮೂಲಕ ಜಗತ್ತಿನ ಗಮನ ಸೆಳೆದಿದ್ದಾರೆ ಡ್ಯಾನಿಶ್ ಪ್ರವಾಸಿಗ.

ಇವರ ಹೆಸರು ಟೋರ್ಬ್‌ ಜಾರ್ನ್ ಪೆಡರ್ಸ್.  44 ವರ್ಷದ ಈ ವ್ಯಕ್ತಿ  ವಿಮಾನಯಾನವಿಲ್ಲದೆ ವಿಶ್ವದ ಪ್ರತಿಯೊಂದು ದೇಶಕ್ಕೂ ಭೇಟಿ ನೀಡಿದ ಮೊದಲ ವ್ಯಕ್ತಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.  ಇಂಥದ್ದೊಂದು ಸಾಧನೆ ಮಾಡಲು ಅವರು ತೆಗೆದುಕೊಂಡಿದ್ದು ಸುಮಾರು 10 ವರ್ಷ.  ಈ ವರ್ಷದ ಜುಲೈನಲ್ಲಿ ಅವರು ಈ ಸಾಧನೆ ಪೂರ್ಣ ಮಾಡಿದ್ದಾರೆ. 

first person to visit every country in the world — without flying
Once Upon a Saga

 ಟೋರ್ಬ್‌ ಜಾರ್ನ್ ಪೆಡರ್ಸ್  ಅವರು ನಿತ್ಯ ಸರಾಸರಿ ಸುಮಾರು  20 ಡಾಲರ್ ಹಣವನ್ನು ತಮ್ಮ ಪ್ರಯಾಣಕ್ಕೆ ಖರ್ಚು ಮಾಡುತ್ತಿದ್ದರಂತೆ . ಸಿಂಗಾಪುರದಂತಹ ಕೆಲವು ದೇಶಗಳಲ್ಲಿ, ಆ ಪ್ರಮಾಣ ಜಾಸ್ತಿ ಆಗಿದ್ರೆ   ಬೊಲಿವಿಯಾದಂತಹ ಇತರ ದೇಶಗಳಲ್ಲಿ ಆ ಹಣ ಸಾಕಷ್ಟು ಹೆಚ್ಚು  ಎಂದು ಸಂದರ್ಶನದವೊಂದರಲ್ಲಿ ಹೇಳಿಕೊಂಡಿದ್ದಾರೆ. 

ಪೆಡೆರ್ಸನ್‌ರ ದಶಕದ ಅವಧಿಯ ಸಾಹಸಕ್ಕೆ ಭೂಶಾಖದ ವಿದ್ಯುತ್ ಶಕ್ತಿ ಉತ್ಪಾದನಾ ಸಂಸ್ಥೆಯಾದ ರಾಸ್ ಎನರ್ಜಿಯಿಂದ ಧನಸಹಾಯ ನೀಡಲಾಗಿತ್ತು. ಈ ಸಂಸ್ಥೆ ಪ್ರತಿ ತಿಂಗಳು ಸುಮಾರು 600 ಡಾಲರ್ ಹಣವನ್ನು  ಕಳುಹಿಸುತ್ತಂತೆ.

first person to visit every country in the world — without flying
Once Upon a Saga

203 ದೇಶಗಳಿಗೆ ಭೇಟಿ ನೀಡಲು, ಪೆಡೆರ್ಸನ್ ಅವರು ಸುಮಾರು 382,000 ಕಿಲೋಮೀಟರ್ ಪ್ರಯಾಣಿಸಿದ್ದಾರೆ . 20 ವಿವಿಧ ಸಾರಿಗೆ ವಿಧಾನಗಳನ್ನು  ಬಳಸಿದ್ದಾರೆ. ಹಾಗಿದ್ರೆ ಅವರು ಸಾರಿಗೆಯಲ್ಲಿ ಯಾವುದೆಲ್ಲ ವಾಹನಗಳನ್ನು ಬಳಸಿದ್ದರು ಎನ್ನುವುದನ್ನು ನೋಡುವುದಾದರೆ,

First person to visit every country in the world — without flying
Once Upon a Saga

 351 ಬಸ್‌ಗಳು, 67 ಮಿನಿಬಸ್‌ಗಳು, 219 ಟ್ಯಾಕ್ಸಿಗಳು, 46 ಮೋಟಾರ್‌ಸೈಕಲ್ ಟ್ಯಾಕ್ಸಿಗಳು

87 ಹಂಚಿಕೆಯ 8 ಟ್ಯಾಕ್ಸಿಗಳು, 4 ಹಂಚಿಕೆಯ 8 ಟ್ಯಾಕ್ಸಿಗಳು, ವೀಲ್-ಡ್ರೈವ್ ವಾಹನಗಳು, 9 ಟ್ರಕ್‌ಗಳು,158 ರೈಲುಗಳು,19 ಟ್ರಾಮ್‌ಗಳು, 128 ಮೆಟ್ರೋಗಳು ಅಥವಾ ಸುರಂಗಮಾರ್ಗಗಳು, 43 ರಿಕ್ಷಾಗಳು ಅಥವಾ ಟುಕ್‌ಟುಕ್‌ಗಳು, 40 ಕಂಟೈನರ್ ಹಡಗುಗಳು, 33 ದೋಣಿಗಳು, 32 ದೋಣಿಗಳು, 3 ಹಾಯಿ ದೋಣಿಗಳು, 2 ಕ್ರೂಸ್ ಹಡಗುಗಳು, 1 ಪೋಲೀಸ್ ಗಾಡಿಗಳು , ಮತ್ತು 1 ಉನ್ನತ-ಕಾರ್ಯಕ್ಷಮತೆಯ ವಿಹಾರ ನೌಕೆಯನ್ನು ಬಳಸಿ ತಮ್ಮ ಕನಸನ್ನು ಸಾಕಾರಗೊಳಿಸಿಕೊಂಡಿದ್ದಾರೆ.

ಪ್ರವಾಸದ ಬಗ್ಗೆ ಇಷ್ಟೊಂದು ಒಲವು ಇರುವ ಇಂತಹ ಪ್ರವಾಸಿಗರ ಪ್ರಯಾಣದ ಕಥೆಗಳೇ ಒಮ್ಮೊಮ್ಮೆ ಜಗತ್ತು ಸುತ್ತಬೇಕು ಅಂತ ಬಯಸೋ ಪ್ರವಾಸಿಗರಿಗೆ ಸ್ಪೂರ್ತಿ ಆಗುವುದು. ದೇಶ ಸುತ್ತು ಕೋಶ ಓದು ಅನ್ನೋ ಮಾತಿದೆ.ಅದು ಇಂತಹವರನ್ನು ನೋಡಿ ಹೇಳಿದ್ದು ಅನಿಸುತ್ತೆ.

first person to visit every country in the world — without flying
Once Upon a Saga

ಜಗತ್ತು ಸುತ್ತಿ ಆ ದೇಶಗಳ ಸುಂದರ ತಾಣಗಳ ಅನುಭವ ಪಡೆದುಕೊಂಡು.. ಅದರಲ್ಲಿಯೂ ವಿಮಾನಯಾನ ಇಲ್ಲದೆ ಕೇವಲ ಭೂ ಸಾರಿಗೆ, ಜಲ ಸಾರಿಗೆ ಮೂಲಕ ಜಗತ್ತಿನ 200ಕ್ಕೂ ಹೆಚ್ಚು ದೇಶಗಳನ್ನು  ಸುತ್ತಿದ ಪೆಡೆರ್ಸನ್ ನಿಜಕ್ಕೂ ಪ್ರವಾಸಿಗರಿಗೆ ಮಾದರಿ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button