ವಿಂಗಡಿಸದ

ಅ.22.2023; ನವರಾತ್ರಿಯ ಎಂಟನೇ ದಿನ “ಮಹಾಗೌರಿ”ಯ ಆರಾಧನೆ

ಆಶ್ವಯುಜ ಮಾಸದ ಶುಕ್ಲಪಕ್ಷದ ಅಷ್ಟಮಿಯಂದು ದುರ್ಗೆಯ ಮತ್ತೊಂದು ರೂಪವಾದ “ಮಹಾಗೌರಿ”ಯನ್ನು ಆರಾಧಿಸಲಾಗುತ್ತದೆ. ಈ ದಿನದ ವೈಶಿಷ್ಟ್ಯತೆ ಮತ್ತು ಮೈಸೂರು ದಸರಾ 2023 ಕಾರ್ಯಕ್ರಮಗಳ ಮಾಹಿತಿ ಇಲ್ಲಿದೆ.

ಉಜ್ವಲಾ. ವಿ.ಯು.

ಮಹಾಗೌರಿ ಆರಾಧನೆಯ ಮಹತ್ವ:

ನವರಾತ್ರಿಯ ಎಂಟನೆಯ ದಿನ “ಮಹಾಗೌರಿ” ಯನ್ನು (Navaratri 8th Day Mahagouri Pooja) ಪೂಜಿಸಲಾಗುತ್ತದೆ. ಈಕೆ ಶಾಂತಿ ಮತ್ತು ಬುದ್ಧಿವಂತಿಕೆಯ ಸಂಕೇತ.

Navaratri 8th Day: MAHAGOURI

ತಾಯಿ ಮಹಾಗೌರಿಗೆ ನಾಲ್ಕು ಕೈಗಳು. ಒಂದು ಕೈಯಲ್ಲಿ ಢಮರು ಹಾಗೂ ಇನ್ನೊಂದು ಕೈಯಲ್ಲಿ ತ್ರಿಶೂಲ ಇರುತ್ತದೆ. ಶ್ವೇತ ವಸ್ತ್ರಧಾರಿಣಿಯಾಗಿರುವ ಗೌರಿ ದೇವಿಯು ಶಾಂತ ಸ್ವರೂಪಳು.

ಕಾಳರಾತ್ರಿಯು ಗಂಗಾ ನದಿಯಲ್ಲಿ ಮಿಂದೆದ್ದಾಗ ಮಹಾಗೌರಿಯ ರೂಪವನ್ನು ತಾಳಿದಳೆಂದು ನಂಬಲಾಗಿದೆ. ಈ ದಿನಕ್ಕೆ ಸಂಬಂಧಿಸಿದ ಬಣ್ಣವು ಗುಲಾಬಿ ಬಣ್ಣವಾಗಿದೆ.

ಭಾರತದ ಕೆಲವು ಭಾಗಗಳಲ್ಲಿ ಇಂದು “ಮಹಾ ಅಷ್ಟಮಿ (ದುರ್ಗಾಷ್ಟಮಿ)” ಯನ್ನು ಆಚರಿಸಲಾಗುತ್ತದೆ. ಈ ದಿನ, ಒಂಬತ್ತು ಸಣ್ಣ ಮಡಿಕೆಗಳನ್ನು ಮನೆ ಅಥವಾ ಪೂಜಾ ಸ್ಥಳಗಳಲ್ಲಿ ಸ್ಥಾಪಿಸಲಾಗುತ್ತದೆ ಮತ್ತು ಅವುಗಳಲ್ಲಿ ದುರ್ಗೆಯ ಒಂಬತ್ತು ಶಕ್ತಿಗಳನ್ನು ಆವಾಹನೆ ಮಾಡಲಾಗುತ್ತದೆ. ಇಂದು ಕುಮಾರಿ ಪೂಜೆ, ಚಂಡಿಕಾ ಯಾಗ, ಇತ್ಯಾದಿ ಕಾರ್ಯಕ್ರಮಗಳು ನಡೆಯುತ್ತವೆ. ಚಾಮುಂಡಿಯು ಮಹಿಷಾಸುರನನ್ನು ಸಂಹರಿಸಲು “ಮಹಿಷಾಸುರಮರ್ದಿನಿ” ರೂಪ ತಾಳಿದ ದಿನ ಎಂದು ನಂಬಲಾಗಿದೆ.

ಮಹಾಗೌರಿಯು ರಾಹುವಿನ ಅಧಿಪತಿ. ರಾಹುವಿನ ಪೀಡೆಯಿಂದ ಆಗುವ ಅಹಿತಕರ ಘಟನೆಗಳು, ಕಾಟಗಳನ್ನು ತಪ್ಪಿಸಿ ತನ್ನ ಭಕ್ತರನ್ನು ಆಕೆ ಆಶೀರ್ವದಿಸುತ್ತಾಳೆ. ಗೌರಿಯ ಆಶೀರ್ವಾದದಿಂದ ಮಾನವನು ಸಂಪತ್ತು, ಆಯುಷ್ಯದ ಜೊತೆಗೆ ಆಧ್ಯಾತ್ಮದ ಲಾಭಗಳನ್ನು ಪಡೆಯುತ್ತಾನೆ.

ಇಂದು ಮೈಸೂರಿನಲ್ಲಿ ದಸರಾ ಪ್ರಯುಕ್ತ ನಡೆಯುವ ಕಾರ್ಯಕ್ರಮಗಳು:

ವಿಶ್ವವಿಖ್ಯಾತ ಮೈಸೂರು ದಸರಾದ 8ನೇ ದಿನವಾದ ಇಂದು ಬಹುತೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

Mysore Dasara 2023

ಇಂದು ಬೆಳಗ್ಗೆ 7 ಗಂಟೆಗೆ ಚಾಮುಂಡಿ ಬೆಟ್ಟದ ದೇವಸ್ಥಾನ ಆವರಣದಲ್ಲಿ ಯೋಗ ಚರಣ ಮತ್ತು ದುರ್ಗಾ ನಮಸ್ಕಾರ ನಡೆಯಿತು. ಬೆಳಗ್ಗೆ 10 ಗಂಟೆಗೆ ಮೈಸೂರಿನ ಹಾಕಿ ಮೈದಾನದಲ್ಲಿ ಶ್ವಾನ ಪ್ರದರ್ಶನ ಸ್ಪರ್ಧೆ ನಡೆಯಿತು.

ಸಂಜೆ 4:00 ಗಂಟೆಗೆ ಕರ್ನಾಟಕ ಕಲಾ ಮಂದಿರದಲ್ಲಿ ನಡೆಯುತ್ತಿದ್ದ ಲಲಿತ ಕಲೆ ಮತ್ತು ಕರಕುಶಲ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಲಿದೆ. ಮೈಸೂರು ನಗರದ ಜೆಕೆ ಮೈದಾನದಲ್ಲಿ ಶ್ವಾನ ಪ್ರದರ್ಶನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಲಿದೆ.

ಅರಮನೆಯ ವೇದಿಕೆಯಲ್ಲಿ ಸಂಜೆ 6 ಗಂಟೆಗೆ ನಿಸರ್ಗ ಮತ್ತು ವಿಸ್ಮಯ ಅವಳಿ ಸಹೋದರಿಯರ ತಂಡದಿಂದ ರಂಗಗೀತೆಗಳು. ಸಂಜೆ 7 ಗಂಟೆಗೆ ದಸರಾ ಉದ್ಘಾಟಕ ನಾದಬ್ರಹ್ಮ ಹಂಸಲೇಖ ಹಾಗೂ ಅವರ ತಂಡದಿಂದ “ಜಯಹೇ ನಾಲ್ವಡಿ – ಹಾಡು ಹಬ್ಬ” ಕಾರ್ಯಕ್ರಮ ನಡೆಯಲಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button