ವಿಂಗಡಿಸದ

ಅ.23.2023; ನವರಾತ್ರಿಯ ಒಂಭತ್ತನೆಯ ದಿನ “ಸಿದ್ಧಿದಾತ್ರಿ”ಯ ಆರಾಧನೆ

ಆಶ್ವಯುಜ ಮಾಸದ ಶುಕ್ಲಪಕ್ಷದ ನವಮಿಯಂದು ದುರ್ಗೆಯ ಮತ್ತೊಂದು ರೂಪವಾದ “ಸಿದ್ಧಿದಾತ್ರಿ”ಯನ್ನು ಆರಾಧಿಸಲಾಗುತ್ತದೆ. ಈ ದಿನದ ವೈಶಿಷ್ಟ್ಯತೆ ಮತ್ತು ಮೈಸೂರು ದಸರಾ 2023 ಕಾರ್ಯಕ್ರಮಗಳ ಮಾಹಿತಿ ಇಲ್ಲಿದೆ.

ಉಜ್ವಲಾ.ವಿ.ಯು.

ನವರಾತ್ರಿಯ ಒಂಭತ್ತನೇ ದಿನ “ಮಹಾ ನವಮಿ”. ಇದು ನವರಾತ್ರಿಯ ಕೊನೆಯ ದಿನ. ಈ ದಿನ ದುರ್ಗಾ ದೇವಿಯ ಅಂತಿಮ ರೂಪವಾದ “ಸಿದ್ದಿದಾತ್ರಿ“ಯನ್ನು ಪೂಜಿಸಲಾಗುತ್ತದೆ.

Navaratri 9th Day: Siddhidatri

ಅಣಿಮ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಮಹಿಮಾ , ಈಶಿತ್ವ, ವಶಿತ್ವ, ಸರ್ವಕಾಮಾವಸಾಯಿತಾ, ಸರ್ವಜ್ಞತ್ವ, ದೂರ ಶವಣ, ಪರಕಾಯ ಪ್ರವೇಶನ, ಪಾಕ್ ಸಿದ್ದಿ, ಕಲ್ಪವೃಕ್ಷತ್ವ, ಸೃಷ್ಠಿ, ಸಂಹಾರಕರಣಸಾಮರ್ಥ್ಯಾ, ಅಮರತ್ವ, ಸರ್ವನಾಯಕತ್ವ, ಭಾವನಾ, ಎಂಬ 18 ಸಿದ್ಧಿಗಳನ್ನು ಅನುಗ್ರಹಿಸುವವಳು ಮಾತೆ “ಸಿದ್ಧಿದಾತ್ರಿ”. ಈಕೆಯ ಪೂಜೆಯಿಂದ ಎಲ್ಲಾ ರೀತಿಯ ಸಿದ್ಧಿಗಳನ್ನು ಮನುಷ್ಯನು ಪಡೆಯಬಹುದಾಗಿದೆ.

ದೇವಿ ಮಹಾತ್ಮೆಯಲ್ಲಿ ಬರುವಂತೆ ಭಗವಾನ್ ಶಿವನು ಸಹ ಸಿದ್ದಿದಾತ್ರಿಯ ಪೂಜೆಯಿಂದಲೇ ಸರ್ವ ಸಿದ್ದಿಗಳನ್ನು ಪಡೆದನೆಂದು ಹೇಳಲಾಗಿದೆ.

ದೇವಿಯು ನಾಲ್ಕು ಭುಜಗಳನ್ನು ಹೊಂದಿದ್ದಾಳೆ. ನಾಲ್ಕು ಕೈಗಳಲ್ಲಿ ಶಂಖ, ಚಕ್ರ, ಗದೆ ಮತ್ತು ಕಮಲ ಪುಷ್ಪಗಳಿವೆ. ಸಿಂಹ ಈಕೆಯ ವಾಹನವಾಗಿದೆ. ಇವಳು ಕಮಲ ಪುಷ್ಪದ ಮೇಲೆ ವಿರಾಜಮಾನವಾಗಿ ಕುಳಿತಿರುತ್ತಾರೆ.

ನವರಾತ್ರಿಯ ಒಂಭತ್ತು ದಿನಗಳ ಉಪವಾಸ ವ್ರತವನ್ನು ಮಾಡಲು ಸಾಧ್ಯವಾಗದೇ ಇರುವವರು ಈ ಮಹಾನವಮಿಯಂದು ಉಪವಾಸ ವ್ರತ ಮಾಡುವುದರಿಂದ ಒಂಭತ್ತು ದಿನಗಳ ಉಪವಾಸ ವ್ರತದ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಾರೆ.

ಆಯುಧಪೂಜೆ:

ನವರಾತ್ರಿಯ ಒಂಬತ್ತನೇ ದಿನವಾದ ಮಹಾನವಮಿಯನ್ನು ಆಯುಧ ಪೂಜಾ ದಿನವಾಗಿ ಆಚರಿಸಲಾಗುತ್ತದೆ. ಜನರು ತಮ್ಮ ಮನೆಗಳಲ್ಲಿ ಉಪಯೋಗಿಸುವ ಉಪಕರಣಗಳನ್ನು “ಆಯುಧ”ಗಳೆಂದು ತಿಳಿದು ಅವುಗಳನ್ನು ಪೂಜಿಸುತ್ತಾರೆ.

Ayudha Pooja

ಮಹಾಭಾರತ ಕಾಲದಲ್ಲಿ, ಪಾಂಡವರು ಅಜ್ಞಾತವಾಸದ ಸಮಯದಲ್ಲಿ ವಿರಾಟರಾಯನ ಗೋವುಗಳನ್ನು ಕದ್ದ ಕೌರವರ ವಿರುದ್ಧ ಯುದ್ಧಕ್ಕಾಗಿ ಶಮಿ ವೃಕ್ಷದ ಮೇಲಿರಿಸಿದ್ದ ಆಯುಧಗಳನ್ನು ಉಪಯೋಗಿಸುತ್ತಾರೆ. ಯುದ್ಧಕ್ಕೆ ಮೊದಲು ಆಯುಧಗಳ ಪೂಜೆ ನೆರವೇರಿಸುತ್ತಾರೆ. ಅದೇ ಸಂಪ್ರದಾಯ ಮುಂದುವರೆದು ಈಗ ಮನೆಯ ದಿನ ಬಳಕೆಯ ಉಪಕರಣಗಳು, ವಾಹನಗಳು, ಹೊಲದಲ್ಲಿ ಬಳಸುವ ಉಪಕರಣಗಳು, ಇತ್ಯಾದಿಗಳನ್ನು ಜನರು ಈ ದಿನ ಪೂಜಿಸುತ್ತಾರೆ.

ಇಂದಿನ ಮೈಸೂರಿನ ದಸರಾ ಕಾರ್ಯಕ್ರಮಗಳು:

ಮೈಸೂರು ದಸರಾ (Mysore Dasara 2023) ಉತ್ಸವದ ಕಾರ್ಯಕ್ರಮಗಳು ಎಂಟು ದಿನಗಳ ಕಾಲ ಅದ್ದೂರಿಯಾಗಿ ನಡೆದಿದ್ದು, ಇಂದು (ಅ.23) ಕೊನೆಯ ಹಂತದ ಕಾರ್ಯಕ್ರಮಗಳು ನಡೆಯಲಿದೆ.

Air Show at Mysore Dasara 2023

ಹಲವು ವರ್ಷಗಳ ನಂತರ ದಸರಾ ಪ್ರಯುಕ್ತ ಇಂದು ಬನ್ನಿ ಮಂಟಪದಲ್ಲಿ 4 ಗಂಟೆಯಿಂದ 4:45ರವರೆಗೆ ಭಾರತೀಯ ವಾಯುಪಡೆ (IAF) ವತಿಯಿಂದ ಏರ್ ಶೋ (Air Show at Mysore Dasara) ನಡೆಯಿತು. ಏರ್ ಶೋ ನಿನ್ನೆ ಸಾರ್ವಜನಿಕರಿಗೆ ತೆರೆದಿತ್ತು. ಆದರೆ ಇಂದು ಪಾಸ್ ಹೊಂದಿರುವವರಿಗೆ ಮಾತ್ರ ಪ್ರವೇಶವಿತ್ತು. ಇಂದು ಸಂಜೆ ಪಂಜಿನ ಕವಾಯತು ತಾಲೀಮು ಕೂಡಾ ನಡೆಯಲಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತ ಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button