ವಿಂಗಡಿಸದ

ಜಂಬೂಸವಾರಿ ಮೆರವಣಿಗೆ 2023;ಏನೆಲ್ಲಾ ಇದೆ?

2023 ರ ಮೈಸೂರು ದಸರಾ ಉತ್ಸವ ಅಂತಿಮ ಘಟ್ಟವನ್ನು ತಲುಪಿದೆ. ದಸರಾದ ಪ್ರಮುಖ ಆಕರ್ಷಣೆಯಾದ “ಜಂಬೂ ಸವಾರಿ ಮೆರವಣಿಗೆ” (Mysore Jambu Savari 2023) ಗೆ ಮೈಸೂರಿನಲ್ಲಿ ಆರಂಭಗೊಂಡಿದೆ. ವಿಜಯ ದಶಮಿ ಮೆರವಣಿಗೆಯನ್ನು ವೀಕ್ಷಿಸಲು ಲಕ್ಷಾಂತರ ಮಂದಿ ಕಾತರದಿಂದ ಕಾಯುತ್ತಿದ್ದಾರೆ.

ನಿನ್ನೆ ಮೈಸೂರಿನ ಅರಮನೆಯ ಜೊತೆಗೆ, ನಗರದ ಪ್ರಮುಖ ದೇವಾಲಯಗಳಲ್ಲಿ ಆಯುಧ ಪೂಜೆ ನೆರವೇರಿತು. ಇಂದು ವಿಶ್ವ ವಿಖ್ಯಾತ ಜಂಬೂ ಸವಾರಿ ಮೆರವಣಿಗೆಗೆ ಮೈಸೂರು ಸಜ್ಜಾಗಿದೆ.

ಜಂಬೂ ಸವಾರಿ ಮೆರವಣಿಗೆ ಉದ್ಘಾಟನೆ:

Mysore Dasara Jambu savari 2023

ಮಧ್ಯಾಹ್ನ 1:46 ರಿಂದ 2:08 ರವರೆಗೆ ನಂದಿಧ್ವಜಕ್ಕೆ ಪೂಜೆ ನೆರವೇರಿತು. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜ ಪೂಜೆಯನ್ನು ನೆರವೇರಿಸಿದರು. ಇಂದು ಸಂಜೆ 4:40 ರಿಂದ 5 ರವರೆಗೆ ವಿಜಯದಶಮಿ ಮೆರವಣಿಗೆ ನಡೆಯಲಿದೆ. ಸಿಎಂ ಸಿದ್ದರಾಮಯ್ಯನವರು ವಿಜಯದಶಮಿ ಮೆರವಣಿಗೆಯನ್ನು ಈಗಾಗಲೇ ಪುಷ್ಪಾರ್ಚನೆ ಮೂಲಕ ಉದ್ಘಾಟಿಸಿದ್ದಾರೆ.

ಅರಮನೆ ಒಳಾವರಣದಲ್ಲಿ ಮೆರವಣಿಗೆಗೆ ಚಾಲನೆ ನೀಡುತ್ತಿದ್ದು, ಈ ಕಾರ್ಯಕ್ರಮದಲ್ಲಿ ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯ‌ರ್, ಡಿಸಿಎಂ ಡಿ.ಕೆ.ಶಿವಕುಮಾರ್,‌ ಸಚಿವರಾದ ಡಾ.ಎಚ್‌.ಸಿ.ಮಹದೇವಪ್ಪ, ಕೆ.ವೆಂಕಟೇಶ್‌, ಶಿವರಾಜ್ ತಂಗಡಗಿ, ಮಹಾಪೌರ ಶಿವಕುಮಾರ್, ಶಾಸಕರುಗಳು ಸೇರಿ ಹಲವರ ಉಪಸ್ಥಿತಿ ಇರಲಿದ್ದಾರೆ.

ಈ ಬಾರಿಯೂ ಅಂಬಾರಿ ಹೊರಲಿದ್ದಾನೆ “ಅಭಿಮನ್ಯು” :

Abhimanyu to carry Ambari

ವಿಜಯದಶಮಿ ದಿನ ನಡೆಯಲಿರುವ ಮೆರವಣಿಗೆಗೆ ಗಜಪಡೆ ಸಂಪೂರ್ಣ ಸಿದ್ಧವಾಗಿದ್ದು, ನಾಲ್ಕನೇ ಬಾರಿ ಅಭಿಮನ್ಯು ಅಂಬಾರಿಯನ್ನು ಹೊತ್ತಿದ್ದಾನೆ. ಭೀಮ, ಧನಂಜಯ ಪಟ್ಟದ ಆನೆಯಾಗಿ ಅರಮನೆ ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿವೆ.ಜಂಬೂ ಸವಾರಿ ಮೆರವಣಿಗೆಯ ಚಲಿಸುವ ಮಾರ್ಗ: ಜಂಬೂ ಸವಾರಿ ಮೆರವಣಿಗೆಯು ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ಸಾಗಲಿದ್ದು, ಜಂಬೂಸವಾರಿ ಭದ್ರತೆಗೆ 6 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.

ಎಲ್ಲರನ್ನು ಆಕರ್ಷಿಸುತ್ತಿವೆ “47 ಸ್ತಬ್ಧಚಿತ್ರಗಳು” :

Mysore Jambu Savari 2023 Tablo Procession

2023 ರ ಜಂಬೂ ಸವಾರಿ ಮೆರವಣಿಗೆಯಲ್ಲಿ 47 ಸ್ತಬ್ಧಚಿತ್ರಗಳು ಭಾಗವಹಿಸಿದ್ದು, ಚಂದ್ರಯಾನ ಉಡಾವಣೆಯ ಸ್ತಬ್ಧಚಿತ್ರ ಎಲ್ಲರ ಗಮನ ಸೆಳೆಯುತ್ತಿದೆ. ಅದನ್ನು ಹೊರತು ಪಡಿಸಿ, 95 ಕಲಾತಂಡಗಳು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿದೆ. ಅಶ್ವಾರೋಹಿ ತಂಡ, ಪೋಲೀಸರ ತಂಡ, NCC, ಸ್ಕೌಟ್ ಅಂಡ್ ಗೈಡ್ಸ್ ತಂಡಗಳೂ ಮೆರವಣಿಗೆಯಲ್ಲಿ ಭಾಗವಹಿಸಿವೆ. ಮೈಸೂರು ಜಿಲ್ಲಾ ಪಂಚಾಯಿತಿಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ ಕೊಡಗೆಗಳನ್ನು ಬಿಂಬಿಸುವ ಸ್ತಬ್ಧಚಿತ್ರ ಸಿದ್ಧವಾಗಿದೆ. ವಿಜಯನಗರ ವಿಠಲ ದೇವಾಲಯ ಶಿಲ್ಪಕಲೆ ಬಿಂಬಿಸುವ ಸ್ತಬ್ಧಚಿತ್ರದೊಂದಿಗೆ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳ, ಸುಪ್ರಸಿದ್ಧ ವ್ಯಕ್ತಿಗಳನ್ನು ಪರಿಚಯಿಸುವ ಹಲವು ಸ್ತಬ್ಧಚಿತ್ರಗಳನ್ನು ಒಳಗೊಂಡಿದೆ.

ಪಂಜಿನ ಕವಾಯತು:

ರಾತ್ರಿ 7.30ಕ್ಕೆ ಪಂಜಿನ ಕವಾಯತು ಬನ್ನಿಮಂಟಪದ ಮೈದಾನದಲ್ಲಿ ನಡೆಯಲಿದೆ. ಇದರಲ್ಲಿಯೂ ಗಣ್ಯರೆಲ್ಲ ಭಾಗವಹಿಸಲಿದ್ದಾರೆ.

ಜಂಬೂಸವಾರಿ ಹಾಗೂ ಪಂಜಿನ ಕವಾಯತು ಈ ಎಲ್ಲಾ ಕಾರ್ಯಕ್ರಮಗಳಿಗೆ ವೆಬ್‌ಕಾಸ್ಟಿಂಗ್‌ ಹಾಗೂ ಲೈವ್‌ ಸ್ಕ್ರೀನಿಂಗ್‌ ಇರಲಿದ್ದು, ದಸರೆ ವೆಬ್‌ಸೈಟ್‌ ಮೂಲಕ ಮೊಬೈಲ್‌ನಲ್ಲೇ ವೀಕ್ಷಿಸಬಹುದಾಗಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button