ದೂರ ತೀರ ಯಾನವಿಂಗಡಿಸದ

ಸುಖಕರ ಪ್ರವಾಸಕ್ಕೆ ಸಪ್ತ ಸೂತ್ರಗಳು.

ಯಾವುದೇ ಒಂದು ಪ್ರವಾಸ ಕೈಗೊಳ್ಳುವ ಮುಂಚೆ ಸರಿಯಾಗಿ ಪ್ಲಾನ್‌ ಮಾಡಬೇಕು ಅಂತಾರೆ.ಆದರೆ ಕೆಲವೊಮ್ಮೆ ಪ್ಲಾನ್ ಮಾಡಿಕೊಂಡು ಪ್ರವಾಸಕ್ಕೆ ಹೋದರೆ ಅದು ಅಂದುಕೊಂಡಂತೆ ಯಶಸ್ಸು ಕಾಣಲ್ಲ ಅನ್ನೋರು ಇದ್ದಾರೆ.

ಅದೇನೇ ಇರಲಿ,ಪ್ರವಾಸಕ್ಕೆ ಒಂದೊಳ್ಳೆ ಯೋಜನೆ, ಯೋಚನೆ ತುಂಬಾನೇ ಮುಖ್ಯ. ಅದು ಹೇಗಿರಬೇಕು ಅಂದರೆ ನಮ್ಮ ಸಮಯ ಮತ್ತು ಹಣ ಇವೆರಡೂ ಉಳಿತಾಯ ಮಾಡುವಂತಿರಬೇಕು.. ಆದರೆ ಸಖತ್ ಖುಷಿ ನೀಡುವಂತಿರಬೇಕು..

ಬಹಳಷ್ಟು ಮಂದಿ ಮಾಡುವ ಸಹಜ ತಪ್ಪುಗಳೆಂದರೆ ಸಮಯ ಮತ್ತು ಹಣವನ್ನು ವೇಸ್ಟ್ ಮಾಡುವುದು. ಇದರಿಂದ ಜೇಬಿಗೂ ಕತ್ತರಿ, ಸಮಯಕ್ಕೂ ಕತ್ತರಿ. ಅಷ್ಟಕ್ಕೂ ಸುಖಕರವಾದ ಪ್ರವಾಸ ಮಾಡಲು ಏನೆಲ್ಲಾ ಟ್ರಾವೆಲ್‌ ಟಿಪ್ಸ್ ಅನುಸರಿಸಬೇಕು ಎಂಬುದನ್ನೂ ಇಲ್ಲಿ ನಾವು ನಿಮಗೆ ತಿಳಿಸಿಕೊಡುತ್ತೇವೆ.

ಸಮಯಕ್ಕೆ ಸರಿಯಾಗಿ ಎದ್ದೇಳಿ.

ಬಾಲ್ಯದಲ್ಲಿ ನಮಗೆ ನಾವು ಎಲ್ಲಿಗಾದರೂ ಹೋಗುತ್ತೇವೆ ಅಂತಿದ್ರೆ ರಾತ್ರಿಯಿಡೀ ನಿದ್ದೆ ಬರಲ್ಲ.. ಕೆಲವರಿಗೆ ಈಗಲೂ ಆ ಅಭ್ಯಾಸ ಇರಬಹುದು. ಆದರೆ ನೀವು ಎಂದಿಗೂ ಆ ತಪ್ಪು ಮಾಡುವುದಕ್ಕೆ ಹೋಗ್ಲೆ ಬೇಡಿ. ಪ್ರವಾಸಕ್ಕೆ ಹೋಗುವಾಗ ಬೇಗ ಎದ್ದೇಳಿ.

Wakeup

ನೀವು ಪ್ರಯಾಣದ ಸಮಯದಲ್ಲಿ ಸರಿಯಾಗಿ ನಿದ್ರೆಯ ಕೊರತೆಯನ್ನು ಅನುಭವಿಸಿರಬಹುದು. ಆದರೆ ನೀವು ಲೇಟ್‌ ಆಗಿ ಏಳುವುದರಿಂದ ಹಲವು ತೊಂದರೆಗಳಿಗೆ ಒಳಗಾಗಬಹುದು. ಉದಾಹರಣೆಗೆ ಟ್ರಾಫಿಕ್, ಜನಜಂಗುಳಿ ನಿಮ್ಮ ಸುಖಕರವಾದ ಪ್ರವಾಸವನ್ನು ಅಡ್ಡಿಗೊಳಿಸಬಹುದು. ಎಷ್ಟು ಬೇಗ ಎದ್ದು ಹೊರಡುವಿರೋ ಅಷ್ಟೊಂದು ಪ್ರವಾಸಿ ತಾಣಗಳನ್ನು ವೀಕ್ಷಿಸಬಹುದು. ನೀವು ಈ ಟಿಪ್ಸ್‌ ಅನ್ನು ಎಲ್ಲಿ ಹೋದರೂ ಫಾಲೋ ಮಾಡಲೇಬೇಕು.ಹೆಚ್ಚು ಯೋಜಿಸಬೇಡಿ.

ಬಹುತೇಕರು ಪ್ರವಾಸ ಮತ್ತು ಪ್ರಯಾಣದ ಸಮಯವನ್ನು ನಿರ್ದಿಷ್ಟವಾಗಿ ಯೋಜಿಸುತ್ತಾರೆ. ಆದರೆ ಇದು ತಪ್ಪು. ಹೀಗೆ ನೀವು ಇಷ್ಟೇ ಗಂಟೆಗೆ ಈ ತಾಣದಿಂದ ಹೊರಡಬೇಕು, ತಲುಪಬೇಕು ಎಂದು ಸಮಯವನ್ನು ಗೊತ್ತು ಪಡಿಸಿಸುವುದರಿಂದ ಪ್ರವಾಸವನ್ನು ಸಂಪೂರ್ಣವಾಗಿ ತೃಪ್ತಿ ಹೊಂದಲಾರಿರಿ. ಹಾಗಾಗಿ ಹೆಚ್ಚು ಯೋಜಿಸಬೇಡಿ.

ಲಗೇಜ್ ಹೆಚ್ಚು ಬೇಡ (Less Luggage)

ಒಂದು ಪ್ರವಾಸಕ್ಕೆ ಹೋಗುವಾಗ ಯಾವ ವಸ್ತು ಬೇಕು, ಯಾವ ವಸ್ತು ಬೇಡ ಎಂಬ ಅರಿವು ನಿಮ್ಮಲ್ಲಿದ್ದರೆ ಸಾಕು. ಏಕೆಂದರೆ ಹೆಚ್ಚಿನ ಲಗೇಜ್ ನಿಮಗೆ ಹೊರೆಯಾಗಬಹುದು. ಇದರಿಂದ ನಿಮ್ಮ ನೆಚ್ಚಿನ ಪ್ರವಾಸ ಕ್ಲಿಷ್ಟಕರವೆನಿಸುವುದರಲ್ಲಿ ಅನುಮಾನವೇ ಇಲ್ಲ. ಹೆಚ್ಚಿನ ಹೊರೆಯ ಪರ್ಯಾಯವಾಗಿ ಪ್ರಯಾಣಕ್ಕೆ ಬೇಕಾದ ವಸ್ತುಗಳನ್ನು ಹೊಂದಿದ್ದರೆ ಸಾಕು.

Less luggage

ಸ್ಥಳೀಯ ಆಹಾರ ಸೇವನೆ

ಸಾಮಾನ್ಯವಾಗಿ ನಾವು ಯಾಕೆ ಪ್ರವಾಸಕ್ಕೆ ಹೋಗುತ್ತೇವೆ ಹೇಳಿ,ಅಲ್ಲಿನ ಸೌಂದರ್ಯವನ್ನು ಸವಿಯುವುದಕ್ಕೆ. ಊಟದ ವಿಚಾರದಲ್ಲಿ ನಿಮ್ಮ ಮನಸ್ಥಿತಿ ಅದೇ ಆಗಿರಲಿ. ಬಜೆಟ್ ಫ್ರೆಂಡ್ಲಿ ಪ್ರವಾಸ ನಿಮ್ಮದಾಗಿದ್ದರೆ ಸ್ಥಳೀಯ ಆಹಾರವನ್ನು ಸೇವನೆ ಮಾಡಿ. ತೀರಾ 5 ಸ್ಟಾರ್ ಆಹಾರಗಳು ಕೊಂಚ ದುಬಾರಿ ಅನ್ನಿಸಬಹುದು. ಅಲ್ಲದೆ, ಸ್ಥಳೀಯ ಆಹಾರದ ರುಚಿಯನ್ನು ನೀವು ಕಡಿಮೆ ಬೆಲೆಯಲ್ಲಿ ಸವಿಯುತ್ತೀರಿ. ಸ್ಥಳೀಯ ಆಹಾರಗಳು ನಿಮ್ಮ ಪ್ರವಾಸದ ಪರಿಪೂರ್ಣತೆಯನ್ನು ಇಮ್ಮಡಿಗೊಳಿಸುತ್ತದೆ

ಸಾಹಸ ಚಟುವಟಿಕೆಗಳನ್ನು ಆನ್‌ಲೈನ್‌ನಲ್ಲಿ ಬುಕ್‌ ಮಾಡಿ

ಇತ್ತೀಚಿಗೆ ಹೆಚ್ಚಿನವರು ಸಾಹಸ ಚಟುವಟಿಕೆಗಾಗಿಯೇ ಪ್ರವಾಸವನ್ನು ಪ್ಲಾನ್ ಮಾಡುವುದರಿಂದ, ಆನ್‌ಲೈನ್‌ನಲ್ಲಿ ನಿಮ್ಮ ನೆಚ್ಚಿನ ವಾಟರ್ ಸ್ಪೋರ್ಟ್ಸ್ ಅಥವಾ ಅಡ್ವೆಂಚರ್ ಗೇಮ್‌ಗಳನ್ನು ಬುಕ್‌ ಮಾಡಿ. ಇದರಿಂದ ನೀವು ಸಾಲಿನಲ್ಲಿ ನಿಲ್ಲುವುದು ತಪ್ಪುತ್ತದೆ. ಹಾಗೆಯೇ ನಿಮ್ಮ ಸಮಯ ಸಾಕಷ್ಟು ಉಳಿತಾಯವಾಗುತ್ತದೆ.

Sports Activities

ಹೋಟೆಲ್ ಬುಕ್ ಮಾಡಿ

ನೀವು ಬಜೆಟ್‌ ಟ್ರಿಪ್‌ ಕೈಗೊಳ್ಳುತ್ತಿದ್ದರೆ, ಒಂದು ದಿನಕ್ಕಿಂತ ಹೆಚ್ಚು ಟ್ರಿಪ್ ಯೋಚ್ನೆ ಮಾಡಿದ್ದರೆ ಆನ್ಲೈನ್ ಹೋಟೆಲ್ ರೂಮ್‌ ಬುಕ್‌ ಮಾಡುವುದಕ್ಕಿಂತ ಆ ಜಾಗಕ್ಕೆ ತಲುಪಿದ ನಂತರವೇ ಹೋಟೆಲ್‌ ಬುಕ್‌ ಮಾಡಿ. ಆನ್‌ಲೈನ್‌ನಲ್ಲಿ ನೀವು ಹೆಚ್ಚಿನ ಬೆಲೆ ತೆರಬೇಕಾಗಬಹುದು. ಹೋಟೆಲ್‌ನ ಸ್ವಚ್ಛತೆಯನ್ನು ಗಮನಿಸಿ. ಎಲ್ಲವೂ ಸರಿಯಾಗಿ ಪರೀಶಿಲೀಸಿದಾಗ ಮಾತ್ರ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲು ನಿರ್ಧರಿಸಿ. ಏಕೆಂದರೆ ಸಾಕಷ್ಟು ಹೋಟೆಲ್‌ಗಳ ಆನ್‌ಲೈನ್ ಚಿತ್ರಗಳು ಮತ್ತು ವಾಸ್ತವ ಬೇರೆ ಬೇರೆಯಾಗಿರುತ್ತದೆ.

Hotel Booking

ಪ್ರವಾಸಿ ಸ್ಥಳಗಳನ್ನು ಮೊದಲೇ ಆಯ್ಕೆ ಮಾಡಿ

ಸರಿಯಾಗಿ ಪ್ಲಾನ್ ಮಾಡಲಾದ ಪ್ರವಾಸವು ಯಾವಾಗಲೂ ಸದಾ ಮನಸ್ಸಿನಲ್ಲಿ ಉಳಿದು ಬಿಡುತ್ತದೆ. ಹಾಗಾಗಿ ಪ್ರವಾಸಕ್ಕೆ ಹೊರಡುವ ಮುನ್ನವೇ ಆ ಪ್ರವಾಸಿ ತಾಣಗಳ ಸುತ್ತಮುತ್ತ ಯಾವೆಲ್ಲಾ ಪ್ರೇಕ್ಷಣೀಯ ಸ್ಥಳಗಳಿವೆ ಎಂಬುದನ್ನು ಪಟ್ಟಿ ಮಾಡಿ. ಅಲ್ಲದೆ, ಮಾರ್ಗ ಮಧ್ಯೆಯಲ್ಲಿ ದೊರೆಯುವ ಪ್ರವಾಸಿ ತಾಣಗಳು ಮತ್ತು ಎಷ್ಟು ಕಿ.ಮೀ ದೂರದಲ್ಲಿದೆ? ಪ್ರವಾಸಿ ತಾಣದ ರೇಟಿಂಗ್ ಎಷ್ಟು ಎಂಬುದನ್ನು ತಿಳಿಯುತ್ತಾ ಪ್ರಯಾಣವನ್ನು ಮುಂದುವರೆಸಿ.

Tourist place

ಒಟ್ಟಾರೆ ಪ್ರವಾಸ ಮಾಡುವಾಗ ಈ ಸಪ್ತ ಸೂತ್ರಗಳನ್ನು ಗಮನದಲ್ಲಿಟ್ಟುಕೊಂಡರೆ ನಿಮ್ಮ ಪ್ರಯಾಣ ಮತ್ತಷ್ಟು ಸುಖಕರ..

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button