Moreವಿಂಗಡಿಸದ

ನಿಮ್ಮ ರೈಲು ಟಿಕೆಟ್ ಅನ್ನು ಬೇರೆಯವರ ಹೆಸರಿಗೆ ವರ್ಗಾಸಬಹುದು; ಹೇಗೆ ಗೊತ್ತಾ?

ಭಾರತೀಯ ರೈಲ್ವೇಯು (Indian Railways) ವಿಶ್ವದ ಅತಿ ದೊಡ್ಡ ರೈಲ್ವೇ ಸೇವೆಯಾಗಿದೆ. ಪ್ರತೀ ದಿನ ಸುಮಾರು 2.5 ಕೋಟಿ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ.

ಭಾರತೀಯ ರೈಲ್ವೇಯು ಸಹ ಜನರ ಅನುಕೂಲಕ್ಕಾಗಿ ವಿವಿಧ ರೀತಿಯ ವಿಶಿಷ್ಟ ಸೇವೆಗಳನ್ನು ಘೋಷಿಸುತ್ತಲೇ ಬಂದಿದೆ.

ಅದರಲ್ಲಿ ಒಂದು ಟಿಕೆಟ್ ವರ್ಗಾವಣೆ ( Transfer Confirmed Tickets) ಸೌಲಭ್ಯ. ಬೇರೆ ಬೇರೆ ಸ್ಥಳಗಳಿಗೆ ಹೋಗುವ ಜನರು ಪ್ರಯಾಣ ಸುಲಭವಾಗಲು ಮುಂಚಿತವಾಗಿ ಸೀಟನ್ನು ಕಾಯ್ದಿರಿಸುತ್ತಾರೆ.

ಆದರೆ ಕೆಲವೊಮ್ಮೆ ಕಾರಣಾಂತರಗಳಿಂದ ಕಾಯ್ದಿರಿಸಿದ ಸಮಯದಲ್ಲಿ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ. ಅಂತಹ ಸಮಯದಲ್ಲಿ ನೀವು ನಿಮ್ಮ ಟಿಕೆಟ್ ಅನ್ನು ಬೇರೆಯವರ ಹೆಸರಿಗೆ ವರ್ಗಾಯಿಸಬಹುದು.

ಅದಕ್ಕಿರುವ ಪ್ರಕ್ರಿಯೆ ಮತ್ತು ನಿಯಮಗಳು ಇಲ್ಲಿವೆ:

ಧೃಡೀಕೃತ ಟಿಕೆಟ್‌ (Confirmed Ticket) ಅನ್ನು ಮಾತ್ರ ಬೇರೆಯವರ ಹೆಸರು ವರ್ಗಾಯಿಸಬಹುದಾಗಿದೆ. ಮತ್ತು ಟಿಕೆಟ್ ಅನ್ನು ನಿಮ್ಮ ಕುಟುಂಬದ ಸದಸ್ಯರಿಗೆ ಮಾತ್ರ ವರ್ಗಾಯಿಸಬಹುದಾಗಿದೆ.

ದೃಡೀಕೃತ ಟಿಕೆಟ್ ಅನ್ನು ಪ್ರಿಂಟ್ ಔಟ್ ತೆಗೆದು ರೈಲ್ವೆ ನಿಲ್ದಾಣದಲ್ಲಿರುವ ರಿಸರ್ವೇಷನ್ ಕೌಂಟರ್ ಗೆ ಹೋಗಬೇಕು.

ತದ ನಂತರ ನಿಮ್ಮ ಗುರುತಿನ ಚೀಟಿ ಮತ್ತು ನೀವು ಯಾರ ಹೆಸರಿಗೆ ಟಿಕೆಟ್ ಅನ್ನು ವರ್ಗಾಯಿಸಲು ಬಯಸುತ್ತೀರೋ ಅವರ ಹೆಸರು ಮತ್ತು ಅವರ ಗುರುತಿನ ಚೀಟಿಯನ್ನು ಸಲ್ಲಿಸಬೇಕು.

ಅದರೊಂದಿಗೆ ಅರ್ಜಿಯನ್ನು ಸಹ ಬರೆಯಬೇಕಾಗುತ್ತದೆ.ನಂತರ ನೀವು ಟಿಕೆಟ್‌ನ ಪ್ರಿಂಟ್‌ಔಟ್ ಮತ್ತು ಅರ್ಜಿ ನಮೂನೆಯನ್ನು ಟಿಕೆಟ್ ಕೌಂಟರ್‌ನ ಮೀಸಲಾತಿ ಮೇಲ್ವಿಚಾರಕರಿಗೆ ಸಲ್ಲಿಸಬೇಕು.

ಪರಿಶೀಲನೆಯ ನಂತರ, ನಿಮ್ಮ ಟಿಕೆಟ್ ಅನ್ನು ನಿಮ್ಮ ಸಂಬಂಧಿತ ಕುಟುಂಬ ಸದಸ್ಯರಿಗೆ ವರ್ಗಾಯಿಸಲಾಗುತ್ತದೆ. ನೀವು ಯಾವುದೇ ಸ್ನೇಹಿತರಿಗೆ ಅಥವಾ ಇತರ ವ್ಯಕ್ತಿಗೆ ಈ ಟಿಕೆಟ್ ಅನ್ನು ವರ್ಗಾಯಿಸಲು ಸಾಧ್ಯವಿಲ್ಲ ಎಂಬುದು ಗಮನದಲ್ಲಿಡಬೇಕಾದ ವಿಷಯ.

ನಿಮಗೆ ಪ್ರಯಾಣಿಸಲು ಸಾಧ್ಯವಾಗದಿದ್ದರೆ, ನೀವು 24 ಗಂಟೆಗಳ ಮೊದಲು ಮಾತ್ರ ಟಿಕೆಟ್ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಸಲಾಗುವುದು. ಇಲ್ಲದಿದ್ದರೆ ನಿಮ್ಮ ಟಿಕೆಟ್ ವ್ಯರ್ಥವಾಗುತ್ತದೆ.

ಹಬ್ಬ, ಮದುವೆಯ ಸಂದರ್ಭ ಅಥವಾ ಯಾವುದೇ ವೈಯಕ್ತಿಕ ಸಮಸ್ಯೆ ಇದ್ದಲ್ಲಿ, ವ್ಯಕ್ತಿಯು ನಿರ್ಗಮನಕ್ಕೆ 48 ಗಂಟೆಗಳ ಮೊದಲು ಟಿಕೆಟ್ ಅನ್ನು ಸಂಗ್ರಹಿಸಬೇಕು.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button