ದೂರ ತೀರ ಯಾನವಿಂಗಡಿಸದಸಂಸ್ಕೃತಿ, ಪರಂಪರೆ

ಹೊನ್ನಾವರಕ್ಕೆ ಹೋದಾಗ ಈ ದೇವಾಲಯಕ್ಕೆ ಹೋಗಿ ಬನ್ನಿ

ನವರಾತ್ರಿಯ ಸಂದರ್ಭದಲ್ಲಿ ಊರಿನ ಸಮೀಪದ ಅಮ್ಮನವರ ದೇಗುಲಕ್ಕೆ ಹೋಗಿ ಬಂದು ಅಲ್ಲಿನ ಅನುಭವಗಳ ಕುರಿತು ಪವಿತ್ರಾ ಕೆ.ಎಂ ಬರೆದ ಅನುಭವದ ಬರಹ.

  ನವರಾತ್ರಿಯಂದು(Navaratri )ಸಾಮಾನ್ಯವಾಗಿ ದೇವಿ ದೇವಸ್ಥಾನಗಳಿಗೆ ಹೋಗುವ ಸಂಪ್ರದಾಯವಿದೆ. ವಿಶೇಷವಾಗಿ ದೇವಿಗೆ ಹರಕೆ ಹೊತ್ತವರು ನವರಾತ್ರಿಯ ಸಮಯದಂದು ತೀರಿಸಿಕೊಳ್ಳುತ್ತಾರೆ. ಕೆಲವರು ದೇವಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಲೆಂದೆ ಹೋಗುತ್ತಾರೆ. ಅದೇ ರೀತಿ ನಾನು ಕೂಡ ಅಮ್ಮನವರ ದರ್ಶನಕ್ಕಾಗಿ ಕರಿಕಾನಮ್ಮನಲ್ಲಿಗೆ(Karikanamma or Shri Karikaan Parameshwari Temple) ಹೋಗಿದ್ದೆ.. ದೇವಿಯ ದರ್ಶನ ಪಡೆದು ಹಿಂದಿರುಗುವಾಗ ದೇವಿಯ ಕುರಿತಾದ ಪುಸ್ತಕವೊಂದು ಕಣ್ಣಿಗೆ ಬಿತ್ತು, ಖರೀದಿಸಿದೆ. ಆ ಪುಸ್ತಕದಲ್ಲಿ ಮೈರೋಮಾಂಚನ ಎನಿಸುವ ವಿಷಯಗಳಿದ್ದವು.

    ದೇವಿಯು ಈ ಸ್ಥಳಕ್ಕೆ ಬಂದು ನೆಲೆನಿಂತಿದ್ದರ ಕುರಿತು ಬಹಳ ರೋಚಕ ಕಥೆಯಿದೆ. ಈ ಅಮ್ಮನ ಮೂಲ ಸ್ಥಾನವಿದ್ದದ್ದು ಹೊನ್ನಾವರದ ಬಸವರಾಜ ದ್ವೀಪದಲ್ಲಿ(Basavaraj Durga Island). ಈ ದ್ವೀಪದಲ್ಲಿದ್ದ ಬಸವರಾಜ ಎಂಬ ರಾಜನು ದೇವಿಗೆ ಶ್ರದ್ದೆಯಿಂದ ಪೂಜೆ ಸಲ್ಲಿಸುತ್ತಿದ್ದ ಆತನ ಮರಣ ನಂತರ ಆತನ ಮಕ್ಕಳು ಧರ್ಮಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಇದನ್ನು ಸಹಿಸದ ದೇವಿಯು ಆ ಪ್ರದೇಶದಿಂದ ಹೊರನಡೆದು ಉತ್ತರಭಿಮುಖವಾಗಿ ಚಲಿಸುತ್ತ ನೆಲೆಯನ್ನು ಹುಡುಕುತ್ತಿರುವಾಗ ದಾರಿಯಲ್ಲಿ ಬಂಡಾಸುರ(Bhandasura)ಮತ್ತು ಮಲ್ಲಾಸುರ(Mallasura)ಎಂಬ ಅಸುರರು ಈ ದೇವಿಯನ್ನು ಕಂಡು ಮೋಹಿಸುತ್ತಾರೆ. ಆಗ ದೇವಿಯು ದುರ್ಗೆಯ ಅವತಾರ ತಾಳಿ ಮಲ್ಲಾಸುರನನ್ನು ಮಲ್ಲಾರಮಕ್ಕಿ(Mallaramakki) ಮತ್ತು ಬಂಡಾಸುರನನ್ನು ಬಂಡಾರಮಕ್ಕಿ(Bandaramakki )ಎಂಬಲ್ಲಿಯೂ ಒದಿಸುತ್ತಾಳೆ. ನಂತರ ಜನರ ಇಚ್ಛೆಯಂತೆ ಬಂಡಾರಮಕ್ಕಿಯಲ್ಲಿ ನೆಲೆಸುತ್ತಾಳೆ. 

ನೀವು ಇದನ್ನು ಓದಬಹುದು : ಸೊಕ್ಕಿದ್ರೆ ಯಾಣಕ್ಕೆ ಹೋಗು, ರೊಕ್ಕ ಇದ್ರೆ ಗೋಕರ್ಣಕ್ಕೆ ಹೋಗು; ಪವಿತ್ರಾ ಕೆ. ಎಂ. ಬರೆದ ಯಾಣ ಸುತ್ತಿದ ಕಥೆ

ಆದರೆ ಇಲ್ಲಿ ಪ್ರಾಣಿ ಹಿಂಸೆ ಜಾಸ್ತಿ ಆಗಿದ್ದರಿಂದ ದೇವಿಯು ಶಾಂತಿಯ ನೆಲೆಯನ್ನು ಹುಡುಕಿ ನೀಲಕೋಡಿನ ಪ್ರಕೃತಿ ಸೌಂದರ್ಯದ ನಡುವೆ ಬಂದು ಶಿಲೆಯ ರೂಪದಲ್ಲಿ ನೆಲೆಸುತ್ತಾಳೆ.. ಗ್ರಾಮದ ಒಂದು ಹಸು ದೇವಿ ನೆಲೆಸಿರುವ ಶಿಲೆಗೆ ಹಾಲನ್ನು ಸುರಿಸಿ ಬರುವುದನ್ನು ಊರಿನ ಜನ ನೋಡುತ್ತಾರೆ ಮತ್ತು ಅದೇ ದಿನ ಹಸುವಿನ ಮಾಲೀಕನ ಕನಸಿನಲ್ಲಿ ದೇವಿಯು ಪ್ರತ್ಯಕ್ಷವಾಗಿ “ನಾನು ಬಂಡಾರಮಕ್ಕಿಯನ್ನು ತೊರೆದು ಇಲ್ಲಿಗೆ ಬಂದು ನೆಲೆಸಿದ್ದೇನೆ ನನಗೆ ಒಂದು ದೇವಾಲಯವನ್ನು ಕಟ್ಟಿಕೊಡುವಂತೆ” ತಿಳಿಸುತ್ತಾಳೆ. ಮರುದಿನವೇ ಮಾಲೀಕನು ಹಸುವನ್ನು ಹಿಂಬಾಲಿಸಿ ದೇವಿ ನೆಲೆಸಿರುವ ಶಿಲೆಯನ್ನು ಗೊತ್ತುಪಡಿಸಿಕೊಳ್ಳುತ್ತಾನೆ. ನಂತರ ಇದನ್ನೆಲ್ಲಾ ತಿಳಿದ ಶ್ರೀ ಶ್ರೀಧರ ಸ್ವಾಮಿಗಳು 1955 ರಲ್ಲಿ ದೇವಿಗೊಂದು ದೇವಾಲಯವನ್ನು ನಿರ್ಮಿಸಿಕೊಡುತ್ತಾರೆ.

  ಉದ್ಭವ ಶಿಲೆಯ ಮೂಲಕ ಆರಾಧಿಸುತ್ತಿರುವ ದೇವಿಯ ಬಳಿ ರಾಜ್ಯದ ಮೂಲೆ ಮೂಲೆಯಿಂದ ಭಕ್ತಾದಿಗಳು ಆಗಮಿಸುತ್ತಾರೆ. ತೊಟ್ಟಿಲ ಹರಕೆ, ಬಳೆ ಹರಕೆ, ಪಟ್ಟೆ ಸೀರೆ, ಅರಿಶಿಣ ಕುಂಕುಮ ಮುಂತಾದ ಹರಕೆಗಳನ್ನು ಹೊತ್ತಿಕೊಳ್ಳುತ್ತಾರೆ. ಜಾಯಿಂಡಿಸ್ ರೋಗ ಬಂದಲ್ಲಿ ಈ ದೇವಿಗೆ ಅರಿಶಿಣ ಮೂಟೆಯ ಹರಕೆ ಹೊತ್ತುಕೊಂಡರೆ ರೋಗ ವಾಸಿಯಾಗುತ್ತದೆ ಎಂಬ ಪ್ರತಿತಿಯಿದೆ..

ತಲುಪುವ ಮಾರ್ಗ :

ಹೊನ್ನಾವರ ಪಟ್ಟಣದಿಂದ 13 ಕಿ. ಮೀ ದೂರವಿದೆ. ಹೊನ್ನಾವರ – ಕುಮಟಾ(Kumta )ಹೆದ್ದಾರಿಯಲ್ಲಿ (NH -17) ಅರ್ಧ ಕಿ. ಮೀ ಸಾಗಿದರೆ ರಾಮತೀರ್ಥ ಕ್ರಾಸ್ ಸಿಗುತ್ತದೆ ಅಲ್ಲಿಂದ ನೇರವಾದ ದಾರಿಯಲ್ಲಿ(Ramatheertha )ಸಾಗಿದರೆ ಅರೆಅಂಗಡಿಯನ್ನು ತಲುಪಬಹುದು. ಅಲ್ಲಿಂದ ದೊಡ್ಡ ಕಮಾನಿನ ಮೂಲಕ ಸಾಗಿದರೆ ಕರಿಕಾನ ಅಮ್ಮನ ಮನೆ ತಲುಪಬಹುದು.

  ಕೆ.ಎಂ. ಪವಿತ್ರಾ

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button