ಬೆಂಗಳೂರಿನಿಂದ ಊಟಿಗೆ ಬೈಕ್ ರೈಡ್: ಬೆಂಗಳೂರಿನ ವಿಶ್ವ ಪಾಟೀಲ್ ಬರೆದ ವೀಕೆಂಡ್ ಅಡ್ವೆಂಚರ್ ಅನುಭವ
ಬೆಂಗಳೂರಿನ ವಿಶ್ವ ಪಾಟೀಲ್ ಕೆಲ್ಲೂರ ಒಂದು ದಿನ ಎದ್ದು ತಮ್ಮ ಬಜಾಜ್ ಅವೆಂಜರ್ 220 ಬೈಕಿನಲ್ಲಿ ಊಟಿಗೆ ಹೋಗಿ ಬಂದ ಕತೆ ಬರೆದಿದ್ದಾರೆ. ಯಾವ ದಾರಿಯಲ್ಲಿ ಹೋಗಬೇಕು, ಯಾವ ತಾಣ ನೋಡಬೇಕು, ಎಲ್ಲಿ ಉಳಿದುಕೊಳ್ಳಬಹುದು ಎಂಬಿತ್ಯಾದಿ ಮಾಹಿತಿಗಳನ್ನು ರಸವತ್ತಾಗಿ ಬರೆದಿದ್ದಾರೆ.
ಈ ಮಳೆಗಾಲದಲ್ಲಿ ಬೆಂಗಳೂರಲ್ಲಿ ಮಳೆ ಬಂದರೆ ಸಾಕು ವಾಟ್ಸಾಪ್ ನಲ್ಲಿ “ವಾವ್ ರೇನಿಂಗ್” ಹಾಗೆ ಹೀಗೆ ಅಂತ ಹತ್ತು ಹಲವು ಸ್ಟೇಟಸ್ ಹಾಕಿ ಖುಷಿ ಪಡ್ತೀವಿ. ಅಂಥದ್ದರಲ್ಲಿ ಜಸ್ಟ್ ಇಮ್ಯಾಜಿನ್ ಈ ಮಳೆಗಾಲದಲ್ಲಿ ಊಟಿಗೆ(ooty) ಬೈಕ್ ರೈಡ್ ಹೋದ್ರೆ ಹೇಗಿರುತ್ತೆ ಅಂತ! ಇಮ್ಯಾಜಿನೇಷನಲ್ಲೇ ಇಷ್ಟು ಖುಷಿ ಕೊಡುತ್ತೆ ಅಂದ್ರೆ ಇನ್ನು ನಿಜವಾಗ್ಲೂ ಊಟಿಗೆ ಬೈಕ್ ರೈಡ್ ಹೋದ್ರೆ ಹೇಗಿರುತ್ತೆ ಅಂತ? ಕಳೆದ ವಾರ ಆ ಖುಷಿಗೆ ನಾನು ಸಾಕ್ಷಿಯಾದೆ ಅಂದರೆ ನನ್ನ ಬಜಾಜ್ Bajaj Avenger 220 ಬೈಕ್ ಅಲ್ಲಿ ಬೆಂಗಳೂರಿಂದ ಊಟಿಗೆ ಬೈಕ್ ರೈಡ್ ಹೋಗಿದ್ದೆ.,
ಮಳೆಗಾಲಕ್ಕೆ ಊಟಿ ಹೇಳಿಮಾಡಿಸಿದಂತ ಸ್ಥಳ. ಬೆಂಗಳೂರಿಂದ ಸುಮಾರು 270 ಕಿಲೋಮೀಟರು ದೂರದಲ್ಲಿದೆ. ವಯಾ ಮೈಸೂರು, ಗುಂಡ್ಲುಪೇಟೆ, ಬಂಡೀಪುರ ದಾಟಿ ಹೋಗ ಬಹುದು. ರಸ್ತೆ ತುಂಬಾ ಚೆನ್ನಾಗಿದೆ. ಬೈಕ್ ರೈಡ್ ಆಗಿರುವುದರಿಂದ ಒಂದು ದಿನ ಮುಂಚೆನೇ ಬೈಕ್ ಕಂಡೀಶನ್ ಚೆಕ್ ಮಾಡಿಸೋದು ಒಳ್ಳೇದು. ರೈಡಿಂಗ್ ನಲ್ಲಿ ಯಾವುದೇ ತೊಂದರೆಗಳಾಗದಿರಲಿ ಅಂತ ಅಷ್ಟೇ, ಸಾಕಾಗುವಷ್ಟು ಪೆಟ್ರೋಲ್ ಇದೆಟೇ ಎಂದು ಪರೀಕ್ಷಿಸಿಕೊಳ್ಳಿ.
ನಾವು ಬಂಡೀಪುರ ಕಾಡಿನ ಮಧ್ಯ ಪ್ರಯಾಣಿಸಬೇಕಾಗಿರುವದರಿಂದ ತುಂಬಾ ಜಾಗೃತರಾಗಿರಬೇಕು. ಅನವಶ್ಯಕವಾಗಿ ಬೈಕ್ ನಿಲ್ಲಿಸೋದು, ಕಾಡಿನ ಮಧ್ಯ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳೋದು ತುಂಬಾ ಅಪಾಯಕಾರಿ. ಹಾಗೆ ಕಾಡಿನ ಮಧ್ಯ ಬೈಕ್ ಓಡಿಸೋ ಮಜಾನೇ ಬೇರೆ. ನಿಮ್ಮ ಅದೃಷ್ಟಕ್ಕೆ ತಕ್ಕಂತೆ ನಿಮಗೆ ಕಾಡಿನ ಮಧ್ಯ ಪ್ರಾಣಿಗಳು ಕಾಣಸಿಗುತ್ತವೆ. ನೀವು ತುಂಬಾ ಅದೃಷ್ಟವಂತರಾಗಿದ್ದರೆ ಹುಲಿ ಕೂಡ ಕಾಣಸಿಗಬಹುದು. ಆದರೆ ನನ್ನ ಕಣ್ಣಿಯೇ ಸಿಕ್ಕಿದ್ದು ಕಾಡೆಮ್ಮೆ, ಜಿಂಕೆ, ಆನೆ, ಮಂಗಗಳು ಮಾತ್ರ. ಆದರೆ ತುಂಬಾ ಜಾಗರೂಕತೆಯಿಂದ ಬೈಕ್ ಓಡಿಸಬೇಕು. ಬಂಡೀಪುರ ಕಾಡು ಮುಗಿಯುತ್ತಿದ್ದಂತೆ ತಮಿಳುನಾಡು ಪ್ರಾರಂಭವಾಗುತ್ತೆ. ಹಾಗೆ 30-40 ಕಿಲೋಮೀಟರು ಪ್ರಯಾಣಿಸುತ್ತಿದಂತೆ ನಿಮಗೆ ಊಟಿ ಸಿಗುತ್ತೆ. ಆದರೆ ಊಟಿಗೆ ಮುಂಚೆನೇ ಕೆಲವು ಸ್ಥಳಗಳಿವೆ. Pine Forest, Pykara Falls ಇವೆಲ್ಲ ನೋಡಿಕೊಂಡು ಊಟಿಗೆ ಹೋಗೋದು ಉತ್ತಮ.
ಊಟಿ ಸೇರುತ್ತಿದ್ದಂತೆ ಊಟಿ ಸ್ಪೆಷಲ್ ಕಾಫಿ ಕುಡಿದೆ. ಸಕ್ಕತಾಗಿರುತ್ತೆ ನೀವು ಕೂಡ ಹೋದರೆ ಮಿಸ್ ಮಾಡದೇ ಟ್ರೈ ಮಾಡಿ ಊಟಿ ತಮಿಳುನಾಡಿನಲ್ಲಿದ್ದರೂ ನಿಮಗೆ ಕನ್ನಡ ಮಾತನಾಡುವವರು ಸುಮಾರು ಜನ ಸಿಗುತ್ತಾರೆ. ಭಾಷೆಯ ತೊಂದರೆ ಆಗುವುದಿಲ್ಲ. ಊಟಿ ಸುತ್ತ ಮುತ್ತ ಸ್ಥಳಗಳಿಗೆ ಹೋಗಲು ನೀವು ಗೂಗಲ್ ಮ್ಯಾಪ್ ಸಹಾಯ ಪಡೆಯಬಹುದು. ಹಾಗೆ ನಿಮಗೆ ಎಲ್ಲಾ ಕಡೆ ಪೇಟಿಎಂ, ಗೂಗಲ್ ಪೇ ಬಳಸುವುದು ಕಷ್ಟ. ಅವಶ್ಯವಿದ್ದಷ್ಟು ಏಟಿಎಂನಿಂದ ಹಣ ತೆಗೆದುಕೊಳ್ಳುದು ಒಳ್ಳೆಯದು.
ರೂಮ್ಸ್ ಗೋಸ್ಕರ ಸುಮಾರು ಬ್ರೋಕರ್ಸ್ ನಿಮಗೆ ಸರ್ ರೂಮ್ಸ್ ಅಂತ ಬರುತ್ತಾರೆ. ಆದರೆ ನೀವೇ ಗೂಗಲ್ ಮಾಡಿ ರೂಮ್ ಹುಡುಕಿಕೊಳ್ಳುವುದು ಉತ್ತಮ. ಕಡಿಮೆ ಬೆಲೆಗೆ ಒಳ್ಳೆಯ ರೂಮ್ಸ್ ಸಿಗುತ್ತವೆ.
ದೊಡ್ಡ ಬೆಟ್ಟ, ಟೀ ಪಾರ್ಕ್, Katari ಫಾಲ್ಸ್ ಸುತ್ತಾಡಿಕೊಂಡು ಬೆಂಗಳೂರು ಕಡೆ ಹೊರಟೆ. ನಾನು ಬೆಂಗಳೂರಿಗೆ ಬಂದು ತಲುಪಿದಾಗ ನನ್ನ ಬೈಕ್ ಮೀಟರ್ ಅಲ್ಲಿ 660 ಕಿಮೀ ತೋರಿಸುತ್ತಿತ್ತು. ಈ ತರಹದ ರೈಡ್ ಬಜೆಟ್ ಫ್ರೆಂಡ್ಲಿ ಕೂಡ ಹೌದು. ಹಾಗೆ ಮಂಡೇ ಟು ಫ್ರೈಡೆ ಕೀಬೋರ್ಡ್ ಕುಟ್ಟಿ ಕುಟ್ಟಿ ಬೇಜಾರಾದವರಿಗೆ ಹಾಗೆ ಬೆಂಗಳೂರಿನ ಟ್ರಾಫಿಕ್ ಕಿರಿಕಿರಿಯಿಂದ ನೊಂದವರಿಗೆ ಈ ಒಂದು ಬೈಕ್ ರೈಡ್ ತುಂಬಾ ಖುಷಿ ಕೊಡುತ್ತೆ.
ಒಟ್ಟಿನಲ್ಲಿ ನನಗೆ ಒಂದು ಆರೋಗ್ಯಕರ ಹಾಗು ಒಳ್ಳೆಯ ವೀಕೆಂಡ್ ಆಗಿತ್ತು. ಮತ್ತೆ ನೆಕ್ಸ್ಟ್ ರೈಡ್ ನಲ್ಲಿ ಸಿಗುತ್ತೇನೆ. ನಮಸ್ಕಾರ.