ಮ್ಯಾಜಿಕ್ ತಾಣಗಳುವಂಡರ್ ಬಾಕ್ಸ್ವಿಂಗಡಿಸದ

ಗುಜರಾತ್‌ನಲ್ಲಿ ನಿರ್ಮಾಣವಾಗಿದೆ ವಿಶ್ವದ ಅತಿದೊಡ್ಡ ವಜ್ರ ವ್ಯಾಪಾರ ಕೇಂದ್ರ


ವಜ್ರ ವ್ಯಾಪಾರಕ್ಕೆ ಹೆಸರಾದ ಗುಜರಾತ್‌ನ(Gujarat) ಸೂರತ್‌ನಲ್ಲಿ (Surat) ಅತಿದೊಡ್ಡ ಕಾರ್ಪೋರೇಟ್‌ ಕಚೇರಿ ನಿರ್ಮಾಣವಾಗಿದ್ದು, ಇದು ವಿಶ್ವದಲ್ಲಿಯೇ ಅತಿ ದೊಡ್ಡ ಕಛೇರಿ ( World’s Largest Office) ಎನ್ನುವ ಬಿರುದನ್ನು ಹೊಂದಿದೆ.

ಈ ದೈತ್ಯ ಕಚೇರಿಯನ್ನು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಡಿಸೆಂಬರ್‌ 17ರಂದು ಲೋಕಾರ್ಪಣೆಗೊಳಿಸಿದರು.

Word's largest office


ಸೂರತ್ ಡೈಮಂಡ್ ಬೋರ್ಸ್ (Surat Diamond Bourse) ನ ಭಾಗವಾಗಿದೆ ಈ ಕಂಪೆನಿ. ಎಸ್‌ಡಿಬಿ ಕಟ್ಟಡವು 67 ಲಕ್ಷ ಚದರ ಅಡಿಗಳಿಗಿಂತ ಹೆಚ್ಚು ವಿಸ್ತೀರ್ಣವನ್ನು ಹೊಂದುವ ಮೂಲಕ ವಿಶ್ವದ ಅತಿದೊಡ್ಡ ಕಚೇರಿ ಸಂಕೀರ್ಣವಾಗಿದೆ.

ಇದು ಸೂರತ್ ನಗರದ ಸಮೀಪದ ಖಜೋದ್ ಗ್ರಾಮದಲ್ಲಿ ನೆಲೆಗೊಂಡಿದ್ದು, ಉದ್ಘಾಟನೆಗೂ ಮುಂಚಿತವಾಗಿಯೇ ಮುಂಬೈ ಮೂಲದ ಹಲವು ವಜ್ರದ ವ್ಯಾಪಾರಿಗಳು ತಮ್ಮ ಕಚೇರಿಗಳನ್ನು ಖಾತ್ರಿಪಡಿಸಿಕೊಂಡಿದ್ದರು.

Surat Diamim Bourse


3,400 ಕೋಟಿ ವೆಚ್ಚದಲ್ಲಿ 8 ವರ್ಷಗಳ ಸತತ ಪರಿಶ್ರಮದಿಂದ ನಿರ್ಮಾಣವಾಗಿದೆ. ಸೂರತ್‌ನ 35.54 ಎಕರೆ ಜಾಗದಲ್ಲಿ ಹೊಸದಾಗಿ ನಿರ್ಮಿಸಲಾದ ಡೈಮಂಡ್ ಬೋರ್ಸ್ ಒರಟು ಮತ್ತು ಪಾಲಿಶ್ ಮಾಡಿದ ವಜ್ರದ ವ್ಯಾಪಾರಕ್ಕೆ ಜಾಗತಿಕ ಕೇಂದ್ರವಾಗಲಿದೆ.

ಇದು 1.5 ಲಕ್ಷ ಜನರಿಗೆ ಉದ್ಯೋಗವಕಾಶವನ್ನೂ ನೀಡುತ್ತದೆ. ಇದು ಸುಮಾರು 4,500 ಕ್ಕೂ ಹೆಚ್ಚು ಕಚೇರಿಗಳನ್ನು ಹೊಂದಿವೆ. 67,000 ಜನರಿಗೆ, ಉದ್ಯಮಿಗಳು ಮತ್ತು ಸಂದರ್ಶಕರಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯವನ್ನು ಹೊಂದಿದೆ.

Gujrat


ಕಟ್ಟಡದ ಪ್ರವೇಶದ್ವಾರಗಳ ಬಳಿ ಹೆಚ್ಚಿನ ಭದ್ರತಾ ಚೆಕ್‌ಪೋಸ್ಟ್‌ಗಳು ಮತ್ತು ಸಾರ್ವಜನಿಕ ಪ್ರಕಟಣೆ ವ್ಯವಸ್ಥೆಗಳಿವೆ. ಕಟ್ಟಡದ ನೆಲ ಮಹಡಿಯಲ್ಲಿ ಸದಸ್ಯರಿಗೆ ಬ್ಯಾಂಕ್, ರೆಸ್ಟೋರೆಂಟ್, ಡೈಮಂಡ್ ಲ್ಯಾಬ್ ಇತ್ಯಾದಿ ಸೌಲಭ್ಯಗಳನ್ನು ಹೊಂದಿದೆ.

ಜಗತ್ತಿನ ಬೇರೆ ಬೇರೆ ಕಡೆಗಳಿಂದ ತಂದಿರುವ ವಜ್ರಗಳನ್ನು ಇಲ್ಲಿ ಮುಂದಿನ ದಿನಗಳಲ್ಲಿ ಪಾಲಿಶ್ ಮಾಡಲಾಗುತ್ತದೆ. ಒರಟು, ಕಟ್, ಪಾಲಿಶ್ ಮಾಡಿದ ವಜ್ರಗಳು, ವಜ್ರದ ಆಭರಣಗಳು, ವಜ್ರ-ಚಿನ್ನ-ಬೆಳ್ಳಿ-ಪ್ಲಾಟಿನಂ ಆಭರಣಗಳು ಸೇರಿದಂತೆ ಹೆಚ್ಚಿನ ಮೌಲ್ಯದ ಆಭರಣಗಳನ್ನು ಇಲ್ಲಿ ಖರೀದಿಸಬಹುದು ಮತ್ತು ಮಾರಾಟ ಮಾಡಬಹುದು.

ನೀವು ಇದನ್ನು ಸಹ ಪಡಬಹುದು:ಶೀಘ್ರದಲ್ಲೇ ಉತ್ತರಾಖಂಡನಲ್ಲಿ ಭಾರತದ ಮೊದಲ ಗೈರೋಕಾಪ್ಟರ್ ಸಫಾರಿ ಆರಂಭ:

Surat


ಸೂರತ್ ಡೈಮಂಡ್ ಬೋರ್ಸ್ ಕೇವಲ ಕಟ್ಟಡವಲ್ಲ ಇದೊಂದು ವಾಸ್ತುಶಿಲ್ಪದ ವಿಶೇಷತೆಯನ್ನೇ ಎತ್ತಿತೋಸಿಸುತ್ತದೆ. ಪ್ರಪಂಚದ ಅತಿದೊಡ್ಡ ಇಂಟರ್ಕನೆಕ್ಟೆಡ್ ಕಟ್ಟಡವಾಗಿದೆ.

ಗಾತ್ರದಲ್ಲಿ ದಾಖಲೆ ಬರೆದಿದ್ದ ಪೆಂಟಗನ್ (Pentagon) ಕಟ್ಟಡವನ್ನು ಮೀರಿಸಿ, ಈ ಬೃಹತ್ ಕಟ್ಟಡ ದೇಶದ ಅತಿದೊಡ್ಡ ಕಸ್ಟಮ್ಸ್ ಕ್ಲಿಯರೆನ್ಸ್ ಹೌಸ್ ಎಂಬ ಹೆಗ್ಗಳಿಕೆಯನ್ನು ಹೊಂದಿದೆ.

175 ದೇಶಗಳ 4,200 ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯವನ್ನು ಹೊಂದಿರುವ ಸೂರತ್ ಡೈಮಂಡ್ ಬೋರ್ಸ್ ಜಾಗತಿಕ ವಜ್ರ ವ್ಯಾಪಾರ ಮಾಡೋರಿಗೆ ಅದ್ಭುತ ವೇದಿಕೆಯಾಗಿದೆ.

ಈ ಉದ್ಯಮವು ಸುಮಾರು 1.5 ಲಕ್ಷ ಜನರಿಗೆ ಉದ್ಯೋಗವಕಾಶವನ್ನು ಸೃಷ್ಟಿಸುತ್ತದೆ ಎನ್ನುವ ನಿರೀಕ್ಷೆಯೂ ಇದೆ.

Diamond Research and Mercantail City


ಡೈಮಂಡ್ ರಿಸರ್ಚ್ ಮತ್ತು ಮರ್ಕೆಂಟೈಲ್ ಸಿಟಿಯಲ್ಲಿ (Diamond Research and Mercantail City) ನೆಲೆಗೊಂಡಿರುವ ಸೂರತ್ ಡೈಮಂಡ್ ಬೋರ್ಸ್ ಪ್ರಧಾನಿ ಮೋದಿಯವರ ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ.

ಒಂಬತ್ತು 15-ಅಂತಸ್ತಿನ ಗೋಪುರಗಳನ್ನು ಹೊಂದಿದೆ. ಈಗಾಗಲೇ ಇಲ್ಲಿ 130 ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ.ಇನ್ನು ಈ ಕಟ್ಟಡದಲ್ಲಿ 5 ಪ್ರವೇಶದ್ವಾರಗಳು ಮತ್ತು 5 ನಿರ್ಗಮನಗಳಿವೆ.

ಅಲ್ಲದೆ 7 ಪಾದಚಾರಿ ಗೇಟ್‌ಗಳನ್ನು ಸಹ ಅಳವಡಿಸಲಾಗಿದೆ.ಪ್ರತಿಯೊಂದು ಗೋಪುರವು ಐಷಾರಾಮಿ ಪ್ರವೇಶ ದ್ವಾರ, ಪ್ರವೇಶ ನಿಯಂತ್ರಣ ವ್ಯವಸ್ಥೆ, ಟಚ್‌ಲೆಸ್ – ಕಾರ್ಡ್‌ಲೆಸ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button