Moreವಿಂಗಡಿಸದ

ಜೆಟ್‌ವಿಂಗ್ಸ್ ಶೀಘ್ರದಲ್ಲೇ ದೇಶಾದ್ಯಂತ 12 ಪ್ರಮುಖ ವಿಮಾನ ನಿಲ್ದಾಣಗಳನ್ನು ಸಂಪರ್ಕಿಸಲಿದೆ;

ಭಾರತದ ದೇಶೀಯ ವಿಮಾನ ಸಂಪರ್ಕವು ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿವೆ. ಈ ಸಂದರ್ಭದಲ್ಲಿ, ದೇಶಾದ್ಯಂತ ವಿಮಾನ ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಜೆಟ್‌ವಿಂಗ್ಸ್ (JettWings Airways) ಶೀಘ್ರದಲ್ಲೇ ದೇಶಾದ್ಯಂತ 12 ಪ್ರಮುಖ ವಿಮಾನ ನಿಲ್ದಾಣಗಳನ್ನು ( Airport ) ಸಂಪರ್ಕಿಸುವುದಾಗಿ ಘೋಷಿಸಿದೆ.

ಜೆಟ್ ವಿಂಗ್ಸ್ ಗುವಾಹಟಿಯ (Guwahati) ಮೊದಲ ವಿಮಾನ ಸಂಸ್ಥೆಯಾಗಿದೆ (First airline). ಹಾಗೂ ಭಾರತೀಯ ವಿಮಾನ ಯಾನ ಉದ್ಯಮಕ್ಕೆ (Indian aviation industry) ಹೊಸದಾಗಿ ಸೇರ್ಪಡೆಯಾಗಿದೆ. ಈ ವಿಮಾನ ಸಂಸ್ಥೆಯು ಈಗ ದೇಶದೆಲ್ಲೆಡೆ ಪ್ರಮುಖ ವಿಮಾನ ಸಂಪರ್ಕ ಹೊಂದಲು ಸಿದ್ಧವಾಗಿದೆ.

12 ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಬಿಹಾರ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ವಿಮಾನ ನಿಲ್ದಾಣಗಳು ಸೇರಿವೆ.

ಇದು ಆಗ್ರಾ, ಬರೇಲಿ, ಕೂಚ್ ಬೆಹಾರ್, ಗಯಾ, ಗುವಾಹಟಿ, ಕಾನ್ಪುರ, ಕುಶಿನಗರ ಮತ್ತು ಪಾಕ್ಯೊಂಗ್‌ನಂತಹ ನಗರಗಳಿಗೆ ಸಂಪರ್ಕವನ್ನು ಒದಗಿಸುತ್ತದೆ.

ಈ ಉಪಕ್ರಮವನ್ನು RCS-UDAN ಯೋಜನೆಯಡಿ ರೂಪಿಸಲಾಗಿದೆ. ಇದನ್ನು ಪ್ರಾದೇಶಿಕ ಸಂಪರ್ಕ ಯೋಜನೆ “ಉಡೇ ದೇಶ್ ಕಾ ಆಮ್ ನಾಗರಿಕ್” (Ude Desh ka Aam Nagrik) ಇದರ ಭಾಗವಾಗಿ ಕಾರ್ಯಾಚರಣೆಗೆ ತರಲಾಗಿದೆ.

ಈ ಯೋಜನೆಯ ಅಡಿಯಲ್ಲಿ, ಜೆಟ್ ವಿಂಗ್ಸ್ ಮೊದಲ ಐದು ವರ್ಷಗಳಲ್ಲಿ ಒಟ್ಟು 42 ವಿಮಾನಗಳನ್ನು ಸ್ವಾಧೀನದಲ್ಲಿ ಮತ್ತು ನಿರ್ವಹಿಸಲು ಗುರಿಯನ್ನು ಹೊಂದಿದೆ.

ಇತ್ತೀಚಿನ ದಿನಗಳಲ್ಲಿ ದೇಶೀಯ ಸಂಪರ್ಕವು ಭರದಿಂದ ಸಾಗುತ್ತಿದೆ. ಇತ್ತೀಚೆಗೆ ಡೆಹ್ರಾಡೂನ್ ವಿಮಾನ ನಿಲ್ದಾಣವು ಮೂರು ಮಾರ್ಗಗಳಲ್ಲಿ ನೇರ ವಿಮಾನ ಸಂಪರ್ಕವನ್ನು ಹೊಂದುವುದಾಗಿ ಘೋಷಿಸಿತು.

ಇದಕ್ಕೂ ಮೊದಲು ಪಿಥೋರಗಢಕ್ಕೆ ವಿಮಾನ ಸಂಪರ್ಕವನ್ನು ಹೊಂದಿದ್ದ, ಡೆಹ್ರಾಡೂನ್ ವಿಮಾನ ನಿಲ್ದಾಣವು (Dehradun Airport) ಪಂಜಾಬ್‌ನ ಅಮೃತಸರ ಮತ್ತು ಉತ್ತರ ಪ್ರದೇಶದ ಅಯೋಧ್ಯೆ ಮತ್ತು ವಾರಣಾಸಿಗೆ ವಿಮಾನ ಸಂಪರ್ಕವನ್ನು ಹೊಂದಿತು.

ಇಂತಹ ವಿಮಾನ ಸಂಪರ್ಕ ಯೋಜನೆಯ ಮೂಲಕ, ಜೆಟ್ ವಿಂಗ್ಸ್ ಸಂಸ್ಥೆಯು ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸುವ, ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುವ ಮತ್ತು ಪ್ರಯಾಣಿಕರಿಗೆ ಪ್ರಯಾಣದ ಅನುಭವವನ್ನು ಉತ್ತಮಗೊಳಿಸುವ ಗುರಿಯನ್ನು ಕಂಪನಿ ಹೊಂದಿದೆ ಎಂದು ಸಂಸ್ಥೆ ವರದಿ ಮಾಡಿದೆ.

ತಮ್ಮ ಯೋಜನೆಗಳ ಕುರಿತು ಮಾತನಾಡಿದ ಏರ್ ಲೈನ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಎಂ.ಡಿ ಸಂಜಯ್ ಆದಿತ್ಯ ಸಿಂಗ್ ಅವರು “ಸಂಸ್ಥೆಯು ಪ್ರಾದೇಶಿಕ ಸಂಪರ್ಕವನ್ನು ಬಲಪಡಿಸುವ ಕುರಿತು ಅನ್ವೇಷಣೆಯಲ್ಲಿದೆ ಹಾಗೂ ಕೇಂದ್ರೀಕೃತ ಉದ್ದೇಶದೊಂದಿಗೆ ಪ್ರವೇಶಿಸುವಿಕೆಯ ಸವಾಲುಗಳನ್ನು ಎದುರಿಸುತ್ತಿದೆ” ಎಂದರು.

“ನಾಗರಿಕ ವಿಮಾನ ಸಚಿವಾಲಯವು (Minitry Of CiVil Aviation) ನಮ್ಮ ಏರ್‌ಲೈನ್‌ ಮೇಲೆ ಇರಿಸಿರುವ ನಂಬಿಕೆಗೆ ಬದ್ಧರಾಗಿದ್ದೇವೆ ಮತ್ತು ನಮಗೆ ನೀಡಿರುವ ಈ ಕರ್ತವ್ಯವನ್ನು ಸಫಲಗೊಳಿಸುವಲ್ಲಿ ನಿಷ್ಠೆಯಿಂದ ಕೆಲಸ ಮಾಡುತ್ತೇವೆ ಎಂದು ಏರ್ ಲೈನ್ಸ್ ಅಧ್ಯಕ್ಷ ಸಂಜೀವ್ ನರೇನ್ ತಿಳಿಸಿದರು.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button