Moreವಿಂಗಡಿಸದ

ಶೀಘ್ರದಲ್ಲೇ ಭಾರತೀಯ ಪ್ರಯಾಣಿಕರಿಗೆ ವೀಸಾ ನಿಯಮಗಳನ್ನು ಸಡಿಲಿಸಲಿದೆ ಸಿಂಗಾಪುರ

ಭಾರತೀಯರ ವಿದೇಶಿ ಪ್ರಯಾಣದ ಲಿಸ್ಟಿನಲ್ಲಿ “ಸಿಂಗಪುರ್” (Singapore) ಇದ್ದೇ ಇರುತ್ತದೆ. ನಿಮ್ಮ ಬಕೆಟ್ ಲಿಸ್ಟ್ ನಲ್ಲೂ ಸಿಂಗಪುರ್ ಇದ್ದರೇ, ನಿಮಗೆ ಒಂದು ಶುಭ ಸುದ್ದಿ ಕಾದಿದೆ.

ಇನ್ನು ಮುಂದೆ ಸಿಂಗಪುರ ಪ್ರವಾಸ ನಿಮಗೆ ಸುಗಮವಾಗಲಿದೆ.ಈ ದೇಶವು ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಮತ್ತು ಪ್ರವಾಸಿ ವಲಯಕ್ಕೆ ಪ್ರಮುಖ ಉತ್ತೇಜನ ನೀಡಲು ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಏಕೆಂದರೆ, ಸಿಂಗಪುರ 1.5 ಮಿಲಿಯನ್ (1.5 Million) ಭಾರತೀಯ ಪ್ರವಾಸಿಗರನ್ನು (Indian Tourists) ಆಕರ್ಷಿಸುವ ಉದ್ದೇಶದಿಂದ ಭಾರತೀಯ ಪ್ರಯಾಣಿಕರಿಗೆ ವೀಸಾ ನಿಯಮಗಳನ್ನು (Visa Rules) ಸಡಿಲಗೊಳಿಸಿದೆ.

ಈ ವರ್ಷ 1.5 ಮಿಲಿಯನ್ ಭಾರತೀಯ ಪ್ರವಾಸಿಗರನ್ನು ನಿರೀಕ್ಷಿಸುತ್ತಿರುವ ಸಿಂಗಾಪುರವು ಹೋಟೆಲ್ ಕೊಠಡಿಗಳಂತಹ (Hotel Rooms) ಆತಿಥ್ಯ ಮೂಲಸೌಕರ್ಯವನ್ನು ಹೆಚ್ಚಿಸುವತ್ತ ಗಮನಹರಿಸಿದೆ ಮತ್ತು ಪ್ರವಾಸಿಗರಿಗೆ ತಡೆರಹಿತ ಮತ್ತು ಸುಲಭವಾದ ವೀಸಾಗಳನ್ನು ನೀಡುವಲ್ಲಿ ಯೋಜನೆಗಳನ್ನು ರೂಪಿಸುತ್ತಿದೆ.

ಕೋವಿಡ್ ಗಿಂತ ಮೊದಲು 2019 ರಲ್ಲಿ 1.4 ಮಿಲಿಯನ್ ಭಾರತೀಯ ಪ್ರಯಾಣಿಕರು ಸಿಂಗಾಪುರಗೆ ಭೇಟಿ ನೀಡಿದ್ದರು.

ಆದರೆ ನಂತರ 2023 ರಲ್ಲಿ 1.1 ಮಿಲಿಯನ್ ಪ್ರವಾಸಿಗರು ಭೇಟಿ ನೀಡಿದ್ದಾರೆ.ಕೋವಿಡ್ ಕಾರಣದಿಂದಾಗಿ ಭಾರತೀಯ ಪ್ರವಾಸಿಗರ ಭೇಟಿಯಲ್ಲಿ ಇಳಿಮುಖಗೊಂಡಿದ್ದು, ಇದರಿಂದ ಚೇತರಿಸಿಕೊಳ್ಳಲು ಈ ಉಪಕ್ರಮವನ್ನು ಜಾರಿಗೆ ತಂದಿದೆ.

ಈಗ ಸಿಂಗಾಪುರವು ಸಾಂಕ್ರಾಮಿಕ ಪೂರ್ವ ವರ್ಷಗಳಿಗಿಂತ ಹೆಚ್ಚಿನ ಅಂಕಿಅಂಶಗಳನ್ನು ಪುನರುಜ್ಜೀವನಗೊಳಿಸಲು ಸಿದ್ಧವಾಗಿದೆ.

ದಿ ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ದೇಶವು ಭಾರತೀಯ ಪ್ರವಾಸಿಗರಿಗೆ ವೀಸಾ ನಿಯಮಗಳನ್ನು ಸಡಿಲಿಸುವ ನಿರ್ಧಾರವನ್ನು ತೆಗೆದುಕೊಂಡಿದೆ.

ಸಿಂಗಾಪುರ ಪ್ರವಾಸೋದ್ಯಮ (Singapore Tourism) ಮಂಡಳಿಯು ಪ್ರಸ್ತುತ ಪ್ರಯಾಣಿಕರಿಗೆ ಸುಲಭ ಮತ್ತು ಅನುಕೂಲಕರವಾದ ವೀಸಾ ನಿಯಮಗಳನ್ನು ಸುಲಭಗೊಳಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಇದು ಇನ್ನು ಮುಂದೆ ಭಾರತೀಯ ಪ್ರವಾಸಿಗರಿಗೆ ತಡೆರಹಿತ ಪ್ರಯಾಣದ ಅನುಭವಗಳನ್ನು ನೀಡಲಿದೆ.

ಸಿಂಗಾಪುರ ಪ್ರವಾಸೋದ್ಯಮ ಮಂಡಳಿಯ (Singapore Tourism Board) ಪ್ರಕಾರ, “ ಭಾರತೀಯ ಮಾರುಕಟ್ಟೆಯು ಪ್ರಬಲ ಸಾಮರ್ಥ್ಯವನ್ನು ಹೊಂದಿದೆ. ಆದ್ದರಿಂದ, ಹೆಚ್ಚಿನ ಭಾರತೀಯರನ್ನು ಸ್ವಾಗತಿಸಲು ಈ ಬೃಹತ್ ಯೋಜನೆಯನ್ನು ಬಳಸಲು ಮಂಡಳಿಯು ಕೆಲಸ ಮಾಡುತ್ತಿದೆ.”

ಚೆನ್ನೈ, ದೆಹಲಿ ಮತ್ತು ಮುಂಬೈನಲ್ಲಿ ಸಿಂಗಾಪುರ್ ಪ್ರವಾಸೋದ್ಯಮದ ಮೂರು ಕಚೇರಿಗಳಿವೆ. ಇಲ್ಲಿ ಪ್ರಸ್ತುತ ಭಾರತದ ಪ್ರಯಾಣಿಕರಿಗೆ ಸುಲಭವಾಗಿ ವೀಸಾಗಳನ್ನು ನೀಡುವ ಪ್ರಕ್ರಿಯೆಯಲ್ಲಿದೆ.

ತಡೆರಹಿತ ವೀಸಾ ಪ್ರಕ್ರಿಯೆಯನ್ನು (convenient visa rules) ಒದಗಿಸುವುದರ ಜೊತೆಗೆ, ಸಿಂಗಾಪುರವು ಸಾವಿರಾರು ಹೋಟೆಲ್‌ಗಳೊಂದಿಗೆ ಆತಿಥ್ಯ ಕ್ಷೇತ್ರವನ್ನು ಸಹ ಹೆಚ್ಚಿಸಲು ಸಿದ್ಧವಾಗಿದೆ.

ಹಿಂದಿನ 72,000 ಹೋಟೆಲ್ ಕೊಠಡಿಗಳೊಂದಿಗೆ ಸುಮಾರು 9,000 ಹೊಸ ಹೋಟೆಲ್ ಕೊಠಡಿಗಳನ್ನು ಸೇರಿಸಲಾಗುತ್ತಿದೆ.

ಭಾರತ (India) ಮತ್ತು ಸಿಂಗಾಪುರ (Singapore) ನಡುವಿನ ವಿಮಾನ ಸಂಪರ್ಕವೂ ಸಹ ಪೂರ್ವ ಕೋವಿಡ್ ಮಟ್ಟಕ್ಕೆ ಮರಳಲಿದೆ.

ಹೊಸ ವಿಮಾನ ವಾಹಕಗಳು ಸಹ ಈ ಮಾರ್ಗದಲ್ಲಿ ಕಾರ್ಯನಿರ್ವಹಿಸಲಿದೆ. ಒಮ್ಮೆ ಈ ನೂತನ ವಾಹಕಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಹಾರಲು ಆರಂಭಿಸಿದರೆ ಭಾರತೀಯ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರಲಿದೆ.

ಫಾರ್ಮಾ, ಬಯೋಮೆಡ್, ಐಟಿ, ಮತ್ತು ಫೋನ್ ಟೆಕ್ ನಂತಹ ಕ್ಷೇತ್ರಗಳಲ್ಲಿ ಭಾರತೀಯ ಮಾರುಕಟ್ಟೆ ಪ್ರಬಲವಾಗಿ ಬೆಳೆಯುತ್ತಿದೆ.

ಸಿಂಗಾಪುರ ಮತ್ತು ಭಾರತ ದ್ವಿಪಕ್ಷೀಯ ವ್ಯಾಪಾರನ್ನು ಹೆಚ್ಚಿಸಲು ಈ ಉಪಕ್ರಮ ಅತ್ಯಗತ್ಯ.

ಈ ಮೇಲಿನ ಎಲ್ಲಾ ಮಾಹಿತಿಗಳನ್ನು ಸಿಂಗಾಪುರ ಪ್ರವಾಸೋದ್ಯಮ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕ ಪೊಹ್ ಚಿ ಚುವಾನ್ ಅವರು ಪತ್ರಿಕಾ ಸಂಸ್ಥೆ PTI ವರದಿ ಮಾಡಿದ್ದು, ಇನ್ನು ಮುಂದೆ ಹೆಚ್ಚಿನ ಭಾರತೀಯ ಪ್ರವಾಸಿಗರನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಹೇಳಿದರು.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button