ಬೇಸಿಗೆಯಲ್ಲಿ ಶರಾವತಿ ಹಿನ್ನೀರಿನ ದೋಣಿ ಸವಾರಿ, ಕಾಂಡ್ಲಾ ವನದ ನಡಿಗೆ ಬಲು ಚಂದ
ಮಧ್ಯಾಹ್ನ 12.30 ಕ್ಕೆ ಊಟ ಮಾಡಿ, ಕಲ್ಲಂಗಡಿ ಹಣ್ಣು, ಕುರ್ಕುರೆ, ಚಿಪ್ಸ್, ತಂಪು ಪಾನೀಯ ಹೀಗೆ ಬಗೆ ಬಗೆಯ ತಿಂಡಿಗಳ ಬುತ್ತಿಯನ್ನು ನಮ್ಮ ಸವಾರಿ ಹೊರಟ್ಟಿದ್ದು ಶರಾವತಿಯ ಹಿನ್ನೀರಿನಲ್ಲಿ (Sharavati Back Water) ದೋಣಿ ಸವಾರಿ ಮಾಡಲು.
ಸುಮಾರು ಅಪರಾಹ್ನ 1.30 ಹಾಗೆ ನಾವು ತಲುಪಬೇಕಾದ ಜಾಗವನ್ನು ತಲುಪಿದೆವು. ನಮಗಾಗಿ ಕಾದಿರಿಸಿದ ದೋಣಿಯನ್ನು (Boat) ಹತ್ತಿ ನದಿಯನ್ನು ಸುತ್ತಲೂ ಹೊರೆಟೆವು.
ಅಕ್ಕ ಪಕ್ಕದಲ್ಲಿ ತೆಂಗಿನಮರಗಳು ಭಾಗಿ ನಮಗೆ ಸ್ವಾಗತವನ್ನು ಕೊರಲೆಂದೆ ಇದ್ದ ಹಾಗೆ ಭಾಸವಾಗುತ್ತಿತ್ತು. ಸ್ವಂಚಂದವಾದ ನದಿಯಲ್ಲಿ ಕೈಯನ್ನು ತೆಲಿಬಿಟ್ಟು ಪ್ರಕೃತಿ ಸೌಂದರ್ಯಕ್ಕೆ ಮನಸೋತೆ.
ತೆಗೆದುಕೊಂಡು ಹೋದ ತಿಂಡಿಯನ್ನು ತಿಂದು, ಒಂದಷ್ಟು ಫೋಟೋಗಳನ್ನು ತೆಗೆದೇವು.
ತಾವರೆ ಕೊಳಕ್ಕೆ ಹೋಗಿ ತಾವರೆ ಹೂವನ್ನು ಕಿತ್ತು ತಂದೆವು.. ಪಕ್ಕದಲ್ಲಿ ಬೇರೆ ಬೇರೆ ದೋಣಿಗಳಿದ್ದವು.
ಹಲವಾರು ಜೋಡಿ ಪ್ರೀ ವೆಡ್ಡಿಂಗ್ ಶೂಟ್ ನಲ್ಲಿ (Pre wedding Shoot) ತೊಡಗಿದ್ದವು. ನದಿ ಪಕ್ಕದಲ್ಲಿ ಕೆಲವು ಮಕ್ಕಳು ಆಟವನ್ನು ಆಡುತ್ತಿದ್ದರು ಹೀಗೆ ಜನರು ಪ್ರಕೃತಿಯ ಮಡಿಲಿನಲ್ಲಿ ತಮ್ಮ ಮನರಂಜನೆಯ್ಲಲಿ ತೊಡಗಿದ್ದರು.
ಉಳಿಯಲು ಮತ್ತು ಊಟಕ್ಕೆ ನದಿಯ ಪಕ್ಕದಲ್ಲೇ ಎಷ್ಟೋ ಹೋಂ ಸ್ಟೇ ಗಳು ಇದೆ. ಒಬ್ಬರಿಗೆ 200 ರೂಪಾಯಿಯಂತೆ 2 ಗಂಟೆಗಳ ಕಾಲ ನದಿಯಲ್ಲಿ ಸವಾರಿಯನ್ನು ಮಾಡಿಸಲಾಗುತ್ತದೆ.
ಸವಾರಿ ಮಾಡುವಾಗ ಸಣ್ಣಪುಟ್ಟ ಮ್ಯಾಂಗ್ರೋ ಅರಣ್ಯಗಳನ್ನು ( Mangrove Forests) ನೋಡಬಹುದು. ನಾವು 2 ಗಂಟೆಗಳ ಕಾಲ ನದಿಯಲ್ಲಿ ಸಮಯವನ್ನು ಕಳೆದು ಬಂದೆವು.
ಬೇಸಿಗೆಯ ಬಿರುಬಿಸಿಲಿಗೆ ಈ ತಾಣ ಸಂತೋಷವನ್ನು ನೀಡಿತ್ತು.ಇತ್ತೀಚಿಗೆ ಪ್ರೀ ವೆಡ್ಡಿಂಗ್ ಶೂಟ್ಗಳು ತುಂಬಾ ಟ್ರೇಡಿಂಗ್ ಇದೆ. ಅಂತಹ ಟ್ರೆಂಡಿಂಗ್ ಗೆ ಉತ್ತರ ಕನ್ನಡದ ಶರಾವತಿ ನದಿಯ ಹಿನ್ನೀರಿನ ದೋಣಿ ಸವಾರಿ ಅತ್ಯಂತ ಆಕರ್ಷಕವಾಗಿದೆ.
ಅಂತೆಯೇ ಈಗ ಬೇಸಿಗೆ ಕಾಲ ಈ ಜಾಗಕ್ಕೆ ಭೇಟಿ ನೀಡಿದರೆ ನೀರಲ್ಲಿ ಮನಸ್ಸೋಇಚ್ಛೆ ಸಂಭ್ರಮಿಸಬಹುದು.
ದೋಣಿ ಸವಾರಿಯನ್ನು ಸಂಭ್ರಮಿಸಿ ನಂತರ ಹೊರಟಿದ್ದು ಇತ್ತೀಚಿಗೆ ಜನಪ್ರಿಯ ಪ್ರವಾಸಿತಾಣವಾದ ಹೊನ್ನಾವರದ (Honnavara) ಮ್ಯಾಂಗ್ರೋವಾ ಬೋರ್ಡ್ ವಾಕ್ ಗೆ..
ಇದನ್ನು ಕಾಂಡ್ಲಾ ವನ (Kandla) ಎಂತಲೂ ಕರೆಯುವರು.. 10 ರೂಪಾಯಿ ಯನ್ನು ಕೊಟ್ಟು ಟಿಕೆಟ್ ಅನ್ನು ಪಡೆದುಕೊಂಡರೆ ಎಷ್ಟು ಹೊತ್ತು ಬೇಕಿದ್ರೂ ಸಮಯವನ್ನು ಕಳೆಯಬಹುದು.
ಹಚ್ಚ ಹಸಿರಿನ ಮ್ಯಾಂಗ್ರೋವ್ ಮರಗಳ ನಡುವೆ ಈ ಸುಂದರವಾದ ಮರದ ಕಾಲುದಾರಿಯ ಮೂಲಕ ನಡೆದಾಡುವುದು ಪ್ರಕೃತಿಯನ್ನು ಆನಂದಿಸಲು ಸುಂದರವಾದ ಮಾರ್ಗಗಳಲ್ಲಿ ಒಂದಾಗಿದೆ ಮತ್ತು ನಿಮ್ಮ ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ.
ಮರದ ಕಾಲುದಾರಿಯ ಮೂಲಕ ಹೋದ ನಂತರ, ಶರಾವತಿಯ ಹಿಂಭಾಗದ ನೀರು, ಸುತ್ತಲೂ ನೀರು ಮತ್ತು ಹಸಿರಿನಿಂದ ಕೂಡಿದ ಸುಂದರವಾದ ದೃಶ್ಯಾವಳಿಗಳನ್ನು ನೋಡಬಹುದು .
ಇದರ ನಂತರ ಸಣ್ಣ ಮ್ಯಾಂಗ್ರೋವ್ ದ್ವೀಪಕ್ಕೆ ಸಂಪರ್ಕ ಕಲ್ಪಿಸುವ ಮರದ ಸೇತುವೆ ಇದೆ. ಮ್ಯಾಂಗ್ರೋವ್‌ಗಳ ನಡುವೆ ಮರದ ಮಾರ್ಗವನ್ನು ನಿರ್ಮಿಸಲಾಗಿದೆ.
ದಾರಿಯ ಮದ್ಯದಲ್ಲಿ ಕುಳಿತುಕೊಳ್ಳಲು ವ್ಯವಸ್ಥೆಯನ್ನು ಮಾಡಿದ್ದಾರೆ ಮತ್ತು ಮ್ಯಾಂಗ್ರೋವ ಸಸ್ಯಾಗಳ ಬಗ್ಗೆ ಮಾಹಿತಿ ನೀಡಿರುವುದನ್ನು ಅಲ್ಲಲ್ಲಿ ಕಾಣಬಹುದಾಗಿದೆ.
ಪೃಕೃತಿಯ ಸಹಾಯದೊಂದಿಗೆ ಮಾನವನು ನಿರ್ಮಿಸಿದ ಈ ತಾಣಕ್ಕೆ ಭೇಟಿ ನೀಡಿದಾಗ ಮನಸ್ಸಿಗೆ ಅತ್ಯಂತ ಖುಷಿಯನ್ನು ನೀಡುತ್ತದೆ. ಇಲ್ಲಿಯೂ ಕೂಡ ಪ್ರೀ ವೆಡ್ಡಿಂಗ್ ಶೂಟ್ಗಳು ಮಾಡಲು ಅವಕಾಶಗಳಿವೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.