Moreವಿಂಗಡಿಸದಸಂಸ್ಕೃತಿ, ಪರಂಪರೆಸ್ಮರಣೀಯ ಜಾಗ

ಮಧ್ಯಪ್ರದೇಶದ ಆರು ತಾಣಗಳನ್ನು ಯುನೆಸ್ಕೋ ತಾತ್ಕಾಲಿಕ ಪಟ್ಟಿಯಲ್ಲಿ ಸೇರಿಸಲಾಗಿದೆ:

ಇತ್ತೀಚಿನ ಮಾಹಿತಿಯ ಪ್ರಕಾರ, ಮಧ್ಯಪ್ರದೇಶ ರಾಜ್ಯದ ಆರು ತಾಣಗಳನ್ನು ಯುನೆಸ್ಕೋದ ತಾತ್ಕಾಲಿಕ ಪಟ್ಟಿಯಲಾಗಿದ್ದು, ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಧ್ಯಪ್ರದೇಶದ (Madhya Pradesh) ಮುಖ್ಯಮಂತ್ರಿಗಳಾದ (Chief Minister) ಮೋಹನ್ ಯಾದವ್ (Mohan Yadav) ಅವರು ಈ ಸಂತಸದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ರಾಜ್ಯದ ಜನತೆಗೆ ಹೃತ್ಪೂರ್ವಕ ಧನ್ಯವಾದವನ್ನು ತಿಳಿಸಿದ್ದಾರೆ.

Madhya Pradesh six heritage Sites included in tentative UNESCO list

ತಾತ್ಕಾಲಿಕ ಪಟ್ಟಿಯಲ್ಲಿ (Tentative UNESCO list) ಸೇರ್ಪಡೆಗೊಂಡ ಆರು ತಾಣಗಳು:

1.ಗ್ವಾಲಿಯರ್‌ ಕೋಟೆ:

ತಾತ್ಕಾಲಿಕ ಪಟ್ಟಿಯಲ್ಲಿ ವಿಶಿಷ್ಟವಾಗಿ ಸೇರ್ಪಡೆಗೊಂಡ ಗ್ವಾಲಿಯರ್‌ ಕೋಟೆಯು ರಾಜ್ಯದ ಪ್ರಮುಖ ಹೆಗ್ಗುರುತಾಗಿದೆ. ಇದು ತನ್ನ ಐತಿಹಾಸಿಕ ಮಹತ್ವಕ್ಕಾಗಿ ಹೆಸರುವಾಸಿಯಾಗಿದೆ.

Madhya Pradesh six sites included in Tentative UNESCO list
Gwalior Fort

ಗ್ವಾಲಿಯರ್ ಕೋಟೆಯು 8 ನೇ ಶತಮಾನದ ಅದ್ಭುತವಾದ ಬೆಟ್ಟದ ಕೋಟೆಯಾಗಿದೆ. ಕೋಟೆಯ ಮೇಲೆ ಸೂರ್ಯನ ಕಿರಣ ಬೀಳುವ ಕ್ಷಣ, ಕೋಟೆಯು ಸುಂದರವಾಗಿ ಹೊಳೆಯುತ್ತದೆ.

2. ಧಮ್ನಾರ್‌ನ ಐತಿಹಾಸಿಕ ಗುಂಪು: (Historical Group of Dhamnar)

ಈ ತಾಣವು ಮಧ್ಯಪ್ರದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿನಿಧಿಸುತ್ತದೆ. ಧಮ್ನಾರ್‌ ಮಧ್ಯಪ್ರದೇಶದ ಮಂದಸೌರ್ ಜಿಲ್ಲೆಯಲ್ಲಿದೆ. ಇದು ಐತಿಹಾಸಿಕ ಗುಹೆಗಳಿಗೆ ನೆಲೆಯಾಗಿದೆ.

Madhya Pradesh six sites included in Tentative UNESCO list
Historical Group of Dhamnar

ಈ ರಾಕ್ ಕಟ್ ಸೈಟ್ 51 ಗುಹೆಗಳು, ಸ್ತೂಪಗಳು , ಚೈತ್ಯಗಳನ್ನು ಒಳಗೊಂಡಿದ್ದು, ಇವುಗಳನ್ನು 7 ನೇ ಶತಮಾನದಲ್ಲಿ ಕೆತ್ತಲಾಗಿದೆ. ಇಲ್ಲಿ ಬುದ್ಧನ ದೊಡ್ಡ ಪ್ರತಿಮೆ ಕೂಡಾ ಇದೆ.

3. ಭೋಜೇಶ್ವರ ಮಹಾದೇವ ದೇವಸ್ಥಾನ: (Bhojeshwar Mahadev Temple)

Madhya Pradesh six sites included in Tentative UNESCO list
Bhojeshwar Mahadev Temple

ಮಧ್ಯಪ್ರದೇಶದ ಅಪೂರ್ಣ ದೇವಾಲಯ ಇದಾಗಿದ್ದು, ಶಿವನಿಗೆ ಸಮರ್ಪಿತ ದೇವಾಲಯವಾಗಿದೆ. ಇದು ಗರ್ಭಗುಡಿಯಲ್ಲಿ 7.5 ಅಡಿ (2.3 ಮೀ) ಎತ್ತರದ ಲಿಂಗವನ್ನು ಹೊಂದಿದೆ. ದೇವಾಲಯದ ನಿರ್ಮಾಣವು 11 ನೇ ಶತಮಾನದಲ್ಲಿ ಪರಮಾರ ರಾಜ ಭೋಜನ ಆಳ್ವಿಕೆಯಲ್ಲಿ ಪ್ರಾರಂಭವಾಯಿತು.

4. ಚಂಬಲ್ ಕಣಿವೆಯ ಆಕರ್ಷಕ ರಾಕ್ ಆರ್ಟ್ ತಾಣಗಳು: (Rock Art Sites of Chambal Valley)

Madhya Pradesh six sites included in Tentative UNESCO list
Rock Art Sites of Chambal Valley

ಭಾರತದ ಮಧ್ಯ ಪ್ರದೇಶವು ಗಮನಾರ್ಹ ಸಂಖ್ಯೆಯ ರಾಕ್ ಆರ್ಟ್ ಸೈಟ್‌ಗಳಿಗೆ ನೆಲೆಯಾಗಿದೆ. ಚಂಬಲ್ ಕಣಿವೆಯ ಪ್ರದೇಶವು ಪ್ರಪಂಚದಲ್ಲಿ ತಿಳಿದಿರುವ ರಾಕ್ ಆರ್ಟ್ ಸೈಟ್‌ಗಳ ಅತಿದೊಡ್ಡ ಸಾಂದ್ರತೆಯನ್ನು ಹೊಂದಿದೆ. ಇದು ಪ್ರಾಚೀನ ಕಲಾತ್ಮಕತೆಯನ್ನು ಪ್ರದರ್ಶಿಸುವ ಸುಂದರ ತಾಣವಾಗಿದೆ.

5. ಖೂನಿ ಭಂಡಾರಾ, ಬುರ್ಹಾನ್‌ಪುರ: (Khooni Bhandara, Burhanpur )

Madhya Pradesh six sites included in Tentative UNESCO list
Khooni Bhandara, Burhanpur

ಖೂನಿ ಭಂಡಾರಾ ಎಂಬುದು ಭೂಗತ ನೀರಿನ ನಿರ್ವಹಣಾ ವ್ಯವಸ್ಥೆಯಾಗಿದ್ದು, ಮಧ್ಯಪ್ರದೇಶದ ಐತಿಹಾಸಿಕ ನಗರವಾದ ಬುರ್ಹಾನ್‌ಪುರ್‌ನಲ್ಲಿ ನಿರ್ಮಿಸಲಾದ ಎಂಟು ಜಲನಿರ್ವಹಣೆಗಳನ್ನು ಒಳಗೊಂಡಿದೆ. ಇದು ಭಾರತದಲ್ಲಿನ ಅತ್ಯಂತ ಮಹತ್ವದ ಐತಿಹಾಸಿಕ ನೀರಿನ ವ್ಯವಸ್ಥೆಗಳಲ್ಲಿ ಒಂದಾಗಿದೆ.

6. ರಾಮನಗರದ ಗೊಂಡಾ ಸ್ಮಾರಕ, ಮಂಡ್ಲಾ: (The Gond monuments of Ramnagar, Mandla)

Madhya Pradesh six sites included in Tentative UNESCO list
Gonda Memorial of Ramnagar, Mandla

ಗೊಂಡ (Gonda) ಬುಡಕಟ್ಟು ಜನಾಂಗದಿಂದ ಸ್ಮಾರಕಗಳಾದ ಮೋತಿ ಮಹಲ್, ರಾಮನಗರ, ಮಾಂಡ್ಲಾ, ರಾಯಭಗತ್ ಕಿ ಕೋಠಿ, ರಾಮನಗರ, ವಿಷ್ಣು ಮಂದಿರ (ಸೂರಜ್ ಮಂದಿರ), ​​ಬೇಗಂ ಮಹಲ್, ದಲ್ಬಾದಲ್ ಮಹಲ್ ಗಳನ್ನು ಒಳಗೊಂಡಿದೆ.

ಮಹಾನಗರ ಪಾಲಿಕೆ ಆಯುಕ್ತ ಸಂದೀಪ್ ಶ್ರೀವಾಸ್ತವ ಮಾತನಾಡಿ, “ 2010ರಲ್ಲಿ ಭೂಗತ ಜಲ ರಚನೆಯಾದ ಖೂನಿ ಭಂಡಾರವನ್ನು ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನ ನಡೆಸಿತ್ತು. 2013ರಲ್ಲಿ ಯುನೆಸ್ಕೋ ತಂಡವೊಂದು ಈ ರಚನೆಯನ್ನು ವೀಕ್ಷಿಸಿತ್ತು. ಅವರು ಸೂಚಿಸಿದ ಎಲ್ಲ ಲೋಪದೋಷಗಳನ್ನು ಸರಿಪಡಿಸಲಾಗಿದೆ.” ಎಂದರು.

ಲೋಪದೋಷಗಳನ್ನು ನಿವಾರಿಸಲು ಸರ್ಕಾರದಿಂದ ವಿಶೇಷ ಹಣವನ್ನು ಮಂಜೂರು ಮಾಡಲಾಗಿದ್ದು, ಅದರೊಂದಿಗೆ ಅಪ್ರೋಚ್ ರಸ್ತೆಯನ್ನು ನಿರ್ಮಿಸಲಾಗಿದೆ.

ಸೇತುವೆಯ ಮೇಲಿನ ರೈಲುಮಾರ್ಗದ ನಿರ್ಮಾಣವು ಮುಕ್ತಾಯದ ಹಂತದಲ್ಲಿದೆ .ಈಗ ಖೂನಿ ಭಂಡಾರ ಹೆಸರನ್ನು ಶಾಶ್ವತ ಪಟ್ಟಿಯಲ್ಲಿ ಸೇರಿಸಲು ಎಲ್ಲಾ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಬುರ್ಹಾನ್‌ಪುರದ ಶಾಸಕಿ ಅರ್ಚನಾ ಚಿಟ್ನಿಸ್ ಅವರು ತಿಳಿಸಿದ್ದಾರೆ.

“ಬುರ್ಹಾನ್‌ಪುರದ (Burhanpur) ಐತಿಹಾಸಿಕ ಖುನಿ ಭಂಡಾರ್ ಅನ್ನು ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರಿಸಿರುವುದು ಮಹತ್ವದ ಸಾಧನೆಯಾಗಿದೆ” ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button