ಮ್ಯಾಜಿಕ್ ತಾಣಗಳುವಿಂಗಡಿಸದ

ಕೇರಳದ ಸೊಬಗು ಮುನ್ನಾರ್ ಇಕೋ ಪಾಯಿಂಟ್

ಹಚ್ಚಹಸುರಿನ ಬೆಟ್ಟಗಳು, ತಗ್ಗು ಮೋಡಗಳು, ಹಸಿರು ಹುಲ್ಲುಗಾವಲು,ಮಂಜು ಕವಿದ ಮೋಡಗಳೊಡನೆ ಸುಂದರವಾದ ಕುಂಡಲ ಸರೋವರದ ದಡದಲ್ಲಿ ನೆಲೆಗೊಂಡಿರುವ ಇಕೋ ಪಾಯಿಂಟ್.ಒಮ್ಮೆಯಾದರೂ ಭೇಟಿಯಾಗಲೇಬೇಕು ಎಂಬಂತೆ ಆಕರ್ಷಿಸುತ್ತದೆ

.ಅನುಪಮಾ ಶಿರಿಯಾರ

ದೇವರ ಸ್ವಂತ ನಾಡು ಕೇರಳ. ಇಲ್ಲಿ ಹಲವಾರು ಪ್ರವಾಸಿ ತಾಣಗಳಿವೆ . ರಜಾ ದಿನಗಳಲ್ಲಿ ಕೇರಳವನ್ನು ನೋಡಲೆಂದೇ ಹಲವು ಪ್ರವಾಸಿಗರು ಆಕರ್ಷಿಸುತ್ತಾರೆ. ಸಾಮಾನ್ಯವಾಗಿ ಕೇರಳದ ದ್ವೀಪಗಳು ಪ್ರವಾಸಿಗರ ಆಕರ್ಷಣೆ .ಇದರ ಜೊತೆಗೆ ಪ್ರಮುಖ ಆಕರ್ಷಣೆ ಮುನ್ನಾರ್. ಮುನ್ನಾರ್ ನಲ್ಲಿನ ಇಕೋ ಪಾಯಿಂಟ್ ಕೇರಳದ ಸೊಬಗು.

ಹಚ್ಚ ಹಸಿರಿನಿಂದ ಸುತ್ತುವರೆದು ಮಂಜಿನ ಹೊದಿಕೆಯಂತೆ ಕಂಗೊಳಿಸುವ ಬೆಟ್ಟ ಇಳಿಜಾರುಗಳ ಸುತ್ತಲೂ ಶಾಂತಿಯುತವಾಗಿ ನಡೆದಾಡುವುದು ಅಥವಾ ಬೆಟ್ಟದ ತುದಿಗೆ ಚಾರಣ ಮಾಡುವುದಕ್ಕೆ ಇಕೋ ಪಾಯಿಂಟ್ ಅದ್ಭುತವಾದ ಸ್ಥಳವಾಗಿದೆ. ಇದು ಸಾಹಸ ಪ್ರಿಯರಿಗೂ ಅಂತೆಯೇ ಪರಿಸರ ಪ್ರೇಮಿಗಳಿಗು ಹೇಳಿ ಮಾಡಿಸಿದ ಸ್ಥಳವಾಗಿದೆ.

Munnar eco point

ಇಕೋ ಪಾಯಿಂಟ್ ತಲುಪುವ ದಾರಿ.

ಇದು ಕೇರಳದ ಇಡುಕ್ಕಿ ಜಿಲ್ಲೆಯ ಮುನ್ನಾರ್ ನಲ್ಲಿದೆ. ಇಕ್ಕೋ ಪಾಯಿಂಟ್ ತಲುಪಲು ಮುನ್ನಾರ್ ನಿಂದ 13 ಕಿಲೋಮೀಟರ್ ದೂರ ಕ್ರಮಿಸಿದರೆ ಭೂಲೋಕದ ಸ್ವರ್ಗದಂತಿರುವ ಇಕೋ ಪಾಯಿಂಟನ್ನು ನೋಡಬಹುದಾಗಿದೆ.

ನೀವು ಇದನ್ನು ಇಷ್ಟ ಪಡಬಹುದು; ಕೇರಳ ರಾಜ್ಯದ ಸುಂದರ ದ್ವೀಪಗಳಿವು. ಕೇರಳಕ್ಕೆ ಹೋದಾಗ ಈ ದ್ವೀಪಗಳನ್ನು ನೋಡಿಕೊಂಡು ಬನ್ನಿ.

Eco point

ಇಕೋ ಪಾಯಿಂಟ್ ವಿಶೇಷ

ಹಲವಾರು ಗಿರಿಧಾಮಗಳು ಇಕೋ ಪಾಯಿಂಟನ್ನು ಹೊಂದಿರುತ್ತದೆ, ಆದರೆ ಮುನ್ನಾರಿನ ಪಾಯಿಂಟ್ ನ ವಿಶೇಷವೆಂದರೆ ಇದು ಒಂದು ನಯನಮನೋಹರವಾದ ನದಿತೀರದಲ್ಲಿ ನೆಲೆಸಿರುತ್ತದೆ. ಇಲ್ಲಿ ವೀಕ್ಷಕರು ತಮ್ಮ ಧ್ವನಿ ಜಲಾಶಯದಿಂದ ಪ್ರತಿಧ್ವನಿಯಾಗಿ ವಾಪಸ್ ಆಗುವುದನ್ನು ಕೇಳಬಹುದಾಗಿದೆ ಇದೆಲ್ಲವೂ ಪ್ರವಾಸಿಗರ ಮನಸೆಳೆಯುವ ಸಂಗತಿಯಾಗಿದೆ.

Munnar

ಇಕೋ ಪಾಯಿಂಟ್ ಗೆ ಭೇಟಿ ನೀಡಲು ಅತ್ಯಂತ ಸೂಕ್ತವಾದ ಸಮಯವೆಂದರೆ, ಸೆಪ್ಟೆಂಬರ್ ನಿಂದ ಫೆಬ್ರವರಿವರೆಗೆ ಹವಾಮಾನವು ಶೀತ, ಶಾಂತ ಮತ್ತು ಪ್ರಶಾಂತವಾಗಿರುತ್ತದೆ. ಈ ಸಮಯದಲ್ಲಿ ಮಂಜಿನಿಂದ ಆವೃತವಾದಂತಹ ಇಕೋ ಪಾಯಿಂಟ್ ಮೋಡಗಳ ನಡುವೆ ನಡೆಯುವಂತಹ ಸುಂದರ ಅನುಭವವನ್ನು ಪ್ರವಾಸಿಗರಿಗೆ ನೀಡುತ್ತದೆ.

Kerala

ಬೇಸಿಗೆಯ ನಂತರ ಅತಿಯಾಗಿ ಮಳೆ ಸುರಿಯುವ ಕಾರಣ ಈ ಸಮಯದಲ್ಲಿ ಇಕೋ ಪಾಯಿಂಟ್ ಗೆ ಭೇಟಿ ನೀಡುವುದು ಸೂಕ್ತವಲ್ಲ ಏಕೆಂದರೆ ಇಳಿಜಾರುಗಳು ಮತ್ತು ಟ್ರೆಕ್ ಗಳು ಜಾರು ಮತ್ತೆ ಮಳೆಯು ತುಂಬಾ ಜೋರಾಗಿ ಸುರಿಯುವುದರಿಂದ ತಲುಪಲು ಕಷ್ಟವಾಗುತ್ತದೆ. ವರ್ಷದಿಂದ ವರ್ಷಕ್ಕೆ ಇಕೋ ಪಾಯಿಂಟ್ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಾಗುತ್ತಲೇ ಇದೆ. ಹಸಿರಿನ ಹಿತಕರ ವಾತಾವರಣ ಹಲವಾರು ಜನ ಈ ತಾಣಕ್ಕೆ ಭೇಟಿ ನೀಡಲು ಒಂದು ಪ್ರಮುಖ ಕಾರಣ. ಮನಸ್ಸಿಗೆ ನೆಮ್ಮದಿ ,ಪ್ರಕೃತಿಯ ಮಧ್ಯೆ ಕಾಲ ಕಳೆಯಲು ಬಯಸುವವರಿಗೆ ಈ ಜಾಗ ಒಂದು ಉತ್ತಮ ಆಯ್ಕೆ. ನೀವು ಕೂಡ ಕೇರಳಕ್ಕೆ ಹೋದಾಗ ಒಮ್ಮೆ ಮುನ್ನಾರ್ ಎನ್ನುವ ಕೇರಳದ ಅದ್ಬುತ ಪ್ರದೇಶದಲ್ಲಿ ಇಕೋ ಪಾಯಿಂಟ್ ಗೆ ಭೇಟಿ ನೀಡಿ. ಪ್ರಕೃತಿಯ ಸೌಂದರ್ಯವನ್ನು ಸವಿಯಿರಿ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button