ದೂರ ತೀರ ಯಾನಬೆರಗಿನ ಪಯಣಿಗರುವಿಂಗಡಿಸದ

ಉತ್ತರಾಖಂಡದಲ್ಲಿ ನೋಡಬಹುದಾದ ತಾಣಗಳು

ಉತ್ತರಾಖಂಡ(Uttarakhand)ಸಾಕಷ್ಟು ಪ್ರವಾಸಿಗರನ್ನು ಸದಾ ತನ್ನತ್ತ ಆಕರ್ಷಿಸುತ್ತಿರುತ್ತದೆ. ಇಲ್ಲಿನ ನೈಸರ್ಗಿಕ ಸೊಬಗು ಸಹಜವಾಗಿಯೇ ಪ್ರವಾಸಿಗರನ್ನು ಸಮ್ಮೋಹಿತರನ್ನಾಗಿಸುತ್ತದೆ.

ಪ್ರಕೃತಿಯ ಮಡಿಲಿನಲ್ಲಿ ಕಳೆಯಬೇಕು ಎನ್ನುವವರು, ಇಲ್ಲಿ ಭೇಟಿ ನೀಡುವಂತಹ ಸಾಕಷ್ಟು ತಾಣಗಳಿವೆ. ಕೆಲವು ಸ್ಥಳಗಳ ಬಗೆಗಿನ ಮಾಹಿತಿ ಇಲ್ಲಿದೆ.

ನೈನಿತಾಲ್(Nainital)

ಅತ್ಯಂತ ಜನಪ್ರಿಯ ಗಿರಿಧಾಮಗಳಲ್ಲಿ (Hill Station)ಉತ್ತರಾಖಂಡದ ನೈನಿತಾಲ್ ಕೂಡ ಒಂದು. ಪರ್ವತಗಳು, ಸರೋವರಗಳು ಮತ್ತು ಹಸಿರಿನಿಂದ ಆವೃತವಾದ ಬೆಟ್ಟಗಳು, ನಿಮಗೆ ಹೊಸ ಅನುಭವ ನೀಡುತ್ತದೆ.

Most beautiful places to visit in uttarakhand

ನೈನಿತಾಲ್ ಲೇಕ್(Lake )ಡಿಸ್ಟ್ರಿಕ್ಟ್‌ಗೆ ಭಾರತದ ಉತ್ತರವನ್ನು ನೈನಿ ಸರೋವರದ(Naini Lake) ಸುತ್ತಲೂ ಹೊಂದಿಸಲಾಗಿದೆ . ನೈನಿತಾಲ್‌ಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಮಾರ್ಚ್ ಮತ್ತು ಮೇ ನಡುವಿನ ಸಮಯ.

ಔಲಿ(Auli)

ಪ್ರವಾಸಿಗರ ಸ್ವರ್ಗ ಎಂದು ಕರೆಯಲ್ಪಡುವ ಚಮೋಲಿ(Chamoli) ಜಿಲ್ಲೆಯ ಔಲಿ ಉತ್ತರಾಖಂಡದ ಗಿರಿಧಾಮಗಳಲ್ಲಿ ಒಂದಾಗಿದೆ. ಹಿಮದಿಂದ ಆವೃತವಾದ ಪರ್ವತಗಳು, ದೇವದಾರು ಮತ್ತು ಓಕ್ ಕಾಡುಗಳು ಮತ್ತು ಸೇಬು ತೋಟಗಳು ಗಿರಿಧಾಮದ ಸೌಂದರ್ಯವನ್ನು ಹೆಚ್ಚಿಸುತ್ತವೆ.

Most beautiful places to visit in uttarakhand

ಔಲಿಯು ಮೌಂಟ್ ನಂದಾ ದೇವಿ, ನಂಗಾ ಪರ್ಬತ್(Nanga Parbat), ಡುಂಗಗಿರಿ(Dungagiri, ಬೀತರ್ತೋಲಿ, ನಿಕಾಂತ್ ಹಾಥಿ ಪರ್ಬತ್ ಮತ್ತು ಘೋರಿ ಪರ್ಬತ್‌ನ ಭವ್ಯವಾದ ನೋಟವನ್ನು ನೀಡುತ್ತದೆ.

ಬದರಿನಾಥ್(Badrinath)

ಉತ್ತರಾಖಂಡದ ಪವಿತ್ರವಾದ ಯಾತ್ರಾ ಸ್ಥಳಗಳಲ್ಲಿ ಬದರಿನಾಥ್‌ ಕೂಡ ಒಂದು. ಇಲ್ಲಿ ಮಹಾವಿಷ್ಣುವನ್ನು(Vishnu) ಆರಾಧಿಸಲಾಗುತ್ತದೆ. ಇದು ಪ್ರಮುಖ ಚಾರ್ ಧಾಮ್‌ ಯಾತ್ರೆ(Chardham )

Most beautiful places to visit in uttarakhand

ಇದು 10,280 ಅಡಿ ಎತ್ತರದಲ್ಲಿದ್ದು, ಆದಿ ಶಂಕರಾಚರ್ಯರಿಂದ (Shankaracharya)ಸ್ಥಾಪಿಸ್ಪಟ್ಟಿದೆ . ಪ್ರತಿ ವರ್ಷ ನವೆಂಬರ್‌(November )ಮತ್ತು ಏಪ್ರಿಲ್‌ (April)ತಿಂಗಳವರೆಗೆ ಮುಚ್ಚಲಾಗಿರುತ್ತದೆ.

ರಿಷಿಕೇಶ(Rishikesh)

ಉತ್ತರಾಖಂಡಲ್ಲಿರುವ ಡೆಹ್ರಾಡೂನ್‌(Dehradun )ಜಿಲ್ಲೆಯಲ್ಲಿ ಹರಿದ್ವಾರಕ್ಕೆ (Haridwar)ಸಮೀಪದಲ್ಲಿದೆ. ಇಲ್ಲಿ ಪ್ರಾಚೀನವಾದ ದೇವಾಲಯ, ಆಶ್ರಮಗಳು ಇವೆ. ಜನಪ್ರಿಯ ಕೆಫೆಗಳು ಇಲ್ಲಿವೆ. ವಾಸ್ತವವಾಗಿ, ರಿಷಿಕೇಶವನ್ನು ‘ವಿಶ್ವದ ಯೋಗ ರಾಜಧಾನಿ’ ಎಂದೇ ಕರೆಯುತ್ತಾರೆ. ಇದೊಂದು ಯಾತ್ರಾಸ್ಥಳ.

Most beautiful places to visit in uttarakhand

ನೀವು ಇದನ್ನೂ ಇಷ್ಟ ಪಡಬಹುದು: ಪಂಜಾಬ್ ನಲ್ಲಿ ನೋಡಬಹುದಾದ ತಾಣಗಳಿವು 

ಕೇದಾರನಾಥ(Kedarnath)

ಉತ್ತರಾಖಂಡದ ಮತ್ತೊಂದು ಪವಿತ್ರವಾದ ದೇವಾಲಯಗಳಲ್ಲಿ ಕೇದಾರನಾಥ ಕೂಡ ಒಂದು..ಇಲ್ಲಿ ಮಹಾಶಿವನು ಲಿಂಗ ಸ್ವರೂಪಿಯಾಗಿ ನೆಲೆಸಿದ್ದು, 12 ಜ್ಯೋತಿರ್ಲಿಂಗಗಳಲ್ಲಿ(Jyotirlinga)ಪ್ರಮುಖವಾಗಿದೆ.

Most beautiful places to visit in uttarakhand

ಟ್ರೆಕ್ಕಿಂಗ್‌ (Trekking)ಮಾಡುವ ಮೂಲಕ ಕೇದಾರನಾಥ ಯಾತ್ರೆ ಕೈಗೊಳ್ಳಬಹುದು. ಸ್ವಾಮಿಯ ದರ್ಶನವನ್ನು ಪಡೆಯಲು ಏಪ್ರಿಲ್‌ನಿಂದ ನವೆಂಬರ್‌ (November)ತಿಂಗಳ ನಡುವೆ ಭೇಟಿ ನೀಡುವುದು ಉತ್ತಮ.

ಮಸ್ಸೂರಿ(Mussoorie)

ಹಿಮಾಲಯದ ಶಿವಾಲಿಕ್‌ ಶ್ರೇಣಿ ಮತ್ತು ಡೂನ್‌ ಕಣಿವೆಯ ಅದ್ಭುತ ದೃಶ್ಯಾವಳಿಗಳನ್ನು ಕಣ್ತುಂಬಿಕೊಳ್ಳಬಹುದಾದ ಮಸ್ಸೂರಿಯನ್ನು ಕ್ವೀನ್‌ ಆಫ್‌ ದಿ ಹಿಲ್ಸ್‌ (Queen Of The Hills)ಎಂದೇ ಕರೆಯುತ್ತಾರೆ. ವರ್ಷವಿಡೀ ಆಹ್ಲಾದಕರವಾದ ವಾತಾವರಣ ಹೊಂದಿರುವ ಈ ಗಿರಿಧಾಮವು ನವ ಜೋಡಿಗಳ ಮಧುಚಂದ್ರಕ್ಕೆ ಬೆಸ್ಟ್ ಆಗಿದೆ.

Most beautiful places to visit in uttarakhand

ಚಮೋಲಿ (Chamoli)

ಚಮೋಲಿ ಜಿಲ್ಲೆ ಭಾರತದ ಉತ್ತರಾಖಂಡ ರಾಜ್ಯದ ಒಂದು ಜಿಲ್ಲೆ . ಇದು ಉತ್ತರಕ್ಕೆ ಟಿಬೆಟ್ ಪ್ರದೇಶದಿಂದ ಮತ್ತು ಪೂರ್ವಕ್ಕೆ ಪಿಥೋರಗಢ್(Pithoragarh )ಮತ್ತು ಬಾಗೇಶ್ವರ್,ದಕ್ಷಿಣಕ್ಕೆ ಅಲ್ಮೋರಾ, ನೈಋತ್ಯಕ್ಕೆ ಪೌರಿ ಗರ್ವಾಲ್, ಪಶ್ಚಿಮಕ್ಕೆ ರುದ್ರಪ್ರಯಾಗ (Rudraprayag)ಮತ್ತು ಉತ್ತರಕಾಶಿ ಉತ್ತರಾಖಂಡ ಜಿಲ್ಲೆಗಳಿಂದ ಸುತ್ತುವರಿದಿದೆ.

.ಚಮೋಲಿಯು ಬದರಿನಾಥ್(Badrinath), ಹೇಮಕುಂಡ್ ಸಾಹಿಬ್(Hemkund Sahib) ಮತ್ತು ವ್ಯಾಲಿ ಆಫ್ ಫ್ಲವರ್ಸ್(Valley of Flowers)ಸೇರಿದಂತೆ ಯಾತ್ರಿಕರು ಮತ್ತು ಪ್ರವಾಸಿ ಆಸಕ್ತಿಯ ವಿವಿಧ ಸ್ಥಳಗಳನ್ನು ಹೊಂದಿದೆ . ಚಿಪ್ಕೋ ಚಳುವಳಿಯನ್ನು(Chipko Movement)ಮೊದಲು ಚಮೋಲಿಯಲ್ಲಿ ಪ್ರಾರಂಭಿಸಲಾಯಿತು

Most beautiful places to visit in uttarakhand

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button