ದೂರ ತೀರ ಯಾನವಿಂಗಡಿಸದವಿಸ್ಮಯ ವಿಶ್ವಸೂಪರ್ ಗ್ಯಾಂಗು

ಕರ್ನಾಟಕದಲ್ಲಿ ನಿಮ್ಮ ಮನಸೆಳೆಯುವ  ಕಡಲತೀರಗಳು

ದಕ್ಷಿಣ ಕನ್ನಡ(Dakshin Kannada), ಉಡುಪಿ(Udupi), ಉತ್ತರಕನ್ನಡ(Uttar Kannada) ಈ ಮೂರು ಜಿಲ್ಲೆಗಳನ್ನು ಕರಾವಳಿ ಜಿಲ್ಲೆಗಳು ಎಂದು ಕರೆಯುತ್ತಾರೆ. ಇಲ್ಲಿ ನೀವು ಕಣ್ಣು ಹಾಯಿಸಿದ ದೂರವೆಲ್ಲ ಕಡಲ ತೀರಗಳಲ್ಲಿ ನಿಮಗೆ ಕಾಣಸಿಗುತ್ತದೆ.

ಅರೇಬಿಯನ್ ಸಮುದ್ರದ ಉದ್ದಕ್ಕೂ ಇರುವ ಈ ಸೊಗಸಾದ ಕರಾವಳಿಗಳು ಅತ್ಯಂತ ಸುಂದರ. ಹೀಗಾಗಿ ಹೆಚ್ಚಿನ ಜನರು ಇಲ್ಲಿ ಆಕರ್ಷಿತರಾಗುತ್ತಾರೆ.  ಹಾಗಾದ್ರೆ ಕರ್ನಾಟಕದಲ್ಲಿ ನೋಡಬಹುದಾದ ಕರಾವಳಿ (Coastal)ತೀರಗಳು ಇಲ್ಲಿವೆ 

ಓಂ ಬೀಚ್ (Om Beach)

ಓಂ ಬೀಚ್ ಉತ್ತರಕನ್ನಡ ಜಿಲ್ಲೆಯ  ಗೋಕರ್ಣದಲ್ಲಿದೆ(Gokarna). ಈ ಕರಾವಳಿಯು ಹಿಂದೂ ಧಾರ್ಮಿಕ ಚಿಹ್ನೆ  ಓಂ ಚಿಹ್ನೆಯ ಆಕಾರದಲ್ಲಿದೆ, ಕಾರಣ ಬೀಚ್ ಈ ಹೆಸರನ್ನು ಪಡೆದುಕೊಂಡಿದೆ.

Beautiful Beaches in Karnataka

ಕುಡ್ಲ್ ಬೀಚ್ (Kudle Beach)

ಈ ಕಡಲತೀರವು ಗೋಕರ್ಣದಲ್ಲಿದೆ.  ಈ ಕಡಲತೀರದ ವಾತಾವರಣವು ಸಾಕಷ್ಟು ಪ್ರಶಾಂತ ಮತ್ತು ನಿರ್ಮಲ. ಕುಡ್ಲ್ ಬೀಚ್ ಭಾರತದ ಗೋಕರ್ಣದಲ್ಲಿರುವ ನೈಸರ್ಗಿಕ ‘C’ ಆಕಾರದ ಬೀಚ್ ಆಗಿದೆ. ಇದು ಅಗ್ರ 5 ಕಡಲತೀರಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗಿದೆ.

Beautiful Beaches in Karnataka

ಪ್ಯಾರಡೈಸ್ ಬೀಚ್ (Paradise Beach)

ಉತ್ತರಕನ್ನಡ ಹಲವಾರು ಬೀಚ್ ಗಳನ್ನು ಹೊಂದಿದೆ. ಅದ್ರಲ್ಲಿ ಇದು ಕೂಡ ಒಂದು.

ಪ್ಯಾರಡೈಸ್ ಬೀಚ್ ಗೋಕರ್ಣದಲ್ಲಿದೆ, ಬೀಚ್‌ಗೆ ಭೇಟಿ ನೀಡಿದಾಗ  ಹಲವಾರು ಸಾಹಸ(Water Activities)ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು.

Beautiful Beaches in Karnataka

ನೀವು ಇದನ್ನು ಓದಬಹುದು:ಕರ್ನಾಟಕದ ಹತ್ತು ಸುಪ್ರಸಿದ್ಧ ಕೋಟೆಗಳು

ಪಣಂಬೂರು ಬೀಚ್ (Panambur Beach)

ಮಂಗಳೂರಿನಲ್ಲಿರುವ(Mangalore )ಈ ಬೀಚ್ ನಲ್ಲಿ ಸೂರ್ಯಾಸ್ತ (Sunset)ಮತ್ತು ಸೂರ್ಯೋದಯ(Sunrise )ನೋಡುವುದೇ ಚೆಂದ.  ಇದು ಪ್ರಸಿದ್ಧ ಪಿಕ್ನಿಕ್ ತಾಣವಾಗಿದೆ.

Beautiful Beaches in Karnataka

ಕರ್ನಾಟಕದ ಸ್ವಚ್ಛ  ಮತ್ತು ಸುರಕ್ಷಿತ ಕಡಲತೀರಗಳಲ್ಲಿ ಒಂದಾಗಿದೆ. ಬೀಚ್ ಜೆಟ್ ಸ್ಕೀಯಿಂಗ್, ಬೋಟಿಂಗ್, ಇನ್ನೂ ಅನೇಕ ಚಟುವಟಿಕೆಗಳನ್ನು ಹೊಂದಿದೆ.

ತಣ್ಣೀರುಬಾವಿ ಬೀಚ್ (Tannirbhavi Beach)

ತಣ್ಣೀರುಬಾವಿ ಬೀಚ್ ಮಂಗಳೂರಿನಲ್ಲಿದೆ. ಮಂಗಳೂರಿನಲ್ಲಿ ಹೆಚ್ಚಿನ ಜನರು ಭೇಟಿ ನೀಡುವ ಬೀಚ್ ನಲ್ಲಿ ಇದು ಕೂಡ ಒಂದು. ಇಲ್ಲಿಗೆ ಹೋಗುವ ಹಾದಿ ಕೂಡ ಸುಲಭ.

Beautiful Beaches in Karnataka

ಹಾಫ್ ಮೂನ್ ಬೀಚ್ (Halfmoon Beach)

ಈ ಬೀಚ್ ಗೋಕರ್ಣದಲ್ಲಿದೆ. ಆಕರ್ಷಕ ಪ್ರವಾಸಿ ತಾಣವಾಗಿದೆ. ಈ ಸ್ಥಳವನ್ನು ರಸ್ತೆಯ ಮೂಲಕ ತಲುಪಲಾಗುವುದಿಲ್ಲ.

ಹಾಫ್ ಮೂನ್ ಬೀಚ್‌ಗೆ ಹೋಗಲು ನೀವು ನಡೆಯಬೇಕಾಗುತ್ತದೆ(By Walk) ಅಥವಾ ಓಂ ಬೀಚ್‌ನಿಂದ ಲಭ್ಯವಿರುವ ಮೋಟಾರು ಬೋಟ್‌ಗಳನ್ನು(Motar Boat )ತೆಗೆದುಕೊಳ್ಳಬಹುದು.

Beautiful Beaches in Karnataka

ಮಲ್ಪೆ ಬೀಚ್(Malpe Beach)

ಈ ಕರಾವಳಿ ಪ್ರದೇಶವು ಉಡುಪಿಯಿಂದ(Udupi) ಸುಮಾರು 6 ಕಿಲೋಮೀಟರ್ ದೂರದಲ್ಲಿದೆ. ಹೆಚ್ಚು ಪ್ರಸಿದ್ಧಿ ಪಡೆದಿರುವ ಬೀಚ್ ಕೂಡ ಹೌದು. ಮೀನುಗಾರಿಕೆ ನೆಲೆಯಾಗಿರುವ ಮಲ್ಪೆಯಲ್ಲಿ ಈ ತಾನವಿದೆ.

ಇದು ಸೇಂಟ್ ಮೇರಿಸ್ ದ್ವೀಪದ(St.Marys Island)ಪರಿಪೂರ್ಣ ನೋಟವನ್ನು ನೀಡುತ್ತದೆ 

Must visit Beautiful Beaches in Karnataka

ಕಸರ್ಕೋಡ್ ಬೀಚ್(Kasarkod Beach)

ಈ ಅದ್ಭುತ ಬೀಚ್ ಕಸರ್ಕೋಡ್ ಗ್ರಾಮದ ಪಕ್ಕದಲ್ಲಿದೆ ಮತ್ತು ಇದು ಪ್ರಮಾಣೀಕೃತ ನೀಲಿ ಧ್ವಜ ಬೀಚ್(Blue Flag) ಆಗಿದೆ. ಇದು ಸ್ವಚ್ಛವಾಗಿದೆ ಮತ್ತು ಚೆನ್ನಾಗಿ ನಿರ್ವಹಿಸಲ್ಪಟ್ಟಿದೆ.

ಇದು  ಅತ್ಯಂತ ಅದ್ಭುತ ನೋಟವನ್ನು ಹೊಂದಿರುವ  ಸಮುದ್ರಗಳಲ್ಲಿ ಒಂದಾಗಿದೆ.

Beautiful Beaches in Karnataka

ಪಡುಬಿದ್ರಿ ಬೀಚ್ (Padubidri Beach)

ಈ ಕರಾವಳಿಯು ಉಡುಪಿಯಲ್ಲಿದೆ ಮತ್ತು ಇದು ನೀಲಿ ಧ್ವಜದ ಕಡಲತೀರಗಳಲ್ಲಿ ಕಂಡುಬರುತ್ತದೆ. ಕೊಂಕಣ ಪ್ರದೇಶ(ಕೊನಕನ್ ರೈಲ್ವೆ) ಮಾರ್ಗದಲ್ಲಿ ಪಡುಬಿದ್ರಿಯಲ್ಲಿ ನಿಲ್ದಾಣವಿದೆ.

ಇದು ಪಣಿಯೂರಿನಲ್ಲಿರುವ ಪಡುಬಿದ್ರೆ ಪಟ್ಟಣದಿಂದ ಸ್ವಲ್ಪ ದೂರದಲ್ಲಿದೆ, ನಂದಿಕೂರ್(ನಂದಿಕೂರು) ಹತ್ತಿರದ ರೈಲು ನಿಲ್ದಾಣವಾಗಿದೆ. ಇದು ಬ್ಲೂ ಫ್ಲ್ಯಾಗ್ ಪ್ರಮಾಣೀಕೃತ ಬೀಚ್.

Beautiful Beaches in Karnataka

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸಕ್ಕೆ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ( ​​Kannada.Travel ) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button