ವಿಂಗಡಿಸದವಿಸ್ಮಯ ವಿಶ್ವಸಂಸ್ಕೃತಿ, ಪರಂಪರೆ

ನಾಗಾಲ್ಯಾಂಡ್ ನಲ್ಲಿ ನೋಡಬಹುದಾದ ತಾಣಗಳು

ನಾಗಾಲ್ಯಾಂಡ್(Nagaland )ಈಶಾನ್ಯ ಭಾರತದ ರಾಜ್ಯಗಳಲ್ಲೊಂದು(Northeast State). ಇದು ಪಶ್ಚಿಮದಲ್ಲಿ ಅಸ್ಸಾಂ(Assam), ಉತ್ತರದಲ್ಲಿ ಅರುಣಾಚಲ ಪ್ರದೇಶ(Arunachal Pradesh), ಪೂರ್ವದಲ್ಲಿ ಮ್ಯಾನ್ಮಾರ್(Myanmar )ಮತ್ತು ದಕ್ಷಿಣದಲ್ಲಿ ಮಣಿಪುರದ(Manipur) ಜೊತೆಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಭಾರತದ ಏಳು ಸಹೋದರಿ ರಾಜ್ಯಗಳಲ್ಲಿ ಒಂದಾಗಿದೆ.

ನಾಗಲ್ಯಾಂಡ್ ನಲ್ಲಿ ನೋಡಬಹುದಾದ ಪ್ರವಾಸಿ ಸ್ಥಳಗಳು ಇಲ್ಲಿವೆ.

ಕೊಹಿಮಾ (Kohima)

ನಾಗಾಲ್ಯಾಂಡ್‌ನ ರಾಜಧಾನಿಯಾದ(Capital )ಕೊಹಿಮಾ. ಈ ರಾಜ್ಯದ ಎರಡನೇ ಅತಿ ದೊಡ್ಡ ನಗರ. ‘ಕೊಹಿಮಾ’ ಬ್ರಿಟಿಷರು(British )ನೀಡಿದ ಹೆಸರು, ಇದರ ಮೂಲ ಹೆಸರು ‘ಕೆವಿರಾ(Kewhia)’.

Must visit places in Nagaland

ಕೊಹಿಮಾವನ್ನು ಬ್ರಿಟಿಷರು ನಿರ್ಮಿಸಿದ್ದು, ನಾಗ(Naga) ಮತ್ತು ಕುಲ್ಕಿಸ್(Kulkies )ಬುಡಕಟ್ಟು(Tribes )ಜನಾಂಗದವರಿಗೆ ನೆಲೆಯಾಗಿದೆ.

ವಸ್ತುಸಂಗ್ರಹಾಲಯ(Museum), ಮೃಗಾಲಯ(Zoo), ಅಭಯಾರಣ್ಯ(Wildlife sanctuary), ಕಣಿವೆಗಳು(Valley )ಕೊಹಿಮಾದ ಆಕರ್ಷಣೆಯಾಗಿದೆ.

ಮೊಕೊಕ್ಚುಂಗ್ (Mokokchung)

ನಾಗಾಲ್ಯಾಂಡ್‌ನ ಅತ್ಯಂತ ಮಹತ್ವ ನಗರ ಕೇಂದ್ರ. ನಾಗಾದವರಿಗೆ ನೆಲೆಯಾಗಿರುವ ಜಿಲ್ಲೆ ಮೊಕೊಕ್ಚುಂಗ್. ಇಲ್ಲಿ ಡಿಸ್ಟ್ರಿಕ್ಟ್ ಮ್ಯೂಸಿಯಂ(District Museum), ಟೌನ್ ಮೇನ್ ಪಾರ್ಕ್(Towa Main Park), ಉಂಗಮ ವಿಲೇಜ್ (Ungma Village)ಲಾಂಗ್‌ಖುಮ್(Longkhum), ಲ್ಯಾಂಗ್‌ಪಾಂಗ್‌ಕಾಂಗ್(Langpangkong), ಮೊಪುಂಗ್‌ಚುಕಿಟ್(Mopungchuket) ಮತ್ತು ಚುಚುಯಿಮ್ಲಾಂಗ್‌ನಂತಹ ಸ್ಥಳಗಳನ್ನು ನೋಡಬಹುದು.

Mokokchung, Must visit places in Nagaland

ನೀವು ಇದನ್ನೂ ಸಹ ಓದಬಹುದು: ಅರುಣಾಚಲ ಪ್ರದೇಶದಲ್ಲಿ ನೋಡಬಹುದಾದ ತಾಣಗಳು

ದಿಮಾಪುರ (Dimapur)

ನಾಗಾಲ್ಯಾಂಡ್‌ನಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರ. ದಿಮಾಪುರ ಪೂರ್ವ ಭಾಗದ ಗಡಿಯು ಧನ್ಸಿರಿ(Dhansiri River) ನದಿಯಿಂದ ಆವೃತವಾಗಿದ್ದರೆ, ಪಶ್ಚಿಮ ಭಾಗವು ಹೆಚ್ಚಾಗಿ ಕಾಡುಗಳು ಮತ್ತು ಬೆಟ್ಟಗಳನ್ನು ಒಳಗೊಂಡಿದೆ.

Must visit places in Nagaland

ಟ್ರಿಪಲ್ ಫಾಲ್ಸ್(Triple Falls), ಕಚರಿ ಅವಶೇಷಗಳು(Kachari), ನಾಗಾಲ್ಯಾಂಡ್ ವಿಜ್ಞಾನ ಕೇಂದ್ರ (Nagaland Science Center)ಮತ್ತು ಜೂಲಾಜಿಕಲ್ ಪಾರ್ಕ್ (Zoological Park)ಗಳನ್ನೂ ನೋಡಬಹುದು.

ವೊಖಾ(Wokha)

ವೊಖಾ ಕೊಹಿಮಾದಿಂದ ಸುಮಾರು 75 ಕಿ.ಮೀ. ದೂರದಲ್ಲಿದೆ. ಇಲ್ಲಿ ಲೋಥ ಬುಡಕಟ್ಟು(Lotha Tribes) ಜನರು ವಾಸಿಸುತ್ತಿದ್ದಾರೆ. ವೋಖಾದಲ್ಲಿನ ಆಕರ್ಷಣೆಯೆಂದರೆ ದೊಯಾಂಗ್ ಅಣೆಕಟ್ಟು(Doyang bridge). ಇಲ್ಲಿಂದ ಸುಮಾರು 2 ಗಂಟೆಗಳ ದೂರದಲ್ಲಿದೆ. ಈ ಪ್ರದೇಶ ಅಮುರ್ ಫಾಲ್ಕನ್‌ಗಳಿಗೆ (Amur Falcon)ಹೆಸರುವಾಸಿ.

Wokha

ನಾಗಲ್ಯಾಂಡ್ ನಲ್ಲಿ ನೀವು ಹಾರ್ನ್ ಬಿಲ್ ಉತ್ಸವ ನೋಡುವುದನ್ನು ಮರೆಯಬೇಡಿ.

ಹಾರ್ನ್ ಬಿಲ್ ಉತ್ಸವ (Hornbill Festival)

ಇಲ್ಲಿ ನಡೆಯುವ ಉತ್ಸವ ತುಂಬಾನೇ ಪ್ರಸಿದ್ಧಿ ಪಡೆದಿದೆ. ಕೊಹಿಮಾದ ಕಿಸಮ ಹೆರಿಟೇಜ್ ವಿಲೇಜ್ (Kisama Heritage Village) ನಲ್ಲಿ ನಡೆಯುತ್ತದೆ.ಹಾರ್ನ್‌ಬಿಲ್ ಹಬ್ಬವನ್ನು ನಾಗಾ(Naga)ಜನರು ಪ್ರತಿ ವರ್ಷ ಡಿಸೆಂಬರ್(December)1 ರಿಂದ 10 ರವರೆಗೆ ಬಹಳ ಉತ್ಸಾಹದಿಂದ ಆಚರಿಸುತ್ತಾರೆ.

Hornbill Festival Must visit places in Nagaland

ನಾಗ(Naga)ಸಮುದಾಯ ಹೆಚ್ಚು ಪಾಲ್ಗೊಳ್ಳುತ್ತಾರೆ.ಈ ಉತ್ಸವದ ಪ್ರಮುಖ ಆಕರ್ಷಣೆಯೆಂದರೆ ಮಹಿಳೆಯರು ಹೆಚ್ಚಾಗಿ ಕಬ್ಬಿನ ಅಥವಾ ಬಿದಿರಿನ ಎಲೆಗಳಿಂದ ಮಾಡಿದ ವರ್ಣರಂಜಿತ ಉಡುಪುಗಳನ್ನು ಧರಿಸಿ

ಪ್ರದರ್ಶಿಸುವ ವಿವಿಧ ಸಾಂಸ್ಕೃತಿಕ ನೃತ್ಯಗಳು(Cultural Dance)ಮತ್ತು ಪುರುಷರು ತಮ್ಮ ಸಾಂಸ್ಕೃತಿಕ ಪ್ರಸ್ತುತಿಯಲ್ಲಿ ‘ನ್ಗಾಖೋ’ ಎಂದು ಕರೆಯಲ್ಪಡುವ ಸಾಂಪ್ರದಾಯಿಕ ಉಡುಗೆಯನ್ನು (Traditional Dress)ಧರಿಸುತ್ತಾರೆ.

Hornbill Festival

ಈ ಹಬ್ಬವು ನಾಗಾಲ್ಯಾಂಡ್‌ನ ವಿವಿಧ ಸಮುದಾಯಗಳಿಂದ ರಚಿಸಲಾದ ಶ್ರೀಮಂತ ಕಲಾಕೃತಿಗಳು ಮತ್ತು ಕರಕುಶಲ ವಸ್ತುಗಳನ್ನು ಪ್ರದರ್ಶಿಸುತ್ತದೆ(Exibition). ಈ ಸ್ಥಳಕ್ಕೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಸೆಪ್ಟೆಂಬರ್(September), ಅಕ್ಟೋಬರ್(October).

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸಕ್ಕೆ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ( ​​Kannada.Travel ) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button