ಕಾರು ಟೂರುವಿಂಗಡಿಸದ

ರಜಾ ಮಜಾಕ್ಕೆ ಯೋಚಿಸುತ್ತಿದ್ದೀರಾ..? ಒಮ್ಮೆ ಇತ್ತ ಕಣ್ಣು ಹಾಯಿಸಿ.

ನಿತ್ಯ ಅದೇ ಆಫೀಸು, ಮನೆ.. ಟ್ರಾಫಿಕ್‌,. ಈ ಎಲ್ಲ ಕಿರಿ ಕಿರಿಯಿಂದ ಮನಸ್ಸಿಗೆ ಒಂದಿಷ್ಟು ರಿಲ್ಯಾಕ್ಸ್‌ ಬೇಕು ಅಂತ ಹಲವರಿಗೆ ಅನಿಸಬಹುದು. ಒಮ್ಮೊಮ್ಮೆ ಅದೆಲ್ಲವೂದರಿಂದ ಬಿಡುವು ಬೇಕು,.. ಎಲ್ಲಿಗಾದ್ರೂ ಹೋಗೋಣ ಅಂತ ಬಹುತೇಕರಿಗೆ ಅನಿಸುತ್ತದೆ.. ಹೀಗೆ ಹೋಗೋ ಮನಸ್ಸು ಮಾಡಿದಾಗಲೂ ದೂರ ಹೋದ್ರೆ ಬೆಂಗಳೂರಿನಲ್ಲಿ ಟ್ರಾಫಿಕ್‌ನಲ್ಲೇ ದಿನ ಕಳೆದು ಹೋಗುತ್ತೆ ಅನ್ನೋದು ಕೆಲವರ ಮನಸ್ಸಿನ ಮಾತು..

ಜರ್ನಿ ಕಷ್ಟ ಕಷ್ಟ ಅಂತ ಇನ್ನೂ ಕೆಲವರಿಗೆ ಅನಿಸುತ್ತೆ.. ಹೀಗಾಗಿ ಬೆಂಗಳೂರಿನ ಅಕ್ಕಪಕ್ಕದಲ್ಲಿಯೇ ಪ್ರವಾಸಕ್ಕೆ ಹೋಗುವವರು ಇರ್ತಾರೆ.. ಬೆಂಗಳೂರಿನ ಸುತ್ತಮುತ್ತ ಇಂತಹ ಹಲವಾರು ಜಾಗಗಳಿರುತ್ತದೆ. ಅವುಗಳಲ್ಲಿ ಕೆಲವು ಜಾಗಗಳ ಮಾಹಿತಿ ನಿಮಗಾಗಿ.

ನಂದಿ ಹಿಲ್ಸ್‌ (Nandi Hills)

ನಂದಿ ಬೆಟ್ಟ.. ಬಹುಶಃ ಈ ಹೆಸರನ್ನು ಕೇಳದ ಬೆಂಗಳೂರು ನಿವಾಸಿಗರಿಲ್ಲ ಬಿಡಿ. ಬೆಂಗಳೂರಿನಿಂದ ಸುಮಾರು 60 ಕಿಮೀ ದೂರದಲ್ಲಿದೆ ನಂದಿ ಹಿಲ್ಸ್‌. ಫ್ರೆಂಡ್ಸ್‌ ಜೊತೆಗೆ ಟ್ರೆಕ್ಕಿಂಗ್‌ ಹೋಗಬೇಕು.. ವೀಕೆಂಡ್‌ ಮಜಾ ಮಾಡಬೇಕು ಅಂತೆಲ್ಲ ಬಯಸುವವರಿಗೆ ಇದು ಉತ್ತಮ ಆಯ್ಕೆಗಳಲ್ಲೊಂದು. ಇದು ಅತ್ಯಂತ ಜನಪ್ರಿಯತೆ ಪಡೆಯುತ್ತಿರೋ ಹಿಲ್‌ ಸ್ಟೇಷನ್‌. ಆಲ್‌ಮೋಸ್ಟ್‌ ಜನರ ವೀಕೆಂಡ್‌ಗೆ ಇದು ಅತ್ಯಂತ ಪ್ರಸಿದ್ಧಿ ಪಡೆದ ಸ್ಥಳ. ನಂದಿಬೆಟ್ಟದಲ್ಲಿ ಸೂರ್ಯೋದಯದ ವ್ಯೂವ್‌ಪಾಯಿಂಟ್‌ ಮತ್ತು ಚನ್ನಗಿರಿ ಬೆಟ್ಟ ಟ್ರೆಕ್ ಸ್ಟಾರ್ಟ್ ಪಾಯಿಂಟ್ ಸೇರಿದಂತೆ ಹಲವು ತಾಣಗಳು ನೋಡುವುದಕ್ಕೆ ಸಿಗುತ್ತದೆ. ನಂದಿ ಬೆಟ್ಟಗಳು ಕೇವಲ ಟ್ರೆಕ್ಕಿಂಗ್‌ ಮಾತ್ರವಲ್ಲ, ಹಲವಾರು ದೇವಾಲಯಗಳು, ಸ್ಮಾರಕಗಳು ಮತ್ತು ಜನಪ್ರಿಯ ಐತಿಹಾಸಿಕ ಕೋಟೆಗೆ ಹೆಸರುವಾಸಿಯಾಗಿದೆ. ಇನ್ನು ಬೆಳಿಗ್ಗೆ 6 ರಿಂದ ಸಂಜೆ 6 ತನಕ ಪ್ರವಾಸಿಗರಿಗೆ ಮುಕ್ತ ಈ ತಾಣ.

Nandi Hills

ಬನ್ನೇರುಘಟ್ಟ ಉದ್ಯಾನವನ (Bannerghatta National Park)

ಬೆಂಗಳೂರಿನ ಹೊರವಲಯದಲ್ಲಿರುವ ಈ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವು ಮಕ್ಕಳಿಗೆ ಪ್ರಿಯವಾದ ತಾಣವಾಗಿದೆ. ಇದು ನಗರದ ಅತ್ಯಂತ ಜನಪ್ರಿಯ ಸ್ಥಳಗಳಲ್ಲಿ ಒಂದು. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ನೀವು ಸಾಮಾನ್ಯ ಕಾಡು ಪ್ರಾಣಿಗಳಲ್ಲದೆ ಅನೇಕ ಅಪರೂಪದ ಪ್ರಭೇದಗಳನ್ನು ಸಹ ನೋಡಬಹುದು. ಶ್ರೀಗಂಧ, ಬೇವು, ಹುಣಸೆ, ಜಾಮೂನ್, ನೀಲಗಿರಿ, ಬಿದಿರಿನ ಮರಗಳು ಇಲ್ಲಿವೆ. ಈ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡುವ ಮೂಲಕ, ನೀವು ಜಂಗಲ್ ಸಫಾರಿ, ಚಾರಣದಂತಹ ಚಟುವಟಿಕೆಗಳನ್ನು ಸಹ ಆನಂದಿಸಬಹುದು. ನಿಸರ್ಗ ಪ್ರಿಯರಿಗೆ ಇದೊಂದು ಬೆಸ್ಟ್ ತಾಣ.

Bhannerghatta National Park

ಬೆಂಗಳೂರಿನ ಹೃದಯ ಭಾಗದಿಂದ 22 ಕಿ.ಮೀ. ಈ ಉದ್ಯಾನವನ ಬೆಳಿಗ್ಗೆ 9.30 ರಿಂದ ಸಂಜೆ 5 ರವರೆಗೆ ಓಪನ್‌ ಇರುತ್ತದೆ.. ಪ್ರವೇಶ ಶುಲ್ಕ ಕೂಡ ಇರುತ್ತದೆ.ಮೃಗಾಲಯ ಮತ್ತು ಜಂಗಲ್ ಸಫಾರಿಯ ಜೊತೆಗೆ, ಬನ್ನೇರುಘಟ್ಟ ಜೈವಿಕ ಉದ್ಯಾನವನವು ಚಿಟ್ಟೆ ಪಾರ್ಕ್ ಮತ್ತು ರಕ್ಷಣಾ ಕೇಂದ್ರವನ್ನು ಹೊಂದಿದೆ. 122 ಎಕರೆ ವಿಸ್ತಾರವನ್ನು ಹೊಂದಿರುವ ಈ ಅಭಯಾರಣ್ಯದಲ್ಲಿ ಹುಲಿಗಳು, ಕರಡಿಗಳು, ಜಿಂಕೆಗಳು, ಆನೆಗಳು ಮತ್ತು ಕೋತಿಗಳು ಸೇರಿದಂತೆ ವಿವಿಧ ಪ್ರಾಣಿಗಳ ನೋಟವನ್ನು ಕಣ್ತುಂಬಿಕೊಳ್ಳಬಹುದು.

ನೀವು ಇದನ್ನು ಓದಬಹುದು :ಗದಗ ಜಿಲ್ಲೆಯಲ್ಲಿ ಭೇಟಿ ನೀಡಬಹುದಾದ ಚಂದದ ತಾಣಗಳು:

ಟಿಪ್ಪು ಅರಮನೆ (Tippu palace)

ಬೆಂಗಳೂರಿನಲ್ಲಿ ವೀಕೆಂಡ್‌‌ನಲ್ಲಿ ಸುತ್ತಾಡುವುದಕ್ಕೆ ಹೋಗುವರು ನೋಡಬಹುದಾದ ಮತ್ತೊಂದು ಜಾಗವಂದ್ರೆ ಟಿಪ್ಪು ಸುಲ್ತಾನ್‌ ಅರಮನೆ. ಇಂಡೋ ಇಸ್ಲಾಮಿಕ್‌ ಶೈಲಿಯಲ್ಲಿ ನಿರ್ಮಿಸಲಾಗಿರುವ ಈ ಅರಮನೆ ನೋಡಲು ಸುಂದರವಾಗಿದೆ ಈ ಅರಮನೆಯ ಛಾವಣಿಗಳು ಮತ್ತು ಗೋಡೆಗಳು ಸುಂದರವಾದ ಹೂವಿನ ಮಾದರಿಗಳನ್ನು ಒಳಗೊಂಡಿದೆ ಮತ್ತು ಕಮಾನುಗಳು ಸಂಕೀರ್ಣವಾದ ವಿನ್ಯಾಸವನ್ನು ಹೊಂದಿವೆ. ಈ ಅರಮನೆಯ ನೆಲಮಹಡಿಯಲ್ಲಿ ವಸ್ತುಸಂಗ್ರಹಾಲಯವಿದ್ದು, ಟಿಪ್ಪು ಸುಲ್ತಾನ ಮತ್ತು ಅವನ ಆಳ್ವಿಕೆಯ ದಿನಗಳ ಬಗ್ಗೆ ತಿಳಿದುಕೊಳ್ಳಲು ಬಯಸುವ ಪ್ರವಾಸಿಗರಿಗೆ ಇದು ಉತ್ತಮ ಸ್ಥಳವಾಗಿದೆ. ಚಾಮರಾಜಪೇಟೆಯಲ್ಲಿರುವ ಈ ಅರಮನೆಗೆ ಬೆಳಗ್ಗೆ 8.30 ರಿಂದ ಸಂಜೆ 5.30ರ ವರೆಗೆ ಪ್ರವಾಸಿಗರ ಭೇಟಿಗೆ ಅವಕಾಶವಿದೆ.

Tippu Palace

ಬೆಂಗಳೂರು ಅರಮನೆ (Bangalore palace)

ಭವ್ಯವಾದ ಬೆಂಗಳೂರು ಅರಮನೆ 45000 ಚದರ ಅಡಿಗಳಷ್ಟು ವಿಶಾಲವಾದ ಪ್ರದೇಶದಲ್ಲಿ ಹರಡಿದೆ. ಟ್ಯೂಡರ್ ಮತ್ತು ಸ್ಕಾಟಿಷ್ ಗೋಥಿಕ್ ವಾಸ್ತುಶಿಲ್ಪದಿಂದ ಪ್ರೇರಿತವಾಗಿ ಗೋಪುರಗಳು ಮತ್ತು ಕಿಟಕಿಗಳನ್ನು ನಿರ್ಮಿಸಲಾಗಿದೆ. ಒಳಾಂಗಣವನ್ನು ಮರದಿಂದ ಅದ್ಭುತವಾಗಿ ಕೆತ್ತಲಾಗಿದೆ ಅರಮನೆಯು ವಿಶಾಲವಾದ ಹಸಿರು ಉದ್ಯಾನವನಗಳಿಂದ ಕೂಡಿದೆ. ಈ ಅರಮನೆ ಬೆಂಗಳೂರಿನ ವಸಂತ ನಗರದಲ್ಲಿದ್ದು. ಬೆಳಗ್ಗೆ 10.30ರಿಂದ ಸಂಜೆ 5 ಗಂಟೆಯ ವರೆಗೆ ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗಿದೆ.

Bangalore Palace

ಲಾಲ್ ಬಾಗ್(Lalbag)

ಬೆಂಗಳೂರು (Bangalore )ಅಂದಾಗ ಹಲವರಿಗೆ ಲಾಲ್‌ಬಾಗ್ ಹೆಸರು ಕೂಡ ಕಣ್ಮುಂದೆ ಹಾದು ಹೋಗುತ್ತದೆ. ಅದರಲ್ಲಿಯೂ ಲಾಲ್‌ ಬಾಗ್‌ನಲ್ಲಿ ನಡೆಯುವ ಫ್ಲವರ್ ಶೋಗೆ (flower show,)ಮಂದಿಯೇ ಇಲ್ಲ. ಇಲ್ಲಿ ಹೇರಳವಾಗಿ ಕಂಡು ಬರುವ ಕೆಂಪು ಗುಲಾಬಿಗಳ ಕಾರಣದಿಂದ ಇದಕ್ಕೆ ಲಾಲ್ ಬಾಗ್ ಅಥವಾ ರೆಡ್ ಗಾರ್ಡನ್ ಎಂಬ ಹೆಸರು ಬಂದಿದ್ದು. ಈ ಉದ್ಯಾನವನದಲ್ಲಿ ಸುಂದರವಾದ ಗಾಜಿನ ಮನೆ, ಪುರಾತನ ಮರಗಳ ಅಪರೂಪ ಸಂಗ್ರಹ ಹಾಗೂ ಕೆಲವು ವಿಶಿಷ್ಟವಾದ ಉಷ್ಣವಲಯದ ಸಸ್ಯರಾಶಿಗಳು ಇಲ್ಲಿವೆ ಈ ಉದ್ಯಾನವನವು ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಸ್ಥಳವಾಗಿದೆ. ಉದ್ಯಾನವನವು ಬೆಳಗ್ಗೆ 6 ರಿಂದ ಸಂಜೆ 7 ರವರೆಗೆ ತೆರೆದಿರುತ್ತದೆ.

Lalbab

ಇವಿಷ್ಟೆ ಅಲ್ಲ ಬೆಂಗಳೂರಿನಲ್ಲಿ ಇನ್ನೂ ಹಲವಾರು ತಾಣಗಳಿವೆ.. ವೀಕೆಂಡ್‌ನಲ್ಲಿ ಒಂದೊಳ್ಳೆ ಜಾಗಗಳಿಗೆ ಹೋಗ ಬಯಸುವವರು ಈ ಜಾಗಗಳಿಗೂ ಚಿತ್ತ ಹರಿಸಬಹುದು. ನೀವು ಕೂಡ ನಿಮ್ಮೂರಿನಲ್ಲಿ ಇಂತಹದ್ದೇ ವಿಶೇಷ ತಾಣಗಳಿದ್ರೆ ಅವುಗಳ ಅಚ್ಚರಿಯ ಬಗ್ಗೆ ನಮ್ಮೊಂದಿಗೆ ಹಂಚಿಕೊಳ್ಳಬಹುದು.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟ್ರಾವೆಲ್ ಗ್ರೂಪ್ ಜಾಯಿನ್ ಆಗಿ.ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button