ಮ್ಯಾಜಿಕ್ ತಾಣಗಳುವಿಂಗಡಿಸದ

ಅಮೃತ್ ಉದ್ಯಾನ್ ಮಾ.31 ರ ತನಕ ಪ್ರವಾಸಿಗರಿಗೆ ಮುಕ್ತ

ಅಮೃತ್ ಉದ್ಯಾನ್ (Amrit Udyan) ಎಂದೂ ಸಹ ಕರೆಯಲ್ಪಡುವ ಮೊಘಲ್ ಗಾರ್ಡನ್ಸ್ ಉದ್ಯಾನವು ಫೆ.02ರಿಂದ ಪ್ರವೇಶಕ್ಕೆ ಮುಕ್ತವಾಗಿದೆ.

ಪ್ರವಾಸಿಗರು (Tourist) ಮಂಗಳವಾರದಿಂದ ಭಾನುವಾರದವರೆಗೆ ವಾರದಲ್ಲಿ ಆರು ದಿನಗಳ ಕಾಲ ಈ ಉದ್ಯಾನವನಕ್ಕೆ ಬರಬಹುದು.

ಪ್ರತಿ ಸೋಮವಾರದಂದು, ಉದ್ಯಾನವನವನ್ನು ಮುಚ್ಚಲಾಗುತ್ತದೆ. ರಾಷ್ಟ್ರಪತಿ ಭವನದ ಅಧಿಕೃತ ಹೇಳಿಕೆಯ ಪ್ರಕಾರ, ಅಮೃತ್ ಉದ್ಯಾನವನ್ನು 31 ಮಾರ್ಚ್ 2024 ರ ತನಕ ಸಾರ್ವಜನಿಕರ ಭೇಟಿಗಾಗಿ ತೆರೆದಿರುತ್ತದೆ.

ಅಮೃತ್ ಉದ್ಯಾನವನ ತೆರೆಯುವ ಸಮಯ ಬೆಳಿಗ್ಗೆ 10 ಗಂಟೆಗೆ ಆಗಿದ್ದು, ಅಮೃತ್ ಉದ್ಯಾನದ ಮುಕ್ತಾಯದ ಸಮಯ ಸಂಜೆ 5 ಗಂಟೆ.

ಅಮೃತ್ ಉದ್ಯಾನ್ ಒಂದು ವೃತ್ತಾಕಾರದ ಉದ್ಯಾನವಾಗಿದ್ದು, ಬೋನ್ಸಾಯ್ ಉದ್ಯಾನ, ಲಾಂಗ್ ಗಾರ್ಡನ್, ಸಂಗೀತ ಕಾರಂಜಿ, ಆಧ್ಯಾತ್ಮಿಕ ಉದ್ಯಾನ ಕೇಂದ್ರ ಒಳಗೊಂಡಿರುತ್ತದೆ.

ಹೊರಗೆ ಹೋಗುವ ದಾರಿಯಲ್ಲಿ ಫುಡ್ ಕೋರ್ಟ್‌ಗಳು ಸಹ ಲಭ್ಯ. ಅಮೃತ್ ಉದ್ಯಾನದ ಪ್ರವೇಶ ದ್ವಾರವು ನಾರ್ತ್ ಅವೆನ್ಯೂ ಬಳಿಯಿರುವ ರಾಷ್ಟ್ರಪತಿ ಭವನದ ಗೇಟ್ ಸಂಖ್ಯೆ 35 ಆಗಿದೆ.

ಅಮೃತ್ ಉದ್ಯಾನವು ಈ ಕೆಳಗಿನ ದಿನಾಂಕಗಳಲ್ಲಿ ವಿಶೇಷ ಸಂದರ್ಶಕರಿಗೆ ತೆರೆದಿರುತ್ತದೆ .

22 ಫೆಬ್ರವರಿ 2024: ವಿಕಲಚೇತನರು

23 ಫೆಬ್ರವರಿ 2024: ರಕ್ಷಣಾ ಪಡೆಗಳು ಮತ್ತು ಅರೆಸೈನಿಕ ಪಡೆಗಳು ಮತ್ತು ಪೊಲೀಸ್ ಸಿಬ್ಬಂದಿ

01 ಮಾರ್ಚ್ 2024: ಮಹಿಳೆಯರು ಮತ್ತು ಬುಡಕಟ್ಟು ಮಹಿಳೆಯರ ಸ್ವಸಹಾಯ ಗುಂಪುಗಳು

05 ಮಾರ್ಚ್ 2024: ದೆಹಲಿ, ಎನ್‌ಸಿಆರ್ ಮತ್ತು ಸುತ್ತಮುತ್ತಲಿನ ಅನಾಥಾಶ್ರಮಗಳ ಮಕ್ಕಳು.

ಉದ್ಯಾನದ ಉತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿ ಭವನದ ಅಮೃತ್ ಉದ್ಯಾನವನದ ಟಿಕೆಟ್‌ಗಳ ಬುಕ್ಕಿಂಗ್ ಉಚಿತವಾಗಿದೆ.

ಅಧಿಕೃತ ವೆಬ್‌ಸೈಟ್‌ gov.in ಗೆ ಹೋಗಿ ಅಲ್ಲಿ ಕಾಣಿಸಿಕೊಂಡ ಮುಖಪುಟದಲ್ಲಿ ‘ಅಮೃತ್ ಉದ್ಯಾನ್’ ಗಾಗಿ ಇರುವ ನೇರ ಲಿಂಕ್ ಅನ್ನು ಕ್ಲಿಕ್ ಮಾಡಿ.ಈಗ ‘ಬುಕ್ ಯುವರ್ ವಿಸಿಟ್ ನೌ’ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.

ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿ, ಮತ್ತು ‘ಕಂಟಿನ್ಯೂ’ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.ನಿಯೋಜಿಸಲಾದ ವಯೋಮಾನದೊಳಗಿನ ವ್ಯಕ್ತಿಗಳ ಸಂಖ್ಯೆಯನ್ನು ಆಯ್ಕೆ ಮಾಡಿ ಮತ್ತು ‘ಕಂಟಿನ್ಯೂ’ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.

ಒಟಿಪಿಗಾಗಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನೀಡಲು ನಿಮ್ಮನ್ನು ಕೇಳಲಾಗುತ್ತದೆ.

ಒಟಿಪಿ ಅನ್ನು ಪರಿಶೀಲಿಸಿ.ಅಲ್ಲಿರುವ ವಿವರಗಳನ್ನು ಪರಿಶೀಲಿಸಿ.ಟಿಕೆಟ್‌ನ ನಕಲು ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಿ, ಸೇವ್ ಮಾಡಿಕೊಳ್ಳಿ ಮತ್ತು ಅದನ್ನು ಪ್ರಿಂಟ್ ಮಾಡಿಕೊಳ್ಳಿ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button