Moreವಿಂಗಡಿಸದ

ಇಂದು ಬಹು ನಿರೀಕ್ಷಿತ ಬೆಂಗಳೂರು-ಕಲಬುರಗಿ ವಂದೇ ಭಾರತ್ ರೈಲು ಉದ್ಘಾಟನೆ; ಮಾ.12ರಿಂದ ಸಂಚಾರ ಆರಂಭ

ಬೆಂಗಳೂರು ಮತ್ತು ಕಲಬುರಗಿ (Bengaluru- Kalaburagi) ನಡುವಿನ ನೂತನ ವಂದೇ ಭಾರತ ರೈಲಿನ (Vande Bharat Train) ಇಂದು ಹಸಿರು ನಿಶಾನೆ ದೊರೆಯುತ್ತಿದ್ದು, ಮಾ.12 ರಿಂದ ರೈಲು ಸಂಚಾರ ಆರಂಭವಾಗಲಿದೆ.

ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿರುವ (Baiyappanahalli) ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಕಲಬುರಗಿ (Kalaburagi) ನಡುವೆ ಸಂಚಾರ ನಡೆಸುವ ನೂತನ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲು ಸಂಚಾರಕ್ಕೆ ನರೇಂದ್ರ ಮೋದಿ ಅವರು ಇಂದು ಮಾರ್ಚ್ 9ರಂದು ಚಾಲನೆ ನೀಡಲಿದ್ದಾರೆ.

ಈ ಕುರಿತಾಗಿ ಕಲಬುರಗಿ ಸಂಸದ ಡಾ ಉಮೇಶ್ ಜಾಧವ್ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಇದು 547 ಕಿ. ಮೀ. ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸಲಿದ್ದು, ರೈಲಿನ ಕುರಿತು ವೇಳಾಪಟ್ಟಿ, ನಿಲ್ದಾಣಗಳ ಮಾಹಿತಿ ನೀಡಿದ್ದಾರೆ.

ಮಾ.9 ರಂದು ಉದ್ಘಾಟನೆಗೊಳ್ಳುವ ಈ ವಂದೇ ಭಾರತ ರೈಲು ಕಲಬುರಗಿಯಿಂದ ಸಂಚಾರ ಆರಂಭಿಸಲಿದೆ. ಕಲಬುರಗಿ ರೈಲ್ವೆ ನಿಲ್ದಾಣದಿಂದ ಸಾಂಯಂಕಾಲ 05:10 ಗಂಟೆಗೆ ಹೊರಡಲಿದೆ.

ಈ ರೈಲು ಕಲಬುರಗಿ, ಶಹಾಬಾದ್, ವಾಡಿ, ಯಾದಗಿರಿ, ರಾಯಚೂರು, ಮಂತ್ರಾಲಯ, ಆದೋನಿ, ಗುಂತಕಲ್, ಅನಂತಪುರ, ಧರ್ಮವರಂ, ಯಲಹಂಕ ಮತ್ತು ಬೈಯಪನಹಳ್ಳಿ ತಲುಪಲಿದೆ ಎಂದು ಸಂಸದರು ಮಾಹಿತಿ ನೀಡಿದ್ದಾರೆ.

ಮಾಹಿತಿಯ ಪ್ರಕಾರ, ಸಾರ್ವಜನಿಕರಿಗೆ ಈ ವಂದೇ ಭಾರತ ರೈಲು ಮಾ.12 ರಂದು ಆರಂಭಗೊಳ್ಳಲಿದೆ. ಆದರೆ ಈ ರೈಲು ಮಾರ್ಗದ ದರ ಇನ್ನೂ ರೈಲ್ವೇ ಇಲಾಖೆ ಬಹಿರಂಗ ಪಡಿಸಬೇಕಿದೆ.

ಕರ್ನಾಟಕದಲ್ಲಿ ಸಂಚರಿಸುತ್ತಿರುವ ವಂದೇ ಭಾರತ್ ರೈಲುಗಳು ಕೆಎಸ್ಆರ್‌ ಬೆಂಗಳೂರು (ಮೆಜೆಸ್ಟಿಕ್), ಯಶವಂತಪುರ ನಿಲ್ದಾಣದಿಂದ ಸಂಚಾರ ನಡೆಸುತ್ತಿವೆ.

ಆದರೆ ಬೆಂಗಳೂರು – ಕಲಬುರಗಿ ನಡುವಿನ ವಂದೇ ಭಾರತ ರೈಲು ಬೈಯಪ್ಪನಹಳ್ಳಿಯ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನ (SMVT) ಮೂಲಕ ಇದೇ ಮೊದಲ ಬಾರಿ ಸಂಚರಿಸಲಿದೆ.

ಬೈಯಪ್ಪನಹಳ್ಳಿಯಿಂದ ಮೆಜೆಸ್ಟಿಕ್ ಗೆ (Mejestic) ಬಸ್, ಕ್ಯಾಬ್, ಮೆಟ್ರೋ ವ್ಯವಸ್ಥೆಗಳಿವೆ. ಆದ್ದರಿಂದ ಜನರು ಈ ರೈಲಿನಲ್ಲಿ ಸುಲಭವಾಗಿ ನಗರಕ್ಕೆ ಪ್ರವೇಶ ಪಡೆಯಬಹುದು.

ಬೆಂಗಳೂರು-ಕಲಬುರಗಿ ನಡುವೆ ವಂದೇ ಭಾರತ್ ರೈಲು ಬೇಕು ಎನ್ನುವ ಜನರ ಬೇಡಿಕೆಗೆ ಕೆಲವು ದಿನಗಳ ಹಿಂದೆ ರೈಲ್ವೆ ಇಲಾಖೆಯು ಒಪ್ಪಿಗೆ ಸೂಚಿಸಿತ್ತು. ಈಗ ರೈಲು ಸಂಚಾರಕ್ಕೆ ದಿನಾಂಕ ನಿಗದಿಯಾಗಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button