ವಿಂಗಡಿಸದಸಂಸ್ಕೃತಿ, ಪರಂಪರೆ

ಫೆ.14 ನ್ನು ಪ್ರೇಮಿಗಳ ದಿನವೆಂದು ಯಾಕೆ ಕರೆಯುತ್ತಾರೆ ಗೊತ್ತಾ..? ಈ ಲೇಖನ ಓದಿ

ಪ್ರೇಮಿಗಳ ದಿನವನ್ನು ಪ್ರತಿ ವರ್ಷ ಫೆಬ್ರವರಿ 14ರಂದು ಆಚರಿಸಲಾಗುತ್ತದೆ. ಅದು ಪ್ರೇಮಿಗಳ ಮಹತ್ವದ ದಿನ ಅಂತಲೂ ಭಾವಿಸುವ ಮಂದಿಯೂ ಇರ್ತಾರೆ.

ಪ್ರಪಂಚದಾದ್ಯಂತದ ಅನೇಕ ಜನರು ಈ ದಿನ ತಮ್ಮ ಪ್ರೀತಿಯ ಸಂದೇಶಗಳೊಂದಿಗೆ ಕಾರ್ಡ್‌ಗಳು, ಹೂವುಗಳು ಅಥವಾ ಚಾಕೊಲೇಟ್‌ಗಳನ್ನು ಕಳುಹಿಸುವ ಮೂಲಕ ತಮ್ಮ ಪ್ರೇಮಿಗಳಿಗೆ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.

ಪ್ರೇಮಿಗಳ ಹೊಸ ಹುರುಪಿನ ಈ ದಿನ ಶುರುವಾಗಿದ್ದು ಹೇಗೆ? ಇದನ್ನು ಆಚರಿಸಲು ಕಾರಣವೇನು? ಎಂಬ ಮಾಹಿತಿ ಇಲ್ಲಿದೆ.

ರೋಮ್ ಪ್ರಜೆ ಸೇಂಟ್ ವ್ಯಾಲೆಂಟೈನ್(snt.Valentain) ತನ್ನ ಸೈನ್ಯದಲ್ಲಿ ಪುರುಷರನ್ನು ನೇಮಿಸಿಕೊಳ್ಳಲು ಮದುವೆಗಳನ್ನು ನಿಷೇಧಿಸಿದ ರೋಮನ್ ರಾಜನ(Roman King)ನಿಯಮವನ್ನು ಉಲ್ಲಂಘಿಸಿದ ಕಾರಣ ಅವನಿಗೆ ಮರಣದಂಡನೆ ವಿಧಿಸಲಾಯಿತು.

ಸೇಂಟ್ ವ್ಯಾಲೆಂಟೈನ್ ಈ ಕ್ರಮವು ಅನ್ಯಾಯವೆಂದು ಪ್ರತಿಭಟಿಸಿದ್ದ. ಆದ್ದರಿಂದ ಆತ ನಿಯಮಗಳನ್ನು ಮುರಿದು ರಹಸ್ಯವಾಗಿ ಮದುವೆಗಳನ್ನು ಏರ್ಪಡಿಸಿದರು.

ನೀವು ಇದನ್ನು ಇಷ್ಟ ಪಡಬಹುದು:ಬೆಂಗಳೂರಿನಲ್ಲಿ ಇರುವ 5 ರೊಮ್ಯಾಂಟಿಕ್ ತಾಣಗಳು:

ಸೇಂಟ್ ವ್ಯಾಲೆಂಟೈನ್ ಜೈಲರ್‌ನ(Jailor) ಮಗಳನ್ನು ಪ್ರೀತಿಸುತ್ತಿದ್ದ. ಫೆಬ್ರವರಿ 14ರಂದು ಅವರನ್ನು ಕೊಲ್ಲಲು ಕರೆದೊಯ್ಯುವಾಗ, “ನಿಮ್ಮ ವ್ಯಾಲೆಂಟೈನ್‌” ಎಂದು ಸಹಿ ಮಾಡಿದ ಪ್ರೇಮ ಪತ್ರವನ್ನು ತನ್ನ ಪ್ರೇಯಸಿಗೆ ಕಳುಹಿಸಿದ್ದಂತೆ.

ಅವರು ಚಕ್ರವರ್ತಿಯ ಆದೇಶವನ್ನು ಧಿಕ್ಕರಿಸಿದ್ದರಿಂದ ಮರಣದಂಡನೆ ನೀಡಲಾಯಿತು. ಅಂದಿನಿಂದ ಈ ದಿನವನ್ನು ಪ್ರೀತಿಯ ದಿನವೆಂದು ಆಚರಿಸಲಾಗುತ್ತದೆ.

Feb 14

ಪ್ರೇಮಿಗಳ ದಿನದಂದು ಉಡುಗೊರೆಗಳು ಮತ್ತು ಪ್ರೀತಿಯ ಸಂದೇಶಗಳನ್ನು ಕಳುಹಿಸುವ ಮೂಲಕ ಇನ್ನೊಬ್ಬ ವ್ಯಕ್ತಿಗೆ ತಮ್ಮ ಪ್ರೀತಿಯನ್ನು ತೋರಿಸುತ್ತಾರೆ.

ಕೆಲವರು ರಹಸ್ಯವಾಗಿ ಪ್ರೀತಿಸುವವರಿಗೆ ಅನಾಮಧೇಯವಾಗಿ ಏನನ್ನಾದರೂ ಕಳುಹಿಸುತ್ತಾರೆ. ಜನಪ್ರಿಯ ಉಡುಗೊರೆಗಳಲ್ಲಿ ಚಾಕೊಲೇಟ್‌ಗಳ ಬಾಕ್ಸ್, ಡಿನ್ನರ್ ನೈಟ್ ಮತ್ತು ಗುಲಾಬಿ ಹೂವುಗಳನ್ನು ನೀಡಲಾಗುತ್ತದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button