ಕಾಡಿನ ಕತೆಗಳುವಿಂಗಡಿಸದಸ್ಮರಣೀಯ ಜಾಗ

ಸಾಲಿಗ್ರಾಮ ಕಾಂಡ್ಲಾ ವನದ ಹಿನ್ನೀರಿನಲ್ಲಿ ಕಯಾಕಿಂಗ್ ಮೆರಗು

ಕರಾವಳಿಯಲ್ಲಿ ಬೀಚ್, ದೇವಸ್ಥಾನಗಳು ಹೆಸರುವಾಸಿ. ಹಲವು ಪ್ರವಾಸಿಗರು ಕರಾವಳಿಗೆ ಬರುವುದು ಬೀಚ್ ನೋಡಲೆಂದು . ಆದರೆ ಇತ್ತೀಚಿನ ದಿನಗಳಲ್ಲಿ ಉಡುಪಿಯಲ್ಲಿ ಕಯಾಕಿಂಗ್ ಪ್ರಸಿದ್ದಿ ಪಡೆಯುತ್ತಿದೆ. ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತಿದೆ. ಸಾಲಿಗ್ರಾಮದ ಪಾರಂಪಳ್ಳಿ ಕಾಂಡ್ಲಾ ವನದ ಹಿನ್ನೀರಿನ ಪ್ರದೇಶದಲ್ಲಿನ ಕಯಾಕಿಂಗ್ ಎಲ್ಲರ ಗಮನ ಸೆಳೆಯುತ್ತಿದೆ.

ನವ್ಯಶ್ರೀ ಶೆಟ್ಟಿ

ಉಡುಪಿಯಲ್ಲಿ ಹಲವು ಪ್ರವಾಸಿ ತಾಣಗಳಿವೆ. ಆದರೆ ಅದೆಷ್ಟೋ ಪ್ರವಾಸಿ ತಾಣಗಳು ಮುನ್ನೆಲೆಗೆ ಬರುವುದು ಬಾಕಿಯಿದೆ ಅಷ್ಟೇ. ಆದರೆ ಇತ್ತೀಚಿನ ದಿನಗಳಲ್ಲಿ ಕರಾವಳಿಯ ಪ್ರವಾಸೋದ್ಯಮದಲ್ಲಿ ಹಲವು ಪ್ರಯೋಗಗಳು ನಡೆಯುತ್ತಲೇ ಇರುತ್ತದೆ. ಅಂತಹ ಪ್ರಯೋಗದಲ್ಲಿ ಉಡುಪಿಯ ಸಾಲಿಗ್ರಾಮದ ಹಿನ್ನೀರಿನ ಪ್ರದೇಶದಲ್ಲಿ ಹೊಸದಾಗಿ ಪ್ರಾರಂಭಗೊಂಡಿರುವ ಕಯಾಕಿಂಗ್.

ಕಾಂಡ್ಲಾ ಹಸಿರಿನ ಸೊಬಗು

ಸಾಲಿಗ್ರಾಮದ ಪಾರಂಪಳ್ಳಿ ಸೇತುವೆ ಬಳಿಯಿಂದ ಆರಂಭವಾಗುವ ಕಯಾಕಿಂಗ್ ಸೇತುವೆಯ ಕೆಳಗಿನಿಂದ ಹಿನ್ನಿರಿನಲ್ಲಿನ ದಟ್ಟ ಕಾಂಡ್ಲಾ ವನದ ನಡುವೆ ಸಂಚರಿಸಲಿದೆ. ಸುಮಾರು 2 ಗಂಟೆಯ ಈ ಪ್ರಯಾಣದಲ್ಲಿ ಕಾಂಡ್ಲಾ ಹಸಿರು ಪ್ರವಾಸಿಗರ ಕಣ್ಮಣ ಸೆಳೆಯಲಿದೆ. ಕಾಂಡ್ಲಾ ವನದ ಮಧ್ಯೆದಲ್ಲಿ ಕಯಾಕಿಂಗ್ ಯಾನ ಆರಂಭಿಸಿರುವುದು ಜಿಲ್ಲೆಯಲ್ಲಿ ಇದೇ ಮೊದಲು . ಇಲ್ಲಿನ ತರಬೇತುದಾರರು ಕೇವಲ 5 ರಿಂದ 10 ನಿಮಿಷದಲ್ಲಿ ಕಯಾಕಿಂಗ್ ನಡೆಸುವ ಕೌಶಲ್ಯಗಳನ್ನು ಕಲಿಯಲು ಅಗತ್ಯ ತರಬೇತಿ ನೀಡುತ್ತಾರೆ. ಪ್ರವಾಸಿಗರೇ ಸ್ವತಃ ದೋಣಿಗಳನ್ನು ನಡೆಸಬಹುದು.

Mangravo

ಕಯಾಕಿಂಗ್ ಗಾಗಿ ಇಲ್ಲಿ ಒಟ್ಟು 9 ದೋಣಿಗಳಿವೆ, ಪ್ರತಿ ದೋಣಿಗೆ ಇಬ್ಬರಂತೆ ಒಂದೇ ಸಮಯದಲ್ಲಿ ಒಟ್ಟು 12 ಜನ ಕಯಾಕಿಂಗ್ ಮಾಡಬಹುದು, 2 ದೋಣಿಯಲ್ಲಿ ತರಬೇತುದಾರರು ಜೊತೆಗಿರುತ್ತಾರೆ.ಪ್ರತಿದಿನ ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ ಕಯಾಕಿಂಗ್ ಚಟುವಟಿಕೆ ನಡೆಯಲಿದೆ .ಇಲ್ಲಿನ ಹಿನ್ನೀರಿನಲ್ಲಿ ಅಪಾಯಕಾರಿಯಾಗುವಷ್ಟು ಆಳ ಇಲ್ಲದಿರುವುರಿಂದ ಎಲ್ಲಾ ವಯೋಮಾನದವರು ಕಯಾಕಿಂಗ್ ಮಾಡಬಹುದಾಗಿದೆ. ಎಲ್ಲಾ ರೀತಿಯ ಸುರಕ್ಷಾ ಕ್ರಮಗಳು, ಲೈಫ್ ಜಾಕೆಟ್ ಗಳು ಹಾಗೂ ನುರಿತ ತರಬೇತುದಾರರು ಜೊತೆಯಲ್ಲಿರುತ್ತಾರೆ.

ನೀವು ಇದನ್ನು ಇಷ್ಟ ಪಡಬಹುದು: ದೆಹಲಿಯಲ್ಲಿದೆ ಉಡುಪಿಯ ಉರುಗಳು.

Kayaking

ಸ್ಥಳೀಯ ಯುವಕರ ಪ್ರಯತ್ನ

ಸ್ಥಳೀಯ ಯುವಕರಾದ ಮಿಥುನ್ ಕೋಡಿ ಮತ್ತು ಲೋಕೇಶ್ ಈ ಹೊಸ ಪ್ರಯತ್ನಕ್ಕೆ ಕೈ ಹಾಕಿದವರು ಸಾಲಿಗ್ರಾಮದ ಪಾರಂಪಳ್ಳಿ ಬ್ರಿಡ್ಜ್ ಬಳಿ, ಸೀತಾನದಿಯ ಹಿನ್ನಿರಿನ ಕಾಂಡ್ಲಾ ವನದಲ್ಲಿ ಕಯಾಕಿಂಗ್ ಚಟುವಟಿಕೆಗಳನ್ನು ಆರಂಭಿಸಿದ್ದು, ಪ್ರವಾಸಿಗರಿಗೆ, ಸಾಹಸ ಚಟುವಟಿಕೆ ಕೈಗೊಳ್ಳುವ ಆಸಕ್ತರಿಗೆ ಇದು ಅತ್ಯಂತ ಉತ್ತಮ ತಾಣ.

Saligrama

ಜಿಲ್ಲೆಯಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಹೊಸ ಪ್ರಯತ್ನಗಳು ನಡೆಯುತ್ತಲೇ ಇದೆ. . ಹೌಸ್ ಬೋಟ್, ಕುದ್ರುಗಳಿಗೆ ಪ್ರವಾಸ, ಕಯಾಕಿಂಗ್ ಚಟುವಟಿಕೆಯಂತಹ ಹೊಸ ಪ್ರಯತ್ನಗಳು ನಡೆಯುತ್ತಿದ್ದು, ಇದಕ್ಕೆ ಪೂರಕವೆಂಬಂತೆ ಜಿಲ್ಲೆಯ ಸಾಲಿಗ್ರಾಮ ಸಮೀಪದಲ್ಲಿ ಸೀತಾ ನದಿಯ ಹಿನ್ನೀರಿನಲ್ಲಿನ ಕಾಂಡ್ಲಾ ವನದ ಮಧ್ಯದಲ್ಲಿ ಸಂಚರಿಸುವ ಕಯಾಕಿಂಗ್ ಸಾಹಸ ಯಾನ, ಪ್ರವಾಸಿಗರಿಗೆ ಹೊಸದೊಂದು ಅನುಭವ ನೀಡಲಿದೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ,

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada. Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button