ವಿಂಗಡಿಸದಸಂಸ್ಕೃತಿ, ಪರಂಪರೆ

ಕರ್ನಾಟಕದ ಪುರಾತನ ದೇವಾಲಯ ಶಿರಸಿಯ ಮಾರಿಕಾಂಬಾ

ಶ್ರೀ ಮಾರಿಕಾಂಬಾ ದೇವಾಲಯ ಕರ್ನಾಟಕದ ಪ್ರಸಿದ್ಧ ಹಿಂದೂ ದೇವಾಲಯಗಳಲ್ಲಿ ಒಂದು. ಈ ದೇವಾಲಯು ಕರ್ನಾಟಕದ ಅತ್ಯಂತ ಪ್ರಖ್ಯಾತವಾದ ದೇವಾಲಯ. ಇಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಶಿರಸಿಯ ಮಾರಿಕಾಂಬಾ ಜಾತ್ರೆ ಹೆಚ್ಚು ಮಹತ್ವ ಪಡೆದುಕೊಂಡಿದೆ. ಶಿರಸಿಯ ಮಾರಿಕಾಂಬಾ ದೇವಾಲಯದ ಕುರಿತಾದ ಬರಹ

ವಿದ್ಯಾ

ಶಿರಸಿಯ ಮಾರಿಕಾಂಬಾ ದೇವಾಲಯ ಕರ್ನಾಟಕದ ಪುರಾತನ ದೇವಾಲಯಗಳಲ್ಲಿ ಒಂದು. ದೇವಾಲಯದ ಪ್ರವೇಶ ದ್ವಾರಗಳಲ್ಲಿ ಎರಡು ಆನೆಗಳ ಶಿಲ್ಪಗಳಿವೆ. ದೇವಾಲಯದ ಪ್ರಾರಂಭದಿಂದ ಹಿಡಿದು ಅಂತಿಮದವರೆಗೂ ದೇವಾಲಯದ ಗೋಡೆಗಳಲ್ಲಿ ಪುರಾತನವಾದ ಕಥೆಗಳನ್ನು ಬಹಳ ಸುಂದರವಾಗಿ ಕೆಂಪು ಬಣ್ಣಗಳಿಂದ ಚಿತ್ರಿಸಲಾಗಿದೆ.ದೇವಾಲಯ ಒಳಗಡೆ ಪ್ರವೇಶಿಸಿದರೆ ಬ್ರಹತ್ ಸಭಾಭವನ ನಿಮ್ಮನ್ನು ಆಕರ್ಷಿಸುತ್ತದೆ.

Marikamba

ಸಭಾಭವನದಲ್ಲಿ ದೇವಿ ಶ್ರೀ ಮಾರಿಕಾಂಬೆಯ ಒಂಬತ್ತು ಅವತಾರಗಳ ಚಿತ್ರಗಳನ್ನು ನೀವು ನೋಡಬಹುದು.ಬೆಳ್ಳಿಯ ಬಾಗಿಲನ್ನು ಕೈ ಮುಗಿದು ಕಾಲಿಟ್ಟರೆ ಮೈ ಜುಮ್ಮ್ ಎನ್ನುವ ಅನುಭವ. ಗರ್ಭಗುಡಿಯಲ್ಲಿ ಶ್ರೀ ಮಾರಿಕಾಂಬೆ ತಾಯಿಯನ್ನು ನೋಡಿ ನೀವು ಕಣ್ತುಂಬಿಕೊಳ್ಳಬಹುದು. ಪ್ರಶಾಂತವಾದ ಸ್ಥಳದಲ್ಲಿ ಒಮ್ಮೆ ನಮ್ಮನ್ನು ನಾವೇ ಮರೆತ ಅನುಭವ ನಮಗೆ ಆಗುತ್ತದೆ. ಇಲ್ಲಿ ಜಗದಂಬೆಯನ್ನು ನೆನೆದು ಎಲ್ಲಾ ಕಷ್ಟಗಳನ್ನು ಹೇಳಿಕೊಂಡರೆ ತಾಯಿ ಬಗೆಹರಿಸಿ ಮನಸ್ಸಿಗೆ ನೆಮ್ಮದಿ ಯನ್ನು ನೀಡುತ್ತಾಳೆ , ಎಲ್ಲಾ ಚಿಂತೆಗಳನ್ನು ದೂರಮಾಡಿ ಸುಖ, ಸಂತೋಷವನ್ನು ಕೊಡುತ್ತಾಳೆ ಎನ್ನುವುದು ಭಕ್ತರ ನಂಬಿಕೆ.

Shirsi

ಶ್ರೀ ಮಾರಿಕಾಂಬಾ ದೇವಾಲಯವನ್ನು 1933 ರಲ್ಲಿ ನಿರ್ಮಿಸಲಾಗಿತ್ತು. ಈ ದೇವಾಲಯದ ವಿಶೇಷತೇ ಇಲ್ಲಿ ಎರಡು ವರ್ಷ ಗಳಿಗೊಮ್ಮೆ ಜಾತ್ರೆ ನಡೆಯುತ್ತದೆ. ಈ ಜಾತ್ರೆಯು ಕರ್ನಾಟಕದಲ್ಲಿಯೇ ಅತ್ಯಂತ ದೊಡ್ಡ ಜಾತ್ರೆಯಾಗಿದೆ. ಸತತವಾಗಿ ಒಂಬತ್ತು ದಿನಗಳ ಕಾಲ ನಡೆಯುವ ಜಾತ್ರೆ .

ನೀವು ಇದನ್ನು ಇಷ್ಟ ಪಡಬಹುದು: ಉತ್ತರ ಕರ್ನಾಟಕದ ಪ್ರಸಿದ್ಧ ಖಾದ್ಯ ‘ಗಿರ್ಮಿಟ್’ ರುಚಿ ನೋಡಿದ್ದೀರಾ!

Old temple

ಇತಿಹಾಸದ ಪ್ರಕಾರ ಈ ದೇವಾಲಯಕ್ಕೆ ಗಾಂಧೀಜಿ ದೇವಾಲಯಕ್ಕೆ ಗಾಂಧೀಜಿ ಭೇಟಿ ನೀಡಿದ್ದರಂತೆ. ಗಾಂಧೀಜಿಯ ಅನುಯಾಯಿಗಳು ಜನಸಾಮಾನ್ಯರಿಗೆ ಅಹಿಂಸಾ ತತ್ವ ಭೋಧಿಸಿ , ಮೂಡ ನಂಬಿಕೆ ದೂರ ಮಾಡಿ ಪ್ರಾಣಿ ಬಲಿಯನ್ನು ತಡೆಗಟ್ಟುವಲ್ಲಿ ಯಶಸ್ವಿಯಾದರೂ ಎಂದು ಹೇಳಲಾಗುತ್ತದೆ. ಈ ಹಿಂದೆ ಶಿರಸಿಯ ಮಾರಿಕಾಂಬಾ ದೇವಾಲಯದಲ್ಲಿ ನಡೆಯುತ್ತಿದ್ದ ಕೋಣಗಳ ಬಲಿಯನ್ನು ಕೂಡ ನಿಷೇಧಿಸಲಾಗಿದೆ.

Festival

ಈ ಜಾತ್ರೆಯನ್ನು ನೋಡಲು ಬಹಳಷ್ಟು ಕಡೆಯಿಂದ ಭಕ್ತಾದಿಗಳು ಬರುತ್ತಾರೆ. ಜಾತ್ರೆ ಸಂಬಂಧದಲ್ಲಿ ಜೋಕಾಲಿ, ಆಟಿಕೆ ಅಂಗಡಿ, ತಿಂಡಿ ತಿನಿಸು ಗಳ ಅಂಗಡಿ ಎಲ್ಲಾ ತರಹದ ಅಂಗಡಿಗಳಿಂದ ಜಾತ್ರೆ ಪೇಟೆಯು ಕಂಗೊಳಿಸುತ್ತಿರುತ್ತದೆ. ನನ್ನೂರಿನ ಅದ್ಭುತವಾದ ಈ ಜಾತ್ರೆಯನ್ನು ನೆನೆದರೆ ಮನಸ್ಸಿಗೆ ಎಲ್ಲಿಲದ ಖುಷಿ ಉಂಟಾಗುತ್ತದೆ. ಅದ್ಭುತ ಶಿರಿಸಿಯ ಶ್ರೀ ಮಾರಿಕಾಂಬೆಯ ದೇವಸ್ಥಾನವನ್ನು ನೋಡಲು ಒಮ್ಮೆಯಾದರೂ ಹೋಗಿ ಬನ್ನಿ.

Festival fair

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ,ನೀವು ಪ್ರವಾಸ ಹೋಗುವ ತಾಣದ ಮಾಹಿತಿ,

ಕನ್ನಡ.ಟ್ರಾವೆಲ್ (Kannada. Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button