ಕಾರು ಟೂರುವಿಂಗಡಿಸದಸ್ಮರಣೀಯ ಜಾಗ

ಕರುನಾಡಿನ ಚೆಂದದ ಕೋಟೆ ಕವಲೆದುರ್ಗ ಕೋಟೆ

 ಕರ್ನಾಟಕದ ಪಶ್ಚಿಮ ಘಟ್ಟಗಳ ಬಳಿ ನೆಲೆಸಿರುವ ಸುಂದರ ಕೋಟೆ ಕವಲೆದುರ್ಗ . ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಿಂದ  ಸುಮಾರು 20 ಕಿಲೋಮೀಟರ್ ದೂರದಲ್ಲಿದೆ. ಕವಲೆದುರ್ಗ ಕೋಟೆಯು ಕರ್ನಾಟಕದ ಇತಿಹಾಸವನ್ನು ತಿಳಿಸುವ ಸುಂದರ ತಾಣ. ಕರ್ನಾಟಕದ ಘಟ್ಟ ಪ್ರದೇಶಗಳು ನೋಡಲು ಮನಮೋಹಕ ಅಲ್ಲದೇ ಅದು ಎಲ್ಲಾ ಕಾಲದಲ್ಲೂ ಕೂಡ ತನ್ನ ಸೌಂದರ್ಯವನ್ನು ಪ್ರವಾಸಿಗರಿಗೆ ತೋರಿಸುತ್ತದೆ.


ರಿಯಾನ


    ಕರ್ನಾಟಕದ ಪಶ್ಚಿಮ ಘಟ್ಟಗಳ ಕಾಡುಗಳ ನಡುವೆ ಮರೆತುಹೋದ ಇತಿಹಾಸದ ತುಣುಕು ಈ ಕವಲೆದುರ್ಗ ಕೋಟೆ. ಕಾಡು ಮತ್ತು ಬೆಟ್ಟಗಳಿಂದ ಆವೃತವಾಗಿರುವ ಇದು 9ನೇ ಶತಮಾನದ ಐತಿಹಾಸಿಕ ತಾಣ. ಸುಂದರವಾದ ಈ ಕೋಟೆಯು , ಭವ್ಯ ಅರಮನೆಗಳು ಹಾಗೂ ದೇವಾಲಯಗಳಿಂದ ಕೂಡಿದ  ಟ್ರೆಕಿಂಗ್  ತಾಣ. ಕೆಳದಿ ಸಾಮ್ರಾಜ್ಯದ ಕೊನೆಯ ರಾಜಧಾನಿಯಾದ ಕವಲೆದುರ್ಗ ಕೋಟೆಯನ್ನು 9ನೇ ಶತಮಾನದಲ್ಲಿ ನಿರ್ಮಿಸಲಾಯಿತು .


 ಇದು ಕೆಳದಿ ನಾಯಕರ ಭದ್ರಕೋಟೆಯಾಗಿತ್ತು. ಇದು ವಿಜಯನಗರ ಸಾಮ್ರಾಜ್ಯದ ಪತನದವರೆಗೆ ಅವರ ನಿರ್ವಹಣೆಗೆ ಒಳಪಟ್ಟಿತ್ತು ಕಾಲಕ್ರಮೇಣ ಈ ಕೋಟೆಯು 16ನೇ ಶತಮಾನದಲ್ಲಿ ವೆಂಕಟಪ್ಪ ನಾಯಕನ ಆಳ್ವಿಕೆಯ ಸಮಯದಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿತು. ನಂತರ ಕೋಟೆಯಲ್ಲಿ ಸುಂದರ ಅರಮನೆಗಳನ್ನು, ದೇವಾಲಯಗಳನ್ನು ,ಮಠ, ಧಾನ್ಯಗಳು, ಖಜಾನೆ ,ಅಶ್ವ ಶಾಲೆಗಳನ್ನು ಹಾಗೂ ಕೊಳಗಳನ್ನು ನಿರ್ಮಿಸಲಾಯಿತು.


 1763 ರಲ್ಲಿ ಕೋಟೆಯನ್ನು ಹೈದರ್ ಅಲಿ ಹಾಗೂ ಟಿಪ್ಪುಸುಲ್ತಾನ್ ಆಕ್ರಮಿಸಿಕೊಂಡರು.  ಕೋಟೆಯ ಎರಡೂ ಬದಿಗಳು ಹಚ್ಚಹಸಿರಿನ ಭತ್ತದ ಗದ್ದೆಗಳಿಂದ ಸುತ್ತುವರಿದಿದೆ. ಕಿರಿದಾದ ಮಣ್ಣಿನ ಹಾದಿಯ ಮೂಲಕ ನಡೆಯುವಾಗ ಕೋಟೆಯ ಗಾತ್ರವು ನಮ್ಮನ್ನು ಚಕಿತರನ್ನಾಗಿಸುತ್ತದೆ.  ವಿಶಾಲವಾದ ಹಾಗೂ ಕಡಿದಾದ ಕಲ್ಲುಮಣ್ಣುಗಳ ಹಾದಿಯು ಇಲ್ಲಿನ ಇನ್ನೊಂದು ಸೊಬಗು. ಇಲ್ಲಿನ  ಅರಮನೆಗೆ ವಸ್ತುಗಳನ್ನು ಆನೆಗಳ ಮೂಲಕ ಸಾಗಿಸಲಾಗುತ್ತಿತ್ತು ಎಂದು ಹೇಳಬಹುದು.


   ಮುಖ್ಯದ್ವಾರವನ್ನು ಪ್ರವೇಶಿಸಿದ ನಂತರ ಕಾಶಿ ವಿಶ್ವನಾಥ ದೇವಸ್ಥಾನ ಹಾಗೂ ಲಕ್ಷ್ಮೀನಾರಾಯಣ ದೇವಸ್ಥಾನಕ್ಕೆ ಹೋಗುವ ಕಿರುದ್ವಾರಗಳಿವೆ. ಆದರೆ ದೇವಾಲಯಗಳು ಅಳಿವಿನಂಚಿನಲ್ಲಿರುವುದಲ್ಲದೆ ಇಲ್ಲಿ ಬಹುತೇಕ ಅವಶೇಷಗಳನ್ನು ಕಾಣಬಹುದಾಗಿದೆ. ಇಲ್ಲಿನ ರಚನೆ ಹಾಗೂ ಸುತ್ತಲೂ ಹರಡಿರುವ ನಂದಿ ಹಾಗೂ ಇತರ ಪ್ರತಿಮೆಗಳು ಪ್ರವಾಸಿಗರನ್ನು ಇನ್ನಷ್ಟು ಆಕರ್ಷಿಸುತ್ತದೆ. 

ನೀವು ಇದನ್ನು ಇಷ್ಟ ಪಡಬಹುದು: ಉತ್ತರ ಕರ್ನಾಟಕದ ಪ್ರಸಿದ್ಧ ಖಾದ್ಯ ‘ಗಿರ್ಮಿಟ್’ ರುಚಿ ನೋಡಿದ್ದೀರಾ!


9 ರಿಂದ 12 ಮೀಟರ್ ಎತ್ತರದ ಕೋಟೆಯು ಗೋಡೆಗಳು ಹಾಗೂ ಏಳು ಹಂತಗಳನ್ನು ಹೊಂದಿದೆ. ಕೋಟೆಯೊಳಗೆ ಸುಮಾರು ಹದಿನೈದು ದೇವಾಲಯಗಳಿದ್ದವು. ಅವುಗಳಲ್ಲಿ ಈಗ ಮೂರು ಮಾತ್ರ ಉಳಿದಿದೆ. ಕೋಟೆಯ ನಾಲ್ಕನೇ ಹಂತದಲ್ಲಿ ಅರಮನೆಯ ಅವಶೇಷಗಳಿವೆ. ಅಂದಿನ ಕಾಲದಲ್ಲಿ ಅದು ದರ್ಬಾರ್,ಹಾಲ್ , ಅಡುಗೆಮನೆ, ಮಲಗುವ ಕೋಣೆ ಹಾಗೂ ಸ್ನಾನಗೃಹಗಳನ್ನು ಒಳಗೊಂಡಿತ್ತು. ಇಲ್ಲಿ ಕಂಡುಬಂದಿರುವ ಬಾವಿಗಳು ಆ ದಿನಗಳಲ್ಲಿ ನೀರಿನ ಸಂಗ್ರಹಣೆ ಹಾಗೂ ನಿರ್ವಹಣೆಯನ್ನು ಮಾಡುತ್ತಿತ್ತು. ಬೆಟ್ಟದ ಮೇಲೆ ಸ್ಥಾಪಿಸಲಾದ ಕೋಟೆಯ ಶಿಖರವನ್ನು ತಲುಪಲು ಸುಮಾರು ಮೂರು ಗಂಟೆಗಳಾದರೂ ತೆಗೆದುಕೊಳ್ಳುತ್ತದೆ. ಈ ದೃಶ್ಯಗಳು ಸುಂದರವಾಗಿದ್ದು ನಮ್ಮನ್ನು ಬೆರಗುಗೊಳಿಸುತ್ತದೆ. 


  ದಂತಕಥೆಯ ಪ್ರಕಾರ ಅನೇಕ ಋಷಿಗಳು ಕೋಟೆಯ ಸುತ್ತಲಿನ ಬೆಟ್ಟಗಳ ಮೇಲೆ ತಪಸ್ಸು ಮಾಡಿದ್ದರಿಂದ ಹಿಂದೂ ಪುರಾಣದಲ್ಲಿ ಈ ಸ್ಥಳವನ್ನು ಪರಶುರಾಮಕ್ಷೇತ್ರ ಎಂದು ಕರೆಯಲಾಗುತ್ತಿತ್ತು. ವಾಲ್ಮೀಕಿ ಹಾಗೂ ಅಗಸ್ತ್ಯ ಮುನಿಗಳು ಇಲ್ಲಿ ಸ್ವಲ್ಪ ಕಾಲ ವಾಸಿಸುತ್ತಿದ್ದರು ಎಂದು ನಂಬಲಾಗಿದೆ .ಅಲ್ಲದೆ ದ್ವಾಪರ ಯುಗದಲ್ಲಿ ಪಾಂಡವರು ಇಲ್ಲಿ ಸ್ವಲ್ಪ ಕಾಲ ತಂಗಿದ್ದರು ಎಂದು ಪುರಾಣ ಹೇಳುತ್ತದೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ,ನೀವು ಪ್ರವಾಸ ಹೋಗುವ ತಾಣದ ಮಾಹಿತಿ,

ಕನ್ನಡ.ಟ್ರಾವೆಲ್ (Kannada. Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button