ವಿಂಗಡಿಸದ

ಕಬಿನಿ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ಪುರಾತನ ದೇವಾಲಯ ಮತ್ತೆ ಗೋಚರ

ಕಬಿನಿ ಜಲಾಶಯದ ಹಿನ್ನೀರಿನ ಮಟ್ಟವು ಕಡಿಮೆಯಾಗಿದ್ದು, ನೀರು ತಳ ಸೇರಿದ ಕಾರಣ ಎಚ್.ಡಿ ಕೋಟೆ ತಾಲ್ಲೂಕಿನ ಬೀಚನಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿರುವ ಹಿನ್ನೀರಿನಲ್ಲಿ ಪುರಾತನ ದೇವಾಲಯದ ಕುರುಹುಗಳು ಪತ್ತೆಯಾಗಿದೆ.

ಉಜ್ವಲಾ ವಿ.ಯು

2,284 ಅಡಿ ಗರಿಷ್ಠ ಮಟ್ಟವನ್ನು ಹೊಂದಿರುವ ಕಬಿನಿ ಜಲಾಶಯವು ಇತ್ತೀಚಿಗೆ ಮಳೆ ಕಡಿಮೆಯಾಗಿರುವ ಕಾರಣ 2,250 ಅಡಿ ಮಾತ್ರ ನೀರು ಹೊಂದಿದೆ. ನೀರಿನ ಪ್ರಮಾಣ ಕಡಿಮೆಯಾದಾಗ ಸಾಮಾನ್ಯವಾಗಿ ಇಲ್ಲಿ ಮುಳುಗಿರುವ ಮಾಂಕಾಳಮ್ಮ ದೇವಾಲಯ, ಭವಾನಿ ಶಂಕರ ದೇವಾಲಯ, ನಾಗ ದೇವಾಲಯ ಸೇರಿದಂತೆ ಇನ್ನೂ ಕೆಲವು ದೇವಾಲಯಗಳು ಗೋಚರಿಸುತ್ತವೆ.ಹಾಗೆಯೇ ಇತ್ತೀಚಿಗೆ ಕೂಡಾ ದೇವಾಲಯದ ಇಟ್ಟಿಗೆ ಚೂರುಗಳು, ದೇವರ ವಿಗ್ರಹ, ಶಿವ ಲಿಂಗ, ಗಣೇಶ ವಿಗ್ರಹಗಳು ಸೇರಿದಂತೆ ದೇವಾಲಯಗಳ ಪಳೆಯುಳಿಕೆಗಳು ಪತ್ತೆಯಾಗಿವೆ.

As kabini dries up ancient temple found in kabini reservoir backwaters

ಕಬಿನಿ ಜಲಾಶಯದ ನಿರ್ಮಾಣದ ಸಂದರ್ಭದಲ್ಲಿ ಕಪಿಲಾ ನದಿ ದಂಡೆಯಲ್ಲಿದ್ದ ಮಳಲೆ, ನಿಸನ, ಹೊಸ ಹೊಳಲು ಇತ್ಯಾದಿ 33 ಗ್ರಾಮಗಳು ಹಿನ್ನೀರಿನಲ್ಲಿ ಮುಳುಗಡೆ ಆಗಿದ್ದವು. ಇದರಲ್ಲಿ ಕೆಲವು ಗ್ರಾಮಗಳು ಪುನರ್ವಸತಿಗೊಂಡವು. ಇದರ ಜೊತೆ ಮುಳುಗಡೆಯಾಗಿದ್ದ ಕೆಲವು ದೇವಾಲಯಗಳನ್ನು ಗ್ರಾಮಸ್ಥರು ಬೇರೆ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿದರು. ಆದರೆ ಕೆಲವು ಮಾತ್ರ ಹಾಗೆ ಉಳಿದವು. ಇಂತಹ ದೇವಾಲಯಗಳು ಹಿನ್ನೀರಿನ ಮಟ್ಟ ಕಡಿಮೆಯಾದಾಗ ನಮಗೆ ಗೋಚರಿಸುತ್ತವೆ. ತೆರಣಿಮುಂಟಿ ಎಂಬ ಗ್ರಾಮದಲ್ಲಿಯೂ ನೂರಾರು ಜೈನ ಬಸದಿಗಳು ನೆಲದಲ್ಲಿ ಹೂತಿವೆ. ಕೆಲವು ಜೈನ ಬಸದಿಗಳ ಮೇಲ್ಭಾಗ ಮಣ್ಣಿನಲ್ಲಿ ಕಾಣಿಸುತ್ತಿವೆ.

ನೀವು ಇದನ್ನೂ ಇಷ್ಟಪಡಬಹುದು: ಮುಂಡರಗಿಯಲ್ಲೊಂದು ಪುರಾತನ ದೇಗುಲ ಡಂಬಳ

2013 ರಲ್ಲಿ ಅಂದರೆ ದಶಕಗಳ ಹಿಂದೆ ಕೂಡ ಇದೇ ರೀತಿ ನೀರು ಕಡಿಮೆಯಾದ ಕಾರಣ ದೇವಾಲಯಗಳು ಕಾಣಿಸಿದ್ದವು. ಈಗ ಮತ್ತೆ ಹತ್ತು ವರ್ಷಗಳ ಬಳಿಕ ದೇವಾಲಯ ಕಾಣಿಸುತ್ತಿರುವ ಕಾರಣ ಹಿನ್ನೀರಿನ ಸಮೀಪದಲ್ಲಿರುವ ಗ್ರಾಮಸ್ಥರು ಈ ದೇವಾಲಯಗಳಿಗೆ ತೆರಳಿ ಪೂಜೆ ನೆರವೇರಿಸುತ್ತಿದ್ದಾರೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತ ಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button