ಭಾರತೀಯ ಪಾಸ್ ಪೋರ್ಟ್ ಶ್ರೇಣಿ ಸುಧಾರಿಸಿರುವ ಕಾರಣ 57 ದೇಶಗಳಿಗೆ ಪ್ರವೇಶ ಮುಕ್ತ

ಇತ್ತೀಚಿನ ಹೆನ್ಲಿ ಪಾಸ್ ಪೋರ್ಟ್ ಸೂಚ್ಯಂಕದ ಪ್ರಕಾರ ಭಾರತೀಯ ಪಾಸ್ ಪೋರ್ಟ್ (India’s Passport) ಸುಧಾರಿಸಿದೆ. ಭಾರತದ ಶ್ರೇಣಿಯು 87ನೇ ಸ್ಥಾನದಿಂದ 80 ನೇ ಸ್ಥಾನಕ್ಕೆ ಸುಧಾರಿಸಿದ್ದು, ಈಗ ಭಾರತೀಯರು 57 ದೇಶಗಳಿಗೆ ವೀಸಾ ಇಲ್ಲದೆಯೇ ಪ್ರವೇಶಿಸಬಹುದಾಗಿದೆ.
▪︎ ಉಜ್ವಲಾ ವಿ.ಯು.
2022 ರಲ್ಲಿ ಭಾರತವು 87 ನೇ ಸ್ಥಾನದಲ್ಲಿದ್ದರೂ, 60 ದೇಶಗಳಿಗೆ ವೀಸಾ ಮುಕ್ತವಾಗಿ ಪ್ರವೇಶಿಸಬಹುದಿತ್ತು. ಆದರೆ ಈಗ ದೇಶವು 80 ನೇ ಸ್ಥಾನಕ್ಕೆ ಸುಧಾರಿಸಿದ್ದರೂ, 57 ದೇಶಗಳಿಗೆ ಮಾತ್ರ ವೀಸಾ ಮುಕ್ತ (Visa free) ಪ್ರವೇಶ ಮಾಡಬಹುದು.

ಹೆನ್ಲಿ ಪಾಸ್ಪೋರ್ಟ್ ಶ್ರೇಯಾಂಕ (Henley Passport Index) ವು ಹೆಚ್ಚಾಗಿ ಇಂಟರ್ನ್ಯಾಷನಲ್ ಏರ್ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್ (IATA) ದ ಡೇಟಾವನ್ನು ಆಧರಿಸಿ, ದೇಶಗಳು ವೀಸಾ ಇಲ್ಲದೆ ಪ್ರವೇಶಿಸಬಹುದಾದ ಸ್ಥಳಗಳ ಸಂಖ್ಯೆಯನ್ನು ನಿರ್ಧರಿಸುತ್ತದೆ.
ಹೆನ್ಲಿ ಪಾಸ್ಪೋರ್ಟ್ ಸೂಚ್ಯಂಕದ ಪ್ರಕಾರ, “ಸಿಂಗಾಪುರ (Singapore)”ವು 192 ಜಾಗತಿಕ ದೇಶಗಳಿಗೆ ವೀಸಾ-ಮುಕ್ತ ಪ್ರವೇಶವನ್ನು ಅನುಮತಿ ಪಡೆಯುವ ಮೂಲಕ ಜಪಾನ್ನ ಸ್ಥಾನವನ್ನು ಹಿಂದಿಕ್ಕಿ “ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್ಪೋರ್ಟ್” (world’s most powerful passport) ಅನ್ನು ಹೊಂದಿದೆ.
ನೀವು ಇದನ್ನೂ ಇಷ್ಟಪಡಬಹುದು: 65 ದೇಶಗಳನ್ನು ಸುತ್ತಿರುವ 68ರ ತರುಣಿಯ ಸ್ಫೂರ್ತಿ ಕಥೆ

ಭಾರತದ ಜೊತೆಗೆ ಇತರ ಎರಡು ದೇಶಗಳಾದ ಸೆನೆಗಲ್ ಮತ್ತು ಟೋಗೊ ಕೂಡ 80 ದೇಶಗಳಿಗೆ ವೀಸಾ ಮುಕ್ತ ಅವಕಾಶವನ್ನು ಪಡೆದಿವೆ.
ಜರ್ಮನಿ, ಇಟಲಿ ಮತ್ತು ಸ್ಪೇನ್ ರಾಷ್ಟ್ರ ಗಳು 190 ದೇಶಗಳಿಗೆ ವೀಸಾ ಮುಕ್ತ ಪ್ರವೇಶವನ್ನು ಪಡೆಯುವ ಮೂಲಕ 2 ನೇ ಸ್ಥಾನಕ್ಕೆ ಏರಿದೆ ಮತ್ತು ಜಪಾನ್ ಸೇರಿದಂತೆ ಇತರ ಆರು ಇತರ ರಾಷ್ಟ್ರಗಳಾದ ಆಸ್ಟ್ರಿಯಾ, ಫಿನ್ಲ್ಯಾಂಡ್, ಫ್ರಾನ್ಸ್, ಲಕ್ಸೆಂಬರ್ಗ್, ದಕ್ಷಿಣ ಕೊರಿಯಾ ಮತ್ತು ಸ್ವೀಡನ್ ದೇಶಗಳು 189 ದೇಶಗಳಿಗೆ ವೀಸಾ ಮುಕ್ತ ಪ್ರವೇಶದ ಅನುಮತಿ ಪಡೆಯುವ ಮೂಲಕ 3 ನೇ ಸ್ಥಾನ ಪಡೆದಿವೆ.
ಭಾರತದ ನೆರೆಯ ಪಾಕಿಸ್ತಾನವು ವಿಶ್ವದ ನಾಲ್ಕನೇ ಅತ್ಯಂತ ಕೆಟ್ಟ ಪಾಸ್ಪೋರ್ಟ್ ಹೊಂದಿದ್ದು, ಅದರ ಹೊಂದಿರುವವರಿಗೆ ಕೇವಲ 33 ದೇಶಗಳಿಗೆ ವೀಸಾ ಮುಕ್ತ ಪ್ರವೇಶವನ್ನು ನೀಡುತ್ತದೆ ಎಂದು ವರದಿ ಹೇಳಿದೆ.

ಹೆನ್ಲಿ ಪಾಸ್ ಪೋರ್ಟ್ ಇಂಡೆಕ್ಸ್ನ ಪ್ರಕಾರ, ನಾಲ್ಕು ದೇಶಗಳು ಶೂನ್ಯ ಸ್ಕೋರ್ ಮಾಡುತ್ತವೆ, ಅಂದರೆ ಯಾವುದೇ ದೇಶಗಳಿಗೆ ವೀಸಾ-ಮುಕ್ತ ಪ್ರವೇಶದ ಅನುಮತಿ ಪಡೆದಿರುವುದಿಲ್ಲ – ಅಫ್ಘಾನಿಸ್ತಾನ್, ಉತ್ತರ ಕೊರಿಯಾ, ಪಪುವಾ ನ್ಯೂ ಗಿನಿಯಾ ಮತ್ತು ತುರ್ಕಮೆನಿಸ್ತಾನ್
ಭಾರತ ಭೂತಾನ್, ಕಾಂಬೋಡಿಯಾ, ಇಂಡೋನೇಷ್ಯಾ, ಇರಾನ್, ಮಾಲ್ಡೀವ್ಸ್, ನೇಪಾಳ, ಶ್ರೀಲಂಕಾ ಸೇರಿದಂತೆ 57 ದೇಶ (57 Countries) ಗಳಿಗೆ ವೀಸಾ-ಮುಕ್ತ ಅವಕಾಶವನ್ನು ಪಡೆಯುತ್ತವೆ. ಆದರೆ ಪ್ರವೇಶ ಪಡೆಯುವ ಮುನ್ನ ಆಯಾ ದೇಶಗಳ ನಿಯಮಗಳನ್ನು ಅನುಸರಿಸಬೇಕು.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲ ತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ