ವಿಂಗಡಿಸದ

ಇಂದಿನಿಂದ ಬೆಂಗಳೂರಿನ ದೇವನಹಳ್ಳಿ ಕೆಂಪೇಗೌಡ ವಿಮಾನ ನಿಲ್ದಾಣದಿಂದ ರೈಲು ಸೇವೆಗಳು ಆರಂಭವಾಗಿದೆ.

ಇಂದಿನಿಂದ ಬೆಂಗಳೂರಿನ ದೇವನಹಳ್ಳಿ ಕೆಂಪೇಗೌಡ ವಿಮಾನ ನಿಲ್ದಾಣದಿಂದ ರೈಲು ಸೇವೆಗಳು ಆರಂಭವಾಗಿದೆ.ವಿಮಾನ ನಿಲ್ದಾಣದ ಹಾಲ್ಟ್ ಸ್ಟೇಷನ್ ಗೆ ಇಂದು ಬೆಳಿಗ್ಗೆ 6.02 ಕ್ಕೆ ಡೆಮು ರೈಲು ಬಂದು ತಲುಪಿತು.ರೈಲು ವೇಳಾಪಟ್ಟಿ,ಟಿಕೆಟ್ ಕೌಂಟರ್,ಸುಸಜ್ಜಿತ ಅಸನ ವ್ಯವಸ್ಥೆ ,ಕಾಫಿ ಶಾಪ್ ಎಲ್ಲವನ್ನೂ ಒಳಗೊಂಡು ಸಕತ್ ಹೈಟೆಕ್ ಆಗಿದೆ.

ವಾರದ 6 ದಿನಗಳಲ್ಲಿ ರೈಲು ತನ್ನ ಸಂಚಾರವನ್ನು ನಡೆಸಲಿದೆ.ಪ್ರತಿ ದಿನ 5 ರೈಲುಗಳು ಸಂಚಾರವನ್ನು ಮಾಡಲಿದೆ.
ಕೆಎಸ್ಆರ್ ರೈಲು ನಿಲ್ದಾಣದಿಂದ ರೂ.10 ಹಾಗೂ, ಕಂಟೆನ್ಮೆಂಟ್ ರೈಲು ನಿಲ್ದಾಣದಿಂದ ರೂ 15 ರಲ್ಲಿ ವಿಮಾನ ನಿಲ್ದಾಣ ತಲುಪಬಹುದಾಗಿದೆ.

ಬೆಂಗಳೂರಿನ ಸಿಟಿಯ ಟ್ರಾಫಿಕ್ ಜಾಮ್ ಕಿರಿಕಿರಿಯ ನಡುವೆ ವಿಮಾನ ನಿಲ್ದಾಣ ತಲುಪಲು ಸಾಕಷ್ಟು ಸಮಯ ಹಾಗೂ ಹಣ ತಗಲುತ್ತದೆ. ಅಂತಹದರಲ್ಲಿ ಈ ರೈಲುಗಳ ಸಂಚಾರದಿಂದ ಸಮಯ ಹಾಗೂ ಹಣದ ಉಳಿತಾಯ ಮಾಡಬಹುದು.

ಇಂದಿನಿಂದ ಟ್ರಾಫಿಕ್ ಚಿಂತೆಯಿಲ್ಲದೆ,ಟ್ಯಾಕ್ಸಿ ಗೆ ಕಾಯದೇ, ಟೋಲ್ ಗೆ ಹಣ ನೀಡುವ ಅವಶ್ಯಕತೆ ಎದುರಾಗುವುದಿಲ್ಲ. ಬೆಂಗಳೂರಿನ ಮೆಜೆಸ್ಟಿಕ್,ಯಲಹಂಕ,ಯಶವಂತಪುರ ಈ ಮೂರು ಕಡೆಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಲೋಕಲ್ ಟ್ರೈನ್ ಶುರು ಮಾಡಿದ್ದಾರೆ.ಇಲ್ಲಿ ಟಿಕೆಟ್ ದರ ಕೇವಲ 10ರೂಪಾಯಿ.ನೀವು ಕೇವಲ 45 ನಿಮಿಷದಲ್ಲಿ ವಿಮಾನ ನಿಲ್ದಾಣ ತಲುಪಬಹುದ.

ಬೆಳಿಗ್ಗೆ ಹೊರಡುವ ರೈಲುಗಳು
05.50 -ಮೆಜೆಸ್ಟಿಕ್ -ದೇವನಹಳ್ಳಿ
07.20-ಯಲಹಂಕ – ದೇವನಹಳ್ಳಿ
09.16-ಯಶವಂತಪುರ – ಬಂಗಾರಪೇಟೆ

ಸಂಜೆ ಹೊರಡುವ ರೈಲುಗಳು

18.50-ಮೆಜೆಸ್ಟಿಕ್ – ಬಂಗಾರಪೇಟೆ
20.05-ಮೆಜೆಸ್ಟಿಕ್ – ದೇವನಹಳ್ಳಿ

ಬೆಳಿಗ್ಗೆ ಬರುವ ರೈಲುಗಳು
06.22 – ದೇವನಹಳ್ಳಿ – ಯಲಹಂಕ
07.50-ದೇವನಹಳ್ಳಿ -ಬೆಂಗಳೂರು ದಂಡು
08.25 -ಬಂಗಾರಪೇಟೆ – ಯಶವಂತಪುರ

ಸಂಜೆ ಬರುವ ರೈಲುಗಳು
18.42 ಬಂಗಾರಪೇಟೆ – ಮೆಜೆಸ್ಟಿಕ್
20.38 ದೇವನಹಳ್ಳಿ – ಮೆಜೆಸ್ಟಿಕ್

Related Articles

Leave a Reply

Your email address will not be published. Required fields are marked *

Back to top button